AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶಿ ಟೂರ್ನಿಯಲ್ಲಿ ದೇವದತ್ ಪಡಿಕ್ಕಲ್ ಅಬ್ಬರ; ಭಾರತ ತಂಡಕ್ಕೆ ಆಯ್ಕೆ ಯಾವಾಗ?

Devdutt Padikkal's Vijay Hazare Century: ಕಳೆದ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ದೇವದತ್ ಪಡಿಕ್ಕಲ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಎರಡು ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ. ಕೇವಲ 34 ಲಿಸ್ಟ್ ಎ ಇನ್ನಿಂಗ್ಸ್‌ಗಳಲ್ಲಿ 11 ಶತಕ ಮತ್ತು 12 ಅರ್ಧಶತಕಗಳೊಂದಿಗೆ, ಅವರು ಭಾರತದ ಅಗ್ರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿದ್ದರೂ, ಪಡಿಕ್ಕಲ್‌ಗೆ ಟೀಮ್ ಇಂಡಿಯಾ ಏಕದಿನ ತಂಡದಲ್ಲಿ ಇನ್ನೂ ಪೂರ್ಣ ಅವಕಾಶ ಸಿಕ್ಕಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳದ್ದು.

ಪೃಥ್ವಿಶಂಕರ
|

Updated on:Dec 26, 2025 | 6:22 PM

Share
ಕಳೆದ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡಿದ್ದ ಕೆಲವೇ ಕೆಲವು ಇನ್ನಿಂಗ್ಸ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್‌, ಇದೀಗ ದೇಶಿ ಅಂಗಳದಲ್ಲಿ ಶತಕಗಳ ಮಳೆ ಸುರಿಸುತ್ತಿದ್ದಾರೆ. ವಿಜಯ್ ಹಜಾರೆ ಟ್ರೋಫಿಯ ಮೊದಲ ಪಂದ್ಯದಲ್ಲಿ 147 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದ ಪಡಿಕ್ಕಲ್, ಕರ್ನಾಟಕ ತಂಡ ದಾಖಲೆಯ ಮೊತ್ತವನ್ನು ಬೆನ್ನಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

1 / 6
ಇದೀಗ ಈ ಟೂರ್ನಿಯ ಎರಡನೇ ಪಂದ್ಯದಲ್ಲೂ ಮಿಂಚಿರುವ ದೇವದತ್ ಸತತ ಎರಡನೇ ಶತಕ ಸಿಡಿಸಿದ್ದಾರೆ. ಜಾರ್ಖಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೇವಲ 118 ಎಸೆತಗಳಲ್ಲಿ 147 ರನ್ ಬಾರಿಸಿದ್ದ ಪಡಿಕ್ಕಲ್ ಇದೀಗ ಕೇರಳ ವಿರುದ್ಧದ ಪಂದ್ಯದಲ್ಲಿ 116 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಕೇರಳ ವಿರುದ್ಧದ ಈ ಪಂದ್ಯದಲ್ಲಿ 137 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 3 ಸಿಕ್ಸರ್‌ಗಳು ಮತ್ತು 12 ಬೌಂಡರಿಗಳ ಸಹಿತ 124 ರನ್ ಬಾರಿಸಿದ್ದಾರೆ.

2 / 6
ದೇವದತ್ ಪಡಿಕ್ಕಲ್ ಇಷ್ಟೊಂದು ಉತ್ತಮ ಫಾರ್ಮ್‌ನಲ್ಲಿರುವುದು ಇದೇ ಮೊದಲಲ್ಲ. ಈ ಎಡಗೈ ಬ್ಯಾಟ್ಸ್‌ಮನ್ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಭಾರತದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂಬುದನ್ನು ಅವರ ಅಂಕಿ ಅಂಶಗಳೇ ಹೇಳುತ್ತವೆ. ಪಡಿಕ್ಕಲ್ ಕೇವಲ 34 ಇನ್ನಿಂಗ್ಸ್‌ಗಳಲ್ಲಿ 11 ಶತಕಗಳು ಮತ್ತು 12 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರರ್ಥ ಅವರು ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಶತಕ ಅಥವಾ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ.

3 / 6
 ಲಿಸ್ಟ್ ಎ ಕ್ರಿಕೆಟ್​ನಲ್ಲಿ 34 ಇನ್ನಿಂಗ್ಸ್‌ಗಳನ್ನಾಡಿರುವ ಪಡಿಕ್ಕಲ್ 82 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 2342 ರನ್ ಗಳಿಸಿದ್ದಾರೆ. ಪಡಿಕ್ಕಲ್ ಅವರ ಸ್ಟ್ರೈಕ್ ರೇಟ್ ಕೂಡ 92 ಕ್ಕಿಂತ ಹೆಚ್ಚಾಗಿದೆ. ಈ ರೀತಿಯ ಅಂಕಿಅಂಶಗಳ ಹೊರತಾಗಿಯೂ, ಪಡಿಕ್ಕಲ್‌ಗೆ ಟೀಂ ಇಂಡಿಯಾ ಏಕದಿನ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.

4 / 6
ಪಡಿಕ್ಕಲ್‌ ಇಲ್ಲಿಯವರೆಗೆ ಭಾರತ ತಂಡದ ಪರ ಎರಡು ಟೆಸ್ಟ್ ಮತ್ತು ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ ಒಂದು ಅರ್ಧಶತಕ ಸೇರಿದಂತೆ 30 ಸರಾಸರಿಯಲ್ಲಿ 90 ರನ್ ಗಳಿಸಿರುವ ಪಡಿಕ್ಕಲ್ ಟಿ20ಯಲ್ಲಿ 19 ರ ಸರಾಸರಿಯಲ್ಲಿ 38 ರನ್ ಗಳಿಸಿದ್ದಾರೆ. ಆದಾಗ್ಯೂ ಪಡಿಕ್ಕಲ್ ಅವರಿಗೆ ಇನ್ನೂ ಪೂರ್ಣ ಅವಕಾಶ ಸಿಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ.

5 / 6
2025 ರ ವರ್ಷ ದೇವದತ್ ಪಡಿಕ್ಕಲ್ ಅವರಿಗೆ ವಿಶೇಷವಾಗಿತ್ತು. ಕಳೆದ ಆವೃತ್ತಿಯ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್-ಫೈನಲ್ ಮತ್ತು ಸೆಮಿಫೈನಲ್‌ಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದ ಪಡಿಕ್ಕಲ್, ಸೈಯದ್ ಮುಷ್ತಾಕ್ ಟ್ರೋಫಿಯಲ್ಲಿ 309 ರನ್ ಬಾರಿಸಿದ್ದರು, ಈಗ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಭೀತುಪಡಿಸಿರುವ ಪಡಿಕ್ಕಲ್​ಗೆ ಭಾರತ ತಂಡದಲ್ಲಿ ಯಾವಾಗ ಅವಕಾಶ ಸಿಗಲಿದೆ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

6 / 6

Published On - 6:20 pm, Fri, 26 December 25