ಮೈಸೂರಿನಲ್ಲಿ ಪತಿಯ ಹಿಂಸೆ ತಾಳಲಾರದೆ ಪತ್ನಿ ಆತ್ಮಹತ್ಯೆ: ಮಕ್ಕಳನ್ನು ಗಂಡನ ಜೊತೆ ಕಳುಹಿಸದಂತೆ ತಾಯಿಗೆ ಪತ್ರ
ಪತಿ ಚಂದ್ರಶೇಖರ್ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ಬಿಂದುಶ್ರೀ ತವರು ಮನೆಗೆ ಬಂದು ಸೇರಿದ್ದರು. ಆದರೆ ಮತ್ತೆ ಜತೆಗಿರೋಣ ಎಂದು ಬಂದಿದ್ದ ಚಂದ್ರಶೇಖರ್, ಇಲ್ಲಿಗೆ ಬಂದ ಮೇಲೂ ಕಿರುಕುಳ ನೀಡುತ್ತಿದ್ದ. ಹೀಗಾಗಿ ಪತಿ ಕಿರುಕುಳ ತಾಳಲಾರದೆ ಬಿಂದುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು: ನಡತೆ ಶಂಕಿಸಿ ಪತಿ ಹಿಂಸೆ ಕೊಡುತ್ತಿದ್ದ ಎಂದು ಮನನೊಂದ ಪತ್ನಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆ ಕೆ.ಆರ್.ನಗರದಲ್ಲಿ ನಡೆದಿದೆ. ಬಿಂದುಶ್ರೀ ಎಂಬಾಕೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆ.ಆರ್.ನಗರ ಮೂಲದ ಈ ಯುವತಿ ಏಳು ವರ್ಷಗಳ ಹಿಂದೆ ಹಾಸನದ ಅರಸಿಕೆರೆಯ ಚಂದ್ರಶೇಖರ್ ಜೊತೆಗೆ ಮದುವೆ ಮಾಡಿಕೊಂಡಿದ್ದರು.
ಪತಿ ಚಂದ್ರಶೇಖರ್ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ಬಿಂದುಶ್ರೀ ಗಂಡನ ಮನೆ ತೊರೆದು ತವರು ಮನೆಗೆ ಬಂದು ಸೇರಿದ್ದರು. ಆದರೆ ಮತ್ತೆ ಜತೆಗಿರೋಣ ಎಂದು ಬಂದಿದ್ದ ಚಂದ್ರಶೇಖರ್, ಇಲ್ಲಿಗೆ ಬಂದ ಮೇಲೂ ಕಿರುಕುಳ ನೀಡುತ್ತಿದ್ದ. ಹೀಗಾಗಿ ಪತಿ ಕಿರುಕುಳ ತಾಳಲಾರದೆ ಬಿಂದುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಡೆತ್ನೋಟ್ನಲ್ಲಿ ನಾನು ಸತ್ತ ನಂತರ ಮಕ್ಕಳನ್ನು ಗಂಡನ ಜೊತೆ ಕಳುಹಿಸಬೇಡ. ನೀನು ಅಂದುಕೊಂಡಂತೆ ನಿನ್ನ ಅಳಿಯ ಒಳ್ಳೆಯವನಲ್ಲ ಎಂದು ತಾಯಿಗೆ ಪತ್ರ ಬರೆದಿದ್ದಾರೆ. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನಲ್ಲಿ ತಂದೆ ಬುದ್ಧಿ ಹೇಳಿದಕ್ಕೆ ಗೃಹಿಣಿ ಆತ್ಮಹತ್ಯೆ: ಪತಿ ಜತೆ ಜಗಳವಾಡದಂತೆ ತಂದೆ ಬುದ್ಧಿಮಾತು ಹೇಳಿದಕ್ಕೆ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ರಾಜೀವ್ ನಗರದ ಮೊದಲ ಹಂತದಲ್ಲಿ ನಡೆದಿದೆ. ಖನ್ಶಾ ಬೇಗಂ (26) ಮೃತ ದುರ್ದೈವಿ. ತೌಸೀಫ್ ಅಹಮದ್‌ರನ್ನು 9 ವರ್ಷಗಳ ಹಿಂದೆ ಮದುವೆ ಆಗಿದ್ದ ಖನ್ಶಾ ಬೇಗಂ ಸಂಸಾರದಲ್ಲಿ ಆಗಾಗ ಜಗಳ ಮನಸ್ತಾಪ ನಡೆಯುತ್ತಿತ್ತು. ಹೀಗಾಗಿ ತಂದೆ ಅಬ್ದುಲ್ ಗೌಸ್ ಷರೀಫ್ ನಿನ್ನೆ ಬುದ್ಧಿವಾದ ಹೇಳಿದ್ದಾರೆ. ಆದರೆ ತಂದೆ ಹೇಳಿದ ಬುದ್ಧಿಮಾತಿಗೆ ಬೇಸತ್ತ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಧಾರವಾಡದಲ್ಲಿ ಯುವಕ ನೇಣಿಗೆ ಶರಣು: ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದಲ್ಲಿ ಮನೆ ಎದುರೇ ಯುವಕ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. ಶಿವಪ್ಪ(30) ಮೃತ ದುರ್ದೈವಿ. 4 ವರ್ಷಗಳ ಹಿಂದೆ ಊರು ಬಿಟ್ಟಿದ್ದ ಶಿವಪ್ಪ ವಗ್ಗರ ನಿನ್ನೆ ರಾತ್ರಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಪಕ್ಕದಲ್ಲಿ ವಿಷದ ಬಾಟಲಿ ಕೂಡ ಪತ್ತೆಯಾಗಿದೆ. ಸದ್ಯ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಾವಣಗೆರೆಯಲ್ಲಿ ನೀರಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯ ಅಜ್ಜಯ್ಯನ ಜಾತ್ರೆಗೆ ಬಂದಿದ್ದ ಬಾಲಕರು ಇಬ್ಬರು ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದ ವೇಳೆ ನೀರಲ್ಲಿ ಮುಳುಗಿ ಸಾವಿಗೀಡಾದ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯಲ್ಲಿ ನಡೆದಿದೆ.
ಆಂಧ್ರಪ್ರದೇಶದ ಕಲ್ಯಾಣಿದುರ್ಗದ ನವೀನ್‌ಕುಮಾರ (14), ಮಾಳನಾಯಕನಹಟ್ಟಿ ಗ್ರಾಮದ ಅಜ್ಜಯ್ಯ (12) ಮೃತಪಟ್ಟಿದ್ದಾರೆ. ಅಜ್ಜಯ್ಯನ ದರ್ಶನ ಪಡೆಯುವ ಮೊದಲು ಪಕ್ಕದ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡುವುದು ಇಲ್ಲಿನ ವಾಡಿಕೆ. ಹೀಗೆ ಸ್ನಾನ ಮಾಡಲು ಹೋದ ಈ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:
ಹಾವೇರಿ: ಡಿಪೋ ಮ್ಯಾನೇಜರ್ ಕಿರುಕುಳ ಆರೋಪ, ಅಮಾನತಾಗಿದ್ದ ಡ್ರೈವರ್ ಆತ್ಮಹತ್ಯೆಗೆ ಯತ್ನ