Bandipur Tiger Reserve: ದೇಶದ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ಬಂಡೀಪುರಕ್ಕೆ 2ನೇ ಸ್ಥಾನ..!

|

Updated on: Apr 11, 2023 | 7:48 AM

ಉತ್ತಮ ಸಂರಕ್ಷಿತ ಅರಣ್ಯ ಎಂದು ಬಂಡೀಪುರ ಬಂಡೀಪುರ ರಾಷ್ಟ್ರೀಯ ಉದ್ಯಾನವನ ದೇಶದಲ್ಲಿ ಎರಡನೇ ಪಡೆದಿದೆ. ಇನ್ನೊಂದೆಡೆ ರಾಜ್ಯದ 5 ಹುಲಿ ರಕ್ಷಿತಾರಣ್ಯಗಳು ಟಾಪ್ 10 ಪಟ್ಟಿಯಲ್ಲಿವೆ ಎನ್ನುವುದು ಮತ್ತೊಂದು ಸಂತಸದ ಸಂಗತಿ.

Bandipur Tiger Reserve: ದೇಶದ ಹುಲಿ ಸಂರಕ್ಷಿತಾರಣ್ಯ ಪ್ರದೇಶಗಳಲ್ಲಿ ಬಂಡೀಪುರಕ್ಕೆ 2ನೇ ಸ್ಥಾನ..!
ಬಂಡೀಪುರ ಹುಲಿರಕ್ಷಿತಾರಣ್ಯ
Follow us on

ಬೆಂಗಳೂರು: ಬಂಡೀಪುರ ಹುಲಿರಕ್ಷಿತಾರಣ್ಯಕ್ಕೆ (Bandipur Tiger Reserve) ಮೊನ್ನೆ ಅಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ‌ ನೀಡಿ ಪ್ರಕೃತಿ ಸೌಂದರ್ಯ ಸವಿದು ಹೋಗಿದ್ದಾರೆ. ಈ‌ ನಡುವೆ ಬಂಡೀಪುರಕ್ಕೆ ಮತ್ತೊಂದು ಗರಿಮೆ ಬಂದಿದ್ದು, ಬಂಡೀಪುರ ಇದೀಗ ದೇಶದಲ್ಲಿ ಉತ್ತಮ ಸಂರಕ್ಷಿತ ಅರಣ್ಯ ಎಂದು ಎರಡನೇ ಪಡೆದಿದೆ. ಇನ್ನೊಂದೆಡೆ ರಾಜ್ಯದ 5 ಹುಲಿ ರಕ್ಷಿತಾರಣ್ಯಗಳು ಟಾಪ್ 10 ಪಟ್ಟಿಯಲ್ಲಿವೆ ಎನ್ನುವುದು ಮತ್ತೊಂದು ಸಂತಸದ ಸಂಗತಿ. ಹೌದು… ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ನ್ಯಾಷನಲ್ ಪಾರ್ಕ್‌ಗೆ ಹುಲಿ ರಕ್ಷಿತಾರಣ್ಯ ಎಂಬ ಹಿರಿಮೆಯೂ ಇದೆ. ದೇಶದಲ್ಲಿ ಮೊದಲಿಗೆ ಘೋಷಣೆಯಾದ 9 ಹುಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಬಂಡೀಪುರವೂ ಸೇರಿಕೊಂಡಿತ್ತು. ಇಂತಹ ಬಂಡೀಪುರಕ್ಕೆ ಮತ್ತೊಂದು ಗರಿ ಮೂಡಿದೆ. ದೇಶದಲ್ಲೇ ಬಂಡೀಪುರ ಹುಲಿ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ. ಇಡೀ ದೇಶದಲ್ಲಿ 53 ಹುಲಿ ರಕ್ಷಿತಾರಣ್ಯ ಪ್ರದೇಶಗಳಿದ್ದು, ನಮ್ಮ ರಾಜ್ಯದ ಬಂಡೀಪುರಕ್ಕೆ ಎರಡನೇ ಸ್ಥಾನ ಲಭಿಸಿರುವುದು ಹೆಮ್ಮೆ ಎನಿಸಿದೆ.

