AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Breaking Kannada News Highlights: ಕಾರವಾರದಲ್ಲಿ ವಿಭಿನ್ನ ಕೆಸರು ಗದ್ದೆ ಕ್ರೀಡಾಕೂಟ: ಹೇಗಿದೆ ನೋಡಿ

Breaking news today Highlights updates: ಬಿಬಿಎಂಪಿ ಕೇಂದ್ರ ಕಚೇರಿ ಆವರಣದ ಕಟ್ಟಡದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಒಂಬತ್ತು ಜನರಿಗೆ ಗಾಯಗಳಾಗಿವೆ. ಅವಘಡದಲ್ಲಿ ಗಾಯಾಗೊಂಡವರಿಗೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್​​‌ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಕರ್ನಾಟಕದ ರಾಜಕೀಯ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಘಟನೆಗಳ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ ಲೈವ್​ ಮೂಲಕ ಪಡೆಯಿರಿ.

ವಿವೇಕ ಬಿರಾದಾರ
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 13, 2023 | 10:37 PM

Share

ಕರ್ನಾಟಕ ರಾಜ್ಯದಲ್ಲಿ ಗುತ್ತಿಗೆದಾರರ ಬಾಕಿ ಬಿಲ್​ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಕಳೆದ ಎರಡು ದಿನಗಳಿಂದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗೋಷ್ಠಿ ನಡೆಸಿ ಆಗಸ್ಟ್​ 31ರ ಒಳಗಾಗಿ ಬಾಕಿ ಬಿಲ್​ ಬಿಡುಗಡೆ ಮಾಡುವಂತೆ ಗಡವು ನೀಡಲಾಗಿದೆ ಎಂದು ತಿಳಿಸಿದರು. ಗುತ್ತಿಗೆದಾರರ ಬಾಕಿ ಬಿಲ್​ ವಿಚಾರ ರಾಜಕೀಯ ಕೆಸರೆಚಾಟಕ್ಕೆ ಕಾರಣವಾಗಿದೆ. ಆಡಳಿತಾರೂಢ ಕಾಂಗ್ರೆಸ್​ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ಮಾಡುತ್ತಿದ್ದಾರೆ. ಈ ಮಧ್ಯೆ ಗುರುವಾರ (ಆ.11) ರ ಸಾಯಂಕಾಲ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿಯ ಗುಣನಿಯಂತ್ರಣ ಲ್ಯಾಬ್​​​​ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಈ ಅವಘಡದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಲಖಲಿಸಾಲಿಗೆ. ಇನ್ನು ಪ್ರಕರಣವನ್ನು ಮೂರು ಆಯಾಮಗಳಲ್ಲಿ ತನಿಖೆ ನಡೆಸುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚಿಸಿದ್ದಾರೆ.

LIVE NEWS & UPDATES

The liveblog has ended.
  • 13 Aug 2023 09:43 PM (IST)

    Karnataka Breaking Kannada News Live: ಕೆಸರುಗದ್ದೆ ಕ್ರೀಡಾಕೂಟ

    ಕಾರವಾರದ ಖಾರ್ಗಾ ಮಾಂಡೇಬೋಳ್​ನಲ್ಲಿ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿದೆ. ಹುಮ್ಮಸ್ಸಿನಿಂದ ಕ್ರೀಡಾಕೂಟದಲ್ಲಿ ಗ್ರಾಮೀಣ ಪ್ರತಿಭೆಗಳು ಭಾಗಿಯಾಗಿದ್ದರು. ಹತ್ತು ಹಲವು ಗ್ರಾಮೀಣ ಕ್ರೀಡೆಗಳನ್ನ ಆಡಿ ಮಸ್ತ್ ಮಜಾ ಮಾಡಿದ ಗ್ರಾಮಸ್ಥರು.

