Karnataka Bandh: ಸೆ. 29 ರಂದು ಕರ್ನಾಟಕ ಬಂದ್; ರಜಾ ದಿನದಂದು ತರಗತಿ ನಡೆಸಲು ಮುಂದಾಗಿರುವ ಶಾಲೆಗಳು
Karnataka Bandh: ಕೆಲವು ಖಾಸಗಿ ಶಾಲೆಗಳಲ್ಲಿ ಈದ್-ಮಿಲಾದ್ ರಜೆ ದಿನ ತರಗತಿಗಳನ್ನು ನಡೆಸಲು ನಿರ್ಧರಿಸಿದೆ. ಬಂದ್ ಸಲುವಾಗಿ ಶಾಲೆಗಳು ತೆರೆಯುವುದಿಲ್ಲ ಈ ಶೈಕ್ಷಣಿಕ ದಿನಗಳನ್ನು ಸರಿದೂಗಿಸಲು, ಕೆಲವು ಶಾಲೆಗಳು ಶನಿವಾರ ಪೂರ್ಣ ದಿನದ ತರಗತಿಗಳನ್ನು ನಡೆಸಲು ನಿರ್ಧರಿಸಿವೆ.
ಸೆ.29ರಂದು ಕರ್ನಾಟಕದಲ್ಲಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಎರಡನೇ ಬಂದ್‌ನಿಂದ (Karnataka Bandh) ಕೆಲವು ಖಾಸಗಿ ಶಾಲೆಗಳಲ್ಲಿ ಈದ್-ಮಿಲಾದ್ ರಜೆ ದಿನ ತರಗತಿಗಳನ್ನು ನಡೆಸಲು ನಿರ್ಧರಿಸಿದೆ. ಬಂದ್ ಸಲುವಾಗಿ ಶಾಲೆಗಳು ತೆರೆಯುವುದಿಲ್ಲ ಈ ಶೈಕ್ಷಣಿಕ ದಿನಗಳನ್ನು ಸರಿದೂಗಿಸಲು, ಕೆಲವು ಶಾಲೆಗಳು ಶನಿವಾರ ಪೂರ್ಣ ದಿನದ ತರಗತಿಗಳನ್ನು ನಡೆಸಲು ನಿರ್ಧರಿಸಿವೆ. ಮಧ್ಯಂತರ ಪರೀಕ್ಷೆಗಳು ನಡೆಯುತ್ತಿರುವುದು ಈ ನಿರ್ಧಾರಕ್ಕೆ ಕಾರಣವಾಗಿದ್ದು, ಮತ್ತಷ್ಟು ವಿಳಂಬ ಮಾಡುವಂತಿಲ್ಲ ಎಂದು ಕೆಲವು ಶಾಲೆಗಳು ನಿರ್ಧರಿಸಿವೆ.
“ಪರೀಕ್ಷೆಗಳು ನಡೆಯುತ್ತಿರುವುದರಿಂದ ಗುರುವಾರ ಮತ್ತು ಶನಿವಾರ ತರಗತಿಗಳನ್ನು ನಡೆಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ” ಎಂದು ಶಾಲೆಯ ಪ್ರಾಂಶುಪಾಲರೊಬ್ಬರು ವಿವರಿಸಿದರು. ಕರ್ನಾಟಕ ಬಂದ್‌ನಿಂದ ಶುಕ್ರವಾರ ಶಾಲೆಗಳಿಗೆ ರಜೆ ನೀಡಬೇಕಾಗಬಹುದು, ಈ ಕಾರಣದಿಂದ ಕೆಲವು ಶಾಲೆಗಳು ತನ್ನ ಶುಕ್ರವಾರದ ಪರೀಕ್ಷೆಗಳನ್ನು ಶನಿವಾರಕ್ಕೆ ಮರು ನಿಗದಿಪಡಿಸಿದೆ ಎಂದು ವರದಿಗಳು ತಿಳಿಸಿವೆ.
ಆದರೆ, ಹಬ್ಬದ ರಜೆಯಂದು ತರಗತಿ ನಡೆಸುವ ಈ ನಿರ್ಧಾರಕ್ಕೆ ಎಲ್ಲರಿಂದಲೂ ಸ್ಪಂದನೆ ಸಿಕ್ಕಿಲ್ಲ. ರಜೆಯನ್ನು ನಿರೀಕ್ಷಿಸಿದ್ದ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಗಳಿಗೆ ಅನ್ಯಾಯವಾಗಿದೆ ಎಂದು ಕೆಲವರು ಭಾವಿಸಿದ್ದಾರೆ. ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಪರ್ಯಾಯ ಪರಿಹಾರವನ್ನು ಸೂಚಿಸಿದರು. ರಜೆಯ ದಿನದಂದು ತರಗತಿಗಳನ್ನು ನಿಗದಿಪಡಿಸುವ ಬದಲು ಶನಿವಾರ ಮತ್ತು ಭಾನುವಾರ ಪೂರ್ಣ ದಿನದ ತರಗತಿಗಳನ್ನು ನಡೆಸಲು ಶಾಲೆಗಳು ಪರಿಗಣಿಸಬಹುದು ಎಂದು ಅವರು ಹೇಳಿದರು.
ಶುಕ್ರವಾರದಂದು ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಜಿಲ್ಲಾಡಳಿತ ಈ ಕೂಡಲೇ ಒಂದು ನಿರ್ಣಯಕ್ಕೆ ಬಂದು ಗೊಂದಲ ತಪ್ಪಿಸಬೇಕು ಎಂದು ಶಶಿಕುಮಾರ್ ಒತ್ತಾಯಿಸಿದರು. ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳಿಗೆ ಅನಾನುಕೂಲತೆ ಮತ್ತು ಅನಿಶ್ಚಿತತೆಯನ್ನು ತಡೆಗಟ್ಟಲು ಬೆಂಗಳೂರಿನ ಹೊರಗಿನ ಜಿಲ್ಲಾಡಳಿತಗಳಿಂದ ತ್ವರಿತ ನಿರ್ಧಾರಗಳ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಇದನ್ನೂ ಓದಿ: ಕರ್ನಾಟಕದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಅಕ್ಟೋಬರ್ 4ರವರೆಗೂ ಅಧಿಕ ಮಳೆ ಸಾಧ್ಯತೆ, ಯೆಲ್ಲೋ ಅಲರ್ಟ್ ಘೋಷಣೆ
ಕಾನೂನು ವಿಶ್ವವಿದ್ಯಾಲಯ, ದಾವಣಗೆರೆ ವಿವಿಯ ಪರೀಕ್ಷೆಗಳು ಮುಂದೂಡಿಕೆ
ಕಾವೇರಿ ನದಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅಭ್ಯರ್ಥಿಗಳು ಯಾವುದೇ ರೀತಿಯ ತೊಂದರೆಯನ್ನು ಎದುರಿಸದೆ ಸೆ. 29 ರಂದು ನಡೆಯುವ ಪರೀಕ್ಷೆಯನ್ನು ಅಕ್ಟೋಬರ್ 1 ರಂದು ಬರೆಯಬಹುದು.
ಇದೆ ರೀತಿ, ಸೆ.29ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ದಾವಣಗೆರೆ ವಿಶ್ವವಿದ್ಯಾಲಯ ಮುಂದೂಡಿದೆ. ವಿವಿಯ ಸ್ನಾತಕೋತ್ತರ ಪದವಿ ಪರೀಕ್ಷೆ ಅ.1ರಂದು ನಡೆಸಲು ವಿಶ್ವವಿದ್ಯಾಲಯ ನಿರ್ಧಾರಿಸಿದೆ. ದಾವಣಗೆರೆ ವಿವಿ ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ ಅವರು ಮಾಹಿತಿ ನೀಡಿದ್ದಾರೆ.
ತಮಿಳುನಾಡಿಗೆ ನೀರು ಬಿಡ್ತಿರುವುದನ್ನು ಖಂಡಿಸಿ ಕರ್ನಾಟಕ ಬಂದ್ಗೆ ಕರೆ. ಸೆ.29ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದ್ದು, ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಬಂದ್ ಯಶಸ್ವಿಗೊಳಿಸುವಂತೆ ಬೆಂಗಳೂರಿನಲ್ಲಿ ಬೀದಿ ಬೀದಿ ಸಂಚರಿಸಿ ಸಾರ್ವಜನಿಕರಲ್ಲಿ, ಉದ್ಯಮಿಗಳಲ್ಲಿ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