ಕಲಬುರಗಿ: ಪಿಯು ಪರೀಕ್ಷೆಯಲ್ಲಿ ತಂಗಿಗೆ ನಕಲು ಮಾಡಲು ಬಿಡದ ಪೊಲೀಸ್ ಮೇಲೆ ಅಣ್ಣನಿಂದ ಹಲ್ಲೆ

ತನ್ನ ತಂಗಿಗೆ ಪಿಯುಸಿ ಪರೀಕ್ಷೆಯಲ್ಲಿ ನಕಲು ಮಾಡಲು ಬಿಡದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಪೊಲೀಸ್ ಕಾನ್​ಸ್ಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಕರಜಗಿ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಕಾನ್ಸ್​ಟೇಬಲ್​ ಮೇಲೆ ಹಲ್ಲೆ ನಡೆಸಲಾಗಿದ್ದು, ಇದರ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

ಕಲಬುರಗಿ: ಪಿಯು ಪರೀಕ್ಷೆಯಲ್ಲಿ ತಂಗಿಗೆ ನಕಲು ಮಾಡಲು ಬಿಡದ ಪೊಲೀಸ್ ಮೇಲೆ ಅಣ್ಣನಿಂದ ಹಲ್ಲೆ
ಕಲಬುರಗಿ: ಪಿಯು ಪರೀಕ್ಷೆಯಲ್ಲಿ ತಂಗಿಗೆ ನಕಲು ಮಾಡಲು ಬಿಡದ ಪೊಲೀಸ್ ಮೇಲೆ ಅಣ್ಣನಿಂದ ಹಲ್ಲೆ
Edited By:

Updated on: Mar 22, 2024 | 10:32 AM

ಕಲಬುರಗಿ, ಮಾ.22: ತನ್ನ ತಂಗಿಗೆ ಪಿಯುಸಿ ಪರೀಕ್ಷೆಯಲ್ಲಿ (PUC Exams) ನಕಲು ಮಾಡಲು ಬಿಡದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಪೊಲೀಸ್ ಕಾನ್​ಸ್ಟೇಬಲ್ ಮೇಲೆ ಹಲ್ಲೆ ನಡೆಸಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯಲ್ಲಿ ನಡೆದಿದೆ. ಅಫಜಲಪುರ (Afzalpur) ತಾಲೂಕಿನ ಕರಜಗಿ (Karjgi) ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಘಟನೆ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದ್ದಾರೆ.

ರಾಜ್ಯಾದ್ಯಂತ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಇಂದು ಪರೀಕ್ಷೆಯ ಕೊನೆಯ ದಿನವಾಗಿದೆ. ಆದರೆ, ಕರಜಗಿ ಪರೀಕ್ಷಾ ಕೇಂದ್ರದಲ್ಲಿ ನಡೆದ ಪಿಯು ಪರೀಕ್ಷೆಯಲ್ಲಿ ತನ್ನ ತಂಗಿಗೆ ನಕಲು ಮಾಡಲು ಬಿಡಲಿಲ್ಲವೆಂಬ ಕಾರಣಕ್ಕೆ ಕೇಂದ್ರದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಕಾನ್ಸ್​ಟೇಬಲ್​ ಪಂಡಿತ್ ಪಾಂಡ್ರೆ ಮೇಲೆ ವಿದ್ಯಾರ್ಥಿನಿಯ ಅಣ್ಣ ಕೈಲಾಸ್ ಕೋಪಗೊಂಡಿದ್ದಾನೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಉರ್ದು, ಸಂಸ್ಕೃತ ಪರೀಕ್ಷೆಗೆ ಮೂವರೇ ವಿದ್ಯಾರ್ಥಿಗಳು ಹಾಜರು- 20 ಮಂದಿ ಸಿಬ್ಬಂದಿ ಕರ್ತವ್ಯ!

ಅಷ್ಟಕ್ಕೂ ಸುಮ್ಮನಾಗದ ಕೈಲಾಸ್, ನನ್ನ ತಂಗಿಗೆ ನಕಲು ಮಾಡಲು ಬಿಡಲ್ವಾ ಎಂದು ಬೈದು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಈತನಿಗೆ ಸ್ನೇಹಿತ ಸಮೀರ್ ಕೂಡ ಸಾಥ್ ನೀಡಿದ್ದಾನೆ. ಸ್ಥಳೀಯರು ಘಟನೆಯ ದೃಶ್ಯವನ್ನು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ. ಪ್ರಕರಣ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೈಲಾಸ್ ಮತ್ತು ಸಮೀರ್​ನನ್ನು ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