ಭಗವಾಧ್ವಜ ಹಾರಿಸಲು ರಾಮಮಂದಿರಕ್ಕೆ ಬಂದ ಮೋದಿ ಸೇರಿದಂತೆ ಇತರೆ ಗಣ್ಯರಿಗೆ ಕರ್ನಾಟಕದ ಆಹಾರ ಉಣಬಡಿಸಿದ ಕನ್ನಡಿಗ
ಈ ಧರ್ಮ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬಂದ ನರೇಂದ್ರ ಮೋದಿ ಸೇರಿದಂತೆ ಇತರೆ ಗಣ್ಯರಿಗೆ ಆಹಾರದ ವ್ಯವಸ್ಥೆ ಮಾಡಿದ್ದು ಸಹ ಕನ್ನಡಿಗರು ಎನ್ನುವುದು ವಿಶೇಷ. ಹೌದು... ಮೋದಿ ಸೇರಿ ಇತರೇ VIP, VVIPಗಳಿಗೆ ಕರ್ನಾಟದ ಆಹಾರವನ್ನು ನೀಡಲಾಗಿದೆ. ಇನ್ನು ರಾಮಮಂದಿರದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ಸುರೇಂದ್ರ ಕಾಂಚಣ್ ಪ್ರತಿಕ್ರಿಯಿಸಿ, VIP VVIPಗೆ ಕರ್ನಾಟದ ಆಹಾರವನ್ನು ಅಯೋಧ್ಯೆಯಲ್ಲಿ ನೀಡುತ್ತಿದ್ದೇವೆ. ಇದು ನಮಗೆ ಸಂತಸದ ಕ್ಷಣ ಎಂದು ಹರ್ಷ ವ್ಯಕ್ತಡಿಸಿದರು.
ಅಯೋಧ್ಯೆಯ ಭವ್ಯ ಶ್ರೀ ರಾಮ ಮಂದಿರದ ನಿರ್ಮಾಣಕಾರ್ಯ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ, ಇಂದು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಗೆ ಆಗಮಿಸಿ, ದೇಗುಲದ ಶಿಖರದ ಮೇಲೆ 10 ಅಡಿ ಎತ್ತರದ ಭಗವಾಧ್ವಜವನ್ನು ಹಾರಿಸಿದರು. ಇಂದು ಬೆಳಿಗ್ಗೆ 11:58ರಿಂದ ಮಧ್ಯಾಹ್ನ 1 ಗಂಟೆ ನಡುವಿನ ಶುಭ ಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿದೆ. ಇನ್ನು ಈ ಸಮಾರಂಭದ ಸಂಬಂಧ ರಾಮಮಂದಿರಕ್ಕೆ ಲೈಟಿಂಗ್ಸ್ ಅಲಂಕಾರ ಮಾಡಿದ್ದ ಕರ್ನಾಟಕ ರಾಜೇಶ್ ಶೆಟ್ಟಿ. ಇನ್ನು ಈ ಧರ್ಮ ಧ್ವಜಾರೋಹಣ ಕಾರ್ಯಕ್ರಮಕ್ಕೆ ಬಂದ ನರೇಂದ್ರ ಮೋದಿ ಸೇರಿದಂತೆ ಇತರೆ ಗಣ್ಯರಿಗೆ ಆಹಾರದ ವ್ಯವಸ್ಥೆ ಮಾಡಿದ್ದು ಸಹ ಕನ್ನಡಿಗರು ಎನ್ನುವುದು ವಿಶೇಷ. ಹೌದು… ಮೋದಿ ಸೇರಿ ಇತರೇ VIP, VVIPಗಳಿಗೆ ಕರ್ನಾಟದ ಆಹಾರವನ್ನು ನೀಡಲಾಗಿದೆ. ಇನ್ನು ರಾಮಮಂದಿರದಲ್ಲಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ಸುರೇಂದ್ರ ಕಾಂಚಣ್ ಪ್ರತಿಕ್ರಿಯಿಸಿ, VIP VVIPಗೆ ಕರ್ನಾಟದ ಆಹಾರವನ್ನು ಅಯೋಧ್ಯೆಯಲ್ಲಿ ನೀಡುತ್ತಿದ್ದೇವೆ. ಇದು ನಮಗೆ ಸಂತಸದ ಕ್ಷಣ ಎಂದು ಹರ್ಷ ವ್ಯಕ್ತಡಿಸಿದರು.

