
ಕಲಬುರಗಿ: ಹಾಡಹಗಲೇ ಪುರಸಭೆ ಮಾಜಿ ಅಧ್ಯಕ್ಷನ ಬರ್ಬರ ಹತ್ಯೆ ಮಾಡಲಾಗಿದೆ. ಈ ಘಟನೆಯು ಕಲಬುರಗಿ ಜಿಲ್ಲೆಯ ಶಹಬಾದ್ ನಡೆದಿದೆ. ಶಹಬಾದ್ ಪುರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೂರ್(40) ಕೊಲೆಯಾದ ವ್ಯಕ್ತಿ . ಶಹಬಾದ್ ಗಿರೀಶ್ ಕಂಬಾನೂರ್ ಮೇಲೆ ಅಟ್ಯಾಕ್ ಮಾಡಿ, ಹಾಡಹಗಲೇ ನಡುರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಗಿರೀಶ್, ಶಹಬಾದ್ ಪುರಸಭೆ ಮಾಜಿ ಅಧ್ಯಕ್ಷರಾಗಿದ್ದರು. ಗಿರೀಶ ಪತ್ನಿ ಸದ್ಯ ಶಹಬಾದ್ ನಗರಸಭೆ ಅಧ್ಯಕ್ಷೆಯಾಗಿದ್ದಾರೆ. ಎರಡು ವರ್ಷದ ಹಿಂದೆ ಗಿರೀಶ್ ಸಹೋದರನ ಬರ್ಬರ ಕೊಲೆಯಾಗಿತ್ತು. ಶಹಬಾದ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನು ಓದಿ: ಟೆಕ್ನಾಲಜಿ ಬಳಸಿಕೊಂಡು ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ
ಜಿಎಸ್ಟಿ ಅಧಿಕಾರಿಗಳ ಸೋಗಿನಲ್ಲಿ ಹೆದ್ದಾರಿಯಲ್ಲಿ ದರೋಡೆ
ಬೆಂಗಳೂರು: ಜಿಎಸ್ಟಿ ಅಧಿಕಾರಿಗಳ ಸೋಗಿನಲ್ಲಿ ಹೆದ್ದಾರಿಯಲ್ಲಿ ದರೋಡೆ ಮಾಡಲಾಗಿದೆ. ದಾಬಸ್ಪೇಟೆ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದ್ದು, ನೆಲಮಂಗಲ ಮೂಲದ ಆರೋಪಿ ಉದಯ್ ಕುಮಾರ್(38) ತುಮಕೂರು ಜಿಲ್ಲೆಯ ಕೊರಟಗೆರೆಯ ಸದಾನಂದ(50) ಸೆರೆ ಹಿಡಿಯಲಾಗಿದೆ. ಲಾರಿಯಲ್ಲಿದ್ದ ವಸ್ತುಗಳಿಗೆ ಇ-ಬಿಲ್ ಇಲ್ಲವೆಂದು ಬೆದರಿಕೆ ಹಾಕಲಾಗಿದ್ದು, ಚಾಲಕ ಜಿತೇಂದ್ರಸಿಂಗ್ ಮೂಲಕ ಮಾಲೀಕರ ಬಳಿ ಹಣ ಬೇಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಬಾಂಬೆ ಮೂಲದ ರಾಜೇಂದ್ರ ಕೊಟ್ಯಾನ್ಗೆ ಇಬ್ಬರಿಂದ ಬೆದರಿಕೆಯನ್ನು ಮಾಡಲಾಗಿದೆ. ಆರೋಪಿಗಳು 1,15,000 ರೂ. ವರ್ಗಾವಣೆ ಮಾಡಿಸಿಕೊಂಡಿದ್ದು, ಜಿಎಸ್ಟಿ ಅಧಿಕಾರಿಗಳೆಂದು ಸುಳ್ಳು ಹೇಳಿ ಹಣ ಪಡೆದು ವಂಚನೆ ಮಾಡಿದ್ದಾರೆ. ದಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.