AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಟೆಕ್ನಾಲಜಿ ಬಳಸಿಕೊಂಡು ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ

ಟೆಕ್ನಾಲಜಿ ​​ಬಳಸಿಕೊಂಡು ಕಾರುಗಳನ್ನ ಕದಿಯುತ್ತಿದ್ದ ಆರೋಪಿಯನ್ನು ಹೆಚ್​​ಎಸ್​ಆರ್​​ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಅರುಣ್ ಕುಮಾರ್ ಅಲಿಯಾಸ್ ಶಿವನ್​​ ಬಂಧಿತ ಆರೋಪಿ. 

Crime News: ಟೆಕ್ನಾಲಜಿ ಬಳಸಿಕೊಂಡು ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯ ಬಂಧನ
ಬಂಧಿತ ಆರೋಪಿ
TV9 Web
| Updated By: ವಿವೇಕ ಬಿರಾದಾರ|

Updated on:Jul 11, 2022 | 2:54 PM

Share

ಬೆಂಗಳೂರು: ಟೆಕ್ನಾಲಜಿ (Technology) ​​ಬಳಸಿಕೊಂಡು ಕಾರುಗಳನ್ನ (Car) ಕದಿಯುತ್ತಿದ್ದ ಆರೋಪಿಯನ್ನು ಹೆಚ್​​ಎಸ್​ಆರ್​​ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು (Tamilnadu) ಮೂಲದ ಅರುಣ್ ಕುಮಾರ್ ಅಲಿಯಾಸ್ ಶಿವನ್​​ ಬಂಧಿತ ಆರೋಪಿ.  ಆರೋಪಿಯಿಂದ 70 ಲಕ್ಷ ಮೌಲ್ಯದ 10 ಕಾರು, 1 ಬೈಕ್​​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ (Bengaluru) ಪ್ರತಿಷ್ಠಿತ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದಿದ್ದ ಅರೋಪಿ, ಮೆಕಾನಿಕ್ ಕೆಲಸ ಮಾಡುತ್ತಾ  ಟೆಕ್ನಾಲಜಿ ಬಳಸಿಕೊಂಡು ಕಾರುಗಳನ್ನು ಕಳ್ಳತನ ಮಾಡಲು ತೀರ್ಮಾನಿಸಿದ್ದನು.

ಇದಕ್ಕಾಗಿ ಎಕ್ಸ್ ಟೂಲ್ ಆಟೊ ಡಯಗ್ನಸಿಸ್ಟ್ ಟೈಲ್​​ ನ್ನು ಖರೀದಿ ಮಾಡಿದ್ದನು. ಯೂಟ್ಯೂಬ್ ನೋಡಿ ಹೇಗೆ ಈ ಟೂಲ್​​ ನ್ನು ಬಳಸಬೇಕು ಎಂದು ಅರೋಪಿ ಕಲಿತಿದ್ದನು. ಮೊದಲು ಕಾರ್​ನ ಒಂದು ಬದಿಯ ಗ್ಲಾಸ್ ಒಡೆದು ಡೋರ್ ಒಪನ್ ಮಾಡುತ್ತಾನೆ. ನಂತರ ಅತ್ಯಾಧುನಿಕ ಡಿವೈಸ್ ಬಳಸಿ ಕಾರ್ ಅನ್ ಲಾಕ್ ಮಾಡುತ್ತಾನೆ. ನಂತರ ಕ್ಷಣಾರ್ಧದಲ್ಲಿ ಕಾರ್ ಕದ್ದು ಪರಾರಿಯಾಗುತ್ತಾನೆ.

ಮಾರುತಿ ಸುಜುಕಿ ಕಾರ್​ಗಳನ್ನೇ ಟಾರ್ಗೇಟ್ ಮಾಡಿ ಖದಿಯುತ್ತಿದ್ದನು. ಕರ್ನಾಟಕದಲ್ಲಿ ಕದ್ದ ಕಾರುಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದನು. ಫೇಕ್ ನಂಬರ್ ಪ್ಲೇಟ್ ಹಾಕಿ ಮೊತ್ತೊಬ್ಬರಿಗೆ ಮಾರಾಟ ಮಾಡುತ್ತಿದ್ದನು.

