ಕಲಬುರಗಿಯ ಶ್ರೀ ಸಿಮೆಂಟ್ ಫ್ಯಾಕ್ಟರಿಯಲ್ಲಿ ಮತ್ತೋರ್ವ ಕಾರ್ಮಿಕ ಮೃತ; ಎರಡು ತಿಂಗಳಲ್ಲಿ ನಾಲ್ಕು ಸಾವು
ಸೇಡಂ(Sedam) ಪಟ್ಟಣದಲ್ಲಿರುವ ಶ್ರೀ ಸಿಮೆಂಟ್ ಫ್ಯಾಕ್ಟರಿ (Shree Cement Factory) ಯಲ್ಲಿ ಇಂದು (ಭಾನುವಾರ) ಮತ್ತೊರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಕಳೆದ ಎರಡೂ ತಿಂಗಳಲ್ಲಿ ನಾಲ್ಕು ಸಾವುಗಳಾಗಿದ್ದು, ಆ ಪೈಕಿ ಇಬ್ಬರು ಸೇಡಂನವರೇ ಆಗಿದ್ದಾರೆ. ಹೀಗಿದ್ದರೂ ಸಚಿವರು ಕಾರ್ಖಾನೆಗೂ ಭೇಟಿ ನೀಡಿಲ್ಲ.
ಕಲಬುರಗಿ, ಜು.21: ಕಲಬುರಗಿ ಜಿಲ್ಲೆಯ ಸೇಡಂ(Sedam) ಪಟ್ಟಣದಲ್ಲಿರುವ ಶ್ರೀ ಸಿಮೆಂಟ್ ಫ್ಯಾಕ್ಟರಿ (Shree Cement Factory) ಯಲ್ಲಿ ಇಂದು (ಭಾನುವಾರ) ಮತ್ತೊರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಸರಿಯಾದ ಸುರಕ್ಷತಾ ಕ್ರಮ ಕೈಗೊಳ್ಳದ ಪರಿಣಾಮ ಜಾರ್ಖಂಡ್ ಮೂಲದ ಯುವಕ ರಾಜಕುಮಾರ(26) ಬಲಿಯಾಗಿದ್ದಾನೆ. ಇನ್ನು ಇದೇ ಫ್ಯಾಕ್ಟರಿಯಲ್ಲಿ ಕೆಲ ದಿನಗಳ ಹಿಂದಷ್ಟೆ ಬೆನಕನಹಳ್ಳಿ ನಿವಾಸಿ ಇಂದ್ರಕುಮಾರ ಮೃತಪಟ್ಟಿದ್ದ. ಈಗ ಮತ್ತೋರ್ವನ ಬಲಿಯಾಗಿದ್ದಾನೆ.
ಎರಡೂ ತಿಂಗಳಲ್ಲಿ ನಾಲ್ಕು ಸಾವು; ಇಣುಕಿಯೂ ನೋಡದ ಜನ ಪ್ರತಿನಿಧಿಗಳು
ಈ ಸಿಮೆಂಟ್ ಫ್ಯಾಕ್ಟರಿಯಲ್ಲಿ ಸರಣಿ ಸಾವುಗಳಾಗುತ್ತಿದ್ದರೂ ಜನ ಪ್ರತಿನಿಧಿಗಳು ಇಣುಕಿಯೂ ನೋಡಿಲ್ಲ. ಕಳೆದ ಎರಡೂ ತಿಂಗಳಲ್ಲಿ ನಾಲ್ಕು ಸಾವುಗಳಾಗಿದ್ದು, ಆ ಪೈಕಿ ಇಬ್ಬರು ಸೇಡಂನವರೇ ಆಗಿದ್ದಾರೆ. ಹೀಗಿದ್ದರೂ ಸಚಿವರು ಕಾರ್ಖಾನೆಗೂ ಭೇಟಿ ನೀಡಿಲ್ಲ. ಇತ್ತ ಅಧಿಕಾರಿಗಳು ಕೂಡ ಪ್ರಕರಣ ಕುರಿತು ಬೇಜವಾಬ್ದಾರಿ ಮತ್ತು ಸುರಕ್ಷತಾ ಕ್ರಮ ಕೈಗೊಂಡಿಲ್ಲ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಮಳೆಗೆ ಮನೆಗೋಡೆ ಕುಸಿದು ಬಾಣಂತಿ ಸಾವು, ಬದುಕುಳಿದ ಮಗು ತಾಯಿ ಇಲ್ಲದೇ ತಬ್ಬಲಿ ಆಯ್ತು
ಟೈರ್ ಬ್ಲಾಸ್ಟ್ ಆಗಿ ಬೈಕ್ ಸವಾರ ಸಾವು
ಹುಬ್ಬಳ್ಳಿ: ಚಲಿಸುತ್ತಿದ್ದ ಬೈಕ್ನ ಟೈರ್ ಬ್ಲಾಸ್ಟ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲಿ ಕೊನೆಯುಸಿರೆಳೆದಿರುವ ಘಟನೆ ಗದಗ- ಹುಬ್ಬಳ್ಳಿಯ ಬಂಡಿವಾಡ ಬ್ರಿಡ್ಜ್ ಬಳಿ ನಡೆದಿದೆ. ಕೋಳಿವಾಡ ಗ್ರಾಮದ 30 ವರ್ಷದ ಪ್ರವೀಣ್ ಜಂತ್ಲಿ ಮೃತ ವ್ಯಕ್ತಿ. ಇತ ಹುಬ್ಬಳ್ಳಿಯ ರಾಜ ನಗರದ ಎಟಿಎಮ್ನಲ್ಲಿ ಕೆಲಸ ಮಾಡುತ್ತಿದ್ದ. ನಿನ್ನೆ(ಜು.21) ಮನೆಯಿಂದ ಕೆಲಸಕ್ಕೆ ಹೊಗುವಾಗ ಬೈಕ್ ಟೈರ್ ಬ್ಲಾಸ್ಟ್ ಆಗಿ ದುರ್ಘಟನೆ ನಡೆದಿದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Sun, 21 July 24