Karnataka Breaking Kannada News Highlights: ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಆಯೇಷಾ ಬಾನು
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 02, 2023 | 10:52 PM

Karnataka Breaking News Highlights: ಹಾಸನದ ಅಧಿದೇವತೆ ನಾಡಿನ ಶಕ್ತಿ ದೇವತೆ ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಮಾತೆ ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ ವರ್ಷ ಬಂದ್ ಆಗಿದ್ದ ದೇಗುಲದ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಓಪನ್ ಆಗಲಿದೆ. ರಾಜ್ಯದ ಮತ್ತಷ್ಟು ಸುದ್ದಿಗಳ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್​​ನಲ್ಲಿ..

ಇಂದಿನಿಂದ 1 ವಾರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಪ್ರವಾಸ ಕೈಗೊಂಡಿದೆ. ಸಮಿತಿ ಅಧ್ಯಕ್ಷ ಆರ್​​​.ಅಶೋಕ್ ನೇತೃತ್ವದಲ್ಲಿ ಜಮ್ಮು-ಕಾಶ್ಮೀರ ಮತ್ತು ಮೇಘಾಲಯ ಪ್ರವಾಸ ಕೈಗೊಳ್ಳಲಾಗಿದೆ. ಬೆಳಗ್ಗೆ 10.30ಕ್ಕೆ ಬೆಂಗಳೂರಿನಿಂದ ತೆರಳಲಿದ್ದು ಜಮ್ಮು-ಕಾಶ್ಮೀರ ಮತ್ತು ಮೇಘಾಲಯದಲ್ಲಿನ ವಿಧಾನಸಭೆ ಹಾಗೂ ಪಿಎಸಿ ಕಾರ್ಯ ಕಲಾಪಗಳ ಬಗ್ಗೆ ಅಧ್ಯಯನ ನಡೆಸಲಿದೆ. ಇನ್ನು ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಕೊಪ್ಪಳ, ವಿಜಯನಗರ ಪ್ರವಾಸ ಕೈಗೊಂಡಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ ಇಂದು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ನಡೆಯಲಿರುವ ಕರ್ನಾಟಕ ಸಂಭ್ರಮ 50ರ ಜ್ಯೋತಿ ರಥಯಾತ್ರೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ಇಂದಿನಿಂದ 14 ದಿನ ಹಾಸನದಲ್ಲಿ ಹಾಸನಾಂಬೆ ದೇಗುಲ ಓಪನ್ ಆಗಲಿದೆ. ಮಧ್ಯಾಹ್ನ 12 ಗಂಟೆಗೆ ಹಾಸನಾಂಬೆ ದೇಗುಲದ ಬಾಗಿಲು ಓಪನ್ ಆಗಲಿದೆ. ನಾಳೆಯಿಂದ ಭಕ್ತರಿಗೆ ದರ್ಶನ ಭಾಗ್ಯ ಇರಲಿದೆ.​​​ ಇದೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.

LIVE NEWS & UPDATES

The liveblog has ended.
  • 02 Nov 2023 10:21 PM (IST)

    Karnataka Breaking News Live: ಕಾಡುಹಂದಿ ಸೆರೆಹಿಡಿಯಲು ಹಾಕಿದ್ದ ಉರುಳಿಗೆ ಸಿಕ್ಕಿಬಿದ್ದ ಚಿರತೆ

    ಕೋಲಾರ: ಕಾಡುಹಂದಿ ಸೆರೆಹಿಡಿಯಲು ಹಾಕಿದ್ದ ಉರುಳಿಗೆ ಚಿರತೆ ಸಿಕ್ಕಿಬಿದ್ದ ಘಟನೆ ಕೋಲಾರ ಜಿಲ್ಲೆ‌ಯ ಮಾಲೂರು ತಾಲೂಕಿನ ಚಿಕ್ಕದಾನವಹಳ್ಳಿ ಬಳಿ ನಡೆದಿದೆ. ರೈತರ ಬೆಳೆಗಳನ್ನು ಕಾಡು‌ಹಂದಿಯಿಂದ ರಕ್ಷಣೆ ಮಾಡಲು‌ ಹಾಕಿದ್ದ ಉರುಳಿಗೆ ಚಿರತೆ ಬಿದ್ದಿದೆ. ಅರಣ್ಯಕ್ಕೆ ಬಿಡುವ ಅಧಿಕಾರಿಗಳು ಚಿರತೆ ರಕ್ಷಣೆ ಮಾಡಿ  ಕಾಮಸಮುದ್ರಕ್ಕೆ ಬಿಡಲಿದ್ದಾರೆ.

  • 02 Nov 2023 09:32 PM (IST)

    Karnataka Breaking News Live: ಪೂರ್ಣ ಅವಧಿ ಇರುತ್ತೇನೋ ಇಲ್ವೋ ಎಂದು ಅವರಿಗೆ ಅನುಮಾನ ಇದೆ; ಅಶ್ವತ್ಥ್ ನಾರಾಯಣ್

    ಬೆಂಗಳೂರು: ಸಿಎಂ ಆಗಿ ಮುಂದುವರಿಯುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ‘ಸಿದ್ದರಾಮಯ್ಯ ಮುಂದುವರಿಯಲ್ಲ ಅಂತಾ ‘ಕೈ’ ಶಾಸಕರೇ ಹೇಳುತ್ತಿದ್ದಾರೆ, ಹಾಗಾಗಿ ಸಿದ್ದರಾಮಯ್ಯನವರೇ ಘೋಷಣೆ ಮಾಡಿಕೊಳ್ಳುವ ಪರಿಸ್ಥಿತಿ ಬಂತು ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ್ ಹೇಳಿದರು.

