ಕಲಬುರಗಿ: ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ‌‌ ವಿದ್ಯಾರ್ಥಿಗಳ ಮಾರಾಮಾರಿ; ವಿಡಿಯೋ ವೈರಲ್​​

ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ‌‌ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಕಲಬುರಗಿ: ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ‌‌ ವಿದ್ಯಾರ್ಥಿಗಳ ಮಾರಾಮಾರಿ; ವಿಡಿಯೋ ವೈರಲ್​​
TV9kannada Web Team

| Edited By: Vivek Biradar

Aug 06, 2022 | 10:53 PM

ಕಲಬುರಗಿ: ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ‌‌ (Kalaburagi Central University) ವಿದ್ಯಾರ್ಥಿಗಳು ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಕಲಬುರಗಿ (Kalaburagi) ಜಿಲ್ಲೆಯ ಆಳಂದ‌ ತಾಲೂಕಿನ ಕಡಗಂಚಿಯಲ್ಲಿರೋ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ‌‌ ಆಗಸ್ಟ್ ‌2 ರಂದು ವಿವಿಯ ಮಸ್​ನಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ವಿದ್ಯಾರ್ಥಿಯೋರ್ವಳಿಗೆ ಯುವಕ ಚುಡಾಯಿಸಿದ್ದಕ್ಕೆ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ.  ವಿಶ್ವವಿದ್ಯಾಲಯ ಮುಖ್ಯಸ್ಥರು ಗಲಾಟೆ ಬಗ್ಗೆ ಆಂತರಿಕ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಯಾವುದೇ ‌ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿಲ್ಲಾ. ಈ ವಿಶ್ವವಿದ್ಯಾನಿಲಯಕ್ಕೆ ದೇಶದ ವಿವಿಧ ರಾಜ್ಯಗಳಿಂದ ವಿಧ್ಯಾರ್ಥಿಗಳು ಅಧ್ಯಯನಕ್ಕೆ ಬರುತ್ತಾರೆ.

 ಶಿಕ್ಷಕಿ ಮನೆಗೆ ಕನ್ನ ಹಾಕೋಕೆ ಯತ್ನಿಸಿದ ವಿದ್ಯಾರ್ಥಿ ಅಂದರ್​

ಕಲಬುರಗಿ: ಅಕ್ಷರ ಕಲಿಸಿದ ಶಿಕ್ಷಕಿ ಮನೆಗೆ ವಿದ್ಯಾರ್ಥಿ ಓರ್ವ ಕನ್ನ ಹಾಕೋಕೆ ಯತ್ನಿಸಿರುವಂತಹ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ್ ಗ್ರಾಮದಲ್ಲಿ ನಡೆದಿದೆ. ದೇವನೂರ್ ಗ್ರಾಮದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ನೇತ್ರಾವತಿ ಮನೆಯಲ್ಲಿ ಜಹಾಂಗೀರ್ ಅನ್ನೋ ಹಳೆಯ ವಿದ್ಯಾರ್ಥಿಯಿಂದ ಕಳ್ಳತನಕ್ಕೆ ಯತ್ನಿಸಲಾಗಿದೆ. ಬುರ್ಖಾ ಧರಿಸಿ ಮಧ್ಯರಾತ್ರಿ ಮನೆಯ ಮೇಲ್ಚಾವಣಿ ಸರಿಸಿ, ಸೀರೆ ಬಳಸಿ ಮನೆ ಒಳಗಡೆ ಇಳಿದಿದ್ದಾನೆ. ವಿದ್ಯಾರ್ಥಿ ಜಜಾಂಗಿರ್ ವೃತ್ತಿಯಲ್ಕಿ ಲೈನ್ ಮೆನ್ ಆಗಿ ಕೆಲಸ ಮಾಡುತ್ತಿದ್ದು, ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದ. ಮನೆಯ ಒಳಗಡೆ ಇಳಿದು ಟೀಚರ್ ಮೊಬೈಲ್ ತೆಗೆದುಕೊಂಡು ಟಾರ್ಚ್ ಹಾಕಿ ಟೀಚರ್ ಮಲಗಿರುವ ಜಾಗ ಹುಡುಕಾಟ ಮಾಡಿದ್ದ.

