
ಬೆಂಗಳೂರು, (ಅಕ್ಟೋಬರ್ 23): ಗ್ರೇಟರ್ ಬೆಂಗಳೂರು ರಚನೆ ಬೆನ್ನಲ್ಲೇ ಚುನಾವಣೆಗೆ ( greater bengaluru authority election) ಆಯೋಗ ಎಲ್ಲಾ ಸಿದ್ಶತೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಡುವೆ ಚುನಾವಣೆಗೆ ಬಿಜೆಪಿ ಕೂಡಾ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ 11 ಮಂದಿ ಸಂಯೋಜಕರನ್ನು ನೇಮಕ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಲ್ಲದೆ, ವಲಯವಾರು ಸಂಘಟನಾತ್ಮಕ ಜಿಲ್ಲೆಯ ಪ್ರಮುಖರನ್ನು ನೇಮಕ ಮಾಡಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಒಟ್ಟು 11 ಜನರನ್ನು ಒಳಗೊಂಡ ಸಂಯೋಜಕರ ತಂಡ ನೇಮಕ ಮಾಡಲಾಗಿದೆ.
ಇಂದು (ಅಕ್ಟೋಬರ್ 23) ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಸಭೆಗಳು ನಡೆದಿದೆ. ಸಭೆಯಲ್ಲಿ ಯಾರಿಗೆ ಜವಾಬ್ದಾರಿ ಹಂಚಿಕೆ ಮಾಡಬೇಕು ಎಂಬ ನಿಟ್ಟಿನಲ್ಲಿಯೂ ಚರ್ಚೆಯಾಗಿದ್ದು, 11 ಮಂದಿ ಸಂಯೋಜಕರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಇದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯಲಿರುವ ಚುನಾವಣೆ ಸಂಬಂಧಿತ ಚಟುವಟಿಕೆಗಳಿಗೆ ರಾಜ್ಯಾಧ್ಯಕ್ಷರಾದ ಶ್ರೀ @BYVijayendra ಅವರ ನೇತೃತ್ವದಲ್ಲಿ ಈ ಕೆಳಕಂಡ ಪ್ರಮುಖರನ್ನು ಪ್ರಾಧಿಕಾರದ ಸಂಯೋಜಕರ ತಂಡ, ಸಂಘಟನಾತ್ಮಕ ಜಿಲ್ಲೆಯ ಸಂಯೋಜಕರು ಹಾಗೂ 5 ಪಾಲಿಕೆಗಳಿಗೆ ಪ್ರಮುಖರು ಹಾಗೂ ಸಹ ಪ್ರಮುಖರನ್ನಾಗಿ ನಿಯೋಜಿಸಿ ಆದೇಶಿಸಿದ್ದಾರೆ. pic.twitter.com/YqyyPW2tVn
— BJP Karnataka (@BJP4Karnataka) October 23, 2025
ಬಿವೈ ವಿಜಯೇಂದ್ರ, ಆರ್ ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಎಸ್ ಸುರೇಶ್ ಕುಮಾರ್, ಡಿವಿ ಸದಾನಂದ ಗೌಡ, ಪಿಸಿ ಮೋಹನ್, ಸಿ ಎನ್ ಮಂಜುನಾಥ್, ತೇಜಸ್ವಿ ಸೂರ್ಯ, ಡಾ. ಕೆ ಸುಧಾಕರ್, ಎನ್ ಎಸ್ ನಂದೀಶ್ ರೆಡ್ಡಿ.