ಕೊಡಲಿಯಿಂದ ಒಂದೇ ಒಂದು ಏಟು ಕೊಟ್ಟು ಹುಲಿಯನ್ನು ಹತ್ಯೆ ಮಾಡಿ, ಶೌರ್ಯ ಪ್ರಶಸ್ತಿ ಪಡೆದಿದ್ದ ಮಹಿಳೆ ಸಾವು
ಮಿಜೋರಾಂನ ಸ್ಟೇಟ್ ಮ್ಯೂಸಿಯಂಗೆ ಬರುವವರು ಅಲ್ಲಿರುವ ಬೃಹತ್ ಹುಲಿಯ ಮಮ್ಮಿಯನ್ನು ನೋಡಿರುತ್ತಾರೆ ಇದರ ಹಿಂದೆ ದೊಡ್ಡ ಕಥೆಯೇ ಇದೆ. ಕೊಡಲಿಯಿಂದ ಹುಲಿಗೆ ಒಂದೇ ಒಂದು ಏಟು ಕೊಟ್ಟು ಹತ್ಯೆ ಮಾಡಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಲಾಲಜಾಡಿಂಗಿ ಎಂಬ ಮಹಿಳೆ ಕ್ಯಾನ್ಸರ್ನಿಂದ ಕೊನೆಯುಸಿರೆಳೆದಿದ್ದಾರೆ.
ಮಿಜೋರಾಂನ ಸ್ಟೇಟ್ ಮ್ಯೂಸಿಯಂಗೆ ಬರುವವರು ಅಲ್ಲಿರುವ ಬೃಹತ್ ಹುಲಿಯ ಮಮ್ಮಿಯನ್ನು ನೋಡಿರುತ್ತಾರೆ ಇದರ ಹಿಂದೆ ದೊಡ್ಡ ಕಥೆಯೇ ಇದೆ. ಕೊಡಲಿಯಿಂದ ಹುಲಿಗೆ ಒಂದೇ ಒಂದು ಏಟು ಕೊಟ್ಟು ಹತ್ಯೆ ಮಾಡಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದ ಲಾಲ್ಜಾಡಿಂಗಿ ಎಂಬ ಮಹಿಳೆ ಕ್ಯಾನ್ಸರ್ನಿಂದ ಕೊನೆಯುಸಿರೆಳೆದಿದ್ದಾರೆ. ಅವರು ಅಂದು ಹತ್ಯೆ ಮಾಡಿದ್ದ ಹುಲಿಯ ಮಮ್ಮಿಯನ್ನೇ ನಾವು ಮ್ಯೂಸಿಯಂನಲ್ಲಿ ಕಾಣಬಹುದಾಗಿದೆ.
ಈಗ ಲಾಲ್ಜಾಡಿಂಗಿ ಅವರಿಗೆ 72 ವರ್ಷ ವಯಸ್ಸು, ಕ್ಯಾನ್ಸರ್ನಿಂದ ಅವರು ಸಾವನ್ನಪ್ಪಿದ್ದಾರೆ. ಮ್ಯೂಸಿಯಂನಲ್ಲಿರುವ ಹುಲಿ ಯಾವಾಗಲೂ ಪ್ರವಾಸಿಗರನ್ನು ಅದರಲ್ಲೂ ಮಕ್ಕಳನ್ನು ಗಮನಸೆಳೆಯುತ್ತದೆ. ಆದರೆ ಆ ಹುಲಿ ಮ್ಯೂಸಿಯಂಗೆ ಬರುವಂತೆ ಮಾಡಿದ್ದ ಮಹಿಳೆಯನ್ನು ಜನರು ಅಷ್ಟಾಗಿ ನೆನಪಿಟ್ಟುಕೊಂಡಿಲ್ಲ.
ಲಾಲ್ಜಾಡಿಂಗಿ ಅವರು ಪತಿ, ನಾಲ್ವರು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರು 26 ವರ್ಷದವರಿದ್ದಾಗ ದೂರದ ಕಾಡಿಗೆ ಹೋಗಿದ್ದರು, ಆಗ ಹುಲಿಯೊಂದಿಗೆ ಮುಖಾಮುಖಿಯಾಗಿದ್ದಾರೆ. ‘‘ಮರವನ್ನು ಕತ್ತರಿಸುತ್ತಿದ್ದಾಗ ಏನೋ ಶಬ್ದ ಕೇಳಿಸಿತ್ತು, ಮೊದಲು ಕಾಡುಹಂದಿ ಇರಬಹುದು ಎಂದುಕೊಂಡೆ, ಸ್ನೇಹಿತರನ್ನು ಕರೆದೆ ಆದರೆ ಯಾರಿಗೂ ಕೇಳಿಸಲಿಲ್ಲ, ಪೊದೆಯಿಂದ ಒಮ್ಮೆಲೆ ಹುಲಿ ಕಾಣಿಸಿಕೊಂಡಾಗ ಭಯವಾಯಿತು.
ಮತ್ತಷ್ಟು ಓದಿ: ನಿತ್ಯವೂ ಆಫೀಸ್ಗಾಗಿ 320 ಕಿ.ಮೀ ಪ್ರಯಾಣಿಸುವ ವ್ಯಕ್ತಿ, ಹತ್ತಿರವೆಲ್ಲೂ ಮನೆ ಇರಲಿಲ್ಲವೇ?
ಯೋಚಿಸಲು ಸಮಯ ಇರಲಿಲ್ಲ, ತಕ್ಷಣ ಅದರ ಹಣೆಗೆ ಕೊಡಲಿಯಿಂದ ಹೊಡೆದೆ ಒಂದೇ ಹೊಡೆತಕ್ಕೆ ಹುಲಿ ಸತ್ತಿದ್ದು ನನ್ನ ಅದೃಷ್ಟ, ಒಂದೊಮ್ಮೆ ಬೇರೆ ಭಾಗಕ್ಕೆ ಪೆಟ್ಟಾಗಿದ್ದರೆ ಹುಲಿ ನನಗೆ ಎರಡನೇ ಅವಕಾಶ ನೀಡುತ್ತಿರಲಿಲ್ಲ ಎಂದಿದ್ದಾರೆ.
ಲಾಲ್ಜಾಡಿಂಗಿ 1980ರಲ್ಲಿ ಶೌರ್ಯ ಪ್ರಶಸ್ತಿಯನ್ನು ಭಾರತ ಸರ್ಕಾರವು ನೀಡಿತ್ತು. ಅಂದಿನ ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದರು. ಕೊಡಲಿಯಿಂದ ಹುಲಿಯನ್ನು ಕೊಂದ ಏಕೈಕ ಮಹಿಳೆ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