  • 02 Nov 2023 08:42 PM (IST)

    Karnataka Breaking News Live: ಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ ಸಿಎಂ ಸಿದ್ದರಾಮಯ್ಯ

    ವಿಜಯನಗರ: ಜಿಲ್ಲೆಯ ಹಂಪಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ವೀರಮಕ್ಕಳ ಕುಣಿತಕ್ಕೆ ಹೆಜ್ಜೆ ಹಾಕಿದ್ದಾರೆ. ಕರ್ನಾಟಕ ‌ಸಂಭ್ರಮ 50 ರ ಕಾರ್ಯಕ್ರಮದಲ್ಲಿ ಮೈಸೂರ ತಂಡದವರು ಪ್ರಸ್ತುತ ಪಡಿಸಿದ ವೀರ ಮಕ್ಕಳ ಕುಣಿತದಲ್ಲಿ ಭಾಗಿಯಾಗಿ, ಖುಷಿ ಖುಷಿಯಿಂದ ಹೆಜ್ಜೆ ಹಾಕಿದ್ದಾರೆ.

  • 02 Nov 2023 08:19 PM (IST)

    Karnataka Breaking News Live: ಐದು ವರ್ಷ ಮುಂದುವರೆಯುತ್ತೆವೆ ಅನ್ನೂದ್ರಲ್ಲಿ ತಪ್ಪಿಲ್ಲ; ಕುಮಾರಸ್ವಾಮಿ

    ಬೆಂಗಳೂರು: ಸಿಎಂ ಆಗಿ ಮುಂದುವರಿಯುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ‘ ರಾಜ್ಯದ ಜನರು ಈ ಸರ್ಕಾರಕ್ಕೆ 5 ವರ್ಷ ಆಶೀರ್ವಾದ ಮಾಡಿದ್ದಾರೆ, ಹೀಗಾಗಿ ಅವರು 5 ವರ್ಷ ಮುಂದುವರಿಯುತ್ತೇವೆ ಅನ್ನೋದ್ರಲ್ಲಿ ತಪ್ಪಿಲ್ಲ ಎಂದು ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. ಕಾಂಗ್ರೆಸ್ ಪಕ್ಷದ ತೀರ್ಮಾನ ಏನು ಮಾಡಿದ್ದಾರೆಂದು ನನಗೇನು ಗೊತ್ತು ಎಂದರು.

  • 02 Nov 2023 08:17 PM (IST)

    Karnataka Breaking News Live: ಸದ್ಯದಲ್ಲೇ ಬಹಳ ದೊಡ್ಡ ರಾಜಕೀಯ ವ್ಯತ್ಯಾಸ ನೋಡುತ್ತೇವೆ-ಆರಗ

    ಬೆಂಗಳೂರು: ಸಿಎಂ ಆಗಿ ಮುಂದುವರಿಯುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ‘ ಮುಂದುವರಿಯುವ ಬಗ್ಗೆ ಸಿದ್ದರಾಮಯ್ಯ ಯಾಕೆ ಹೇಳಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಹೀಗೆ ಹೇಳಿದ್ದಾರೆ ಎಂದರೆ, 5 ವರ್ಷ ಮುಂದುವರಿಯುವ ಬಗ್ಗೆ ಅನುಮಾನ ಶುರುವಾಗಿದೆ ಎಂದು ಅರ್ಥ. ಮೇಲ್ನೋಟಕ್ಕೆ ‘ಕೈ’ ನಾಯಕರ ಮಧ್ಯೆ ಗೊಂದಲವಿದೆ ಎಂದು ಗೊತ್ತಾಗುತ್ತಿದೆ. ಸದ್ಯದಲ್ಲೇ ಬಹಳ ದೊಡ್ಡ ರಾಜಕೀಯ ವ್ಯತ್ಯಾಸ ನೋಡುತ್ತೇವೆ ಎಂದರು.

  • 02 Nov 2023 07:42 PM (IST)

    Karnataka Breaking News Live: ದುಬೈನಿಂದ ವಾಪಸ್ ಆದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

    ಬೆಂಗಳೂರು: ದುಬೈನಿಂದ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ವಾಪಸ್ ಆಗಿದ್ದಾರೆ. ಸಂಜೆ 07 ಗಂಟೆಯ ವಿಮಾನದಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಪತ್ನಿ ಸಮೇತ ವಾಪಸ್ ಆಗಿದ್ದಾರೆ.

  • 02 Nov 2023 07:33 PM (IST)

    Karnataka Breaking News Live: ಒಂದೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಸಿಎಂ ಆಗೇ ಆಗ್ತಾರೆ; ಇಕ್ಬಾಲ್ ಹುಸೇನ್

    ರಾಮನಗರ: ಸಿಎಂ ಆಗಿ ಮುಂದುವರಿಯುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ‘ಒಂದೂವರೆ ವರ್ಷದ ಬಳಿಕ ಡಿ.ಕೆ.ಶಿವಕುಮಾರ್ ಸಿಎಂ ಆಗೇ ಆಗ್ತಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ. ‘ಡಿಕೆ ಸಿಎಂ ಆಗಬೇಕು ಅನ್ನೋದು ನಮ್ಮ ಆಸೆ, ಅವರು ಪಕ್ಷದ ಅಧ್ಯಕ್ಷರಾಗಿ ಸಂಘಟನೆ ಮಾಡಿದ್ದಾರೆ. ರಾಜ್ಯದಲ್ಲಿ ಶಕ್ತಿಮೀರಿ ಕೆಲಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ರಾಮನಗರದಲ್ಲಿ ಇಕ್ಬಾಲ್ ಹುಸೇನ್ ಹೇಳಿದರು.

