ಜೋಗ್‌ ಫಾಲ್ಸ್‌ಗೆ ಬೀಳಲು ಬಂದವನ ಮನಪರಿವರ್ತಿಸಿ ಊರಿಗೆ ಕಳಿಸಿದ PSI

ಬೆಂಗಳೂರಿನಲ್ಲಿ ಬಂಡವಾಳ ಹಾಕಿ ಬಟ್ಟೆ ವಾಪಾರ ಶುರು ಮಾಡಿದ್ದ. ಆದ್ರೆ, ದುರದೃಷ್ಟವಶಾತ್ ವ್ಯಾಪಾರದಲ್ಲಿ ಸಕ್ಸಸ್ ಕಾಣಲಿಲ್ಲ. ಬ್ಯುಸಿನೆಸ್​ ನಲ್ಲಿ ನಷ್ಟವಾಗಿದ್ದರಿಂದ ಮನನೊಂದು ಬಟ್ಟೆ ವ್ಯಾಪಾರಿ ಸಾಯಲು ತೀರ್ಮಾನ ಮಾಡಿದ್ದ. ಅದರಂತೆ ಭೋರ್ಗರೆಯುತ್ತಿರುವ ವಿಶ್ವವಿಖ್ಯಾತ ಜೋಗ್ ಫಾಲ್ಸ್​​ ಗೆ ಜಿಗಿದು ಪ್ರಾಣ ಕಳೆದುಕೊಳ್ಳಬೇಕೆಂದು ಪ್ಲ್ಯಾನ್ ಮಾಡಿದ್ದ. ಆದ್ರೆ, ಅದೃಷ್ಟವಶಾತ್ ವ್ಯಕ್ತಿಯ ಪಾಲಿಗೆ ಪಿಎಸ್ಐ ದೇವರಂತೆ ಬಂದು ಕಾಪಾಡಿದ್ದಾರೆ.

ಜೋಗ್‌ ಫಾಲ್ಸ್‌ಗೆ ಬೀಳಲು ಬಂದವನ ಮನಪರಿವರ್ತಿಸಿ ಊರಿಗೆ ಕಳಿಸಿದ PSI
ಪಿಎಸ್​​ಐ ನಾಜರಾಜ್, ಬಟ್ಟೆ ವ್ಯಾಪಾರಿ
Edited By:

Updated on: Aug 28, 2025 | 10:13 PM

ಶಿವಮೊಗ್ಗ, (ಆಗಸ್ಟ್ 28): ಬಟ್ಟೆ ವ್ಯಾಪಾರದಲ್ಲಿ (cloth merchant) ನಷ್ಟವಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳಲು  ಬೆಂಗಳೂರಿನಿಂದ (Bengaluru) ಜೋಗ್ ಫಾಲ್ಸ್ ಗೆ (jog falls) ಬಂದಿದ್ದ ವ್ಯಕ್ತಿಯನ್ನು ಪಿಎಸ್​ಐ ಉಳಿಸಿದ್ದಾರೆ. ಹೌದು… ಜೋಗ್ ಫಾಲ್ಸ್‌ಗೆ (Jog Falls) ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಾಪಾರಿಗೆ ಕಾರ್ಗಲ್ ಸಬ್ ಇನ್ಸ್‌ಪೆಕ್ಟರ್ ನಾಗರಾಜ್ ಅವರು ಬುದ್ಧಿ ಹೇಳಿ ಮನಪರಿವರ್ತನೆ ಮಾಡಿ ಮರಳಿ ಊರಿಗೆ ಕಳುಹಿಸಿದ್ದಾರೆ. ಇನ್ನೇನು ಫಾಲ್ಸ್​ ಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವಷ್ಟರಲ್ಲೇ ದೇವರಂತೆ ಬಂದ ಪಿಎಸ್​ಐ ನಾಗರಾಜ್, ವ್ಯಕ್ತಿಯ ಸಮಸ್ಯೆ ಕೇಳಿ ಅದಕ್ಕೆ ಒಂದಿಷ್ಟು ಸಲಹೆ ಕೊಟ್ಟು ಮನಪರಿವರ್ತಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಬಂದಿದ್ದ ಬೆಂಗಳೂರಿನ ಬಟ್ಟೆ ವ್ಯಾಪಾರಿ ಜೋಗ್ ಫಾಲ್ಸ್ ಬಳಿ ಅತಿ ಅಪಾಯಕಾರಿ ಸ್ಥಳಗಳ ಬಗ್ಗೆ ಅಲ್ಲಿನ ಆಟೋ ಚಾಲಕರಲ್ಲಿ ವಿಚಾರಿಸಿದ್ದ. ಈ ವಿಚಾರ ಫಾಲ್ಸ್ ಬಳಿ ರೌಂಡ್ಸ್‌ನಲ್ಲಿ ಪಿಎಸ್​​ಐ ನಾಗರಾಜ್​ ಗೆ ಗೊತ್ತಾಗಿದೆ. ಬಳಿಕ ಅನುಮನಗೊಂಡ ಪಿಎಸ್​​ಐ, ವಿಚಾರಿಸಿದಾಗ ಆತನ ಬೆಂಗಳೂರಿನಲ್ಲಿ (Bengaluru) ಬಟ್ಟೆ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿ ಎನ್ನುವುದು ಗೊತ್ತಾಗಿದೆ. ಇನ್ನು ವೇಳೆ ಏಕೆ ಆತ್ಮಹತ್ಯೆ ಮಾಡಿಕೊಳ್ಳಲು ಬಂದಿರುವುದಾಗಿ ಪೊಲೀಸರ ಮುಂದೆ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: 50 ಲಕ್ಷ ರೂ. ಖರ್ಚು ಮಾಡಿ ಮದ್ವೆ: ಮೂರೇ ವರ್ಷದಲ್ಲಿ ಮಹಿಳಾ ಟೆಕ್ಕಿ ದುರಂತ ಸಾವು

