ಖನಿಜ ಬ್ಲಾಕ್ಗಳ ಹರಾಜು, ನಿರ್ವಹಣೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ: ಪ್ರಶಸ್ತಿ ಸ್ವೀಕರಿಸಿದ ಸಚಿವ ಎಸ್ಎಸ್ ಮಲ್ಲಿಕಾರ್ಜುನ
ಎರಡನೇ ರಾಜ್ಯ ಗಣಿಗಾರಿಕೆ ಮಂತ್ರಿಗಳ ಸಮ್ಮೇಳನದ ಸಂದರ್ಭದಲ್ಲಿ ಭೋಪಾಲ್ ನಲ್ಲಿ ಗಣಿ ಮತ್ತು ಖನಿಜ ಸಚಿವಾಲಯ ಆಯೋಜಿಸಿದ್ದ "ಮೈನಿಂಗ್ ಆ್ಯಂಡ್ ಬಿಯಾಂಡ್"ನಲ್ಲಿ ಖನಿಜ ಬ್ಲಾಕ್ಗಳ ಹರಾಜು, ನಿರ್ವಹಣೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಲಭಿಸಿದೆ. ಮಧ್ಯಪ್ರದೇಶದ ಭೂಪಾಲ್ನಲ್ಲಿ ಆಯೋಜಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರ ಸಮ್ಮೇಳನದಲ್ಲಿ ಘೋಷಣೆ ಮಾಡಲಾಗಿದೆ.
ದಾವಣಗೆರೆ, ಜನವರಿ 23: ಖನಿಜ ಬ್ಲಾಕ್ಗಳ ಹರಾಜು, ನಿರ್ವಹಣೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಲಭಿಸಿದೆ. ಮಧ್ಯಪ್ರದೇಶದ ಭೂಪಾಲ್ನಲ್ಲಿ ಆಯೋಜಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರ ಸಮ್ಮೇಳನದಲ್ಲಿ ಘೋಷಣೆ ಮಾಡಲಾಗಿದೆ. ಕೇಂದ್ರ ಖನಿಜ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರಿಂದ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ (S. S. Mallikarjun) ಅವರು ಪ್ರಶಸ್ತಿ ಸ್ವೀಕಾರ ಮಾಡಿದ್ದಾರೆ. ಮರಳು ನೀತಿ ಹಾಗೂ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ನಿರ್ವಹಿಸಿದ ನೀತಿ ದೇಶಕ್ಕೆ ಮಾದರಿ ಆಗಿದೆ.
ಪ್ರಲ್ಹಾದ್ ಜೋಶಿ ಟ್ವೀಟ್ ಮಾಡಿದ್ದು, ಎರಡನೇ ರಾಜ್ಯ ಗಣಿಗಾರಿಕೆ ಮಂತ್ರಿಗಳ ಸಮ್ಮೇಳನದ ಸಂದರ್ಭದಲ್ಲಿ ಭೋಪಾಲ್ ನಲ್ಲಿ ಗಣಿ ಮತ್ತು ಖನಿಜ ಸಚಿವಾಲಯ ಆಯೋಜಿಸಿದ್ದ “ಮೈನಿಂಗ್ ಆ್ಯಂಡ್ ಬಿಯಾಂಡ್” ವಸ್ತುಪ್ರದರ್ಶನವನ್ನು ಭೇಟಿ ನೀಡಿದ ಕ್ಷಣ. ಇದೇ ಸಂದರ್ಭದಲ್ಲಿ ಭೋಪಾಲ್ನ ಭೋಜೇಶ್ವರ ಮಹಾದೇವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮಹದಾವಕಾಶ ನನ್ನದಾಯಿತು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಖನಿಜ ಬ್ಲಾಕ್ಗಳ ಹರಾಜು ಪ್ರಕ್ರಿಯೆಯ ಮೊದಲ ಹಂತಕ್ಕೆ ಪ್ರಲ್ಹಾದ್ ಜೋಶಿ ಚಾಲನೆ
ಸಂಯೋಜಿತ ಪರವಾನಗಿಯಾಗಿ ಹರಾಜಿಗಾಗಿ 35 ಕಡಲಾಚೆಯ ಖನಿಜ ಬ್ಲಾಕ್‌ಗಳನ್ನು ರಾಜ್ಯಗಳಿಗೆ ಹಸ್ತಾಂತರಿಸಲಾಯಿತು. ಎನ್‌ಐಟಿಗಳನ್ನು ವಿತರಿಸಲು ಮತ್ತು ಖನಿಜ ಹರಾಜುಗಳನ್ನು ತ್ವರಿತಗೊಳಿಸಲು ರಾಜ್ಯಗಳನ್ನು ಒತ್ತಾಯಿಸಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ, ಗಣಿಗಾರಿಕೆ ವಲಯದಲ್ಲಿ ಹೆಚ್ಚಿನ ದಕ್ಷತೆಯನ್ನು ತರಲು ಗಣಿಗಳ ಸ್ಟಾರ್ ರೇಟಿಂಗ್‌ಗಾಗಿ ಸರಾಸರಿ ಮಾರಾಟ ಬೆಲೆ ಮಾಡ್ಯೂಲ್ ಮತ್ತು ಹೊಸ ಟೆಂಪ್ಲೇಟ್ ಅನ್ನು ಪ್ರಾರಂಭಿಸಲಾಯಿತು.
