AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಮಿಕರ ಸರಣಿ ಸಾವು: ಮೃತ್ಯುಕೂಪವಾದ ಸೇಡಂನ ಶ್ರೀ ಸಿಮೆಂಟ್ ಕಾರ್ಖಾನೆ

ಕಲಬುರಗಿ ಜಿಲ್ಲೆಯ ಸೇಡಂನ ಶ್ರೀ ಸಿಮೆಂಟ್ ಕಾರ್ಖಾನೆ, ಕಾರ್ಮಿಕರ ಪಾಲಿಗೆ ಮೃತ್ಯೂಕೂಪ ಆದಂತಾಗಿದೆ. ಕಳೆದ ಎರಡ್ಮೂರು ತಿಂಗಳಲ್ಲೇ ಬರೋಬ್ಬರಿ ನಾಲ್ವರು ಕಾರ್ಮಿಕರು ಫ್ಯಾಕ್ಟರಿಯಲ್ಲಿ ಆದ ಅವಘಡದಿಂದ ಮೃತಪಟ್ಟಿದ್ದಾರೆ. ಶ್ರೀ ಸಿಮೆಂಟ್ ಕಾರ್ಖಾನೆ ವಿರುದ್ದ ಸುರಕ್ಷತೆ ಕ್ರಮ ಕೈಗೊಳ್ಳದ ಆರೋಪವಿದ್ದು, ಇದೀಗ ಕಾರ್ಮಿಕರ ಸಾವಿನ ಕುರಿತು ಪರಿಶೀಲನೆಗೆ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಮುಂದಾಗಿದ್ದಾರೆ.

ಕಾರ್ಮಿಕರ ಸರಣಿ ಸಾವು: ಮೃತ್ಯುಕೂಪವಾದ ಸೇಡಂನ ಶ್ರೀ ಸಿಮೆಂಟ್ ಕಾರ್ಖಾನೆ
ಕಾರ್ಮಿಕರ ಸರಣಿ ಸಾವು: ಮೃತ್ಯುಕೂಪವಾದ ಸೇಡಂನ ಶ್ರೀ ಸಿಮೆಂಟ್ ಕಾರ್ಖಾನೆ
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 24, 2024 | 4:24 PM

ಕಲಬುರಗಿ, ಜು.24: ಜಿಲ್ಲೆಯ ಸೇಡಂ ತಾಲ್ಲೂಕಿನ ಸೇಡಂ ತಾಲೂಕಿನ ಕೊಡ್ಲಾ(Kodla) ಗ್ರಾಮದ ಹೊರವಲಯದಲ್ಲಿರುವ ಶ್ರೀ ಸಿಮೆಂಟ್ ಕಾರ್ಖಾನೆ(Shree Cement Factory), ಕಾರ್ಮಿಕರ ಪಾಲಿಕೆ ಮೃತ್ಯೂಕೂಪವಾದಂತಾಗಿದೆ. ಈ ಸಿಮೆಂಟ್ ಕಾರ್ಖಾನೆ ಪ್ರಾರಂಭ ಆದಾಗಿನಿಂದಲೂ ಒಂದಿಲ್ಲೊಂದು ಅವಘಡಗಳು ನಡೆದು ಕಾರ್ಮಿಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಎರಡ್ಮೂರು ತಿಂಗಳಲ್ಲೇ ಬರೋಬ್ಬರಿ ನಾಲ್ವರು ಕಾರ್ಮಿಕರು ಕೆಲಸದ ವೇಳೆ ಅವಘಡದಿಂದ ಮೃತ ಪಟ್ಟಿದ್ದಾರೆ. ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಸಾಲು ಸಾಲು ಕಾರ್ಮಿಕರ ಸಾವು ಆಗುತ್ತಿದ್ದರೂ, ಸುರಕ್ಷತೆ ನಿಯಮ ಪಾಲನೆ ಮಾಡುತ್ತಿಲ್ಲ ಎನ್ನುವ ಗಂಭೀರ ಆರೋಪವಿದೆ. ಹೀಗಾಗಿ ಫ್ಯಾಕ್ಟರಿ ದುರಾಡಳಿತ ಹಾಗೂ ನಿರ್ಲಕ್ಷ್ಯದ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕಳೆದ ಹದಿನೈದು ದಿನಗಳ ಹಿಂದೆ ಬೆನಕನಹಳ್ಳಿ ಗ್ರಾಮದ ಕಾರ್ಮಿಕ ಇಂದ್ರಕುಮಾರ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ವೇಳೆ ಮೃತಪಟ್ಟಿದ್ದ. ಆದ್ರೆ, ಹೃತಯಾಘಾತದಿಂದ ಕಾರ್ಮಿಕ ಮೃತಪಟ್ಟಿದ್ದಾನೆಂದು ಬಿಂಬಿಸಲು ಫ್ಯಾಕ್ಟರಿ ಆಡಳಿತ ಮಂಡಳಿ ಯತ್ನ ಮಾಡಿರುವ ಆರೋಪ ಕೇಳಿ ಬಂದಿತ್ತು. ಕಳೆದ ತಿಂಗಳಷ್ಟೇ ಹೈಡ್ರೊ ಅಪಘಾತಕ್ಕೆ ಕಾರ್ಮಿಕ ರವಿರಾಥೋಡ್ ಸಾವನ್ನಪ್ಪಿದ್ದರು. ಎರಡು ತಿಂಗಳ ಹಿಂದೆ ಉತ್ತರ ಪ್ರದೇಶ ಮೂಲದ ಕಾರ್ಮಿಕ ಶೇಕ್ ಎನ್ನುವವರು ವರ್ಕ್ ಆಕ್ಸಿಡೆಂಟ್​ನಲ್ಲಿ ಪ್ರಾಣ ಕಳೆದುಕೊಂಡಿದ್ದರು. ಅಂದಹಾಗೆ ಕಾರ್ಖಾನೆಯಲ್ಲಿ ಸುರಕ್ಷತಾ ಮುನ್ನೆಚ್ಚರಿಕೆಗಳು ಹಾಗೂ ಗುಣಮಟ್ಟದ ಸುರಕ್ಷಿತ ಕಿಟ್ ಗಳನ್ನು ಬಳಸದೇ ಇರೋದ್ರಿಂದ ಅವಘಡಗಳಿಂದ ಕಾರ್ಮಿಕರು ಸಾವನಪ್ಪುತ್ತಿರೋ ಗಂಭೀರ ಅರೋಪ ಶ್ರೀ ಸಿಮೆಂಟ್ ಕಾರ್ಖಾನೆ ಮೇಲೆ ಕೇಳಿಬಂದಿದೆ.