  • 02 Nov 2023 06:40 PM (IST)

    Karnataka Breaking News Live: ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ರಥಯಾತ್ರೆಗೆ ಚಾಲನೆ ನೀಡಿದ ಸಿಎಂ

    ವಿಜಯನಗರ: ಜಿಲ್ಲೆಯ ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿದರು. ‘1973ರ ನವೆಂಬರ್‌ 2ರಂದು ರೂಪಾಕ್ಷ ದೇವಸ್ಥಾನದಿಂದಲೇ ಅಂದಿನ ಸಿಎಂ ಅರಸು ಚಾಲನೆ ನೀಡಿದ್ದರು ಎಂದು ಸಿಎಂ ಹೇಳಿದರು.

  • 02 Nov 2023 06:23 PM (IST)

    Karnataka Breaking News Live: ಅಂದು ದೇವರಾಜ್ ಅರಸು, ಇಂದು ನಾನು ಜ್ಯೋತಿ ರಥಯಾತ್ರೆಗೆ ಚಾಲನೆ; ಸಿಎಂ

    ವಿಜಯನಗರ: ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ವಿರೂಪಾಕ್ಷ ದೇವಸ್ಥಾನದಿಂದ ಜ್ಯೋತಿ ರಥಯಾತ್ರೆಗೆ ಚಾಲನೆ ವಿಚಾರವಾಗಿ ಮಾತನಾಡಿದ ಅವರು ‘ಕರ್ನಾಟಕ ನಾಮಕರಣವಾಗಿ 50 ವರ್ಷ ಪೂರ್ಣ ಹಿನ್ನೆಲೆಯಲ್ಲಿ ಜ್ಯೋತಿ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. 1973, ನವೆಂಬರ್ 2 ರಂದು ಜ್ಯೋತಿ ರಥಯಾತ್ರೆಗೆ ಮೈಸೂರು ಜಿಲ್ಲೆಯವರಾದ ದೇವರಾಜ್ ಅರಸು ಅವರು ಇಲ್ಲಿಂದಲೇ ಚಾಲನೆ ನೀಡಿದ್ದರು. ಇದೀಗ ನಾನು ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದೇನೆ ಎಂದರು.

  • 02 Nov 2023 06:11 PM (IST)

    Karnataka Breaking News Live: ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

    ವಿಜಯನಗರ: ಕರ್ನಾಟಕ ನಾಮಕರಣ ಕ್ಕೆ 50 ವರ್ಷ ಪೂರೈಕ ಹಿನ್ನೆಲೆ ಹಂಪಿ ವಿರೂಪಾಕ್ಷ ದೇವಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದಾರೆ. ಬಳಿಕ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ.

  • 02 Nov 2023 05:36 PM (IST)

    Karnataka Breaking News Live: ಹಂಪಿಯಲ್ಲಿ ‌ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಲಿರುವ ಸಿಎಂ

    ವಿಜಯನಗರ: ಕರ್ನಾಟಕ ನಾಮಕರಣವಾಗಿ ಐವತ್ತು ವರ್ಷವಾದ ಹಿನ್ನಲೆ ಹಂಪಿಯಲ್ಲಿ ‌ಜ್ಯೋತಿ ರಥಯಾತ್ರೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ವೇಳೆ ಹಂಪಿಯ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಮುಂದೆ ಕಲಾನೃತ್ಯ ಏರ್ಪಡಿಸಲಾಗಿದ್ದು, ನೋಡುಗರನ್ನ ಜಾನಪದ ಕಲಾತಂಡಗಳು ಮನರಂಜಿಸಲಿವೆ.

  • 02 Nov 2023 04:43 PM (IST)

    Karnataka Breaking News Live: 3 ತಿಂಗಳ ಕರೆಂಟ್ ಬಿಲ್ ಕಟ್ಟದ ಕಂದಾಯ ಇಲಾಖೆ ಪವರ್ ಕಟ್

    ಬೆಂಗಳೂರು: 3 ತಿಂಗಳ ಕರೆಂಟ್ ಬಿಲ್ ಕಟ್ಟದ ಹಿನ್ನಲೆ ಕಂದಾಯ ಇಲಾಖೆ ಪವರ್​ನ್ನು ಕಟ್ ಮಾಡಲಾಗಿದೆ. ಕಳೆದ 3 ತಿಂಗಳ ಸುಮಾರು 1 ಲಕ್ಷ ಬಿಲ್ ಪೆಂಡಿಂಗ್ ಇರುವುದರಿಂದ ಕಾಡುಮಲ್ಲೇಶ್ವ ವಾರ್ಡ್ ಸಂಖ್ಯೆ 65ರ ನಾಡ ಕಚೇರಿ ಬಿಲ್ಡಿಂಗ್‌ನಲ್ಲಿ ಬೆಸ್ಕಾಂ ಅಧಿಕಾರಿಗಳು ಪವರ್ ಕಟ್ ಮಾಡಿದ್ದಾರೆ. ಒಂದೆ ಕಟ್ಟಡದಲ್ಲಿ ಬಿಬಿಎಂಪಿ ಕಂದಾಯ ಇಲಾಖೆ, ಗ್ರಂಥಾಲಯ, ನಾಡಕಚೇರಿ ಹಾಗೂ ಬಿಬಿಎಂಪಿ ಖಾತೆ ಬದಲಾವಣೆ ಹಾಗೂ ಜನನ ಮರಣ ಪ್ರಮಾಣ ಪತ್ರ ಕಚೇರಿಗಳಿವೆ. ಕರೆಂಟ್ ಇಲ್ಲದ ಪರಿಣಾಮ, ಜನರು ಬೆಳಿಗ್ಗೆಯಿಂದ ನಾಡ ಕಚೇರಿಗೆ ತಮ್ಮ ಕೆಲಸಗಳನ್ನ ಮಾಡಿಕೊಳ್ಳಲು ಬಂದು ಹಾಗೆ ಹೋಗುತ್ತಿದ್ದಾರೆ.

