ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ! ಇಂದು ಸಿಎಂ ಸಭೆ ಬಳಿಗೆ ಕಠಿಣ ನಿಯಮ ಜಾರಿ ಸಾಧ್ಯತೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಮಿಕ್ರಾನ್, ಕೊವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸರ್ಕಾರ ಇಂದು (ಜ.4) ಮಹತ್ವದ ಸಭೆ ನಡೆಸುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅಧ್ಯಕ್ಷತೆಯಲ್ಲಿ ಇಂದು ಸಂಜೆ 6.30ಕ್ಕೆ ಸಭೆ ನಡೆಯಲಿದೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು, ಸಚಿವರು, ತಜ್ಞರು, ಅಧಿಕಾರಿಗಳ ಜತೆ ಕೊವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಸಿಎಂ ಚರ್ಚೆ ನಡೆಸುತ್ತಾರೆ. ಸಭೆಯಲ್ಲಿ ಕೆಲವು ಷರತ್ತುಗಳ ಜಾರಿ ಬಗ್ಗೆ ಬಿಬಿಎಂಪಿ […]

ಕರ್ನಾಟಕದಲ್ಲಿ ಹೆಚ್ಚಾಗುತ್ತಿದೆ ಕೊರೊನಾ ಸೋಂಕಿತರ ಸಂಖ್ಯೆ! ಇಂದು ಸಿಎಂ ಸಭೆ ಬಳಿಗೆ ಕಠಿಣ ನಿಯಮ ಜಾರಿ ಸಾಧ್ಯತೆ
ಸಾಂದರ್ಭಿಕ ಚಿತ್ರ
Edited By:

Updated on: Jan 04, 2022 | 11:24 AM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ (Coronavirus) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಮಿಕ್ರಾನ್, ಕೊವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಸರ್ಕಾರ ಇಂದು (ಜ.4) ಮಹತ್ವದ ಸಭೆ ನಡೆಸುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಅಧ್ಯಕ್ಷತೆಯಲ್ಲಿ ಇಂದು ಸಂಜೆ 6.30ಕ್ಕೆ ಸಭೆ ನಡೆಯಲಿದೆ. ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು, ಸಚಿವರು, ತಜ್ಞರು, ಅಧಿಕಾರಿಗಳ ಜತೆ ಕೊವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಸಿಎಂ ಚರ್ಚೆ ನಡೆಸುತ್ತಾರೆ.

ಸಭೆಯಲ್ಲಿ ಕೆಲವು ಷರತ್ತುಗಳ ಜಾರಿ ಬಗ್ಗೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸುವ ಸಾಧ್ಯತೆಯಿದೆ. ಸಭೆ, ಸಮಾರಂಭ, ಱಲಿಗಳಿಗೆ ಜನರ ಸೀಮಿತಕ್ಕೆ ಸಲಹೆ ನೀಡಲಾಗುತ್ತದೆ. ರೆಸ್ಟೋರೆಂಟ್, ಪಬ್, ಬಾರ್, ಥಿಯೇಟರ್​ಗೆ 50:50 ನಿಯಮ ಜಾರಿ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಇನ್ನು ಜನವರಿ 7ರ ಬಳಿಕವೂ ನೈಟ್ ಕರ್ಫ್ಯೂ ವಿಸ್ತರಣೆಗೆ ಮನವಿ ಮಾಡಬಹುದು. ದೇವಸ್ಥಾನ, ಬಸ್, ಮೆಟ್ರೋ, ಆಟೋ, ಓಲಾ, ಉಬರ್, ಸೂಪರ್ ಮಾರ್ಕೆಟ್ ಎಂಟ್ರಿಗೆ ಲಸಿಕೆ ಕಡ್ಡಾಯಗೊಳಿಸಲು ಸಲಹೆ ನೀಡುವ ಮೂಲಕ ಬಿಬಿಎಂಪಿ ತನ್ನ ಅಭಿಪ್ರಾಯ ವ್ಯಕ್ತಪಡಿಸಲಿದೆ.

ಈ ಹಿಂದೆ ರಾಜ್ಯದಲ್ಲಿ ಸೆಮಿ ಲಾಕ್​ಡೌನ್ ಜಾರಿಯಾಗಿತ್ತು. ಆಗ ಇಂಡಸ್ಟ್ರೀಸ್, ಕನ್ಸ್ಟ್ರಕ್ಷನ್, ಸಲೂನ್​ಗಳಿಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಈಗ ಯಾವುದಕ್ಕೆಲ್ಲಾ ಅನುಮತಿ ನೀಡಬೇಕೆಂಬುದರ ಬಗ್ಗೆ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ವೀಕೆಂಡ್ ಕರ್ಫ್ಯೂ ಜಾರಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಆದರೆ ಸಭೆ ಬಳಿಕ ಅಧಿಕೃಯ ಮಾಹಿತಿ ಹೊರಬೀಳಲಿದೆ

ಟಫ್ ರೂಲ್ಸ್ ಜಾರಿ ಸುಳಿವು ಕೊಟ್ಟ ಸುಧಾಕರ್
ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯದ ರಾಜಧಾನಿಯಲ್ಲಿ ಟಫ್ ರೂಲ್ಸ್ ಜಾರಿಗೊಳಿಸುವ ಬಗ್ಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಸುಳಿವು ಕೊಟ್ಟಿದ್ದಾರೆ.

