ಬೆಂಗಳೂರು: ವಾಹನದಿಂದ ಕೇಜ್ಗೆ ಶಿಫ್ಟ್ ಮಾಡುವ ವೇಳೆ ಬನ್ನೇರುಘಟ್ಟ ರಕ್ಷಣಾ ಕೇಂದ್ರದಿಂದ ಕರಡಿ ಪರಾರಿಯಾಗಿದೆ. ಉದ್ಯಾನವನದ ವೈದ್ಯರ ಚಾಲಕನ ಮೇಲೆ ದಾಳಿ ಮಾಡಿ ರೆಸ್ಕ್ಯೂ ಸೆಂಟರ್ನಿಂದ 8 ವರ್ಷದ ಗಂಡು ಕರಡಿ ಪರಾರಿಯಾಗಿದೆ. ಘಟನೆಯಲ್ಲಿ ಚಾಲಕನ ಕಿವಿಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಬನ್ನೇರುಘಟ್ಟದಲ್ಲಿ ಘಟನೆ ಸಂಭವಿಸಿದೆ. ತುಮಕೂರಿನಿಂದ ರಕ್ಷಣೆ ಮಾಡಿ ತರಲಾಗಿದ್ದ ಕರಡಿ ಪರಾರಿಯಾಗಿದೆ.
ಕರಡಿಯನ್ನು ವಾಹನದಿಂದ ಕೇಜ್ಗೆ ಶಿಫ್ಟ್ ಮಾಡಲಾಗುತ್ತಿತ್ತು. ಆ ವೇಳೆ ಬೋನ್ ತಳ ಭಾಗದ ಕಬ್ಬಿಣದ ಶೀಟ್ ಮುರಿದು ಕರಡಿ ಪರಾರಿಯಾಗಿದೆ. ತಪ್ಪಿಸಿಕೊಂಡಿರುವ ಕರಡಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹುಚ್ಚನ ಕೆರೆಯಲ್ಲಿ ಅಡಗಿರುವ ಸಾಧ್ಯತೆ ಅಂದಾಜಿಸಲಾಗಿದೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ಸಿಬ್ಬಂದಿ ಜೊತೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಟೀಮ್ ಕರಡಿಗಾಗಿ ಶೋಧಕಾರ್ಯ ನಡೆಸುತ್ತಿದೆ. ಈ ಬಗ್ಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ಬಿಪಿನ್ ಸಿಂಗ್ ಹೇಳಿಕೆ ನೀಡಿದ್ದಾರೆ.
ಯೂರಿಯಾ ಮಿಶ್ರಿತ ನೀರು ಕುಡಿದು 4 ಎತ್ತು, ಒಂದು ಜಿಂಕೆ ಸಾವು
ಯೂರಿಯಾ ಮಿಶ್ರಿತ ನೀರು ಕುಡಿದು 4 ಎತ್ತು ಹಾಗೂ ಒಂದು ಜಿಂಕೆ ಸಾವನ್ನಪ್ಪಿದ ದಾರುಣ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಆಳುಕುಳಿ ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಾಡು ಪ್ರಾಣಿ ಬೇಟೆಯಾಡಲು ನೀರಿಗೆ ಯೂರಿಯಾ ಮಿಶ್ರಣ ಮಾಡಲಾಗಿತ್ತು. ಕಿಡಿಗೇಡಿಗಳು ನೀರಿಗೆ ಯೂರಿಯಾ ಮಿಕ್ಸ್ ಮಾಡಿದ್ದರು. ಯೂರಿಯಾ ಮಿಶ್ರಿತ ನೀರನ್ನು ಕುಡಿದ 4 ಎತ್ತುಗಳು, ಒಂದು ಜಿಂಕೆ ಸಾವನ್ನಪ್ಪಿದೆ. ಮಾನವರ ಈ ಕೆಲಸಕ್ಕೆ ಮೂಕಪ್ರಾಣಿಗಳು ಪ್ರಾಣ ಕಳೆದುಕೊಂಡಿವೆ. ಕೋಡಿಹಳ್ಳಿ ವಲಯ ಅರಣ್ಯಾಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಯೂರಿಯಾ ಮಿಶ್ರಿತ ನೀರು ಕುಡಿದು 4 ಎತ್ತು, ಒಂದು ಜಿಂಕೆ ಸಾವು; ಕಿಡಿಗೇಡಿಗಳ ಕೃತ್ಯಕ್ಕೆ ಮೂಕಪ್ರಾಣಿಗಳು ಬಲಿ
ಮೈಸೂರಿನಲ್ಲಿ ಬೋನಿಗೆ ಬಿತ್ತು 6 ವರ್ಷದ ಗಂಡು ಚಿರತೆ: ಅರಣ್ಯ ಇಲಾಖೆ ಕಾರ್ಯಾಚರಣೆ ಯಶಸ್ವಿ
Published On - 7:49 pm, Sun, 28 March 21