AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kara Hunnime: ಕಾರ ಹುಣ್ಣಿಮೆ ಆಚರಣೆ ವೇಳೆ ಅವಘಡ, ಎತ್ತು ಡಿಕ್ಕಿ ಹೊಡೆದು ವ್ಯಕ್ತಿಯ ಸಾವು

Bull running: ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿಯಲ್ಲಿ ಈ ದುರ್ಘಟನೆ ನಡೆದಿದೆ.  ನಿನ್ನೆ ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳನ್ನ ಓಡಿಸುವಾಗ ಈ ಘಟನೆ ನಡೆದಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Kara Hunnime: ಕಾರ ಹುಣ್ಣಿಮೆ ಆಚರಣೆ ವೇಳೆ ಅವಘಡ, ಎತ್ತು ಡಿಕ್ಕಿ ಹೊಡೆದು ವ್ಯಕ್ತಿಯ ಸಾವು
Kara Hunnime: ಕಾರ ಹುಣ್ಣಿಮೆ ಆಚರಣೆ ವೇಳೆ ಅವಘಡ: ಎತ್ತುಗಳು ಡಿಕ್ಕಿ ಹೊಡೆದು ವ್ಯಕ್ತಿಯ ಸಾವು
ಸಾಧು ಶ್ರೀನಾಥ್​
|

Updated on:Jun 25, 2021 | 5:16 PM

Share

ಗದಗ: ಉತ್ತರ ಕರ್ನಾಟಕ ಸೇರದಿಂತೆ ಅನೇಕ ಕಡೆ ನಿನ್ನೆ ಕಾರ ಹುಣ್ಣಿಮೆಯ ಆಚರಣೆ ಜೋರಾಗಿ ನಡೆದಿದೆ. ಆದರೆ ಈ  ವೇಳೆ ಅವಘಡ ಒಂದು ಸಂಭವಿಸಿದ್ದು, ಎತ್ತು ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ.

ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿಯಲ್ಲಿ ಈ ದುರ್ಘಟನೆ ನಡೆದಿದೆ.  ನಿನ್ನೆ ಕಾರ ಹುಣ್ಣಿಮೆ ನಿಮಿತ್ತ ಎತ್ತುಗಳನ್ನ ಓಡಿಸುವಾಗ ಈ ಘಟನೆ ನಡೆದಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಘಟನೆ ನಡೆದಿದ್ದು ಹೇಗೆ?: ಕಾರ ಹುಣ್ಣಿಮೆ ಸಂಭ್ರಮದ ವೇಳೆ ರಾಸುಗಳನ್ನು ಹಾಯಿಸುವ ಕಾರ್ಯಕ್ರಮ ನಡೆದಿತ್ತು. ರಾಸುಗಳ ಓಡಿಸುವಾಗ ರಾಸು ಡಿಕ್ಕಿ ಹೊಡೆದ ರಭಸಕ್ಕೆ 42 ವರ್ಷದ ಕಿರಣ  ನೆಲಕ್ಕುರುಳಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕಿರಣ ಇಂದು ಮೃತಪಟ್ಟಿದ್ದಾರೆ. ಕಾರ ಹುಣ್ಣಿಮೆ ಸಂಭ್ರಮದಲ್ಲಿ ಭಾರೀ ಜನ ಜಾತ್ರೆ ಸೇರಿತ್ತು. ಪೊಲೀಸರು ಖಡಕ್ ಸೂಚನೆ ನೀಡಿದ್ದರೂ ಜನ ಸೇರಿದ್ದರು.

ಕಾರ ಹುಣ್ಣಿಮೆ ಆಚರಣೆ: ಏನಿದು ಬೇಸಿಗೆ ಮುಗಿದು, ಮುಂಗಾರು ಕಾಲಿಟ್ಟಾಗ ಈ ಪರಿವರ್ತನಾ ಕಾಲವನ್ನು ಆಚರಿಸಲು ರೈತಾಪಿ ವರ್ಗ ಕಾರ ಹುಣ್ಣಿಮೆಯನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸುತ್ತಾರೆ. ರೈತರು ಮನೆಗಳಲ್ಲಿ ಮಕ್ಕಳಿಗೆ ಸ್ನಾನ ಮಾಡಿಸಿದಂತೆ… ತಮ್ಮ ಎತ್ತಿನ ರಾಸುಗಳಿಗೆ ಸ್ನಾನ ಮಾಡಿಸಿ, ರಂಗುರಂಗಿನ ಬಣ್ಣಗಳಿಂದ ಅಲಂಕರಿಸುತ್ತಾರೆ. ಕೊಂಬುಗಳಿಗೆ ನವಿಲುಗರಿಗಳನ್ನು ಸಿಕ್ಕಿಸಿ, ಬಲೂಗಳನ್ನು ಕಟ್ಟುತ್ತಾರೆ. ಬಣ್ಣದ ಟೇಪ್​ಗಳನ್ನೂ ಸುತ್ತುತ್ತಾರೆ. ಹಿಂಭಾಗವನ್ನೂ ಅಲಂಕರಿಸುತ್ತಾರೆ. ಕಾಲುಗಳಿಗೆ ಗೆಜ್ಜೆ ಕಟ್ಟುತ್ತಾರೆ. ಇದಾದ ಮೇಲೆ ಶೇಂಗಾ ಹೋಳಿಗೆ, ಹುಗ್ಗಿ, ಸಿಹಿ ಪೊಂಗಲ್​ ಮಾಡಿಕೊಂಡು ಹಬ್ಬದೂಟ ಸವಿಯುತ್ತಾರೆ. ಅದಾದ ಮೇಲೆ ನಡೆಯುವುದೇ ರಾಸುಗಳ ಓಟ. ಅದರಲ್ಲಿ ಇಡೀ ಹಳ್ಳಿಯ ಮಂದಿ ಭಾಗವಹಿಸುತ್ತಾರೆ.

ತಿಮ್ಮಾಪುರದಲ್ಲಿ ಕಾರ ಹುಣ್ಣಿಮೆಗೆ ಎತ್ತಿನ ಮೇಲೆ ಸಿಂಗಾರಗೊಂಡ ‘ಮುಂದಿನ CM ಸಿದ್ದರಾಮಯ್ಯ’ ಎಂಬ ಮೂಕ ಘೋಷ ವಾಕ್ಯ! (kara hunnime celebration bull race one person died as racing bull hits him)

Published On - 5:11 pm, Fri, 25 June 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