ಇನ್ನು ಸಭೆ ಕುರಿತು ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿಎಂ, ಇಂದು ಸಂಜೆ ಕೊವಿಡ್ ಬಗ್ಗೆ ಸಭೆ ಮಾಡುತ್ತೇವೆ. ಟಾಸ್ಕ್​ಪೋರ್ಸ್​ ಕಮಿಟಿ ಸದಸ್ಯರು ಇರ್ತಾರೆ. ಕೊರೊನಾ ಮತ್ತೆ ಹೆಚ್ಚಳ ಹಿನ್ನೆಲೆ ವಿಶ್ವ ಆರೋಗ್ಯ ಸಂಸ್ಥೆ, ಭಾರತ ಸರ್ಕಾರ ಅನೇಕ ಮಾರ್ಗದರ್ಶನ ನೀಡಿದೆ. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚಾಗಿದೆ. ಪಕ್ಕದ ರಾಜ್ಯದಲ್ಲಿ ಹೆಚ್ಚಾದಾಗ ನಮ್ಮ ರಾಜ್ಯದಲ್ಲಿ ಹೆಚ್ಚಾಗುತ್ತದೆ. ಇದರ ಬಗ್ಗೆ ಕಟ್ಟೆಚ್ಚರ ವಹಿಸಬೇಕಿದೆ. ಗಡಿಗಳನ್ನು ಬಿಗಿ ಮಾಡಲಾಗಿದೆ. ಇನ್ನಷ್ಟು ಕಟ್ಟೆಚ್ಚರ ವಹಿಸುವ ಅವಶ್ಯಕತೆ ಇದೆ. ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಮತ್ತು ಓಮಿಕ್ರಾನ್ ಹೆಚ್ಚಾಗುತ್ತಿದೆ. ಬರುವ ದಿನದಲ್ಲಿ ಸುದಿರ್ಘ ಕ್ರಮ ಕೈಗೊಳ್ಳಬೇಕಾಗಿದೆ. ಔಷಧಿ ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಾಲೆ ರಜೆ ಬಗ್ಗೆ ತಜ್ಞರು ಏನು ಹೇಳ್ತಾರೋ ಕೇಳಿ ತೀರ್ಮಾನ ಮಾಡುತ್ತೇವೆ. ಲಾಕ್​ಡೌನ್, ಸೆಮಿ ಲಾಕ್​ಡೌನ್ ಬಗ್ಗೆ ತಜ್ಞರ ಜೊತೆ ಸಭೆ ನಡೆಸಿದ ಬಳಿಕ ನಿರ್ಧಾರ ಮಾಡಲಾಗುತ್ತದೆ. ಜನರ ಸಹಕಾರ ಕೂಡಾ ಅಗತ್ಯವಿದೆ. ಜನ ಸಹಕಾರ ನೀಡಿದರೆ ಕೊವಿಡ್ ನಿಯಂತ್ರಣ ಮಾಡಬಹುದು. ಗಡಿಯಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇನ್ನಷ್ಟು ಸಿಬ್ಬಂದಿ ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ

ನನ್ನ ಕನಸಲ್ಲಿ ಪ್ರತಿದಿನ ಶ್ರೀಕೃಷ್ಣ ಬರುತ್ತಿದ್ದಾನೆ, ರಾಮರಾಜ್ಯ ಸ್ಥಾಪಿಸುವಂತೆ ಹೇಳುತ್ತಿದ್ದಾನೆ: ಅಖಿಲೇಶ್ ಯಾದವ್​​

ಥೈಲ್ಯಾಂಡ್ ಆಗಸದಲ್ಲಿ ಕನ್ನಡ ಬಾವುಟ ಹಾರಿಸಿದ ಕನ್ನಡಿಗ – ಇದು ಕನ್ನಡ ಬಾವುಟಕ್ಕೆ ಅವಮಾನ ಮಾಡಿದ್ದಕ್ಕೆ ಕನ್ನಡಿಗನಿಂದ ತಕ್ಕ ಉತ್ತರ

Published On - 11:22 am, Tue, 4 January 22