ದ್ವಿತೀಯ ಪಿಯುಸಿ ಉರ್ದು, ಸಂಸ್ಕೃತ ಪರೀಕ್ಷೆಗೆ ಮೂವರೇ ವಿದ್ಯಾರ್ಥಿಗಳು ಹಾಜರು- 20 ಮಂದಿ ಸಿಬ್ಬಂದಿ ಕರ್ತವ್ಯ!

ಮೂವರು ವಿದ್ಯಾರ್ಥಿಗಳಿಗೆ ಇಬ್ಬರು ರೂಮ್ ಸೂಪರವೈಸರ್ ಸೇರಿದಂತೆ ಛೀಫ್​ ಕಸ್ಟೋಡಿಯನ್, ಜಂಠಿ ಅಧೀಕ್ಷಕರು, ಆಫೀಸ್‌ ಸುಪರಿಂಟೆಂಡೆಂಟ್​​, ಓರ್ವ ಉತ್ತರ ಪತ್ರಿಕೆ ಪಾಲಕರು, ಓರ್ವ ಕಚೇರಿ ಸಹಾಯಕ, ಓರ್ವ ಟೈಪಿಸ್ಟ್, ಓರ್ವ ಜಾಗೃತದಳ ಸಿಬ್ಬಂದಿ, ಓರ್ವ ಗ್ರೂಪ್ ಡಿ ಸಿಬ್ಬಂದಿ ಸೇರಿದಂತೆ ಇಪ್ಪತ್ತು ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗಿದೆ.

ದ್ವಿತೀಯ ಪಿಯುಸಿ ಉರ್ದು, ಸಂಸ್ಕೃತ ಪರೀಕ್ಷೆಗೆ ಮೂವರೇ ವಿದ್ಯಾರ್ಥಿಗಳು ಹಾಜರು- 20 ಮಂದಿ ಸಿಬ್ಬಂದಿ ಕರ್ತವ್ಯ!
ದ್ವಿತೀಯ ಪಿಯುಸಿ ಉರ್ದು, ಸಂಸ್ಕೃತ ಪರೀಕ್ಷೆಗೆ 3 ವಿದ್ಯಾರ್ಥಿಗಳು ಹಾಜರು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಸಾಧು ಶ್ರೀನಾಥ್​

Updated on: Mar 21, 2024 | 10:49 AM

ಕೊಪ್ಪಳ, ಮಾರ್ಚ್​​ 21: ಕೆಲ ದಿನಗಳಿಂದ ದ್ವಿತೀಯ ಪಿಯುಸಿ ವಾರ್ಷಿಕ (2nd PUC Exam) ಪರೀಕ್ಷೆಗಳು ರಾಜ್ಯಾದ್ಯಂತ ನಡೆಯುತ್ತಿದೆ. ಇಂದು ಸಂಸ್ಕೃತ ಮತ್ತು ಉರ್ದು ವಿಷಯದ (Urdu, Sanskrit) ಪರೀಕ್ಷೆ ನಡೆಯುತ್ತಿವೆ. ವಿಶೇಷವೆಂದರೆ, ಮೂವರೇ ಮೂವರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು ಕೂಡಾ ಇಪ್ಪತ್ತು ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೌದು ಕೊಪ್ಪಳ ನಗರದಲ್ಲಿರುವ (Koppal) ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರವಿದ್ದು, ಈ ಪರೀಕ್ಷಾ ಕೇಂದ್ರದಲ್ಲಿ ಇಂದು ಮೂವರೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಉರ್ದು ಪತ್ರಿಕೆ, ಓರ್ವ ವಿದ್ಯಾರ್ಥಿನಿ ಸಂಸ್ಕ್ರತ ಪರೀಕ್ಷೆ ಗೆ ಹಾಜರಾಗಿದ್ದಾರೆ.

ಮೂವರೇ ವಿದ್ಯಾರ್ಥಿಗಳು ಪರೀಕ್ಷೆ ಬರೆದ್ರು ಕೂಡಾ ಪರೀಕ್ಷಾ ಅಕ್ರಮಗಳು ನಡೆಯದಂತೆ ಮತ್ತು ಅಚ್ಚುಕಟ್ಟಾಗಿ ಪರೀಕ್ಷೆ ನಡೆಯಬೇಕು ಅನ್ನೋ ಕಾರಣದಿಂದ ಬೇರೆ ಪರೀಕ್ಷೆ ನಡೆದಾಗ ಯಾವ ರೀತಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಾರೋ ಅದೇ ರೀತಿ ಇಂದು ಕೂಡಾ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಮೂವರು ವಿದ್ಯಾರ್ಥಿಗಳಿಗೆ ಇಬ್ಬರು ರೂಮ್ ಸೂಪರವೈಸರ್ ಸೇರಿದಂತೆ ಛೀಫ್​ ಕಸ್ಟೋಡಿಯನ್, ಜಂಠಿ ಅಧೀಕ್ಷಕರು, ಆಫೀಸ್‌ ಸುಪರಿಂಟೆಂಡೆಂಟ್​​, ಓರ್ವ ಉತ್ತರ ಪತ್ರಿಕೆ ಪಾಲಕರು, ಓರ್ವ ಕಚೇರಿ ಸಹಾಯಕ, ಓರ್ವ ಟೈಪಿಸ್ಟ್, ಓರ್ವ ಜಾಗೃತದಳ ಸಿಬ್ಬಂದಿ, ಓರ್ವ ಗ್ರೂಪ್ ಡಿ ಸಿಬ್ಬಂದಿ ಸೇರಿದಂತೆ ಇಪ್ಪತ್ತು ಜನ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓರ್ವ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗಿದೆ.

ಇದನ್ನೂ ಓದಿ: ಬೇಕೆ ಬೇಕು ಗ್ರೇಸ್​ ಮಾರ್ಕ್ಸ್​! ಫಿಸಿಕ್ಸ್ ಪರೀಕ್ಷೆಯಲ್ಲಿ ಪಿಯುಸಿ ಬೋರ್ಡ್ ಎಡವಿತಾ? ವಿದ್ಯಾರ್ಥಿಗಳು, ವಿಷಯ ತಜ್ಞರು ಹೇಳುವುದೇನು?

ಪರೀಕ್ಷಾ ಕೇಂದ್ರದಲ್ಲಿ ಮೂವರು ವಿದ್ಯಾರ್ಥಿಗಳೇ ಪರೀಕ್ಷೆ ಬರೆಯಲಿ ಅಥವಾ ಒಬ್ಬರೇ ಬರೆದರು‌ ಕೂಡಾ ತಾವು ಇನ್ನುಳಿದ ಪರೀಕ್ಷೆ ಸಮಯದಲ್ಲಿ ಮಾಡಿದಂತೆ ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತೇವೆ, ಎಲ್ಲರೂ ಕೂಡಾ ಕೆಲಸ ನಿರ್ವಹಿಸುತ್ತೇವೆ ಅಂತಿದ್ದಾರೆ ಪರೀಕ್ಷಾ ಸಿಬ್ಬಂದಿ. ಅಂದಹಾಗೆ ಇಂದು ಪರೀಕ್ಷೆ ಇನ್ನೂ ನಡೆಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