ವ್ಯಾಪಾರದಲ್ಲಿ ನಷ್ಟ, ಪೋಷಕರ ಆರೋಗ್ಯ ಸಮಸ್ಯೆಯಿಂದ ಲಕ್ಷಗಟ್ಟಲೆ ಸಾಲ ಮಾಡಿ ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆ ಬಗ್ಗೆ ಪೊಲೀಸರ ಬಳಿ ತನ್ನ ಕಷ್ಟಗಳನ್ನು ತೋಡಿಕೊಂಡಿದ್ದಾನೆ. ಅಲ್ಲದೇ ಸುಮಾರು 20 ದಿನದ ಹಿಂದೆ ಮನೆ ಬಿಟ್ಟು ಬಂದು, ರೈಲು ನಿಲ್ದಾಣ, ಬೇರೆ ಬೇರೆ ಸ್ಥಳಗಳಲ್ಲಿ ವಾಸ್ತವ್ಯ ಮಾಡಿ ಕೊನೆಗೆ ಸಾಯುವ ನಿರ್ಧಾರ ತೆಗೆದುಕೊಂಡಿದ್ದಾಗಿ ವಿವರಿಸಿದ್ದ. ಇದರಿಂದ ಜೋಗ್ ಫಾಲ್ಸ್ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಬಂದಿದ್ದಾಗಿ ‌ಬಾಯ್ಬಿಟ್ಟಿದ್ದಾನೆ.

ಬಟ್ಟೆ ವ್ಯಾಪಾರಿಯ ಕಣ್ಣೀರಿನ ಕಥೆ ಕೇಳಿದ ಪಿಎಸ್​​ಐ ನಾಗರಾಜ್ ಅವರು ಆತನಿಗೆ ಧೈರ್ಯ ತುಂಬಿ ಮನವೊಲಿಸಿದ್ದಾರೆ. ಬಳಿಕ ಆತನ ಪೋಷಕರಿಗೆ ಕರೆ ಮಾಡಿ ವಾಪಸ್ ಬೆಂಗಳೂರಿಗೆ ಕಳಿಹಿಸಿ ಕೊಟ್ಟಿದ್ದಾರೆ. ಈ ಮೂಲಕ ಪಿಎಸ್​ಐ ನಾಗರಾಜ್ ಅವರ  ಸಮಯ ಪ್ರಜ್ಞೆ ಹಾಗೂ ಕರ್ತವ್ಯ ನಿಷ್ಠೆಯಿಂದ ವ್ಯಕ್ತಿಯೋರ್ವನ ಪ್ರಾಣ ಉಳಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