  • 13 Aug 2023 09:09 PM (IST)

    Karnataka Breaking Kannada News Live: ಬಸವರಾಜ ರಾಯರೆಡ್ಡಿಗೆ ಶಿವರಾಜ್ ತಂಗಡಗಿ ಟಾಂಗ್

  • 13 Aug 2023 08:32 PM (IST)

    Karnataka Breaking Kannada News Live: ರಾಷ್ಟ್ರಧ್ವಜ ಹೇಗೆ ಪ್ಯಾಕ್ ಮಾಡುತ್ತಾರೆ ನೋಡಿ

  • 13 Aug 2023 08:19 PM (IST)

    Karnataka Breaking Kannada News Live: ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದ್ದಕ್ಕೆ ಬಿಜೆಪಿಯಿಂದ ಹೊರಬಂದೆ-ಶೆಟ್ಟರ್​

    ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಿದ್ದಕ್ಕೆ ಬಿಜೆಪಿಯಿಂದ ಹೊರಬಂದೆ ಎಂದು ಬಳ್ಳಾರಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಎಂಎಲ್​ಸಿ ಶೆಟ್ಟರ್​ ವಾಗ್ದಾಳಿ ಮಾಡಿದ್ದಾರೆ. ಲಿಂಗಾಯತ ಹಿರಿಯ ನಾಯಕರ ಕಡೆಗಣಿಸಬೇಕೆಂಬ ಅಜೆಂಡಾ ಇತ್ತು. ಬಿಜೆಪಿಯ ಹಿಡನ್ ಅಜೆಂಡಾವನ್ನು ಹೊರಹಾಕುವ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

  • 13 Aug 2023 07:43 PM (IST)

    Karnataka Breaking Kannada News Live: ಬಿಜೆಪಿಯವರಿಗೆ ನೈತಿಕತೆ ಇಲ್ಲ

  • 13 Aug 2023 06:48 PM (IST)

    Karnataka Breaking Kannada News Live: ಮೋದಿಯನ್ನ ನೋಡಿ ಕೂಡ ಬಿಜೆಪಿಗೆ ವೋಟ್ ಹಾಕಿಲ್ಲ

  • 13 Aug 2023 06:22 PM (IST)

    Karnataka Breaking Kannada News Live: ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಡ್ರೆಸ್ ಇರಲ್ಲ

    ಮಾತೆತ್ತಿದ್ರೆ ಮೋದಿ ಮೋದಿ ಅಂತೇಳಿ ಪ್ರಚಾರ ಮಾಡುತ್ತಿದ್ದರು. ಕರ್ನಾಟಕ ಜನರು ಬುದ್ಧಿವಂತರು, ಅದೆಲ್ಲಾ ವರ್ಕೌಟ್ ಆಗಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಡ್ರೆಸ್ ಇರಲ್ಲ. ಗ್ಯಾರಂಟಿ ಜಾರಿ ಮಾಡದಿದ್ರೆ ಹೋರಾಟ ಮಾಡುವುದಾಗಿ ಹೇಳಿದ್ದರು. ಈಗ ಮಾತಾಡಲು ಏನೂ ಇಲ್ಲ, ಸುಮ್ಮನೆ ಆರೋಪ ಮಾಡ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್​ ತಂಗಡಗಿ ಹೇಳಿದರು.

  • 13 Aug 2023 05:36 PM (IST)

    Karnataka Breaking Kannada News Live: ಶೃಂಗೇರಿಯಿಂದ ಉಡುಪಿಗೆ ತೆರಳುವ ಬಸ್​ಗೆ ಮುಗಿಬಿದ್ದ ಮಹಿಳೆಯರು

    ಶಕ್ತಿ ಯೋಜನೆ ಜಾರಿ ನಂತರ ಬಸ್​ಗಳು, ಪ್ರವಾಸಿತಾಣಗಳು ಫುಲ್ ರಶ್​ ಆಗಿದ್ದು,​ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಬಸ್ ನಿಲ್ದಾಣದಲ್ಲಿ ಮಹಿಳೆಯರು ದಂಡು ಆಗಮಿಸಿದೆ. ಕೆಎಸ್​​ಆರ್​ಟಿಸಿ ಬಸ್ ಹತ್ತಲು ನೂರಾರು ಮಹಿಳೆಯರು ಮುಗಿಬಿದಿದ್ದಾರೆ. ಶೃಂಗೇರಿಯಿಂದ ಉಡುಪಿಗೆ ತೆರಳುವ ಬಸ್​ಗೆ ಮುಗಿಬಿದ್ದ ಮಹಿಳೆಯರನ್ನು ಚಾಲಕ, ನಿರ್ವಾಹಕ ಹರಸಾಹಸ ಪಟ್ಟಿದ್ದಾರೆ.

