ಬಿಜೆಪಿ ಶಾಸಕರನ್ನು ಖರೀದಿ ಮಾಡುವ ಪ್ರವೃತ್ತಿ ಬೆಳೆಸಲಾಗುತ್ತಿದೆ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ಮಹಾರಾಷ್ಟ್ರದಲ್ಲಿ ಸರ್ಕಾರ ಚೆನ್ನಾಗಿಯೇ ನಡಿದಿತ್ತು. ಆದರೆ ಬಂಡಾಯಕ್ಕೆ ಬಿಜೆಪಿ ಕುಮ್ಮಕ್ಕು ನೀಡಿದೆ. ಒಂದು ಪಕ್ಷದಿಂದ ಗೆದ್ದು ಇನ್ನೊಂದು ಪಕ್ಷಕ್ಕೆ ಹೋಗೋದು ನಿಲ್ಲಬೇಕು. ಸೈಂದ್ಯಾಂತಿಕವಾಗಿ ಶಾಸಕರು, ಜನಪ್ರತಿನಿಧಿಗಳು ನಿಲ್ಲಬೇಕು.
ಕಲಬುರಗಿ: ಬಿಜೆಪಿಗೆ ಎಲ್ಲಿ ಅಧಿಕಾರ ಸಿಗೋದಿಲ್ಲವೋ ಅಲ್ಲಿ ಬಹುಮತ (majority) ವನ್ನು ವಾಮಮಾರ್ಗದ ಮೂಲಕ ಪಡೆಯುತ್ತಿದ್ದಾರೆ. ಶಾಸಕರನ್ನು ಖರೀದಿ ಮಾಡುವ ಪ್ರವೃತ್ತಿ ಬೆಳಸುತ್ತಿದ್ದಾರೆ ಎಂದು ನಗರದಲ್ಲಿ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದರು. ಮೋದಿ ಅವರು ಪ್ರಧಾನಿ ಆದಮೇಲೆ ಉತ್ತರ ಪ್ರದೇಶ ಬಿಟ್ಟರೆ, ಸ್ವಂತ ಬಲದ ಮೇಲೆ ಯಾವ ರಾಜ್ಯದಲ್ಲಿ ಅಧಿಕಾರ ಪಡೆದಿಲ್ಲ. ಅಧಿಕಾರದ ಹಸಿವು ನೀಗಿಸಿಕೊಳ್ಳಲು ಅಂಸವಿಧಾನಿಕ ಕ್ರಮಕ್ಕೆ ಮುಂದಾಗುತ್ತಿದ್ದಾರೆ. ಬಿಜೆಪಿಗೆ ಹೇಗಾದರು ಮಾಡಿ ಅಧಿಕಾರ ಹಿಡಿಯಬೇಕು. ಲೂಟಿ ಮಾಡಬೇಕು ಅನ್ನೋದನ್ನು ಮಾತ್ರ ನೋಡುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸರ್ಕಾರ ಚೆನ್ನಾಗಿಯೇ ನಡಿದಿತ್ತು. ಆದರೆ ಬಂಡಾಯಕ್ಕೆ ಬಿಜೆಪಿ ಕುಮ್ಮಕ್ಕು ನೀಡಿದೆ. ಒಂದು ಪಕ್ಷದಿಂದ ಗೆದ್ದು ಇನ್ನೊಂದು ಪಕ್ಷಕ್ಕೆ ಹೋಗೋದು ನಿಲ್ಲಬೇಕು. ಸೈಂದ್ಯಾಂತಿಕವಾಗಿ ಶಾಸಕರು, ಜನಪ್ರತಿನಿಧಿಗಳು ನಿಲ್ಲಬೇಕು. ಸೈಂದಾಂತಿಕವಾಗಿ ನಿಲ್ಲೋವರಗೆ ಇದು ನಿಲ್ಲೋದಿಲ್ಲಾ. ಪ್ರಜೆಗಳು ಈ ರೀತಿಯಾಗಿ ಪಕ್ಷಾಂತರ ಮಾಡೋರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಇದೀಗ ಸರ್ಕಾರದ ವಿರುದ್ಧ ಅನೇಕರು ರೆಬೆಲ್ ಆಗಿದ್ದಾರೆ: ಸಚಿವ ಮುರುಗೇಶ್ ನಿರಾಣಿ