ಇದನ್ನೂ ಓದಿ: ಮೋದಿ ಸಫಾರಿ: ಗಮನ ಸೆಳೆದ ಮೋದಿ ಡ್ರೆಸ್, ಬಂಡೀಪುರ ಲೋಗೋ ಇರುವ ದಿರಿಸು ಚಿತ್ರಗಳಲ್ಲಿ ನೋಡಿ

ಅಂದಹಾಗೆ ಪ್ರತಿ 4 ವರ್ಷಕ್ಕೊಮ್ಮೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸೇರಿದಂತೆ ಇತರೆ ಮೂರು ಸಂಸ್ಥೆಗಳು ಸೇರಿ, ದೇಶದಲ್ಲಿರುವ ಎಲ್ಲಾ ಹುಲಿ ಸಂರಕ್ಷಿತಾರಣ್ಯಗಳನ್ನ ಮ್ಯಾನೇಜ್ಮೆಂಟ್ ಎಫೆಕ್ಟೀವ್ ಇವಾಲ್ಯುಯೇಷನ್ ನಡೆಸಲಾಗುತ್ತೆ. ಇದೀಗ ಎಲ್ಲಾ ಹುಲಿ ಸಂರಕ್ಷಿತಾರಣ್ಯದ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು, ಬಂಡೀಪುರ ಎರಡನೇ ಸ್ಥಾನ ಪಡೆದಿದ್ರೆ, ನಾಗರಹೊಳೆಗೆ 4ನೇ ಸ್ಥಾನ, ಬಿಳಿಗಿರಿರಂಗನ ಬೆಟ್ಟಕ್ಕೆ 6ನೇ ಸ್ಥಾನ , ಭದ್ರಾ ಹುಲಿ ಸಂರಕ್ಷಿತಾರಣ್ಯಕ್ಕೆ 9ನೇ ಸ್ಥಾನ ಹಾಗೂ ಕಾಳಿ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ 10ನೇ ಸ್ಥಾನ ಲಭಿಸಿದೆ.

ಇನ್ನು ಈ ಹುಲಿ ಸಂರಕ್ಷಿತಾರಣ್ಯದ ಮೌಲ್ಯಮಾಪನ ನಡೆಸಲು ನಿವೃತ್ತ ಐಎಫ್ಎಸ್ ಅಧಿಕಾರಿಗಳು, ಸೈಂಟಿಸ್ಟ್‌ಗಳನ್ನು ಒಳಗೊಂಡ ತಂಡ ರಚಿಸಲಾಗಿರುತ್ತೆ. ಈ ತಂಡ 64 ಅಂಶಗಳನ್ನು ಇಟ್ಟುಕೊಂಡು ಮೌಲ್ಯಮಾಪನ ನಡೆಸುತ್ತಾರೆ. ಅರಣ್ಯವನ್ನು ಹೇಗೆ ಸಂರಕ್ಷಣೆ ಮಾಡುತ್ತಿದ್ದಾರೆ? ಪ್ರವಾಸಿಗರಿಗೆ ಎಲ್ಲಾ ಸೌಲಭ್ಯ ಸಿಕ್ಕಿದೆಯಾ? ಆಡಳಿತಾತ್ಮಕ ಕೆಲಸ ಹೇಗಿದೆ? ಟೂರಿಸಂಗೆ ಅನುಕೂಲವಿದೆಯಾ? ಹೀಗೆ ಹಲವು ಅಂಶಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗುತ್ತೆ.ಇದರಲ್ಲಿ ಬಂಡೀಪುರಕ್ಕೆ 93.18 ಅಂಕ ಬಂದಿದೆ. ಮಧ್ಯಪ್ರದೇಶದ ಸಾತ್ಪುರ ಅರಣ್ಯಕ್ಕೂ ಇಷ್ಟೇ ಅಂಕ ಬಂದಿದ್ದು ಎರಡು ಅರಣ್ಯ ಪ್ರದೇಶಗಳು ಎರಡನೇ ಸ್ಥಾನ‌ವನ್ನು ಹಂಚಿಕೊಂಡಿವೆ.

ವನ್ಯ ಪ್ರಿಯರ ಆಕರ್ಷಣ ತಾಣವಾಗಿರುವ ಬಂಡೀಪುರ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದಲ್ಲೇ ಅತ್ಯುತ್ತಮ ಸಂರಕ್ಷಿತ ಪ್ರದೇಶವೆಂದು ಹೆಸರು ಪಡೆದುಕೊಂಡಿದ್ದು, ಬಂಡೀಪುರದ ಹಿರಿಮೆಗೆ ಮತ್ತೊಂದು ಗರಿ ಮೂಡಿದಂತಾಗಿದೆ.

Published On - 7:47 am, Tue, 11 April 23