Tv9 Impact: ಸಭೆಯಲ್ಲಿ ಟಿವಿ9ನ ಕಲಬುರಗಿ ಸೆಂಟ್ರಲ್​​ ಜೈಲಿ ವರದಿ ಪ್ರಸ್ತಾಪಿಸಿ ಅಧಿಕಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ತರಾಟೆ

| Updated By: ಆಯೇಷಾ ಬಾನು

Updated on: Dec 20, 2023 | 2:22 PM

ಕಲಬುರಗಿ ಸೆಂಟ್ರಲ್​​ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಟಿವಿ9 ವರದಿ ಪ್ರಸಾರ ಮಾಡಿತ್ತು. ಇಂದು ಕಲಬುರಗಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಟಿವಿ9 ವರದಿ ಪ್ರಸ್ತಾಪ ಮಾಡಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಭೆಯಲ್ಲಿ ಸೆಂಟ್ರಲ್ ಜೈಲ್ ಮುಖ್ಯ ಅಧೀಕ್ಷರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

Tv9 Impact: ಸಭೆಯಲ್ಲಿ ಟಿವಿ9ನ ಕಲಬುರಗಿ ಸೆಂಟ್ರಲ್​​ ಜೈಲಿ ವರದಿ ಪ್ರಸ್ತಾಪಿಸಿ ಅಧಿಕಾರಿಗೆ ಸಚಿವ ಪ್ರಿಯಾಂಕ್ ಖರ್ಗೆ ತರಾಟೆ
ಸಚಿವ ಪ್ರಿಯಾಂಕ್​ ಖರ್ಗೆ
Follow us on

ಕಲಬುರಗಿ, ಡಿ.20: ಬೆಂಗಳೂರಿನ ಪರಪ್ಪನ ಅಗ್ರಹಾರ (Parappana Agrahara), ಬೆಳಗಾವಿಯ ಹಿಂಡಲಗಾ ಜೈಲಿನ (Hindalga Jail) ಕರ್ಮಕಾಂಡದ ಬಗ್ಗೆ ಈ ಹಿಂದೆ ಟಿವಿ9 ವಿಸ್ತೃತ ವರದಿ (Tv9 Impact) ಮಾಡಿ ಅಕ್ರಮ ಬಯಲು ಮಾಡಿತ್ತು. ಸದ್ಯ ಈಗ ಅದೇ ರೀತಿಯಲ್ಲಿ ಕಲಬುರಗಿ ಸೆಂಟ್ರಲ್​​ ಜೈಲಿನಲ್ಲೂ (Kalaburagi Central jail) ಅಕ್ರಮ ನಡೆಯುತ್ತಿದ್ದು ಈ ಬಗ್ಗೆಯೂ ಟಿವಿ9 ಧ್ವನಿ ಎತ್ತಿದೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ದುಡ್ಡೊಂದಿದ್ರೆ ಸಾಕು ಕೈದಿಗಳಿಗೂ ಅತಿಥಿ ಸತ್ಕಾರ ಮಾಡಲಾಗುತ್ತೆ. ಅದರಲ್ಲೂ ದೊಡ್ಡ ಹಗರಣ ಮಾಡಿದವರಿಗೆ, ನಟೋರಿಯಸ್‌ ಕೈದಿಗಳಿಗೂ ಇಲ್ಲಿ ರಾಜಮರ್ಯಾದೆ, ರಾಜವೈಭೋಗ ಸಿಗುತ್ತೆ ಎಂದು ವರದಿ ಮಾಡಿತ್ತು. ಇದೀಗ ಕಲಬುರಗಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಟಿವಿ9 ವರದಿ ಪ್ರಸ್ತಾಪ ಮಾಡಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಕಲಬುರಗಿ ಸೆಂಟ್ರಲ್​​ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಟಿವಿ9 ವರದಿ ಪ್ರಸಾರ ಮಾಡಿತ್ತು. ಇಂದು ಕಲಬುರಗಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಟಿವಿ9 ವರದಿ ಪ್ರಸ್ತಾಪ ಮಾಡಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಭೆಯಲ್ಲಿ ಸೆಂಟ್ರಲ್ ಜೈಲ್ ಮುಖ್ಯ ಅಧೀಕ್ಷರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೆ ತನಿಖೆ ನಡೆಸಿ ನಾಳೆಯೊಳಗೆ ವರದಿ ನೀಡುವಂತೆ ಕಲಬುರಗಿ ಕಮಿಷನರ್​, ಎಸ್​ಪಿಗೆ ಸೂಚನೆ ನೀಡಿದ್ದಾರೆ.

ನಿಮಗೆ ಕೈದಿಯನ್ನು ಕಾಯಲು ಆಗಲ್ಲ, ರಾಜಾತಿಥ್ಯ ನೀಡುತ್ತೀರಾ? ಎಂದು ಕೆಡಿಪಿ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಉತ್ತರಿಸಿದ ಮುಖ್ಯ ಅಧೀಕ್ಷಕ ರಂಗನಾಥ, ಇದು ಹಳೆಯ ವಿಡಿಯೋ ಎಂದಿದ್ದಾರೆ. ಹಾಗಾದರೆ ಅದಕ್ಕೆ ಸಾಕ್ಷಿ ಕೊಡಿ. ನಿಮ್ಮ ಜೈಲಿನ ಸಿಸಿಟಿವಿ ದೃಶ್ಯಾವಳಿ ಕೊಡಿ ಎಂದು ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿ ವಿರುದ್ಧ ಗರಂ ಆದರು.

ಇದನ್ನೂ ಓದಿ: PSI ಅಕ್ರಮದ ಕಿಂಗ್​ಪಿನ್​ಗೆ ರಾಜಾತಿಥ್ಯ! ಟಿವಿ9 ಸಾಕ್ಷ್ಯ ಸಮೇತ ಬಯಲು ಮಾಡ್ತಿದೆ ಕಲಬುರಗಿ ಜೈಲಿನ ಕರ್ಮಕಾಂಡ

ಮತ್ತೊಂದೆಡೆ ಈ ಬಗ್ಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಜೈಲಿನಲ್ಲಿ ಆ ರೀತಿ ಏನಾದರು ನಡೆದಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.  ನಮ್ಮ ಸರ್ಕಾರ ಇಂತಹದ್ದಕ್ಕೆಲ್ಲ ಆಸ್ಪದ ನೀಡುವುದಿಲ್ಲ. ಸ್ವಲ್ಪ ನಿರ್ಲಕ್ಷ್ಯ ಕಂಡು ಬಂದರೂ ಕಠಿಣ ಕ್ರಮ ಗ್ಯಾರಂಟಿ ಎಂದಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