  • 13 Aug 2023 05:16 PM (IST)

    Karnataka Breaking Kannada News Live: ಡಿಸಿಎಂ ಡಿಕೆ ಶಿವಕುಮಾರ್​ ಪರ ಬ್ಯಾಟ್ ಬೀಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್

  • 13 Aug 2023 04:47 PM (IST)

    Karnataka Breaking Kannada News Live: ಪೊಲೀಸ್​​ ಇಲಾಖೆಯ ನೌಕರರಿಗೆ ಗುಡ್​ನ್ಯೂಸ್

  • 13 Aug 2023 04:20 PM (IST)

    Karnataka Breaking Kannada News Live: ಡಿ.ಕೆ.ಶಿವಕುಮಾರ್​ಗೆ ಸಿ.ಟಿ.ರವಿ ಸವಾಲು

  • 13 Aug 2023 03:56 PM (IST)

    Karnataka Breaking Kannada News Live: ಸಿಟಿ ರವಿಗೆ ಸಚಿವ ಪರಂ ತಿರುಗೇಟು

  • 13 Aug 2023 03:39 PM (IST)

    Karnataka Breaking Kannada News Live: ಹತ್ತನೇ ದಿನಕ್ಕೆ ಕಾಲಿಟ್ಟ ಫ್ಲವರ್ ಶೋ

    ಇಂದು ಹತ್ತನೇ ದಿನ ಫ್ಲವರ್ ಶೋ ಕಾಲಿದ್ದು, ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿದೆ. ಇಂದು ಭಾನುವಾರವಾಗಿರುವುದರಿಂದ ಫ್ಯಾಮಿಲಿ ಸಮೇತ ಜನರು ಆಗಮಿಸುತ್ತಿದ್ದಾರೆ. ಹೀಗಾಗಿ ಲಾಲ್​ ಬಾಗ್​ನಲ್ಲಿ ಇಂದು ಜನ ಸಾಗಾರ. ಕಿಲೋ ಮೀಟರ್ ಗಟ್ಟಲೆ ನಿಂತು ಫ್ಲವರ್ ಶೋ ವೀಕ್ಷಿಸಲಾಗುತ್ತಿದೆ.

  • 13 Aug 2023 03:17 PM (IST)

    Karnataka Breaking Kannada News Live: ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಿಡ್ನಾಪ್ ಪಾಲಿಟಿಕ್ಸ್

    ಗ್ರಾಮ ಪಂಚಾಯತ್​​ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಿಡ್ನಾಪ್ ಪಾಲಿಟಿಕ್ಸ್​ ಶುರುವಾಗಿದ್ದು, ಆಕಾಂಕ್ಷಿಗಳನ್ನು ಕಿಡ್ನಾಪ್​ ಆರೋಪ ಕೇಳಿಬಂದಿದೆ. ನಾಳೆ ಕೊಡತಿ ಗ್ರಾಮ ಪಂಚಾಯತ್​ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ ಸದಸ್ಯೆಯನ್ನುಅಪಹರಿಸಿದ್ದಾರೆಂದು ದೂರ ನೀಡಲಾಗಿದೆ.

  • 13 Aug 2023 02:54 PM (IST)

    Karnataka Breaking Kannada News Live: ‘ಭ್ರಷ್ಟಾಚಾರ, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ’

    ‘ಭ್ರಷ್ಟಾಚಾರ, ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ’ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆಗೆ ಸಚಿವ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಬೆಂಗಳೂರು ಗ್ರಾ. ಜಿಲ್ಲೆ‌ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮ ಗೃಹ ಸಚಿವ ಡಾ.ಪರಮೇಶ್ವರ್​​​​​ ಹೇಳಿಕೆ ನೀಡಿದ್ದಾರೆ.