ಇದನ್ನೂ ಓದಿ
Image
ಯಲ್ಲಾಪುರ: ಪರವಾನಗಿ ಇಲ್ಲದೆ ಒಂಟೆಗಳ ಸಾಗಾಟ, 3 ಆರೋಪಿಗಳ ಬಂಧನ
Image
ಆನ್ಲೈನ್ ಹನಿ ಟ್ರಾಪ್: ಸಿಬಿಐ ಹೆಸರು ಬಳಸಿ ಬೆದರಿಕೆ; ಐದು ಲಕ್ಷ ಹಣ ವಸೂಲಿ
Image
ಹಾಡಹಗಲೆ ನಿವೃತ್ತ ಎಎಸ್ಐ ಮನೆಯಲ್ಲಿ ಕಳ್ಳತನ: 30 ಸಾವಿರ ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿ
Image
ಬೆಂಗಳೂರಿನಲ್ಲಿ ಕಳ್ಳನೆಂದು ತಿಳಿದು ಅಪರಿಚಿತ ವ್ಯಕ್ತಿಯನ್ನು ಕೊಲೆ ಮಾಡಿದ ಸೆಕ್ಯುರಿಟಿ ಗಾರ್ಡ್!

ರೌಡಿಶೀಟರ್ ಬಾಂಬೆ ಸಲೀಂಗೆ ಸಿಸಿಬಿ ಡ್ರಿಲ್

ಬೆಂಗಳೂರು: ಕಲಾಸಿಪಾಳ್ಯ ಉದ್ಯಮಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಬಾಂಬೆ ಸಲೀಂನನ್ನು  ಬಾಂಡಿ ವಾರೆಂಟ್ ಮೇಲೆ ಕರೆ ತಂದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.  ತನ್ನ ಸಹಚರರ ಮೂಲಕ ರೌಡಿಶೀಟರ್ ಉದ್ಯಮಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬೆದರಿಕೆ ಹಾಕುತ್ತಿದ್ದನು.ಈಕೃತ್ಯಗಳನ್ನು ಧಾರವಾಡ ಜೈಲ್ಲಿನಲ್ಲಿದ್ದುಕೊಂಡೆ ಡೀಲಿಂಗ್ ಮಾಡುತ್ತಿದ್ದನು.

ಬಾಂಬೆ ಸಲೀಂ ತನ್ನ ಸಹಚರರನ್ನ ಕಲಾಸಿಪಾಳ್ಯದಲ್ಲಿರುವ ಮುಯಿಝ್ ಮನೆಗೆ ಕಳುಹಿಸಿ ಬೆದರಿಕೆ ಹಾಕಿದ್ದನು.  ಇದೇ ವಿಚಾರವಾಗಿ ಬಾಂಬೆ ಸಲೀಂರನ್ನ ಬೆಂಗಳೂರು ಸಿಸಿಬಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ಧಾರೆ. ಉದ್ಯಮಿಗೆ ಬೆದರಿಕೆ ಸೇರಿ ಹಳೆ ಪ್ರಕರಣಗಳ ಬಗ್ಗೆ ಸಿಸಿಬಿ ವಿಚಾರಣೆ ನಡೆಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ದೂರು ದಾಖಲಿಸಲು ಹಿಂದೇಟು ಹಾಕಿದ ಆರೋಪದಲ್ಲಿ ಕಮೀಷನರ್ ಕಲಾಸಿಪಾಳ್ಯ ಇನ್ಸ್‌ಪೆಕ್ಟರ್ ಮತ್ತು ಸಬ್ ಇನ್ಸ್‌ಪೆಕ್ಟರ್ ಅಮಾನತು ಮಾಡಿದ್ದರು.

Published On - 2:54 pm, Mon, 11 July 22