  • 02 Nov 2023 04:27 PM (IST)

    Karnataka Breaking News Live: ಕಾಂತರಾಜ್ ವರದಿ ವಿರೋಧಿಸಿ ಒಕ್ಕಲಿಗ ನಾಯಕರ ಸಭೆ

    ಬೆಂಗಳೂರು: ಕಾಂತರಾಜ್ ವರದಿ ವಿರೋಧಿಸಿ ಒಕ್ಕಲಿಗ ನಾಯಕರ ಸಭೆಯನ್ನು ಬೆಂಗಳೂರಿನ ರಾಜ್ಯ ಒಕ್ಕಲಿಗ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ. ಜಾತಿ ಜನಗಣತಿ ಪುನರ್ ಪರಿಶೀಲನೆಗೆ ಒತ್ತಾಯಿಸಿ ಈ ಸಭೆ ಆಯೋಜನೆ ಮಾಡಲಾಗಿದ್ದು, ಒಕ್ಕಲಿಗ ಸಮುದಾಯದ ಅಭಿವೃದ್ಧಿ ಬಗ್ಗೆ ಚಿಂತನ ಮಂಥನ ಹೆಸರಿನಲ್ಲಿ ಸಭೆ ನಡೆಯುತ್ತಿದೆ. ಇದರಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಸಮುದಾಯ ಸಚಿವರು, ಶಾಸಕರು, ಒಕ್ಕಲಿಗ ಸಂಘದ ಮುಖಂಡರು ಭಾಗಿಯಾಗಿದ್ದಾರೆ.

  • 02 Nov 2023 04:04 PM (IST)

    Karnataka Breaking News Live: ಬಿಎಸ್​ವೈ ಹೇಳಿಕೆಗೆ ತಿರುಗೇಟು ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್​

    ಬೆಂಗಳೂರು:ನಾಯಿ-ನರಿಗಳಂತೆ ಕಾಂಗ್ರೆಸ್ ನವರು ಕಚ್ಚಾಡ್ತಾರೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರ ‘ ಅವರು , ಬಿಜೆಪಿಯವರು ಕಿತ್ತಾಡುತ್ತಿದ್ದಾರೆ. ಬಿಜೆಪಿಯವರ ಕಿತ್ತಾಟದಿಂದ ವಿರೋಧ ಪಕ್ಷದ ನಾಯಕನ ನೇಮಕ ಮಾಡಲೂ ಆಗುತ್ತಿಲ್ಲ. ಅವರದನ್ನು ಮುಚ್ಚಿಕೊಳ್ಳಲು ನಮ್ಮ ಬಗ್ಗೆ ಮಾತಾಡುತ್ತಾರೆ. ನಮ್ಮ ಶಾಸಕರಿಗೆ ಚಾಕಲೇಟ್ ಕೊಡಲು ಬರ್ತಾರೆ ಎಂದಿದ್ದಾರೆ.

  • 02 Nov 2023 03:51 PM (IST)

    Karnataka Breaking News Live: ಎಫ್​ಡಿಎ ಪರೀಕ್ಷೆಯಲ್ಲಿ ಅಕ್ರಮ; ಸಿಬಿಐ ತನಿಖೆಗೆ ವಿಪಕ್ಷ ಬಿಜೆಪಿ ಡಿಮ್ಯಾಂಡ್

    ಬೆಂಗಳೂರು: ಎಫ್​ಡಿಎ ಪರೀಕ್ಷೆಯಲ್ಲಿ ಅಕ್ರಮ ಹಿನ್ನೆಲೆ ಇದರ ತನಿಖೆಯನ್ನು ಸಿಬಿಐಗೆ ವಹಿಸಲು ವಿಪಕ್ಷ ಬಿಜೆಪಿ ಡಿಮ್ಯಾಂಡ್ ಮಾಡಿದೆ. ಜೊತೆಗೆ ನವೆಂಬರ್ 4 ರಂದು ಕಲ್ಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರತಿಭಟನೆಗೆ ಬಿಜೆಪಿ ಕರೆ ನೀಡಿದೆ.

  • 02 Nov 2023 03:33 PM (IST)

    Karnataka Breaking News Live: ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ವಿಧಾನಸಭೆ ಸ್ಪೀಕರ್ ಗೆ ದೂರು

    ಬೆಳಗಾವಿ: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ವಿಧಾನಸಭೆ ಸ್ಪೀಕರ್​ಗೆ ಕಾಂಗ್ರೆಸ್ ವಕ್ತಾರ ಸಿದ್ದರಾಜು ಎಂಬವವರು ದೂರು ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜಕೀಯ ಬೆಳವಣಿಗೆ ಆದಂತೆ ಕರ್ನಾಟಕದಲ್ಲೂ ಆಗಲಿದೆ. ಸರ್ಕಾರ ಉರುಳಲಿದೆ ಎಂದಿದ್ದ ರಮೇಶ್ ಜಾರಕಿಹೊಳಿ ಹೇಳಿಕೆಯನ್ನು ವಿರೋಧಿಸಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ದೂರು ಸಲ್ಲಿಸಿದ್ದಾರೆ.