  • 13 Aug 2023 02:45 PM (IST)

    Karnataka Breaking Kannada News Live: ರಮೇಶ್ ಜಾರಕಿಹೊಳಿ ವರ್ಸಸ್ ಅದರ್ಸ್

    ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ ವರ್ಸಸ್ ಅದರ್ಸ್ ಎಂಬ ವಿಚಾರವಾಗಿ ಮಾತನಾಡಿದ ಅವರು, ಪಾಪ ರಮೇಶ್ ‌ಜಾರಕಿಹೊಳಿ ನನ್ನ ಸ್ನೇಹಿತ, ಏನೋ ಆಗಿ ಮಂತ್ರಿ ಆದರು. ಹಲವು ಕಾರಣಕ್ಕೆ ಆ ಮಂತ್ರಿ ಸ್ಥಾನವೂ ಹೋಯಿತು. ರಾಜ್ಯದಲ್ಲಿ ಬಿಜೆಪಿ ಎಂದಾದರೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದೆಯೇ ಎಂದು ಪ್ರಶ್ನಿಸಿದರು.

  • 13 Aug 2023 02:00 PM (IST)

    Karnataka News Live: ಬಿಜೆಪಿ ನಾಯಕರಿಗೆ ಶ್ರೀರಾಮ ಸೇನೆ ಎಚ್ಚರಿಕೆ

    ಬೆಂಗಳೂರು: ಗೂಂಡಾ ಕಾಯ್ದೆ ಅಡಿ ಪುನೀತ್ ಕೆರೆಹಳ್ಳಿ ಬಂಧನ ಹಿನ್ನೆಲೆ ರಾಜ್ಯ ಸರ್ಕಾರದ ಮತ್ತು ಬಿಜೆಪಿ ನಾಯಕರ ವಿರುದ್ಧ ಹಿಂದೂ ಸಂಘಟನೆಗಳು ಕಿಡಿಕಾರಿವೆ.  ಪುನೀತ್ ಕೆರೆಹಳ್ಳಿ ಬೆಂಬಲವಾಗಿ ಬಿಜೆಪಿ ನಾಯಕರು ನಿಲ್ಲದಿದ್ದರೆ, ಬಿಜೆಪಿ ನಾಯಕರ ವಿರುದ್ಧವು ಹೋರಾಟ ನಡೆಸಲಾಗುತ್ತದೆ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ಶ್ರೀರಾಮ ಸೇನೆ ಕೊಟ್ಟಿದೆ.

  • 13 Aug 2023 01:57 PM (IST)

    Karnataka News Live: ಲೋಕಸಭೆ ಚುನಾವಣೆಗೆ ಫಂಡಿಗ್ ಮಾಡಲು ರಾಜ್ಯ ಎಟಿಎಂ ಆಗಿದೆ: ಅಶ್ವತ್​ ನಾರಾಯಣ

    ಬೆಂಗಳೂರು: ಕಾಂಗ್ರೆಸ್ ಎಟಿಎಂ ಸರ್ಕಾರ ಅಂತ ಈಗಾಗಲೇ ಗೊತ್ತಾಗಿದೆ. ಲೋಕಸಭೆ ಚುನಾವಣೆಗೆ ಫಂಡಿಗ್ ಮಾಡಲು ರಾಜ್ಯ ಎಟಿಎಂ ಆಗಿದೆ. ಅವರದ್ದೇ ಶಾಸಕ ರಾಯರೆಡ್ಡಿ ಭ್ರಷ್ಟಾಚಾರ ಬೇಡ ಎಂದು ಹೇಳಿದ್ದರು. ಅವರ ಪಕ್ಷದವರೇ ಹೇಳಿದರೂ ಕೇಳಲು ಸಿದ್ಧರಿಲ್ಲ. ವಿಪಕ್ಷಗಳ ಸಭೆ ಕರೆಯಬೇಕು ಎಂದು ಕೂಡ ಸಲಹೆ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

  • 13 Aug 2023 01:10 PM (IST)

    Karnataka News Live: ರಾಜ್ಯದಲ್ಲಿ ಅಸಮರ್ಪಕ ಮುಂಗಾರು ಮಳೆ; ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಸಿಎಂ

    ಬೆಂಗಳೂರು: ರಾಜ್ಯದಲ್ಲಿ ಅಸಮರ್ಪಕ ಮುಂಗಾರು ಮಳೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಬರಗಾಲ ಘೋಷಣೆಗೆ ಕೇಂದ್ರದ ಷರತ್ತುಗಳೇ ಅಡ್ಡಿಯಾಗುತ್ತಿವೆ. ಬರ ಘೋಷಣೆ ಸಂಬಂಧ ನಿಯಮಾವಳಿ ಸಡಿಲಿಕೆ ಮಾಡುವಂತೆ ಪತ್ರ ಬರೆದಿದ್ದಾರೆ.

  • 13 Aug 2023 12:24 PM (IST)

    Karnataka News Live: ಕಾಂಗ್ರೆಸ್ ಪಕ್ಷವನ್ನು​ ಡ್ಯಾಮೇಜ್ ಮಾಡಲು ಬಿಜೆಪಿ, ಜೆಡಿಎಸ್ ನಾಯಕರು ಮುಂದಾಗಿದ್ದಾರೆ; ಸಂತೋಷ್​ ಲಾಡ್​​

    ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷವನ್ನು​ ಡ್ಯಾಮೇಜ್ ಮಾಡಲು ಬಿಜೆಪಿ, ಜೆಡಿಎಸ್ ನಾಯಕರು ಮುಂದಾಗಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆ ಇಮೇಜ್ ಡ್ಯಾಮೇಜ್ ಮಾಡಲು‌ ಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ವರ್ಗಾವಣೆ ಆರೋಪ ಮಾಡುತ್ತಿದ್ದಾರೆ. ಅದಕ್ಕೆ ದಾಖಲೆ ಬೇಕಲ್ಲ. ರಾಜಕಾರಣಕ್ಕಾಗಿ ಈ ರೀತಿ ಮಾತನಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್​ಗೆ ಜನರು ಉತ್ತರ ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ JDS, ಬಿಜೆಪಿ ಒಂದಾಗುತ್ತೆ ಎಂಬ ಸುದ್ದಿ ಇದೆ. ಸಚಿವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಹುಬ್ಬಳ್ಳಿಯಲ್ಲಿ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೇಳಿದರು.

  • 13 Aug 2023 11:42 AM (IST)

    Karnataka News Live: ಡಿಕೆ ಶಿವಕುಮಾರ್​ ಸರ್ಕಾರ ಪ್ರಮಾಣಿಕ ಸರ್ಕಾರ ಅನ್ನೋದಾದರೇ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ: ಸಿಟಿ ರವಿ

    ಚಿಕ್ಕಮಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರ ಸರ್ಕಾರ ಪ್ರಮಾಣಿಕ ಸರ್ಕಾರ ಅನ್ನೋದಾದರೇ ಅಜ್ಜಯ್ಯನ ಮಠಕ್ಕೆ ಹೋಗಿ ಪ್ರಮಾಣ ಮಾಡಲಿ. ನಮ್ಮ ಆರೋಪವಲ್ಲ, ಬಿಬಿಎಂಪಿ ಗುತ್ತಿಗೆದಾರರ ಸಂಘ  ಆರೋಪ ಮಾಡಿದೆ. ಡಿಕೆ ಶಿವಕುಮಾರಿಗೆ ಅಜ್ಜಯ್ಯನ ಮಠದ ಬಗ್ಗೆ ಇರುವ ಭಕ್ತಿಗೆ ಅಲ್ಲಿಗೆ ಕರೆದಿದ್ದಾರೆ.  ನಾವು ತಪ್ಪೇ ಮಾಡಿಲ್ಲ ಅಂದ್ರೆ ಹೋಗಿ ಪ್ರಮಾಣ ಮಾಡಬಹುದಲ್ವಾ ಎಂದು ಬಿಜೆಪಿ ನಾಯಕ ಸಿಟಿ ರವಿ ಪ್ರಶ್ನಿಸಿದ್ದಾರೆ.

