AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಭಾಧ್ಯಕ್ಷನಾಗಿ ಮುಂದಿನ 2 ವರ್ಷ ಕಾಲ ಕೆಲಸ ಮಾಡುವ ಬಗ್ಗೆ ಹೇಳಿದ್ದೇನೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಹೊಸತನಕ್ಕೆ ಎಲ್ಲಿಯ ತನಕ ನಾವು ತೆರೆದುಕೊಳ್ಳುವುದಿಲ್ಲವೋ ಅಲ್ಲಿ ತನಕ ಏನೂ ಸಾಧ್ಯವಾಗೋದಿಲ್ಲ. ಮುಂದಿನ ದಿನಗಳಲ್ಲಿ ಇ-ವಿಧಾನ್ ಜಾರಿಗೆ ಬರುವ ವಿಶ್ವಾಸ ಇದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸಭಾಧ್ಯಕ್ಷನಾಗಿ ಮುಂದಿನ 2 ವರ್ಷ ಕಾಲ ಕೆಲಸ ಮಾಡುವ ಬಗ್ಗೆ ಹೇಳಿದ್ದೇನೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 31, 2021 | 1:00 PM

ಬೆಂಗಳೂರು: ಸಭಾಧ್ಯಕ್ಷನಾಗಿ ನನ್ನ ಕೆಲಸ ಸಮರ್ಪಕವಾಗಿ ನಿರ್ವಹಿಸುತ್ತಿದ್ದೇನೆ. 2 ವರ್ಷಗಳಲ್ಲಿ ಅಂದುಕೊಂಡಿದ್ದನ್ನ ಬಹುತೇಕ ಮಾಡಿದ್ದೇವೆ. ಸಭಾಧ್ಯಕ್ಷನಾಗಿ ಮುಂದಿನ ಎರಡು ವರ್ಷಗಳ ಕಾಲ ಕೆಲಸ ಮಾಡುವ ಬಗ್ಗೆಯೂ ಹೇಳಿದ್ದೇನೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ನಿನ್ನೆ ಸ್ಪೀಕರ್ ಮನೆಯಲ್ಲಿ ನಡೆದ ಸಭೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಸ್ಪೀಕರ್ ಕಾಗೇರಿ ಅವರು ನಾನು ವಿಧಾನಸಭೆಯ ಸಭಾಧ್ಯಕ್ಷ. ನನ್ನನ್ನು ಯಾರು, ಎಲ್ಲಿ ಬೇಕಾದರೂ ಭೇಟಿ ಮಾಡಬಹುದು. ನಿನ್ನೆಯೂ ಕೆಲವರು ಬಂದು ಭೇಟಿ ಮಾಡಿದ್ದಾರೆ. ಅವರ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಇವತ್ತು, ಮೊನ್ನೆ ಕೂಡಾ ಭೇಟಿ ಮಾಡಿದ್ದಾರೆ ಎಂದು ಹೇಳಿದರು.

2 ವರ್ಷಗಳಲ್ಲಿ ಅಂದುಕೊಂಡಿದ್ದನ್ನ ಬಹುತೇಕ ಮಾಡಿದ್ದೇವೆ. ಆದ್ರೆ ಒಂದು ಕೆಲಸ ಮಾಡಲು ಆಗದಿರುವುದಕ್ಕೆ ಬೇಸರವಿದೆ. ವಿಧಾನಸಭೆಯಲ್ಲಿ ಈ-ವಿಧಾನ್ ಜಾರಿ ಸಾಧ್ಯವಾಗಿಲ್ಲ. ಇದಕ್ಕೆ ಸರ್ಕಾರದ ಧೋರಣೆ ಮತ್ತು ನಿಲುವೇ ಕಾರಣ. ಅನುದಾನದ ನೆರವಿಗೆ ಸರ್ಕಾರವನ್ನೇ ಅವಲಂಬಿಸಿದ್ದೇವೆ. ಸರ್ಕಾರ ಸ್ಪಂದಿಸಿಲ್ಲ, ಅಧಿಕಾರಶಾಹಿ ಧೋರಣೆಯೇ ಕಾರಣ. ಅಧಿಕಾರಶಾಹಿ ಧೋರಣೆ ಬದಲಾಗಬೇಕು ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಖೇದ ವ್ಯಕ್ತಪಡಿಸಿದ್ದಾರೆ.

ಹಿಂದಿನ ಎಲ್ಲ ಸ್ಪೀಕರ್‌ಗಳೂ ಈ ಪ್ರಯತ್ನ ಮಾಡಿದ್ದರು. ಐಟಿ ಕ್ಯಾಪಿಟಲ್ ಖ್ಯಾತಿಯ ರಾಜ್ಯದಲ್ಲಿ ಇ-ವಿಧಾನ್ ಇಲ್ಲ. ಸಣ್ಣ ಪುಟ್ಟ ರಾಜ್ಯಗಳಾದ ಕೇರಳ, ಹಿಮಾಚಲ ಪ್ರದೇಶದಲ್ಲಿ ಇದೆ. ಹೊಸತನಕ್ಕೆ ಎಲ್ಲಿಯ ತನಕ ನಾವು ತೆರೆದುಕೊಳ್ಳುವುದಿಲ್ಲವೋ ಅಲ್ಲಿ ತನಕ ಏನೂ ಸಾಧ್ಯವಾಗೋದಿಲ್ಲ. ಮುಂದಿನ ದಿನಗಳಲ್ಲಿ ಇ-ವಿಧಾನ್ ಜಾರಿಗೆ ಬರುವ ವಿಶ್ವಾಸ ಇದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ವಿಧಾನಸಭೆ 2 ವರ್ಷದ ಸಾಧನೆಗಳ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಪೀಕರ್ ಕಾಗೇರಿ ಭಾಗವಹಿಸಿದ್ದರು. ಕಾರ್ಯಕ್ರಮ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನೆರವೇರಿತು.

(karnataka Assembly speaker vishweshwar hegde kageri on completion of 2 years in office)