Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಂಜನಾದ್ರಿ ಬೆಟ್ಟವನ್ನು ದೀರ್ಘ ದಂಡ ನಮಸ್ಕಾರದ ಮೂಲಕ ಏರಿದ ಅಮರಯ್ಯ ಸ್ವಾಮೀಜಿ

ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವನ್ನು ದೀರ್ಘ ದಂಡ ನಮಸ್ಕಾರದ ಮೂಲಕ ಅಮರಯ್ಯ ಸ್ವಾಮಿ ಹಿರೇಮಠ ಎಂಬ ಸ್ವಾಮಿಜಿ ಏರಿದ್ದಾರೆ.

ಅಂಜನಾದ್ರಿ ಬೆಟ್ಟವನ್ನು ದೀರ್ಘ ದಂಡ ನಮಸ್ಕಾರದ ಮೂಲಕ ಏರಿದ ಅಮರಯ್ಯ ಸ್ವಾಮೀಜಿ
ಅಮರಯ್ಯ ಸ್ವಾಮಿ ಹಿರೇಮಠ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 25, 2022 | 4:21 PM

ಕೊಪ್ಪಳ: ಜಿಲ್ಲೆಯ ಗಂಗಾವತಿ (Gangavathi) ತಾಲೂಕಿನ ಅಂಜನಾದ್ರಿ (Anjanadri) ಬೆಟ್ಟವನ್ನು ದೀರ್ಘ ದಂಡ ನಮಸ್ಕಾರದ ಮೂಲಕ ಅಮರಯ್ಯ ಸ್ವಾಮಿ ಹಿರೇಮಠ ಎಂಬ ಸ್ವಾಮೀಜಿ (Swamiji) ಏರಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ (Karatagi) ತಾಲೂಕಿನ ಮೈಲಾಪೂರ ಗ್ರಾಮದ ಅಮರಯ್ಯ ಸ್ವಾಮೀಜಿ  ಕಳೆದ (ಜೂನ್​​ 20) ರಂದು ದಿರ್ಘದಂಡ ನಮಸ್ಕಾರದ ಮೂಲಕ ಅಂಜನಾದ್ರಿ ಬೆಟ್ಟ ಏರಲು ತೀರ್ಮಾನಸಿದ್ದರು. ಹೀಗಾಗಿ ಇಂದು (ಜೂನ್ 25) ರಂದು ಸ್ವಾಮೀಜಿ ಮೈಲಾಪೂರದಿಂದ ದೀರ್ಘ ದಂಡ ನಮಸ್ಕಾರದ ಮೂಲಕ ಇಂದು ಅಂಜನಾದ್ರಿ ತಲುಪಿದ್ದಾರೆ. ಸ್ವಾಮಿಜಿ ಮಳೆ ಬೆಳೆಗಾಗಿ ಅಂಜನಾದ್ರಿಯ 575 ಮೆಟ್ಟಿಲುಗಳನ್ನು ಧೀರ್ಘದಂಡ ನಮಸ್ಕಾರದ ಮೂಲಕ ಏರಿದ್ದಾರೆ. ಭಕ್ತರೊಂದಿಗೆ ಜೈ ಶ್ರೀರಾಮ್ ಘೋಷಣೆ ಕೂಗತ್ತ ಬೆಟ್ಟ ಏರಿ‌ಪೂಜೆ ಸಲ್ಲಿಸಿದ್ದಾರೆ.

ಅಂಜನಾದ್ರಿಯಲ್ಲಿ ರಂಗೋಲಿ ಬಿಡಿಸಿದ ವಿದೇಶಿ ಮಹಿಳೆ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿ ಹನುಮನ ದರ್ಶನಕ್ಕೆ ಬಂದ ವಿದೇಶಿ ಮಹಿಳೆಯಿಂದ ರಂಗೋಲಿ ಬಿಡಿಸಿದ್ದಾರೆ.  ಮೌಂಟೇನಿಯಾ ಮೂಲದ ವಿದೇಶಿ ಮಹಿಳೆ ಅಂಜನಾದ್ರಿ ಬೆಟ್ಟದ ಮುಂಭಾಗ ರಂಗೋಲಿ ಬಿಡಿಸಿ ಗಮನ ಸೆಳೆದಿದ್ದಾರೆ. ವಿದೇಶಿ ಮಹಿಳೆಯ ರಂಗೋಲಿ ಕಲೆ ಕಂಡು ಜನರು ಫಿದಾ ಆಗಿದ್ದಾರೆ.

ಇದನ್ನು ಓದಿ: ಅರಣ್ಯ ಇಲಾಖೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಮ್ ಬೊಮ್ಮಾಯಿ ತಾರಾ ವಿರುದ್ಧ ಸಿಡಿಮಿಡಿಗೊಂಡರು

ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕುರಿತು ಸಿಎಂ ಜೊತೆ ಚರ್ಚೆ: ಸಚಿವ ಆನಂದ್ ಸಿಂಗ್ 