  • 13 Aug 2023 11:04 AM (IST)

    Karnataka News Live: ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜು ವಿರುದ್ಧ ಅವ್ಯವಹಾರ ಆರೋಪ

    ಮಂಗಳೂರು: ಮಂಗಳೂರಿನ ಜಿ.ಆರ್.ಮೆಡಿಕಲ್ ಕಾಲೇಜು ಎಂಬಿಬಿಎಸ್​ ಸೀಟ್​​ ಹಂಚಿಕೆಯಲ್ಲಿ ಅವ್ಯವಹಾರ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಕಾಲೇಜು ಸರ್ಕಾರದ ಅನುಮತಿ ಇಲ್ಲದೆ ನೂರಾರು ಮೆಡಿಕಲ್ ಸೀಟ್ ಮಾರಾಟ ಮಾಡಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

  • 13 Aug 2023 10:46 AM (IST)

    Karnataka News Live: ಸ್ವಾತಂತ್ರ್ಯ ದಿನಾಚರಣೆ ನಿಮತ್ತ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಭರದಿಂದ ಸಾಗಿದ ಸಿದ್ದತೆ

    ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಆಗಸ್ಟ್ 15 ರಂದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಧ್ವಜಾರೋಹಣ ಬಳಿಕ ತೆರೆದ ಜೀಪಿನಲ್ಲಿ ಪರೇಡ್ ವೀಕ್ಷಣೆ ಮಾಡಲಿದ್ದಾರೆ.

  • 13 Aug 2023 10:27 AM (IST)

    Karnataka News Live: ಭೀಕರ ರಸ್ತೆ ಅಪಘಾತ ಐವರ ಸಾವು

    ಚಿತ್ರದುರ್ಗ: ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ  ನಾಲ್ವರು ಮೃತರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಕೋಲಾರ ಜಿಲ್ಲೆ ಕೆಜಿಎಫ್ ಮೂಲದ ಮಧುಸೂದನ್(24) ಮೃತದುರ್ದೈವಿ. ಮಧುಸೂದನ್​​​​​​ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಮಧುಸೂದನ್ ಪಿಎಸ್​​​ಐ ಪರೀಕ್ಷೆಗೆ ಕೋಚಿಂಗ್ ಪಡೆಯುತ್ತಿದ್ದರು.

  • 13 Aug 2023 09:49 AM (IST)

    Karnataka News Live: ಚಿತ್ರದುರ್ಗ; ಕಲುಷಿತ ನೀರು ಕುಡಿದು ವಾಂತಿ-ಭೇದಿ

    ಚಿತ್ರದುರ್ಗ:  ಮುದ್ದಾಪುರ ಹೊಸಹಟ್ಟಿ ಗ್ರಾಮದಲ್ಲಿ ಹಲವರಿಗೆ ವಾಂತಿ-ಭೇದಿ ಶುರುವಾಗಿದೆ. ಕಳೆದ ಎರಡು ದಿನದಿಂದ 12ಜನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರು ಡಿಸ್ಚಾರ್ಜ್ ಆಗಿದ್ದಾರೆ.

  • 13 Aug 2023 09:45 AM (IST)

    Karnataka News Live: ಮೂವರು ಅಧಿಕಾರಿಗಳ ವಿರುದ್ಧ ಕ್ರಿಮಿನಲ್​ ಕೇಸ್ ದಾಖಲು

    ಚಿಕ್ಕಮಗಳೂರು: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಕಬಳಿಕೆ ಆರೋಪದಡಿ ಮೂವರು ಅಧಿಕಾರಿಗಳ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್​ ಕೇಸ್​ ದಾಖಲಾಗಿದೆ.

  • 13 Aug 2023 09:00 AM (IST)