ಇದನ್ನೂ ಓದಿ:ಕಲಬುರಗಿಯ ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಮತ್ತೋರ್ವ ಕಾರ್ಮಿಕ ಮೃತ; ಎರಡು ತಿಂಗಳಲ್ಲಿ ನಾಲ್ಕು ಸಾವು

ತನಿಖೆಗೆ ಮುಂದಾದ ಕಲಬುರಗಿ ಜಿಲ್ಲಾಧಿಕಾರಿ

ಶ್ರೀ‌ ಸಿಮೆಂಟ್ ಕಾರ್ಖಾನೆಯಲ್ಲಿ ಪದೆ ಪದೆ ಸಂಭವಿಸುತ್ತಿರುವ ಸಾವುಗಳನ್ನ ತಪ್ಪಿಸುವಂತೆ ಸ್ಥಳೀಯರು ಒತ್ತಾಯ ಮಾಡುತ್ತಿದ್ದು, ಕಾರ್ಮಿಕರ ಸುರಕ್ಷತೆ ಬಗ್ಗೆ ಕಂಪನಿ ಕ್ರಮವಹಿಸಬೇಕೆಂದು ಆಗ್ರಹ ಮಾಡಿದ್ದಾರೆ. ಸಧ್ಯ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್, ಇದೀಗ ಫ್ಯಾಕ್ಟರಿಯಲ್ಲಿನ ಕಾರ್ಮಿಕರ ಸಾವಿನ ಕುರಿತು ತನಿಖೆಗೆ ಕಾರ್ಮಿಕ ಇಲಾಖೆ ಅಧಿಕಾರಿಗಳ ಮೂಲಕ  ಫೌಜಿಯಾ ತರನ್ನುಮ್ ಮುಂದಾಗಿದ್ದಾರೆ.

ಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಜೀವಗಳಿಗೆ ಬೆಲೆ ಇಲ್ಲದಂತಾಗಿದೆ. ಸಾಲು ಸಾಲು ಸಾವುಗಳಿಗೆ ಸ್ಥಳೀಯರು ಕಾರ್ಖಾನೆ ವಿರುದ್ದ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಸಾಲು ಸಾಲು ಸಾವು ಸಂಭವಿಸುತ್ತಿರುವುದು ಕಾರ್ಮಿಕರ ಪಾಲಿಗೆ ಫ್ಯಾಕ್ಟರಿ ಮೃತ್ಯೂಕೂಪ ಆದಂತಾಗಿದೆ. ಅದೇನೇ ಇದ್ದರೂ ಕಾರ್ಮಿಕರ ಸುರಕ್ಷತೆ ಬಗ್ಗೆ ಫ್ಯಾಕ್ಟರಿ ಕ್ರಮ ವಹಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