  • 02 Nov 2023 03:20 PM (IST)

    Karnataka Breaking News Live: ಬ್ಯಾಂಕ್ ಸಿಬ್ಬಂದಿಯಿಂದ ಕಿರುಕುಳ; ಹೆದರಿ ಆಸ್ಪತ್ರೆಗೆ ದಾಖಲಾಗಿದ್ದ ರೈತ ಸಾವು

    ಹುಬ್ಬಳ್ಳಿ: ಬೆಳೆ ಸಾಲ ಪಾವತಿಸುವಂತೆ ಬ್ಯಾಂಕ್ ಸಿಬ್ಬಂದಿ ರೈತನಿಗೆ ಕಿರುಕುಳ ನೀಡುತ್ತಿದ್ದು, ಬ್ಯಾಂಕ್ ಸಿಬ್ಬಂದಿ ದೌರ್ಜನ್ಯಕ್ಕೆ ಹೆದರಿ ಮೂರ್ಛೆ ಬಂದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ರೈತ ಸಾವನ್ನಪ್ಪಿದ್ದಾನೆ. ಹೌದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮಹಾದೇವಪ್ಪ ಜಾವೂರ(75) ಕೊನೆಯುಸಿರೆಳೆದಿದ್ದಾನೆ.

  • 02 Nov 2023 03:16 PM (IST)

    Karnataka Breaking News Live: ನಮ್ಮ ಸರ್ಕಾರ ಐದು ವರ್ಷ ಭದ್ರವಾಗಿರುತ್ತದೆ; ಸಿಎಂ

    ವಿಜಯನಗರ: ಬಿಜೆಪಿಯವರಿಗೆ ಅಧಿಕಾರ ಇಲ್ಲದೆ ಇರಲು ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ. ನಮ್ಮ ಸರ್ಕಾರ ಐದು ವರ್ಷ ಸುಭದ್ರವಾಗಿರುತ್ತದೆ. ಸದ್ಯ ನಾನೇ ಮುಖ್ಯಮಂತ್ರಿ, ನಾನೇ ಮುಂದುವರಿಯುತ್ತೇನೆ. ಐದು ವರ್ಷ ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ಇಂಗಿತವನ್ನು ಸಿಎಂ ವ್ಯಕ್ತಪಡಿಸಿದ್ದಾರೆ.

  • 02 Nov 2023 02:46 PM (IST)

    Karnataka Breaking News Live: ಮಹಾರಾಷ್ಟ್ರದಲ್ಲಿ ಮೀಸಲಾತಿ ಪ್ರತಿಭಟನೆ; ಕರ್ನಾಟಕದಿಂದ ಕೆಎಸ್​ಆರ್​ಸಿ ಬಸ್​ ಸಂಚಾರ ಸ್ಥಗಿತ

    ಬೆಂಗಳೂರು: ಮಹಾರಾಷ್ಟ್ರದಲ್ಲಿ ಮರಾಠ ಮೀಸಲಾತಿಗಾಗಿ ಪ್ರತಿಭಟನೆ ಮುಂದುವರೆದಿದ್ದು, ಕರ್ನಾಟಕದಿಂದ ಮಹಾರಾಷ್ಟ್ರಕ್ಕೆ ಕೆಎಸ್​ಆರ್​ಸಿ ಬಸ್​ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಮುಂಬೈ, ಶಿರಡಿ, ಪುಣೆ ಮಾರ್ಗದ ಬಸ್ ಸಂಚಾರ ಸ್ಥಗಿತವಾಗಿದೆ.

  • 02 Nov 2023 02:41 PM (IST)

    Karnataka Breaking News Live: ಹೊಸಪೇಟೆಗೆ ಆಗಮಿಸಿದ ಸಿಎಂ ಸಿದ್ದರಾಮಯ್ಯ

    ವಿಜಯನಗರ: ಹೊಸಪೇಟೆಗೆ ಸಿಎಂ ಸಿದ್ದರಾಮಯ್ಯ ಅವರು ಆಗಮಿಸಿದ್ದು, ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಹೌದು, ಹೊಸಪೇಟೆ ನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

  • 02 Nov 2023 02:01 PM (IST)

    Karnataka Breaking News Live: ಪಾಪ ಯತ್ನಾಳ್​ ಹಗಲಿನಲ್ಲೇ ಕನಸು ಕಾಣುತ್ತಿದ್ದಾರೆ -ಸಿಎಂ ಸಿದ್ದರಾಮಯ್ಯ

    ಸರ್ಕಾರ ಪತನವಾಗುತ್ತೆ ಎಂದು ಶಾಸಕ ಯತ್ನಾಳ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪಾಪ ಯತ್ನಾಳ್​ ಹಗಲಿನಲ್ಲೇ ಕನಸು ಕಾಣುತ್ತಿದ್ದಾರೆ ಎಂದ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಕೊಪ್ಪಳ ಹೊರವಲಯದ ಏರ್​ಸ್ಟ್ರಿಪ್​ನಲ್ಲಿ ಮಾತನಾಡಿದ ಸಿಎಂ, ಬರ ಬಗ್ಗೆ ಚರ್ಚೆ ಮಾಡಲು ಪ್ರಧಾನಮಂತ್ರಿ ಅವಕಾಶವನ್ನೇ ಕೊಡುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರು ಬರ ಅಧ್ಯಯನ ಮಾಡಲು ಹೊರಟಿದ್ದಾರೆ. ಮೊದಲು ಕೇಂದ್ರ ಬಳಿ ಹೋಗಿ ಅನುದಾನ ಕೊಡಲು ಹೇಳಲಿ. ಪ್ರಧಾನಮಂತ್ರಿ ಮೋದಿ ತಮ್ಮ ಸಚಿವರು, ಶಾಸಕರನ್ನೇ ಭೇಟಿ ಆಗಲ್ಲ. ಇನ್ನು ನಮಗೆ ಏನು ಭೇಟಿಗೆ ಅವಕಾಶ ಕೊಡುತ್ತಾರೆ ಎಂದರು.

