8 ಕೋಟಿ ಆಸ್ತಿ ಹೊಂದಿದ್ದು, 2 ಕೋಟಿ ಸಾಲ ಮಾಡಿದ್ದಾರಂತೆ ಬಿಸಿ ಪಾಟೀಲ್

|

Updated on: Nov 19, 2019 | 1:00 PM

ಹಾವೇರಿ: ಹಿರೇಕೆರೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಆಸ್ತಿ ಘೋಷಣೆ ಮಾಡಿದ್ದಾರೆ. ಬಿ.ಸಿ.ಪಾಟೀಲ್ ಒಟ್ಟು​ ಆಸ್ತಿ ಮೌಲ್ಯ 8.58 ಕೋಟಿ ರೂಪಾಯಿ. ₹2.04 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದು, ₹4.55 ಕೋಟಿ ಸ್ಥಿರಾಸ್ತಿ ಇದೆ. ಪತ್ನಿ ವನಜಾ ಪಾಟೀಲ್ ಬಳಿ ₹78.46 ಲಕ್ಷ ಮೌಲ್ಯದ ಚರಾಸ್ತಿ ಇದ್ದು, 1.20 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಬಿ.ಸಿ.ಪಾಟೀಲ್​ ಬಳಿ ಐಷಾರಾಮಿ ಕಾರು, ಬೈಕ್, ಟ್ರ್ಯಾಕ್ಟರ್ ಇದ್ದು, ಪತ್ನಿ ಬಳಿ […]

8 ಕೋಟಿ ಆಸ್ತಿ ಹೊಂದಿದ್ದು, 2 ಕೋಟಿ ಸಾಲ ಮಾಡಿದ್ದಾರಂತೆ ಬಿಸಿ ಪಾಟೀಲ್
Follow us on

ಹಾವೇರಿ: ಹಿರೇಕೆರೂರು ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಆಸ್ತಿ ಘೋಷಣೆ ಮಾಡಿದ್ದಾರೆ.

ಬಿ.ಸಿ.ಪಾಟೀಲ್ ಒಟ್ಟು​ ಆಸ್ತಿ ಮೌಲ್ಯ 8.58 ಕೋಟಿ ರೂಪಾಯಿ. ₹2.04 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದು, ₹4.55 ಕೋಟಿ ಸ್ಥಿರಾಸ್ತಿ ಇದೆ. ಪತ್ನಿ ವನಜಾ ಪಾಟೀಲ್ ಬಳಿ ₹78.46 ಲಕ್ಷ ಮೌಲ್ಯದ ಚರಾಸ್ತಿ ಇದ್ದು, 1.20 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಬಿ.ಸಿ.ಪಾಟೀಲ್​ ಬಳಿ ಐಷಾರಾಮಿ ಕಾರು, ಬೈಕ್, ಟ್ರ್ಯಾಕ್ಟರ್ ಇದ್ದು, ಪತ್ನಿ ಬಳಿ 40 ಲಕ್ಷ ರೂ. ಮೌಲ್ಯದ ಐಷಾರಾಮಿ ಕಾರು ಇದೆ. ಬಿ.ಸಿ.ಪಾಟೀಲ್​ ಬಳಿ 9 ಲಕ್ಷ ರೂ. ಮೌಲ್ಯದ 300 ಗ್ರಾಂ ಚಿನ್ನ, 6 ಲಕ್ಷ ನಗದು ಇದೆ. ಪತ್ನಿ ವನಜಾ ಪಾಟೀಲ್ ಬಳಿ ₹13.50 ಲಕ್ಷ ಮೌಲ್ಯದ ಚಿನ್ನ, 45 ಸಾವಿರ ರೂಪಾಯಿ ಮೌಲ್ಯದ 1 ಕೆ.ಜಿ. ಬೆಳ್ಳಿ, 3 ಲಕ್ಷ ನಗದು ಇರುವುದಾಗಿ ಉಲ್ಲೇಖಿಸಿದ್ದಾರೆ.

ಬಿ.ಸಿ.ಪಾಟೀಲ್, ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಜಿಮ್​ಗೆ 35 ಲಕ್ಷ ಹೂಡಿಕೆ ಮಾಡಿದ್ದು, ವಿವಿಧ ಹಣಕಾಸು ಸಂಸ್ಥೆಗಳಲ್ಲಿ 2.02 ಕೋಟಿ ರೂ. ಸಾಲ ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ತಿಳಿಸಿದ್ದಾರೆ.

Published On - 9:16 pm, Mon, 18 November 19