‘ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯ ಭವಿಷ್ಯದ ದಿಕ್ಸೂಚಿ’

|

Updated on: Nov 02, 2019 | 2:44 PM

ಬೆಂಗಳೂರು ಗ್ರಾಮಾಂತರ: ಬೈ ಎಲೆಕ್ಷನ್ ಫಲಿತಾಂಶ ರಾಜ್ಯದ ಭವಿಷ್ಯದ ರಾಜಕೀಯವನ್ನ ನಿರ್ಣಯ ಮಾಡುತ್ತದೆ ಎಂದು ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಕೃಷ್ಣ ಭೈರೇಗೌಡ ನುಡಿದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿಕಾರ್ಯಕರ್ತರ ಸಭೆ ನಡೆಯುತ್ತಿದ್ದು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅದಕ್ಕೆ ನಾವು ಮಾಡೋ ಕೆಲಸ ಅವಲಂಬನೆಯಾಗಿದೆ‌. ಸಮ್ಮಿಶ್ರ ಸರ್ಕಾರವಿದ್ದಾಗ ನಮ್ಮ ಸರ್ಕಾರ ತೆಗೆಯಲೇಬೇಕು ಅಂತಾ ಮಾಧ್ಯಮಗಳ ಜೊತೆ ಸೇರಿ ಅನವಶ್ಯಕ ಚಳವಳಿ ಮಾಡಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ […]

ಉಪ ಚುನಾವಣೆ ಫಲಿತಾಂಶ ರಾಜ್ಯ ರಾಜಕೀಯ ಭವಿಷ್ಯದ ದಿಕ್ಸೂಚಿ
Follow us on

ಬೆಂಗಳೂರು ಗ್ರಾಮಾಂತರ: ಬೈ ಎಲೆಕ್ಷನ್ ಫಲಿತಾಂಶ ರಾಜ್ಯದ ಭವಿಷ್ಯದ ರಾಜಕೀಯವನ್ನ ನಿರ್ಣಯ ಮಾಡುತ್ತದೆ ಎಂದು ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಕೃಷ್ಣ ಭೈರೇಗೌಡ ನುಡಿದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿಕಾರ್ಯಕರ್ತರ ಸಭೆ ನಡೆಯುತ್ತಿದ್ದು, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಅದಕ್ಕೆ ನಾವು ಮಾಡೋ ಕೆಲಸ ಅವಲಂಬನೆಯಾಗಿದೆ‌. ಸಮ್ಮಿಶ್ರ ಸರ್ಕಾರವಿದ್ದಾಗ ನಮ್ಮ ಸರ್ಕಾರ ತೆಗೆಯಲೇಬೇಕು ಅಂತಾ ಮಾಧ್ಯಮಗಳ ಜೊತೆ ಸೇರಿ ಅನವಶ್ಯಕ ಚಳವಳಿ ಮಾಡಿದ್ದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಎಲ್ಲಾ ವಿಚಾರಗಳಲ್ಲೂ ಅವರದ್ದು ವೈಫಲ್ಯವೇ ಆಗಿದೆ. ಬಿಎಸ್ ವೈ ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರ ಸಹಕಾರ ನೀಡ್ತಿಲ್ಲ. ಮುಖ್ಯಮಂತ್ರಿಗೆ ಅವರ ಪಾರ್ಟಿಯೆ ಸಹಕಾರ ನೀಡಿಲ್ಲ ಅಂದ್ರೆ ಹೇಗೆ ಉತ್ತಮ ಆಡಳಿತ ನೀಡಲು ಸಾಧ್ಯ? ಸುಮ್ಮನೆ ಅವರನ್ನ ಮುಖ್ಯಮಂತ್ರಿಯಾಗಿ ಮಾಡಿ ಕೂರಿಸಿದ್ದಾರೆ ಎಂದು ಕೃಷ್ಣ ಭೈರೇಗೌಡ ವ್ಯಂಗ್ಯವಾಡಿದರು.

Published On - 2:19 pm, Sat, 2 November 19