  • 02 Nov 2023 01:08 PM (IST)

    Karnataka Breaking News Live: ಸೊಳ್ಳೆಗಳಲ್ಲಿ ಜಿಕಾ ಕಾಣಿಸಿಕೊಂಡಿದೆ, ಮನುಷ್ಯರಿಗೆ ಪಾಸಿಟಿವ್ ಬಂದಿಲ್ಲ -ಸಚಿವ ದಿನೇಶ್ ಗುಂಡೂರಾವ್

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜಿಕಾ ವೈರಸ್​ ಪತ್ತೆಯಾಗಿದೆ. ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿತ್ತು, ಜಿಕಾ ಬೇರೆ, ನಿಫಾ ಬೇರೆ ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಜಿಕಾ ಬಗ್ಗೆ ಭಯ ಬೇಡ, ಬಾಣಂತಿಯರು ಎಚ್ಚರಿಕೆಯಿಂದ ಇರಬೇಕು. ಸೊಳ್ಳೆಗಳಲ್ಲಿ ಜಿಕಾ ಕಾಣಿಸಿಕೊಂಡಿದೆ, ಮನುಷ್ಯರಿಗೆ ಪಾಸಿಟಿವ್ ಬಂದಿಲ್ಲ. ಜಿಕಾ ಪತ್ತೆ ಹಿನ್ನೆಲೆ ಆಸ್ಪತ್ರೆಯಲ್ಲಿ ಇದ್ದವರಿಗೆ ಪರೀಕ್ಷೆ ಮಾಡಲಾಗಿದೆ. ಜಿಕಾ ವೈರಸ್​ ಲಕ್ಷಣ ಇದ್ದವರ ಸ್ಯಾಂಪಲ್ ಪಡೆಯಲಾಗಿದೆ. ಇನ್ನು 3 ದಿನಗಳಲ್ಲಿ ಟೆಸ್ಟ್​ಗೆ ಒಳಪಟ್ಟವರ ವರದಿ ಬರುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

  • 02 Nov 2023 11:45 AM (IST)

    Karnataka Breaking News Live: ಕಾಂಗ್ರೆಸ್ ವಿರುದ್ಧ ಬಿಎಸ್ ಯಡಿಯೂರಪ್ಪ ವಾಗ್ದಾಳಿ

    ಐಟಿ ದಾಳಿಯಲ್ಲಿ ಸರ್ಕಾರದ ಭ್ರಷ್ಟಾಚಾರ ಬಯಲಾಗಿದೆ. ಇದು ಲೂಟಿ ಸರ್ಕಾರ ಎಂಬುದು ಸಾಬೀತಾಗಿದೆ. ಎಂದು ಬಿಎಸ್ ಯಡಿಯೂರಪ್ಪನವರು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣಗಳ ನಡುವೆ ನಾಯಕತ್ವ ಜಗ್ಗಾಟ ತಾರಕಕ್ಕೇರಿದೆ. ವರ್ಗಾವಣೆ ದಂಧೆ ಮುಂದುವರಿದಿದೆ. ಉಪಮುಖ್ಯಮಂತ್ರಿ ಉಪಟಳಕ್ಕೆ ಕಡಿವಾಣ ಹಾಕಲು ಡಿನ್ನರ್ ಮೀಟಿಂಗ್ ಶುರುವಾಗಿದೆ. ಬರ ಪರಿಹಾರ ಕೈಗೊಳ್ಳದೇ ಕೇಂದ್ರ ಸರ್ಕಾರಕ್ಕೆ ಮೂದಲಿಸುವ ಕಾರ್ಯದಲ್ಲಿ ಸರ್ಕಾರದ ನಿರತವಾಗಿದೆ. ವಿಪಕ್ಷದ ಮೇಲೆ ಸರ್ಕಾರದ ದಾಳಿ ಪ್ರಜಾಪ್ರಭುತ್ವದ ಅಣಕ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಸಂಪನ್ಮೂಲದ ಒತ್ತಡದಲ್ಲಿರುವ ಸಿದ್ದರಾಮಯ್ಯ ಎಲ್ಲದಕ್ಕೂ ಕೇಂದ್ರದ ಕಡೆ ನೋಡುತ್ತಿದ್ದಾರೆ. ರಾಜ್ಯ ಸರ್ಕಾರ ಎಟಿಎಂ ಆಗಿರುವುದರಿಂದ ವೇಣುಗೋಪಾಲ್ ಮತ್ತು ಸುರ್ಜೇವಾಲಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಬಿಎಸ್​ವೈ ವಾಗ್ದಾಳಿ ನಡೆಸಿದರು.

