No mask- No social distance! ಕೊರೊನಾ ಆತಂಕದ ನಡುವೆ ದೊಡ್ಡಬಳ್ಳಾಪುರದಿಂದ 85 ಬಸ್ಸಿನಲ್ಲಿ ಓಂಶಕ್ತಿಗೆ ಹೊರಟ ಸ್ತ್ರೀಯರು
ದೊಡ್ಡಬಳ್ಳಾಪುರ: ಎಲ್ಲೆಡೆ ಮಹಾಮಾರಿ ಕೊರೊನಾ ವ್ಯಾಪಕವಾಗ ಆವರಿಸುತ್ತಿದೆ. ಈ ಆತಂಕವನ್ನು ದೂರ ಮಾಡಲು ಜನ ನಾನಾ ಮಾರ್ಗದಲ್ಲಿ ಸಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನಿಂದ ಸುಮಾರು 85 ಬಸ್ ಗಳಲ್ಲಿ ಮಹಿಳೆಯರು ಸಾಮೂಹಿಕವಾಗಿ ಪ್ರಯಾಣ ಮಾಡಿದ್ದು, ಕೊರೊನಾ ಕಡಿಮೆಯಾಗಲಿ ಅಂತ ಸಾಮೂಹಿಕ ಮಾಲೆ ಧರಿಸಿ ಓಂ ಶಕ್ತಿಗೆ ಹೊರಟಿದ್ದಾರೆ. ತಮಿಳುನಾಡಿನ ಓಂ ಶಕ್ತಿಗೆ ತೆರಳಿರುವ ಈ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಅಂಜನಾದ್ರಿ ಸೇವಾ ಟ್ರಸ್ಟ್ ವತಿಯಿಂದ ಒಂಶಕ್ತಿಗೆ ತೆರಳುತ್ತಿರುವವರಿಗೆ ಈ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. No […]
ದೊಡ್ಡಬಳ್ಳಾಪುರ: ಎಲ್ಲೆಡೆ ಮಹಾಮಾರಿ ಕೊರೊನಾ ವ್ಯಾಪಕವಾಗ ಆವರಿಸುತ್ತಿದೆ. ಈ ಆತಂಕವನ್ನು ದೂರ ಮಾಡಲು ಜನ ನಾನಾ ಮಾರ್ಗದಲ್ಲಿ ಸಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನಿಂದ ಸುಮಾರು 85 ಬಸ್ ಗಳಲ್ಲಿ ಮಹಿಳೆಯರು ಸಾಮೂಹಿಕವಾಗಿ ಪ್ರಯಾಣ ಮಾಡಿದ್ದು, ಕೊರೊನಾ ಕಡಿಮೆಯಾಗಲಿ ಅಂತ ಸಾಮೂಹಿಕ ಮಾಲೆ ಧರಿಸಿ ಓಂ ಶಕ್ತಿಗೆ ಹೊರಟಿದ್ದಾರೆ. ತಮಿಳುನಾಡಿನ ಓಂ ಶಕ್ತಿಗೆ ತೆರಳಿರುವ ಈ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಅಂಜನಾದ್ರಿ ಸೇವಾ ಟ್ರಸ್ಟ್ ವತಿಯಿಂದ ಒಂಶಕ್ತಿಗೆ ತೆರಳುತ್ತಿರುವವರಿಗೆ ಈ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.
No mask- No social distance! 4000 ಮಹಿಳಾ ಮಾಲಾಧಾರಿಗಳಿಗೆ ಉಚಿತ ಬಸ್ ವ್ಯವಸ್ಥೆ:
ಕಳೆದ ಎರಡು ವರ್ಷದಿಂದ ಭಾದಿಸುತ್ತಿರುವ ಕೊರೊನಾ ತೊಲಗಲಿ ಅಂತಾ ಯಾತ್ರಾರ್ಥಿ ಮಹಿಳೆಯರು ಸಂಕಲ್ಪ ತೊಟ್ಟಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಎಲ್ಲಾ ಗ್ರಾಮಗಳ ಮಹಿಳೆಯರು ಮಾಲೆ ಧರಿಸಿ ಸಂಕಲ್ಪತೊಟ್ಟು ಪ್ರಯಾಣ ಮಾಡುತ್ತಿದ್ದಾರೆ. ಬೆಳಗ್ಗೆಯಿಂದ ಒಂದೊಂದೆ ಬಸ್ ಒಂಶಕ್ತಿ ಕಡೆಗೆ ಪ್ರಯಾಣ ಬೆಳೆಸಿದೆ. ಪ್ರಯಾಣ ಬೆಳೆಸುವ ಮಹಿಳಾ ಮಾಲೆಧಾರಿಗಳಿಗೆ ಅಂಜನಾದ್ರಿ ಸೇವಾ ಟ್ರಸ್ಟ್ ಎಲ್ಲಾ ವ್ಯವಸ್ಥೆ ನೋಡಿಕೊಂಡಿದೆ. ಸುಮಾರು ನಾಲ್ಕು ಸಾವಿರ ಮಹಿಳಾ ಮಾಲಾಧಾರಿಗಳಿಗೆ ಉಚಿತ ಬಸ್ ವ್ಯವಸ್ಥೆಯಾಗಿದೆ. ಆಶ್ಚರ್ಯ ಮತ್ತು ಆತಂಕದ ವಿಚಾರವೆಂದರೆ ಸಂಘಟಕರೂ ಸೇರಿದಂತೆ ಯಾತ್ರಾರ್ಥಿ ಮಹಿಳೆಯರೂ ಮತ್ತು ವಾಲಂಟೀರ್ಗಳು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸರಸರನೆ ತಮಿಳುನಾಡಿನತ್ತ ಬಸ್ಸುಗಳಲ್ಲಿ ಹೊರಟರು.
Om Shakthi|ಊರಿಗೆ ಊರೇ ಕೊರನಾ ತೊಲಗಿಸಲು ಸಂಕಲ್ಪ ತೊಟ್ಟು ಮಾಲೆ ಹಾಕಿದ್ರು |TV9 Kannada
ಇದನ್ನೂ ಓದಿ: ಕುದುರೆಮುಖ ಅರಣ್ಯದ ಜಾಂಬಲೆ ಗ್ರಾಮಕ್ಕೆ ಸಿಕ್ತು ಡಿಜಿಟಲ್ ಲೈಫ್ ಶ್ರೀರಕ್ಷೆ, ಇದು ಜಿಯೋ ಕೊಡುಗೆ!
Published On - 11:16 am, Tue, 4 January 22