ಉತ್ತರಾಧಿಕಾರಿ ನೇಮಕಕ್ಕೆ ಇದು ಮೈಸೂರು ರಾಜರ ಮನೆ ಅಲ್ಲ: ಯತೀಂದ್ರಗೆ ತಿವಿದ ಕೈ ಶಾಸಕ
ನವೆಂಬರ್ ಕ್ರಾಂತಿನೋ, ಡಿಸೆಂಬರ್ ಕ್ರಾಂತಿನೋ ಗೊತ್ತಿಲ್ಲ. ಆದ್ರೆ ರಾಜ್ಯ ಕಾಂಗ್ರೆಸ್ನಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶುರುವಾಗಿರುವ ನಾಯಕತ್ವ ಬದಲಾವಣೆ ವಿಚಾರ, ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ತಿ ಆಗ್ತಿರುವ ಈ ಹೊತ್ತಲ್ಲಿ ಒಂದು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ. ಸಿದ್ದರಾಮಯ್ಯನವರ ಉತ್ತರಾಧಿಕಾರಿ ಬಗ್ಗೆ ಯತೀಂದ್ರ ಆಡಿದ ಮಾತು ರಾಜ್ಯ ಕಾಂಗ್ರೆಸ್ ನಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ಈ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.
ದಾವಣಗೆರೆ, (ಅಕ್ಟೋಬರ್ 23): ನವೆಂಬರ್ ಕ್ರಾಂತಿನೋ, ಡಿಸೆಂಬರ್ ಕ್ರಾಂತಿನೋ ಗೊತ್ತಿಲ್ಲ. ಆದ್ರೆ ರಾಜ್ಯ ಕಾಂಗ್ರೆಸ್ನಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಶುರುವಾಗಿರುವ ನಾಯಕತ್ವ ಬದಲಾವಣೆ ವಿಚಾರ, ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ತಿ ಆಗ್ತಿರುವ ಈ ಹೊತ್ತಲ್ಲಿ ಒಂದು ನಿರ್ಣಾಯಕ ಘಟ್ಟಕ್ಕೆ ಬಂದು ನಿಂತಿದೆ. ಸಿದ್ದರಾಮಯ್ಯನವರ ಉತ್ತರಾಧಿಕಾರಿ ಬಗ್ಗೆ ಯತೀಂದ್ರ ಆಡಿದ ಮಾತು ರಾಜ್ಯ ಕಾಂಗ್ರೆಸ್ ನಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ಈ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ.
ಇನ್ನು ಈ ಬಗ್ಗೆ ದಾವಣಗೆರೆಯಲ್ಲಿಂದು ಶಾಸಕ ಶಿವಗಂಗಾ ಬಸವರಾಜ್ ಪ್ರತಿಕ್ರಿಯಿಸಿದ್ದು, ಉತ್ತರಾಧಿಕಾರಿ ನೇಮಕ ಮಾಡಲು ಇದು ಮೈಸೂರು ರಾಜರ ಮನೆ ಅಲ್ಲ. ರಾಜರ ವಂಶದಲ್ಲಿ ಉತ್ತರಾಧಿಕಾರದ ಪದ್ಧತಿ ಇರುತ್ತೆ. ಕಾಂಗ್ರೆಸ್ ಹೈಕಮಾಂಡ್ ಪಕ್ಷ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು ಎಂದು ಪರೋಕ್ಷವಾಗಿ ಯತೀಂದ್ರ ಸಿದ್ದರಾಮಯ್ಯಗೆ ತಿವಿದಿದ್ದಾರೆ.