ಇಂದು ಭೋಪಾಲ್ನಲ್ಲಿ ನಡೆದ ರಾಜ್ಯಗಳ ಗಣಿಗಾರಿಕೆ ಸಚಿವರ ಸಮಾವೇಶದ ಅಧ್ಯಕ್ಷತೆ ವಹಿಸಿದೆನು. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ @DrMohanYadav51 ಹಾಗೂ ಹಲವು ರಾಜ್ಯಗಳ ಗಣಿಗಾರಿಕೆ ಸಚಿವರು ಭಾಗವಹಿಸಿದ್ದರು.
ಸಂಯೋಜಿತ ಪರವಾನಗಿಯಾಗಿ ಹರಾಜಿಗಾಗಿ 35 ಕಡಲಾಚೆಯ ಖನಿಜ ಬ್ಲಾಕ್‌ಗಳನ್ನು ರಾಜ್ಯಗಳಿಗೆ ಹಸ್ತಾಂತರಿಸಲಾಯಿತು.… pic.twitter.com/AUg9a7BpJU
— Pralhad Joshi (@JoshiPralhad) January 23, 2024
ಜಿಎಸ್‌ಐನ 50 ಸಂಪನ್ಮೂಲ ವರದಿಗಳು ಮತ್ತು 37 ಜಿಯೋಲಾಜಿಕಲ್ ಮೆಮೊರಾಂಡಮ್‌ಗಳನ್ನು ರಾಜ್ಯಗಳಿಗೆ ಹಸ್ತಾಂತರಿಸಲಾಯಿತು. GSI ವರದಿಗಳು 26 ನಿರ್ಣಾಯಕ ಖನಿಜ ಬ್ಲಾಕ್‌ಗಳನ್ನು ಒಳಗೊಂಡಿವೆ ಎಂಬುದು ಸಂತಸದ ವಿಷಯ. ಇದು ನಿರ್ಣಾಯಕ ಖನಿಜಗಳ ಪೂರೈಕೆಯನ್ನು ಭದ್ರಪಡಿಸುವತ್ತ ನಮ್ಮ ಪ್ರಯತ್ನಗಳನ್ನು ಮತ್ತಷ್ಟು ಬಲ ಪಡಿಸುತ್ತದೆ.
ಅಷ್ಟೇ ಅಲ್ಲ, 4 ಹೊಸ ನೋಟಿಫೈಡ್ ಖಾಸಗಿ ಕಂಪನಿಗಳಿಗೆ ಪ್ರಮಾಣಪತ್ರಗಳನ್ನು ಹಸ್ತಾಂತರಿಸಿದೆನು. ಪ್ರಮುಖ ಖನಿಜಗಳ ಪರಿಶೋಧನೆಗಾಗಿ ಪರಿಶೋಧನಾ ಏಜೆನ್ಸಿಗಳು, ಮತ್ತು ಹೆಚ್ಚಿನ ಸಂಖ್ಯೆಯ ಹರಾಜುಗಳನ್ನು ನಡೆಸುವಲ್ಲಿ ಅತ್ಯುತ್ತಮವಾದ 3 ರಾಜ್ಯಗಳನ್ನು ಗೌರವಿಸಲಾಯಿತು. ಮಧ್ಯಪ್ರದೇಶವು 29 ಬ್ಲಾಕ್‌ಗಳನ್ನು ಹರಾಜು ಹಾಕಿದೆ. ಛತ್ತೀಸ್‌ಗಢ 20 ಬ್ಲಾಕ್‌ಗಳನ್ನು ಹರಾಜು ಮಾಡಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ತಲಾ 11 ಬ್ಲಾಕ್‌ಗಳನ್ನು ಹರಾಜು ಹಾಕಿವೆ ಎಂದು ಬರೆದುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.