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಈ ವಿಚಾರವಾಗಿ ಹೇಳಿಕೆ ನೀಡಿದ್ದು, ಇದೀಗ ಸರ್ಕಾರದ ವಿರುದ್ಧ ಅನೇಕರು ರೆಬೆಲ್ ಆಗಿದ್ದಾರೆ. ಬಂಡಾಯ ಎದ್ದವರು ಬಿಜೆಪಿ ಬೆಂಬಲಿಸೋ ವಿಶ್ವಾಸವಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ. ಅವರಾಗಿಯೇ ಬಂದಾಗ ಬಿಜೆಪಿ ಸರ್ಕಾರ ರಚಿಸಲಾಗುತ್ತೆ ಎಂದು ಹೇಳಿದರು. ಆ ಸರ್ಕಾರದಲ್ಲಿ ಬ್ರೇಕ್ ಒಬ್ಬರ ಕೈಯಲ್ಲಿ, ಕ್ಲಚ್ ಒಬ್ಬರ ಕೈಯಲ್ಲಿ, ಸ್ಟೇರಿಂಗ್ ಒಬ್ಬರ ಕೈಯಲ್ಲಿತ್ತು. ಇದೀಗ ಅನೇಕರು ಸರ್ಕಾರದ ವಿರುದ್ಧ ಬಂಡಾಯ ವೆದ್ದಿದ್ದಾರೆ. ರಾಜಕೀಯದಲ್ಲಿ ಯಾರು ಸನ್ಯಾಸಿಗಳಲ್ಲಾ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ನಾನು ಬಿಜೆಪಿಗೆ ಹೋಗುತ್ತೇನೆ ಸುಳ್ಳು: ಮಾಜಿ ಡಿಸಿಎಂ ಪರಮೇಶ್ವರ
ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದ್ದು, ಈ ವಿಚಾರವಾಗಿ ನಗರದಲ್ಲಿ ಮಾಜಿ ಡಿಸಿಎಂ ಪರಮೇಶ್ವರ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುತ್ತಿದೆ. ಮಹಾರಾಷ್ಟ್ರದಲ್ಲಿ ಕೂಡ ಇದೇ ಕೆಲಸ ಮಾಡುತ್ತಿದೆ ಎಂದು ಹೇಳಿದರು. ದೇಶದಲ್ಲಿ ಎಲ್ಲರು ಸೇರಿ ಈ ವ್ಯವಸ್ಥೆಗೆ ಸುಧಾರಣೆ ತರಬೇಕಿದೆ. ಒಂದು ಪಕ್ಷದಿಂದ ಗೆದ್ದು, ಮತ್ತೊಂದು ಪಕ್ಷಕ್ಕೆ ಹೋಗೋ ಬಗ್ಗೆ ಎಲ್ಲರು ಸೇರಿ ಚರ್ಚೆ ಮಾಡಬೇಕು. ಆ ಮೂಲಕ ಕಟ್ಟುನಿಟ್ಟಿನ ಕಾನೂನು ಜಾರಿಗೊಳಿಸಬೇಕು. ರಾಜ್ಯದಲ್ಲಿ ಮುಂದಿನ ಚುನಾವಣಾಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲಾಗುವದು. ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಿಎಂ ಯಾರಾಗಬೇಕು ಅನ್ನೋದನ್ನು ಹೈ ಕಮಾಂಡ್ ನಿರ್ಧಾರ ಮಾಡುತ್ತದೆ. ನಾನು ಬಿಜೆಪಿಗೆ ಹೋಗುತ್ತೇನೆ, ಅಸಮಾಧಾನ ಗೊಂಡಿದ್ದೇನೆ ಅನ್ನೋದು ಸುಳ್ಳು ಎಂದು ಪರಮೇಶ್ವರ ಹೇಳಿದರು
ಇದನ್ನೂ ಓದಿ: ಅಂಜನಾದ್ರಿ ಬೆಟ್ಟವನ್ನು ದೀರ್ಘ ದಂಡ ನಮಸ್ಕಾರದ ಮೂಲಕ ಏರಿದ ಅಮರಯ್ಯ ಸ್ವಾಮೀಜಿ