    Karnataka News Live: ಪ್ರತಿ ಕ್ವಿಂಟಾಲ್​ ಅಡಿಕೆ ದರ ಎರಡು ಸಾವಿರ ರೂ.ಗೆ ಕುಸಿತ

    ದಾವಣಗೆರೆ: ಭೂತಾನ್​ನಿಂದ 17 ಸಾವಿರ ಟನ್ ಅಡಕೆ ಆಮದು ಹಿನ್ನೆಲೆಯಲ್ಲಿ ಪ್ರತಿ ಕ್ವಿಂಟಾಲ್​ ಅಡಿಕೆ ದರ ಎರಡು ಸಾವಿರ ರೂ.ಗೆ ಕುಸಿತವಾಗಿದೆ. ಇದರಿಂದ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಡಕೆ ಬೆಳೆಗಾರರಿಗೆ ಆತಂಕ ಶುರುವಾಗಿದೆ. ಚನ್ನಗಿರಿ ತಾಲೂಕಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಡಕೆ ಬೆಳೆಯಲಾಗುತ್ತದೆ. ಅಡಿಕೆ ದರ ಮತ್ತಷ್ಟು ಕುಸಿಯುವ ಆತಂಕ ಹಿನ್ನೆಲೆ ರೈತರು ಅಡಿಕೆ ಕೊಯ್ಲು ಆರಂಭಿಸಿದ್ದಾರೆ.

  • 13 Aug 2023 08:33 AM (IST)

    Karnataka News Live: ಬಿಬಿಎಂಪಿ ಬೆಂಕಿ ಅವಘಡ ಪ್ರಕರಣ: ಮೂವರು ಗಾಯಾಳುಗಳ ಸ್ಥಿತಿ ಗಂಭೀರ

    ಬೆಂಗಳೂರು: ಬಿಬಿಎಂಪಿ ಆವರಣದ ಗುಣನಿಯಂತ್ರಣ ಲ್ಯಾಬ್​​ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಾಯಾಗೊಂಡವರಿಗೆ ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಸೆಂಟರ್​ ಚಿಕಿತ್ಸೆ​ ‌ಮುಂದುವರೆದಿದೆ. ಒಂಬತ್ತರಲ್ಲಿ ಜನರಲ್ಲಿ ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ.

  • 13 Aug 2023 07:56 AM (IST)

    Karnataka News Live: ವಿಶ್ವವಿಖ್ಯಾತ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ ನಿಧನ

    ಕಲಬುರಗಿ: ವಿಶ್ವವಿಖ್ಯಾತ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ (90) ನಿಧನರಾಗಿದ್ದಾರೆ. ಡಾ.ಚಂದ್ರಪ್ಪ ರೇಷ್ಮಿ ಅವರು ವಿಶ್ವ ಪ್ರಸಿದ್ಧ ನೇತ್ರತಜ್ಞರಾಗಿ ಹೆಸರು ಪಡೆದಿದ್ದರು. ಇಂದು (ಆ.13) ಚಿತ್ತಾಪುರದ ಸ್ವಗೃಹದಲ್ಲಿ ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಚಿತ್ತಾಪುರ ಪಟ್ಟಣದಲ್ಲಿ ಡಾ.ಚಂದ್ರಪ್ಪ ರೇಷ್ಮಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ. ಚಿತ್ತಾಪುರ ಪಟ್ಟಣದಲ್ಲಿ ಜನಿಸಿದ್ದರು. ಅಮೆರಿಕದಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದ ಇವರು ಕೆಲ ವರ್ಷಗಳಿಂದ ಕಲಬುರಗಿ ನಗರದಲ್ಲಿ ವಾಸವಾಗಿದ್ದರು.

  • 13 Aug 2023 07:49 AM (IST)

    Karntaka News Live: ಪಿಎಸ್​ಐ ಅಭ್ಯರ್ಥಿಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರ

    ಬೆಂಗಳೂರು: ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಪ್ರಾಮಾಣಿಕವಾಗಿ ಆಯ್ಕೆಯಾಗಿದ್ದ ಅಭ್ಯರ್ಥಿಗಳನ್ನು ನ್ಯಾಯಾಂಗ ತನಿಖೆಗೆ ಒಳಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಾಲಾಗಿದೆ. ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ಹೀಗಾಗಿ 545 ನೇಮಕಾತಿಯಲ್ಲಿ ಆಯ್ಕೆಯಾದ 490 ಅಭ್ಯರ್ಥಿಗಳನ್ನು ನ್ಯಾಯಾಂಗ ತನಿಖಾ ವ್ಯಾಪ್ತಿಗೆ ತರಲು ಮನವಿ ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Published On - Aug 13,2023 7:48 AM

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