  • 02 Nov 2023 11:24 AM (IST)

    Karnataka Breaking News Live: ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ವಿಶೇಷ ಅನುದಾನ ಕೊಡಬೇಕು -ಡಾ.ಜಿ.ಪರಮೇಶ್ವರ್

    ಬಿಜೆಪಿ ನಾಯಕರ ತಂಡದಿಂದ ಬರ ಅಧ್ಯಯನ ಪ್ರವಾಸ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಸಚಿವ ಡಾ.ಪರಮೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ಬರ ಶುರುವಾಗಿ 3 ತಿಂಗಳು ಆಯ್ತು, ಮಳೆ ನಿಂತು 3 ತಿಂಗಳಾಯ್ತು. ಇಷ್ಟುದಿನ ಬಿಜೆಪಿಯವರು ಏನು ಮಾಡುತ್ತಿದ್ದರು. ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರ ಎಂದು ಘೋಷಿಸಿದ್ದೇವೆ. 17 ಸಾವಿರ ಕೋಟಿ ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಈವರೆಗೂ ಕೇಂದ್ರ ಸರ್ಕಾರ 1 ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಬಿಜೆಪಿ ನಾಯಕರು ಕೇಂದ್ರದ ಬಳಿ ಮಾತನಾಡಿ ಅನುದಾನ ಕೊಡಿಸಲಿ. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ವಿಶೇಷ ಅನುದಾನ ಕೊಡಬೇಕು. ದೆಹಲಿಗೆ ಸರ್ವಪಕ್ಷ ಕರೆದೊಯ್ಯುವ ಬಗ್ಗೆ ಸಿಎಂ ನಿರ್ಧಾರ ಮಾಡ್ತಾರೆ ಎಂದರು.

  • 02 Nov 2023 11:06 AM (IST)

    Karnataka Breaking News Live: ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲು ಕ್ಷಣಗಣನೆ

    ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದೆ. ಪ್ರಧಾನ ಅರ್ಚಕ ನಾಗರಾಜ್ ನೇತೃತ್ವದ ಅರ್ಚಕರ ತಂಡ ದೇವಾಲಯಕ್ಕೆ ಪೂಜಾ ಸಾಮಗ್ರಿಗಳನ್ನು ತಂದಿದೆ. ದೇವಸ್ಥಾನ ಬಾಗಿಲು ತೆರೆಯುವ ಮುನ್ನ ಗರ್ಭಗುಡಿ ಬಾಗಿಲಿಗೆ ಪೂಜೆ ನಡೆಯಲಿದೆ. ಮಧ್ಯಾಹ್ನ 12 ಗಂಟೆ ನಂತರ ಗರ್ಭಗುಡಿ ಬಾಗಿಲು ತೆರೆಯಲಾಗುತ್ತದೆ.

  • 02 Nov 2023 10:02 AM (IST)

    Karnataka Breaking News Live: ಚಿಕ್ಕಬಳ್ಳಾಪುರದಲ್ಲಿ ಮಾರಕ ಜಿಕಾ ವೈರಲ್ ಪತ್ತೆ

    ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ಗ್ರಾಮದ ಸೊಳ್ಳೆಗಳಲ್ಲಿ ಅಪಾಯಕಾರಿ ಜಿಕಾ ವೈರಸ್ ಪತ್ತೆಯಾಗಿದೆ. ಸೊಳ್ಳೆಗಳ ರಕ್ತದಲ್ಲಿ ಜಿಕಾ ವೈರಸ್ ಪತ್ತೆ ಹಿನ್ನಲೆ ಆರೋಗ್ಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ತಲಕಾಯಲಬೆಟ್ಟ, ದಿಬ್ಬೂರಹಳ್ಳಿ, ಶಿಡ್ಲಘಟ್ಟ ಸೇರಿದಂತೆ ವಿವಿದೆಡೆ ಜನರಲ್ಲಿ ಆತಂಕ ಸೃಷ್ಟಿಯಾಗಿದ್ದು ಸೂಕ್ತ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.

  • 02 Nov 2023 09:25 AM (IST)

    Karnataka Breaking News Live: ಬಿಜೆಪಿಯ ಮೂವರು ನಾಯಕರಿಗೆ ಹೈಕಮಾಂಡ್​ ಬುಲಾವ್​

    ಬಿಜೆಪಿಯ ಮೂವರು ನಾಯಕರಿಗೆ ಹೈಕಮಾಂಡ್​ ಬುಲಾವ್​ ಹಿನ್ನೆಲೆ ಬಿಜೆಪಿ ಎಂಎಲ್​ಸಿ ಕೋಟ ಶ್ರೀನಿವಾಸ್​ ಪೂಜಾರಿ, ಸಂಸದ ಬಿ.ಸಿ.ಮೋಹನ್​​ ಹಾಗೂ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಅವರು ದೆಹಲಿಗೆ ತೆರಳಿದ್ದಾರೆ. ದೆಹಲಿ ಬಿಜೆಪಿ ಕಚೇರಿಯಲ್ಲಿ ಭೇಟಿಯಾಗಲು ವರಿಷ್ಠರು ಸೂಚಿಸಿದ್ದು ಇಂದು ಮಧ್ಯಾಹ್ನ 3.30ಕ್ಕೆ ನಾಯಕರು ವರಿಷ್ಠರನ್ನು ಭೇಟಿಯಾಗಲಿದ್ದಾರೆ.

  • 02 Nov 2023 09:17 AM (IST)

    Karnataka Breaking News Live: ಜೆಡಿಎಸ್ ಶಾಸಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್​​ ಗಾಳ

    ಜೆಡಿಎಸ್ ಪಕ್ಷದ​ ಶಾಸಕರನ್ನು ಸೆಳೆಯಲು ಕಾಂಗ್ರೆಸ್​​ ಕಸರತ್ತು ಮಾಡ್ತಿದೆ. ಹಳೇ ಮೈಸೂರು ಭಾಗದ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದ್ದು ಜೆಡಿಎಸ್ ಶಾಸಕರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಗಾಳ ಹಾಕಿದ್ದಾರೆ. ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಭಾಗದ ಶಾಸಕರಿಗೆ ಭರ್ಜರಿ ಆಫರ್ ನೀಡಿದ್ದಾರೆ. ಡಿಕೆಶಿ ಈಗಾಗಲೇ 6ರಿಂದ 8 ಜೆಡಿಎಸ್​​ ಶಾಸಕರ ಸಂಪರ್ಕ ಮಾಡಿದ್ದಾರೆ.

