ಪ್ರೋತ್ಸಾಹ ಧನ ಗುಣಮಟ್ಟದ ಹಾಲಿಗೆ ಮಾತ್ರ, ಸರ್ಕಾರದ ವಿರುದ್ಧ ರೈತರ ಆಕ್ರೋಶ

ಚಿಕ್ಕಬಳ್ಳಾಪುರ: ಈ ಭಾಗದ ರೈತರಿಗೆ ಹೈನೋದ್ಯಮವೇ ಆಸರೆ. ಹಸುಗಳನ್ನು ಸಾಕಿ, ಪ್ರತಿನಿತ್ಯ ಅವುಗಳನ್ನು ಮೇಯಿಸಿ. ಹಾಲು ಮಾರಾಟ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಇಂಥಾದ್ರಲ್ಲಿ ರೈತರ ನೆರವಿಗೆ ಆಗ್ಬೇಕಿದ್ದ ಪ್ರೋತ್ಸಾಹ ಧನವೂ ಸಿಗ್ತಿಲ್ಲ. ಇದರಿಂದ ರೈತರು ಆಕ್ರೋಶಗೊಂಡಿದ್ದಾರೆ. ಗುಣಮಟ್ಟದ ಹಾಲಿಗೆ ಮಾತ್ರ ಪ್ರೋತ್ಸಾಹ ಧನ! ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ರೈತರಿಗೆ ಹೈನೋಧ್ಯಮವೇ ಜೀವಾಳ. ಅಷ್ಟೋ ಇಷ್ಟೋ ನೀರು ಬಳಸಿಕೊಂಡು ಇರೋ ಭೂಮಿಯಲ್ಲಿ ಹುಲ್ಲು ಬೆಳೆದು ಹಸುಗಳನ್ನು ಸಾಕುತ್ತಿದ್ದಾರೆ. ಅದರ ಆಧಾರದ ಮೇಲೆಯೇ ಜೀವನ ನಡೆಸುತ್ತಿದ್ದಾರೆ. ಆದ್ರೆ, ಸರ್ಕಾರ ಸರಿಯಾಗಿ […]

ಪ್ರೋತ್ಸಾಹ ಧನ ಗುಣಮಟ್ಟದ ಹಾಲಿಗೆ ಮಾತ್ರ, ಸರ್ಕಾರದ ವಿರುದ್ಧ ರೈತರ ಆಕ್ರೋಶ
sadhu srinath

|

Nov 02, 2019 | 6:51 PM

ಚಿಕ್ಕಬಳ್ಳಾಪುರ: ಈ ಭಾಗದ ರೈತರಿಗೆ ಹೈನೋದ್ಯಮವೇ ಆಸರೆ. ಹಸುಗಳನ್ನು ಸಾಕಿ, ಪ್ರತಿನಿತ್ಯ ಅವುಗಳನ್ನು ಮೇಯಿಸಿ. ಹಾಲು ಮಾರಾಟ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಇಂಥಾದ್ರಲ್ಲಿ ರೈತರ ನೆರವಿಗೆ ಆಗ್ಬೇಕಿದ್ದ ಪ್ರೋತ್ಸಾಹ ಧನವೂ ಸಿಗ್ತಿಲ್ಲ. ಇದರಿಂದ ರೈತರು ಆಕ್ರೋಶಗೊಂಡಿದ್ದಾರೆ.

ಗುಣಮಟ್ಟದ ಹಾಲಿಗೆ ಮಾತ್ರ ಪ್ರೋತ್ಸಾಹ ಧನ! ಕೋಲಾರ-ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ರೈತರಿಗೆ ಹೈನೋಧ್ಯಮವೇ ಜೀವಾಳ. ಅಷ್ಟೋ ಇಷ್ಟೋ ನೀರು ಬಳಸಿಕೊಂಡು ಇರೋ ಭೂಮಿಯಲ್ಲಿ ಹುಲ್ಲು ಬೆಳೆದು ಹಸುಗಳನ್ನು ಸಾಕುತ್ತಿದ್ದಾರೆ. ಅದರ ಆಧಾರದ ಮೇಲೆಯೇ ಜೀವನ ನಡೆಸುತ್ತಿದ್ದಾರೆ. ಆದ್ರೆ, ಸರ್ಕಾರ ಸರಿಯಾಗಿ ಇವರಿಗೆ ಪ್ರೋತ್ಸಾಹಧನ ನೀಡ್ತಿಲ್ಲ.

ಒಂದು ಲೀಟರ್ ಹಾಲು ಉತ್ಪಾದಿಸಲು 30 ರೂಪಾಯಿ ಖರ್ಚು ಬರುತ್ತೆ ಅನ್ನೋ ರೈತರ ವಾದಕ್ಕೆ ಸರ್ಕಾರ, ಪ್ರತಿ ಲೀಟರ್ ಹಾಲಿಗೆ 6 ರೂಪಾಯಿ ಪ್ರೋತ್ಸಾಹಧನ ನೀಡ್ತಿದೆ. ಅದ್ರಲ್ಲೂ ಅತ್ಯುತ್ತಮ ಗುಣಮಟ್ಟದ ಹಾಲಿಗೆ ಮಾತ್ರ ಪ್ರೋತ್ಸಾಹಧನ ಸಿಗುತ್ತಿದೆ. ಸಾಮಾನ್ಯ ಹಾಲಿಗೆ ಪ್ರೋತ್ಸಾಹಧನವೇ ದೊರೆಯುತ್ತಿಲ್ಲ. ಇದ್ರಿಂದ ಆಕ್ರೋಶಗೊಂಡ ರೈತರು, ಈಗ ಇರೋ ಆದೇಶವನ್ನು ಮಾರ್ಪಡಿಸುವಂತೆ ಪಟ್ಟು ಹಿಡಿದಿದ್ದಾರೆ.

ರಾಜ್ಯ ಸರ್ಕಾರ ನಿಗದಿ ಮಾಡಿರುವ ಪ್ಯಾಟ್ ಪ್ರಮಾಣ ಬಂದ್ರೆ ಮಾತ್ರ, ಅದಕ್ಕೆ ಪ್ರತಿ ಲೀಟರ್ ಹಾಲಿಗೆ ಡೈರಿಯಲ್ಲಿ 6 ರೂಪಾಯಿ ಹೆಚ್ಚುವರಿಯಾಗಿ ಪ್ರೋತ್ಸಾಹ ಧನ ನೀಡಲಾಗ್ತಿದೆ. ಇದನ್ನರಿಯದ ರೈತರು ಡೈರಿಗಳ ಸಿಬ್ಬಂದಿಯ ಜೊತೆ ಪ್ರತಿ ತಿಂಗಳು ಗಲಾಟೆ ಮಾಡ್ತಿದ್ದಾರೆ. ಹಾಲು ಉತ್ಪಾದನೆಯೇ ಕಷ್ಟವಾಗಿದೆ, ಇಂಥಾದ್ರಲ್ಲಿ ಈ ತಾರತಮ್ಯ ನೀತಿ ಯಾಕೆ? ಹಸುಗಳಿಗೆ ಕುಡಿಯಲು ಗುಣಮಟ್ಟದ ನೀರೇ ಸಿಗ್ತಿಲ್ಲ. ಇನ್ನೂ ಗುಣಮಟ್ಟದ ಹಾಲು ತರೋದಾದ್ರೂ ಎಲ್ಲಿಂದ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada