ಮಳೆಗೆ ಮನೆಗೋಡೆ ಕುಸಿದು ಬಾಣಂತಿ ಸಾವು, ಬದುಕುಳಿದ ಮಗು ತಾಯಿ ಇಲ್ಲದೇ ತಬ್ಬಲಿ ಆಯ್ತು
ಕರ್ನಾಟಕದ ಹಲವೆಡೆ ಮಳೆಯ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದ್ದು, ಪಶ್ಚಿಮ ಘಟ್ಟಗಳಲ್ಲಿ ಗುಡ್ಡಕುಸಿದು ಅನೇಕರು ಸಾವನ್ನಪ್ಪಿದ್ದಾರೆ. ಇದೀಗ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ(Periyapatna) ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ಮಳೆಗೆ ಮನೆಗೋಡೆ ಬಾಣಂತಿ ಸಾವನ್ನಪ್ಪಿದ್ದು, ಬದುಕುಳಿದ ಮಗು ತಬ್ಬಲಿಯಾಗಿದೆ.
ಮೈಸೂರು, ಜು.19: ಭಾರಿ ಮಳೆ(Rain)ಯಿಂದ ಮನೆಗೋಡೆ ಕುಸಿದು ಬಾಣಂತಿ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ(Periyapatna) ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದಿದೆ. ಹೇಮಲತಾ(22) ಮೃತ ರ್ದುದೈವಿ. ಇತ್ತ ಅದೃಷ್ಟವಶಾತ್ ಮಗುವೊಂದು ಪಾರಾಗಿದೆ. ಕಳೆದ ಕೆಲ ದಿನಗಳಿಂದ ಮಳೆ ಅಬ್ಬರ ಜೋರಾಗಿದ್ದು, ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿದು ದುರ್ಘಟನೆ ನಡೆದಿದೆ.
ಮಳೆಗೆ ಮನೆ ಕುಸಿದು ಹೈರಾಣಾ ತುಂಬು ಗರ್ಭಿಣಿ
ಬೆಳಗಾವಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯು ಜನರ ಬದುಕನ್ನೇ ಬೀದಿಗೆ ತರುತ್ತಿದೆ. ರಾತೋರಾತ್ರಿ ಸುರಿದ ಮಳೆಗೆ, ಮನೆ ಕುಸಿದು ಬಿದ್ದು, 9 ತಿಂಗಳ ತುಂಬು ಗರ್ಭಿಣಿ ಹೈರಾಣಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಸಮಳಗಿ ಗ್ರಾಮದಲ್ಲಿ ಘಟನೆ ನಡೆದಿದೆ. ನಿರಂತರ ಮಳೆಗೆ ಸಾವಂತ್ ತೇಗೂರು ಎಂಬುವವರ ಮನೆ ಕುಸಿದು ಬಿದ್ದಿದ್ದು, ಸಾವಂತ್ ಅವರು ಮಗಳನ್ನು ಹೆರಿಗೆಗೆ ಎಂದು ಮನೆಗೆ ಕರೆತಂದಿದ್ದರು. ಹೆರಿಗೆಗೆ 4 ದಿನ ಇರುವಾಗಲೇ ಮಳೆಗೆ ಮನೆ ಕುಸಿದಿದೆ. ಇದರಿಂದ ಮಗಳ ಹೆರಿಗೆಯ ನಿರೀಕ್ಷೆಯಲ್ಲಿದ್ದ ಅಪ್ಪ- ಅಮ್ಮನಿಗೆ ಬರಸಿಡಿಲು ಬಡಿದಂತಾಗಿದೆ. ತುರ್ತಾಗಿ ಬೇರೆಲ್ಲೂ ಮನೆ ಸಿಗದೇ ಇರುವುದರಿಂದ ತುಂಬು ಗರ್ಭಿಣಿ ಜತೆಗೆ ಕುಸಿದು ಬಿದ್ದಿರುವ ಮನೆಯಲ್ಲಿಯೇ ವಾಸಿಸುವ ದುಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ:ಉಕ್ಕಡಗಾತ್ರಿ ಪುಣ್ಯಕ್ಷೇತ್ರದ ಜನಕ್ಕೆ ತಪ್ಪದ ಸಂಕಷ್ಟ; ಮಳೆಗಾಲದ ಮೂರು ತಿಂಗಳು ಜಲ ದಿಗ್ಬಂಧನ
ಮನೆ ಮೇಲ್ಛಾವಣಿ ಕುಸಿದು ಮೂವರ ಸಾವು
ಹಾವೇರಿ: ಇತ್ತ ಮಹಾಮಳೆಗೆ ಮನೆ ಮೇಲ್ಛಾವಣಿ ಕುಸಿದು ಮಾದಾಪುರ ಗ್ರಾಮದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಹಲವರಿಗೆ ಗಾಯವಾಗಿದ್ದು, ಸವಣೂರು ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ಇನ್ನು ಘಟನೆ ತಿಳಿಯುತ್ತಿದ್ದಂತೆ ಹಾವೇರಿ ಡಿಸಿ ವಿಜಯ್ ಮಹಾಂತೇಶ್ ದಾನಮ್ಮನವರ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಜೊತೆಗೆ ಹಾವೇರಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:58 pm, Fri, 19 July 24