  • 02 Nov 2023 08:47 AM (IST)

    Karnataka Breaking News Live: ವರುಣ ಕ್ಷೇತ್ರದಲ್ಲಿ ಪುಲ್ ಆ್ಯಕ್ಟೀವ್ ಆಗಿರುವ ಡಾ ಯತೀಂದ್ರ ಸಿದ್ದರಾಮಯ್ಯ

    ಮೈಸೂರು ಜಿಲ್ಲೆಯಲ್ಲಿ ಡಾ ಯತೀಂದ್ರ, ಸುನೀಲ್ ಬೋಸ್ ಹವಾ ಮುಂದುವರೆದಿದೆ. ಕೆಡಿಪಿ ಸದಸ್ಯ ಸುನಿಲ್ ಬೋಸ್ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ ಯತೀಂದ್ರ ಸಿದ್ದರಾಮಯ್ಯ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಮಾಡಿದರು. ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ಆರು ವಾಹನ ಸೇರಿ ಒಟ್ಟು 12 ತ್ರಿಚಕ್ರ ವಾಹನ ವಿತರಣೆ ಮಾಡಿದ್ದಾರೆ.

  • 02 Nov 2023 08:11 AM (IST)

    Karnataka Breaking News Live: ಚಾಕುವಿನಿಂದ ಇರಿದು ಅಳಿಯನಿಂದ ಸೋದರ ಮಾವನ ಕೊಲೆ

    ಹಾಸನ‌ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಜಿಗೆರೆ ಗ್ರಾಮದಲ್ಲಿ ಚಾಕುವಿನಿಂದ ಇರಿದು ಅಳಿಯನಿಂದ ಸೋದರ ಮಾವನ ಕೊಲೆ ಮಾಡಲಾಗಿದೆ. ಪ್ರಭುಸ್ವಾಮಿ(50)ಯನ್ನು ಅಳಿಯ ಅಜಯ್(22) ಕೊಲೆ ಮಾಡಿದ್ದಾನೆ. ಕೌಟುಂಬಿಕ ಕಲಹ ಹಿನ್ನೆಲೆ ಕೊಲೆ ನಡೆದಿದೆ. 7 ವರ್ಷದ ಹಿಂದೆ ಪತಿಯನ್ನು ಬಿಟ್ಟು ಸಾವಿತ್ರಮ್ಮ ತವರು ಸೇರಿದ್ದಾರೆ. ಜಮೀನು ವಿಚಾರವಾಗಿ ಆಗಾಗ್ಗೆ ತಂಗಿ ಜತೆ ಪ್ರಭುಸ್ವಾಮಿ ಜಗಳವಾಡುತ್ತಿದ್ದ. ಮದ್ಯಸೇವಿಸಿ ಬಂದು ತಂಗಿ, ಆಕೆಯ ಮಗಳನ್ನು ನಿಂದಿಸುತ್ತಿದ್ದ. ವಿಷಯ ತಿಳಿದು ಗಂಜಿಗೆರೆ ಗ್ರಾಮಕ್ಕೆ ಆಗಮಿಸಿದ ಅಳಿಯ ಅಜಯ್, ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

  • 02 Nov 2023 08:08 AM (IST)

    Karnataka Breaking News Live: ಕೆ ಆರ್ ಹಳ್ಳಿ ಗೇಟ್ ಬಳಿ ಟ್ರಾಕ್ಟರ್ ಗೆ ಲಾರಿ ಡಿಕ್ಕಿ, ಓರ್ವ ಸಾವು

    ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೆ ಆರ್ ಹಳ್ಳಿ ಗೇಟ್ ಬಳಿ ಟ್ರಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಶಿರಾ ಮೂಲದ ಕಾರ್ಮಿಕ ಮಂಜಣ್ಣ (45) ಮೃತ ದುರ್ದೈವಿ. ಅಡಿಕೆ ಕೊಯ್ಯಲು ಹಿರಿಯೂರಿಗೆ ಕೂಲಿ ಕಾರ್ಮಿಕರು ಬರುತ್ತಿದ್ದರು. ಈ ವೇಳೆ ಟ್ರಾಕ್ಟರ್ ಗೆ ಲಾರಿ ಡಿಕ್ಕಿ ಹೊಡೆದಿದ್ದು ಟ್ರ್ಯಾಕ್ಟರಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಹಾಗೂ 8 ಮಂದಿಗೆ ಗಂಭೀರ ಗಾಯಗಳಾಗಿವೆ.

  • 02 Nov 2023 08:05 AM (IST)

    Karnataka Breaking News Live: ಇಂದಿನಿಂದ ಹಾಸನಾಂಬೆ ದರ್ಶನೋತ್ಸವ

    ಹಾಸನದ ಅಧಿದೇವತೆ ನಾಡಿನ ಶಕ್ತಿ ದೇವತೆ ವರ್ಷಕ್ಕೊಮ್ಮೆ ಮಾತ್ರ ದರ್ಶನ ಕರುಣಿಸೋ ಮಾತೆ ಹಾಸನಾಂಬೆ ದರ್ಶನೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಕಳೆದ ವರ್ಷ ಬಂದ್ ಆಗಿದ್ದ ದೇಗುಲದ ಬಾಗಿಲು ಇಂದು ಮಧ್ಯಾಹ್ನ 12 ಗಂಟೆಗೆ ಓಪನ್ ಆಗಲಿದೆ.

  • Published On - Nov 02,2023 8:00 AM

    Follow us
    ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
    ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
    ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
    ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
    ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
    ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
    ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
    ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
    ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
    ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
    ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
    ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
    ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
    ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
    ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
    ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
    Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
    Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
    ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
    ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