ಕೊಪ್ಪಳ:ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕುರಿತು ಸಿಎಂ ಜೊತೆ ಚರ್ಚೆ ಮಾಡಿದ್ದೇನೆ. ಈಗಾಗಲೇ  ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ಅನುದಾನ ನೀಡಿದ್ದೇವೆ ಎಂದು ಪ್ರವಾಸೋದ್ಯಮ ‌ಸಚಿವ ಆನಂದ್ ಸಿಂಗ್ ಹೇಳಿದ್ದಾರೆ. ಅನುದಾನ ಕೋಡಲೇ ಬಿಡುಗಡೆ ಮಾಡಲು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಅಂಜನಾದ್ರಿ ಬೆಟ್ಟದಲ್ಲಿ ಪಾರ್ಕಿಂಗ್, ರೋಪ್ ವೇ, ರಸ್ತೆ ನಿರ್ಮಾಣ ಮಾಡುತ್ತೇವೆ. ಪುಟಪಾತ್ ಕಾಮಗಾರಿ ಹಣ ಬಿಡುಗಡೆಗೆ ಸಿಎಂ ಸೂಚನೆ ಕೊಟ್ಟಿದ್ದಾರೆ. ಎರಡು ತಿಂಗಳೊಳಗೆ ಎಲ್ಲಾ ಕಾಮಗಾರಿಗಳಿಗೂ ಅಡಿಗಲ್ಲು ಹಾಕಲು ಸಿಎಂ‌ ಸೂಚಿಸಿದ್ದಾರೆ.  ಜುಲೈ 15 ರೊಳಗೆ ಸಿಎಂ ಬೊಮ್ಮಾಯಿ‌ ಸಹ ಅಂಜನಾದ್ರಿ ಬೆಟ್ಟಕ್ಕೆ ಭೇಟಿ‌ ನೀಡಲಿದ್ದಾರೆ ಎಂದರು.

ಒಂದೇ ಬೃಂದಾವನಕ್ಕೆ ಇಬ್ಬರು ಯತಿಗಳ ಹೆಸರು, ನಿಲ್ಲದ ಗೊಂದಲ

ಕೊಪ್ಪಳ: ಜಿಲ್ಲೆಯ ಆನೆಗೊಂದಿ ಸಮೀಪದ ನವ ಬೃಂದಾವನಕ್ಕೆ ಇಬ್ಬರು ಯತಿಗಳ ಹೆಸರು ಇಟ್ಟಿದ್ದು, ಇದು  ರಾಯರ ಮಠ, ಉತ್ತರಾದಿ ಮಠದ ನಡುವೆ ಗೊಂದಲ ಉಂಟುಮಾಡಿದೆ. ಈ ಕುರಿತು ಉತ್ತರಾದಿ ಮಠದ ಪಿಆರ್​ಒ ಗೋಪಿನಾಥ್​ ಆಲೂರ್​ ಮಾತನಾಡಿ ಬೃಂದಾವನಕ್ಕೆ ಉತ್ತರಾದಿ ಮಠದಿಂದ ರಘುವರ್ಯ ತೀರ್ಥ ಎಂದೂ, ರಾಯರ ಮಠದಿಂದ ಜಯತೀರ್ಥ ಎಂದು ಹೆಸರು ಇಡಲಾಗಿದೆ. ಹೀಗಾಗಿ ಬೃಂದಾವನದ ಮುಂದೆ ಇಬ್ಬರು ಯತಿಗಳ ಹೆಸರಿನ ಫಲಕ ಹಾಕಿದ್ದಾರೆ. ಜುಲೈ 16, 17 ಮತ್ತು 18ರಂದು ಆರಾಧನಾ ಮಹೋತ್ಸವ ನಡೆಯಲಿದ್ದು, ಸದ್ಯ ಒಂದೇ ಬೃಂದಾವನಕ್ಕೆ ಇಬ್ಬರು ಯತಿಗಳ ಹೆಸರಿಟ್ಟಿರುವುದು ಗೊಂದಲ ಉಂಟು ಮಾಡಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಎಸ್.ಎಂ.ಕೃಷ್ಣ, ನಾರಾಯಣಮೂರ್ತಿ, ಪಡುಕೋಣೆಗೆ ಚೊಚ್ಚಲ ‘ಕೆಂಪೇಗೌಡ ಅಂತಾರಾಷ್ಟ್ರೀಯ ಪ್ರಶಸ್ತಿ

ಕೆಲ ವರ್ಷಗಳಿಂದ ಆರಾಧನಾ ಮಹೋತ್ಸವ ವಿಚಾರವಾಗಿ ಗೊಂದಲ ಉಂಟಾಗಿತ್ತು. ಈಗ ಒಂದೇ ಬೋರ್ಡ್​ ಹಾಕಿದ್ದರಿಂದ ಭಕ್ತರಲ್ಲಿ ಗೊಂದಲ ನಿರ್ಮಾಣವಾಗಿದೆ. ಜಯತೀರ್ಥರ ಮೂಲ ಬೃಂದಾವನ ಮಳಖೇಡದಲ್ಲಿದೆ. ರಾಯರ ಮಠದವರು ಸುಮ್ಮನೇ ವಾದವನ್ನ ಮಾಡುತ್ತಿದ್ದಾರೆ. ಬೃಂದಾವನ ನವವೃಂದಾವನ ಗಡ್ಡೆಯಲ್ಲಿದೆ ಎಂದು ವಾದ ಮಾಡುತ್ತಿದೆ ಎಂದರು.

ಆನೆಗೊಂದಿ ಬಳಿ ಇರೋ ನವಬೃಂದಾವನದಲ್ಲಿ 9 ಯತಿಗಳ ಬೃಂದಾವನಗಳಿವೆ. ಇದೀಗ ಒಂದೇ ಬೃಂದಾವನಕ್ಕೆ ಇಬ್ಬರು ಯತಿಗಳ ಹೆಸರಿನ ಬೋರ್ಡ್ ಹಾಕಿರೋದು ಮತ್ತೆ ಭಕ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 2:59 pm, Sat, 25 June 22

ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್
ಮೊಯ್ಲಿ ಹೇಳಿಕೆಗೆ ಹೈಕಮಾಂಡ್ ಪ್ರತಿಕ್ರಿಯಿಸುತ್ತದೆ: ಎಂಬಿ ಪಾಟೀಲ್