ಮನೆಯ ಒಳಗಡೆ ಉಂಟಾದ ಶಬ್ದಕ್ಕೆ ಶಿಕ್ಷಕಿ ನೇತ್ರಾವತಿ ಎಚ್ಚರಗೊಂಡಿದ್ದು, ಟೀಚರ್ ಕೂಗಿಕೊಳತ್ತಿದ್ದಂತೆಯೇ ಅಕ್ಕ ಪಕ್ಕದ ಮನೆಯ ನಿವಾಸಿಗಳು ಎಚ್ಚರವಾಗಿದ್ದಾರೆ. ರೆಡ್ ಹ್ಯಾಂಡ್ ಆಗಿ ಹಿಡಿಯೋದಕ್ಕೆ ಮುಂದಾದಾಗ ಟೀಚರ್ ನಾನು ನಿಮ್ಮ ವಿದ್ಯಾರ್ಥಿ, ತಪ್ಪಾಗಿದೆ ಬಿಟ್ಟು ಬಿಡಿ ಎಂದು ಜಹಾಂಗೀರ್ ಹೇಳಿದ್ದಾನೆ. ಸ್ಥಳಿಯರ ಸಹಾಯದಿಂದ ಜಹಾಂಗೀರ್​ನನ್ನು ಟೀಚರ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಯುವತಿಗೆ ಚುಡಾಯಿಸಿದ್ದಕ್ಕೆ ಇಬ್ಬರು ಯುವಕರಿಗೆ ಇರಿತ

ದಾವಣಗೆರೆ: ಯುವತಿಗೆ ಚುಡಾಯಿಸಿದ್ದಕ್ಕೆ ಇಬ್ಬರು ಯುವಕರಿಗೆ ಚಾಕು ಇರಿದಿರುವಂತಹ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಶಾಲಾ ಮಟ್ಟದ ಕ್ರೀಡಾಕೂಟ ವೇಳೆ ಘಟನೆ ನಡೆದಿದ್ದು, ಚಿರಡೋಣೆ ಗ್ರಾಮದ ದೇವೇಂದ್ರ, ಸುನಿಲ್​ಗೆ ಗಾಯವಾಗಿದೆ. ರಾಘವೇಂದ್ರ ಯುವಕರಿಗೆ ಚಾಕು ಇರಿದಿರುವ ಆರೋಪಿ. ಗಾಯಾಳು ಇಬ್ಬರು ಯುವಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ರಾಘವೇಂದ್ರನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂತೆಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಾರಕಾಸ್ತ್ರಗಳನ್ನ ಸಂಗ್ರಹಿಸಿದ್ದ ಹಿನ್ನೆಲೆ ರೌಡಿಶೀಟರ್ ಸಂತೋಷ್ ಸೇರಿದಂತೆ 7 ಜನರನ್ನು ಕೆಟಿಜೆ ನಗರ ಠಾಣೆ ಪೊಲೀಸರಿಂದ ಬಂಧನ ಮಾಡಲಾಗಿದೆ. ಕಾರಿನಲ್ಲಿ ಮಾರಕಾಸ್ತ್ರ ಇಟ್ಟಿದ್ದ ರೌಡಿಶೀಟರ್ ಸಂತೋಷ್, ಪರಮೇಶ್, ಶಿವಪ್ಪಾ ದಾದು, ಮಂಜುನಾಥ್, ಶ್ರೀನಿವಾಸ್, ತ್ರಿಗುಣ, ದಸ್ತು, ತ್ರಿಲೋಕ್​ನನ್ನು ಪೊಲಿಸರು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ಲಾಂಗ್, ಖಾರದಪುಡಿ, ಕಾರು ಜಪ್ತಿ ಮಾಡಲಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada