AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪ: ಕರುವನ್ನು ಮಗುವಂತೆ ತೊಟ್ಟಿಲಲ್ಲಿಟ್ಟು ತೊಟ್ಟಿಲು ಶಾಸ್ತ್ರ ಮಾಡಿದ ಕಲಬುರಗಿ ಮಹಿಳಾ ಪಿಎಸ್ಐ ಕುಟುಂಬ

ಭರ್ಜರಿ ಊಟ ಸಿದ್ಧವಾಗಿತ್ತು.. ಬಂಧು ಬಳಗವೆಲ್ಲಾ ಮನೆಗೆ ಬಂದಿತ್ತು.. ಊರವರೆಲ್ಲಾ ಜಮಾಯಿಸಿ ಸಂಭ್ರಮದಿಂದ ತೊಟ್ಟಿಲು ಶಾಸ್ತ್ರ ಶುರು ಮಾಡಿದ್ರು.. ಆದ್ರೆ ತೊಟ್ಟಿಲಿನಲ್ಲಿದ್ದ ಮಗುವನ್ನ ನೋಡಿದ್ರೆ ನೀವೇ ಶಾಕ್ ಆಗ್ತೀರಾ..

ಅಪರೂಪ: ಕರುವನ್ನು ಮಗುವಂತೆ ತೊಟ್ಟಿಲಲ್ಲಿಟ್ಟು ತೊಟ್ಟಿಲು ಶಾಸ್ತ್ರ ಮಾಡಿದ ಕಲಬುರಗಿ ಮಹಿಳಾ ಪಿಎಸ್ಐ ಕುಟುಂಬ
ಅಪರೂಪದ ತೊಟ್ಟಿಲು ಶಾಸ್ತ್ರಕ್ಕೆ ಸಾಕ್ಷಿಯಾದ ಕಲಬುರಗಿ, ಮಗುವಂತೆ ಕರುವನ್ನು ತೊಟ್ಟಿಲಲ್ಲಿಟ್ಟು ಶಾಸ್ತ್ರ ಮಾಡಿದ ಮಹಿಳಾ ಪಿಎಸ್ಐ ಕುಟುಂಬ
TV9 Web
| Edited By: |

Updated on:Dec 17, 2021 | 8:23 AM

Share

ಕಲಬುರಗಿ: ಜಿಲ್ಲೆ ಅಪರೂಪದ ತೊಟ್ಟಿಲು ಶಾಸ್ತ್ರಕ್ಕೆ ಸಾಕ್ಷಿಯಾಗಿದೆ. ಕಲಬುರಗಿ ನಗರದ ರಾಜಾಪುರ ಬಡಾವಣೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಹೂಗಳಲ್ಲೇ ಸಿಂಗಾರ.. ಬಲೂನ್ ಕಟ್ಟಿ ಅಲಂಕಾರ ಮಾಡಲಾಗಿತ್ತು. ಮನೆ ತುಂಬಾ ಸಂಭ್ರಮ ಸಡಗರ.. ಬಂದು ಬಳಗವೆಲ್ಲಾ ಸಂತೋಷದಲ್ಲಿ ಮಿಂದಿದ್ದರು. ತೊಟ್ಟಿಲು ಕೂಡ ಸಿದ್ಧವಾಗಿತ್ತು. ಇನ್ಯಾಕೆ ತಡ ಮಗುವನ್ನ ಕರ್ಕೊಂಡ್ ಬಂದು ತೊಟ್ಟಿಲಲ್ಲಿ ಮಲಗಿಸಿ ತೊಟ್ಟಿಲು ಶಾಸ್ತ್ರ ಮಾಡುವುದೇ ಎಂದಾಗ ಅಲ್ಲಿ ಮಗು ಇರಲಿಲ್ಲ ಇದದ್ದು ಕರು.

ಇದೇನಿದು ತೊಟ್ಟಿಲು ಶಾಸ್ತ್ರ ಅಂದ್ರೆ ಮಗು ಅನ್ಕೊಂಡ್ವಿ.. ಇಲ್ಲಿ ಕರು ಕರ್ಕೊಂಡ್ ಬಂದು ತೊಟ್ಟಿಲಿನಲ್ಲಿ ಕೂರಿಸಿ ತೂಗುತ್ತಿದ್ದಾರೆ ಅಂದ್ರಾ.. ಯಾಕಂದ್ರೆ ಇದು ಕರುವಿಗಾಗಿ ಮಾಡಿರೋ ತೊಟ್ಟಿಲು ಶಾಸ್ತ್ರನೇ.. ಅಷ್ಟಕ್ಕೂ ಕಲಬುರಗಿ ನಗರದ ರಾಜಾಪುರ ಬಡಾವಣೆ ಇಂಥಾದ್ದೊಂದು ಕ್ಷಣಕ್ಕೆ ಸಾಕ್ಷಿಯಾಗಿತ್ತು. ಕಲಬುರಗಿ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ಯಶೋಧಾ ಕಟಕೆ ಅವರೇ ಈ ಕಾರ್ಯಕ್ರಮಕ್ಕೆ ಕಾರಣವಾಗಿದ್ದು. ಯಶೋಧಾ ಅವರು ಕರ್ತವ್ಯದಲ್ಲಿದ್ದಾಗ ಕಸಾಯಿಖಾನೆಗೆ ಹೋಗುತ್ತಿದ್ದ ಅನೇಕ ಗೋವುಗಳನ್ನು ರಕ್ಷಿಸಿ ಗೋಶಾಲೆ ಮತ್ತು ಕೆಲ ಬಡ ಜನರಿಗೆ ನೀಡಿದ್ದರು. ತಾವು ರಕ್ಷಿಸಿದ ಕೆಲ ಗೋವುಗಳು ಕರುವಿಗೆ ಜನ್ಮ ನೀಡಿದ್ವು. ಹೀಗಾಗಿ ಇವತ್ತು ಒಂದು ಕರುವನ್ನು ತಮ್ಮ ಮನೆಗೆ ಕರೆದುಕೊಂಡು ಬಂದು ನಾಮಕರಣ ಮಾಡಲಾಯ್ತು. ಹೆಣ್ಣು ಕರುವಿಗೆ ರಾಧಾ ಅಂತಾ ಹೆಸರಿಟ್ಟು ಸಂಭ್ರಮಿಸಿದ್ರು.

naming ceremony calf

ಕರು ತೊಟ್ಟಿಲು ಶಾಸ್ತ್ರ

ಮಕ್ಕಳ ನಾಮಕರಣ ಮಾಡುವಂತೆಯೇ ಕರುವಿನ ನಾಮಕರಣವನ್ನ ಸಂಭ್ರಮದಿಂದ ಮಾಡಲಾಯ್ತು. ಕಾರ್ಯಕ್ರಮಕ್ಕೆ ಅನೇಕ ಸ್ವಾಮೀಜಿಗಳು, ಮಂಗಳಮುಖಿಯರು ಸಾಕ್ಷಿಯಾದ್ರು. 7 ದಿನಗಳ ಹಿಂದಷ್ಟೇ ಹುಟ್ಟಿದ್ದ ಕರುವಿನ ಕಿವಿಯಲ್ಲಿ ಮೂರು ಬಾರಿ ರಾಧಾ, ರಾಧಾ ಅಂತಾ ಕೂಗಿ ಹೆಸರಿಟ್ರು.. ಹಾಗೇ ನಾಮಕರಣಕ್ಕೆ ಬಂದವರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಟುಕರ ಕೈಗೆ ಸಿಗಬೇಕಿದ್ದ ಹಸು ಕರುವಿಗೆ ಜನ್ಮ ನೀಡಿದೆ. ತಾಯಿ ಗರ್ಭದಲ್ಲೇ ಪ್ರಾಣ ಬಿಡ್ಬೇಕಿದ್ದ ಕರುವಿಗೆ ನಾಮಕರಣ ಜೋರಾಗಿ ನಡೆದಿದೆ. ಒಟ್ನಲ್ಲಿ ಕಾರ್ಯಕ್ರಮದ ನೆಪದಲ್ಲಿ ಮನೆಯವ್ರೆಲ್ಲಾ ಸಂಭ್ರಮಿಸಿದ್ದಂತು ಸುಳ್ಳಲ್ಲ.

ವರದಿ: ಸಂಜಯ್, ಟಿವಿ9, ಕಲಬುರಗಿ

ಇದನ್ನೂ ಓದಿ: Virat Kohli: ವಿವಾದದ ಸುಳಿಗೆ ಸಿಲುಕಿಕೊಂಡ ವಿರಾಟ್ ಕೊಹ್ಲಿ: ಅಹಂಕಾರ ಬಿಟ್ಟು ದೇಶದ ಬಗ್ಗೆ ಯೋಚಿಸಿ ಎಂದ ಕಪಿಲ್ ದೇವ್

Published On - 7:34 am, Fri, 17 December 21

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್