ಅಖಾಡದಲ್ಲಿ ಬಿದ್ದು ಕಾಲು ಮುರಿದ್ರೂ ಎದ್ದು ಗುರಿ ಮುಟ್ಟಿದ ಹೋರಿ: ತಬ್ಬಿ ಕಣ್ಣೀರಿಟ್ಟ ಮಾಲೀಕ
ಅಖಾಡದಲ್ಲಿ ಹೋರಿ ಬಿದ್ದು ಕಾಲು ಮುರಿದರೂ ಎದ್ದು ಗುರಿ ಮುಟ್ಟಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕಾಲು ಮುರಿದುಕೊಂಡರೂ ಛಲ ಬಿಡದೇ ಜಿಂಕೆಯಂತೆ ಓಡಿ ಅಖಾಡವನ್ನ ದಾಟಿದ್ದು, ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಅಖಾಡಕ್ಕಿಳಿಯುತ್ತಿದ್ದಂತೆಯೇ ಹೋರಿ ಜಿಗಿದು ಕಾಲು ಮುರಿದುಕೊಂಡಿದೆ. ಆದರೂ ಸಹ ಅದೇ ನೋವಿನಲ್ಲೂ ಗುರಿ ಮುಟ್ಟುವಲ್ಲಿಯಶಸ್ವಿಯಾಗಿದೆ. ಇದರಿಂದ ಮಾಲೀಕ ಹೋರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿರುವ ಪ್ರಸಂಗ ನಡೆಯಿತು.
ಹಾವೇರಿ, ಅಕ್ಟೋಬರ್ 23): ಅಖಾಡದಲ್ಲಿ ಹೋರಿ ಬಿದ್ದು ಕಾಲು ಮುರಿದರೂ ಎದ್ದು ಗುರಿ ಮುಟ್ಟಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನಲ್ಲಿ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಕಾಲು ಮುರಿದುಕೊಂಡರೂ ಛಲ ಬಿಡದೇ ಜಿಂಕೆಯಂತೆ ಓಡಿ ಅಖಾಡವನ್ನ ದಾಟಿದ್ದು, ಎಲ್ಲರ ಮೆಚ್ಚುಗೆ ಪಾತ್ರವಾಗಿದೆ. ಅಖಾಡಕ್ಕಿಳಿಯುತ್ತಿದ್ದಂತೆಯೇ ಹೋರಿ ಜಿಗಿದು ಕಾಲು ಮುರಿದುಕೊಂಡಿದೆ. ಆದರೂ ಸಹ ಅದೇ ನೋವಿನಲ್ಲೂ ಗುರಿ ಮುಟ್ಟುವಲ್ಲಿಯಶಸ್ವಿಯಾಗಿದೆ. ಇದರಿಂದ ಮಾಲೀಕ ಹೋರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿರುವ ಪ್ರಸಂಗ ನಡೆಯಿತು. ಈ ಭಾವನಾತ್ಮಕ ಘಟನೆ ನೋಡಿ ನೆರೆದಿದ್ದ ಜನರು ಸಹ ಭಾವುಕರಾದರು. ಇನ್ನು ಹೋರಿ ಬಿದ್ದು ಕಾಲು ಮುರಿದರೂ ಸಹ ಓಡಿರುವ ವಿಡಿಯೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ. ಸದ್ಯ ಒಂದು ಕಾಲು ಮುರಿದುಕೊಂಡಿರುವ ಹೋರಿಗೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
TV9 Network ನ್ಯೂಸ್ ಡೈರೆಕ್ಟರ್ಗೆ ವಾಯ್ಸ್ ಆಪ್ ದ ಪೀಪಲ್ ಅವಾರ್ಡ್
ಕೆಂಪೇಗೌಡ ಏರ್ಪೋಟ್ನಲ್ಲೇ ಲಾಂಗ್ ಹಿಡಿದು ಅಟ್ಟಾಡಿಸಿದ ವಿಡಿಯೋ ಸೆರೆ
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ

