ಕರ್ನಾಟಕ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಮತ್ತು ರಾಜ್ಯಾಧ್ಯಕ್ಷ ಆಯ್ಕೆ ವಿಚಾರವಾಗಿ ಅಸಮಾಧಾನ ಬುಗಿಲೆದ್ದಿದೆ. ಇದರ ನಡುವೆ ನೂತನ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮೈಸೂರು ಮತ್ತು ಮಂಡ್ಯ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದಾರೆ. ಸೋಮವಾರ ಮೈಸೂರು ಪ್ರವಾಸದ ವೇಳೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಅವರು ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಮತ್ತಷ್ಟು ಒತ್ತು ನೀಡಲಾಗುವುದು ಎಂದು ಹೇಳಿದ್ದರು. ಮತ್ತೊಂದಡೆ ವಿಪಕ್ಷ ನಾಯಕ ಆರ್ ಅಶೋಕ ಆಡಳಿತಾರೂಢ ಕಾಂಗ್ರೆಸ್ ಮೇಲೆ ಹರಿಹಾಯುತ್ತಾ, ಬರ ಅಧ್ಯಯನಕ್ಕೆ ಮುಂದಾಗಿದ್ದಾರೆ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಮಧ್ಯೆ ವಾಗ್ಯುದ್ದ ನಡೆಯುತ್ತಿದೆ. ಅಲ್ಲದೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‌ಡಿ ಕುಮಾರಸ್ವಾಮಿ ಅವರು ದತ್ತಮಾಲೆ ಧರಿಸುತ್ತೇನೆ ಎಂಬ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ವಿಚಾರ ಬಾಕಿ ಇದೆ. ಚಿತ್ರದುರ್ಗದ ಮುರುಘಾ ಮಠದ ಮುರುಘಾಶ್ರೀ ಜಾಮೀನಿನ ಮೇಲೆ ಹೊರಗಡೆ ಬಂದಿದ್ದಾರೆ. ಇದರೊಂದಿಗೆ ಇಂದಿನ ಹಲವು ಅಪ್ಡೇಟ್ಸ್ ಇಲ್ಲಿದೆ..
ಬೆಂಗಳೂರು: ನಿಗಮ ಮಂಡಳಿ ಸಭೆಯಿಂದ ಸಿಎಂ ಹೊರಟಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೆ , ಅಧ್ಯಕ್ಷರು ಮಾತಾಡ್ತಾರೆ ಎಂದು ಹೇಳಿ ಹೊರಟಿದ್ದಾರೆ. ಸಿಎಂ ಜೊತೆ ಇಂಧನ ಸಚಿವ ಜಾರ್ಜ್ ಕೂಡ ನಿರ್ಗಮಿಸಿದ್ದಾರೆ. ಇತ್ತ ಡಿಕೆಶಿ ಹಾಗೂ ಸುರ್ಜೆವಾಲ ಚರ್ಚೆ ಮುಂದುವರೆದಿದೆ.
ಬೆಂಗಳೂರು: ‘ನಾನು ಸಿಎಂ ಭೇಟಿಗೆ ಬಂದಿದ್ದೆ, ಸುರ್ಜೇವಾಲ ಕೂಡ ಇದ್ದಿದ್ದರಿಂದ ಲೋಕಾಸಭೆ ಚುನಾವಣೆ ಪಕ್ಷ ಸಂಘಟನೆಯ ಬಗ್ಗೆ ಚರ್ಚೆ ಅಯ್ತು ಎಂದು ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ಹೇಳಿದರು. ನಿಗಮ ಮಂಡಳಿಯ ಬಗ್ಗೆ ಯಾವುದೇ ಚರ್ಚೆ ಆಗಲಿಲ್ಲ. ನನಗೆ ನಿಗಮ ಮಂಡಳಿಯ ಬಗ್ಗೆ ಆಸಕ್ತಿ ಇಲ್ಲ, ಅದರ ಅವಶ್ಯಕತೆನೂ ನನಗೆ ಬರಲ್ಲ. ನಾನು ಸರ್ಕಾರಕ್ಕೆ ಮುಜುಗರ ತರುವ ರೀತಿಯಲ್ಲಿ ಏನು ಮಾತನಾಡಿಲ್ಲ. ನಾನು ಒಬ್ಬ ಕಾಂಗ್ರೆಸಿಗ, ಸಿಎಂ ಸಿದ್ದರಾಮ್ಯ ಬೆಸ್ಟ್ ಸಿಎಂ ಇದ್ದಾರೆ ಎಂದರು.
ಬೆಂಗಳೂರು: ಸರ್ಕಾರದ ನೂತನ ಸಿಎಸ್ ಆಗಿ ರಜನೀಶ್ ಗೋಯಲ್ ನೇಮಕ ವಿಚಾರ ‘ ಸಿಎಸ್ ಆಗಿ ನೇಮಕಾತಿ ಆದೇಶ ಮುನ್ನ ಗೋಯಲ್ ಸಿಎಂ ಭೇಟಿಯಾಗಿದ್ದರು. ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಸಿಎಂ ಭೇಟಿಯಾದ ಕೆಲವೇ ಕ್ಷಣಗಳಲ್ಲಿ ಸಿಎಸ್ ಆಗಿ ನೇಮಕಾತಿ ಆದೇಶಿಸಿದ್ದಾರೆ.
ಬೆಂಗಳೂರು: ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಹಂಚಿಕೆ ಬಗೆಹರಿಯದ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಇಂದು ಬೆಂಗಳೂರಿನಲ್ಲೇ ವಾಸ್ತವ್ಯ ಹೂಡುವ ಸಾಧ್ಯತೆ ಇದೆ. ನಿಗದಿಯಂತೆ ಸಂಜೆ 6.30ಕ್ಕೆ ಬೆಂಗಳೂರಿನಿಂದ ವಾಪಸಾಗಬೇಕಿತ್ತು. ಆದರೆ, ಇದುವರೆಗೆ ಮೊದಲ ಸುತ್ತಿನ ಸಮಾಲೋಚನೆ ಬಗೆಹರಿದಿಲ್ಲ. ಹೀಗಾಗಿ ಇಂದು ಬೆಂಗಳೂರಿನಲ್ಲೇ ಸುರ್ಜೇವಾಲ ವಾಸ್ತವ್ಯ ಸಾಧ್ಯತೆ ಇದೆ.
ಸಿಎಂ, ಡಿಸಿಎಂ ಕುಟುಂಬದ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು. ಆಧಾರವಿಟ್ಟು ಆರೋಪ ಮಾಡಿದರೆ ಉತ್ತರ ಕೊಡಬಹುದು. ಬ್ಲೂಪಿಲಂ ತೋರಿಸಿದ್ದಾರೆ ಎಂಬೂದಕ್ಕೆ ಆಧಾರ ಇದೆಯಾ? ಕುಮಾರಸ್ವಾಮಿ ನಿವು ಕರೆಂಟ್ ಕದ್ದಿದ್ದಕ್ಕೆ ದಂಡ ಕಟ್ಟಿದ್ದೀರಿ. ಅದಕ್ಕೆ ಅಧಿಕಾರಿಗಳು ಬಿಲ್ ಕೊಟ್ಟಿದ್ದಾರೆ. ಜನಸಾಮಾನ್ಯರೆ ನಿಮ್ಮನ್ನ ಕರೆಂಟ್ ಕಳ್ಳ ಎನ್ನುತ್ತಿದ್ದಾರೆ ಎಂದರು.
ಮಡಿಕೇರಿ: ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ಅವರು ‘ಸಿಎಂ, ಡಿಸಿಎಂ ಕುಟುಂಬದ ವಿರುದ್ದ ಆಧಾರರಹಿತ ಆರೋಪ ಮಾಡ್ತಾರೆ. ಆಧಾರವಿಟ್ಟು ಆರೋಪ ಮಾಡಿದರೆ ಉತ್ತರ ಕೊಡಬಹುದು. ಬ್ಲೂಪಿಲಂ ತೋರಿಸಿದ್ದಾರೆ ಎಂಬುದಕ್ಕೆ ಆಧಾರ ಇದೆಯಾ? ಕುಮಾರಸ್ವಾಮಿ ನಿವು ಕರೆಂಟ್ ಕದ್ದಿದ್ದಕ್ಕೆ ದಂಡ ಕಟ್ಟಿದ್ದೀರಿ. ಅದಕ್ಕೆ ಅಧಿಕಾರಿಗಳು ಬಿಲ್ ಕೊಟ್ಟಿದ್ದಾರೆ. ಜನಸಾಮಾನ್ಯರೆ ನಿಮ್ಮನ್ನ ಕರೆಂಟ್ ಕಳ್ಳ ಎನ್ನುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬಳ್ಳಾರಿ: ಜಿಲ್ಲೆಯ 400 ಕ್ಕೂ ಅಧಿಕ ಹೋಂ ಗಾಡ್ಸ್೯ ಮದ್ಯಪ್ರದೇಶದಲ್ಲಿ ಪರದಾಟ ನಡೆಸಿದ್ದಾರೆ. ಚುನಾವಣೆ ಮುಗಿದರೂ ಚುನಾವಣೆ ಆಯೋಗ ಮಾತ್ರ ಮನೆಗೆ ಕಳಿಸಿಕೊಡುತ್ತಿಲ್ಲ. ಕರ್ನಾಟಕಕ್ಕೆ ಕಳಿಸಿಕೊಡುವಂತೆ ಮೂರು ದಿನಗಳಿಂದ ಸಿಬ್ಬಂದಿಗಳು ಪರದಾಟ ನಡೆಸಿದ್ದಾರೆ.
ವಿಜಯಪುರ: ಕಾಂಗ್ರೆಸ್ ನಾಯಕಿ ವೀಣಾ ಕಾಶಪ್ಪನವರ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸದಂತೆ ವಿಜಯಪುರದ JSS ಆಸ್ಪತ್ರೆಯಿಂದ ವೀಣಾ ಕಾಶಪ್ಪನವರ್ ಡಿಸ್ಚಾರ್ಜ್ ಮಾಡಲಾಗಿದೆ. ಆಸ್ಪತ್ರೆಯಿಂದಲೇ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ವೀಣಾ ಅವರು ‘ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕ ಪಡಬೇಡಿ ಎಂದಿದ್ದಾರೆ.
ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಮಹತ್ವದ ಸಭೆ ಆರಂಭವಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ಹಂಚಿಕೆ ಸೇರಿದಂತೆ ರಾಜ್ಯದ ಇತರ ಬೆಳವಣಿಗೆಗಳ ಕುರಿತು ನಾಯಕರು ಸಮಾಲೋಚನೆ ಮಾಡುತ್ತಿದ್ದಾರೆ.
ಕಲಬುರಗಿ: ನಾವು ಬೇಡ ಅಂದ್ರೂ ಕಾಂಗ್ರೆಸ್ಸಿಗರೇ ಬಹಳಷ್ಟು ಅಸ್ತ್ರ ಕೊಟ್ಟಿದ್ದಾರೆ ಎಂದು ಕಲಬುರಗಿಯಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಸುವರ್ಣಸೌಧದಲ್ಲಿರುವ ಸಾರ್ವಕರ್ ಫೋಟೋ ತೆಗೆಯುತ್ತೇವೆ ಎಂದಿದ್ದಾರೆ. ಇದು ಸಾರ್ವಕರ್ಗೆ ಮಾಡುತ್ತಿರುವ ಅಪಮಾನ ಎಂದಿದ್ದಾರೆ.
ಶಿವಮೊಗ್ಗ: ಮಧು ಬಂಗಾರಪ್ಪ ವಿರುದ್ಧ ಶಾಸಕ ಬೇಳೂರು ಅಸಮಾಧಾನ ವಿಚಾರ ‘ನಮ್ಮ ನಡುವೆ ಯಾವುದೇ ಮುಸುಕಿನ ಗುದ್ದಾಟ ಇಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು. ‘ನಮ್ಮ ಹಕ್ಕುಗಳನ್ನು ಕೇಳಿದ್ದೇವೆ. ನಾನು ಹಿರಿಯ ಎಂಎಲ್ಎ ಮೂರು ಬಾರಿ ಶಾಸಕನಾಗಿದ್ದೇನೆ.
ನನ್ನ ಗಮನಕ್ಕೆ ಬಾರದೆ ಇರುವ ಸಂದರ್ಭದಲ್ಲಿ ಈ ರೀತಿ ಪ್ರಶ್ನೆ ಮಾಡುವುದು ಸಹಜ ಎಂದರು.
ಬೆಂಗಳೂರು: ವಿಶ್ವಾದ್ಯಂತ ವಿಶ್ವ ಮೀನುಗಾರಿಕೆ ದಿನಾಚರಣೆ ಆಚರಣೆ ಮಾಡುತ್ತಿದ್ದೇವೆ. ಎಲ್ಲ ಒಳನಾಡು ಹಾಗೂ ಕರಾವಳಿ ಮೀನುಗಾರರಿಗೆ ಮತ್ತು ಮಾರಾಟಗಾರರಿಗೆ ಸಂಸ್ಕರಣ ಮಾಡುತ್ತಿರುವವರಿಗೂ ಸಿಎಂ ಸಿದ್ದರಾಮಯ್ಯ ಅವರು ಶುಭಾಶಯ ಕೋರಿದರು. 1987 ರಿಂದ ಮೀನುಗಾರರ ದಿನಾಚರಣೆ ಆರಂಭ ಆಯ್ತು, ಮೀನುಗಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಪರಿಹಾರ ಸಿಗಬೇಕು. ಸಚಿವ ಮಂಕಾಳ ವೈದ್ಯ ಅವರು ಆ ಜವಾಬ್ದಾರಿ ತಗೊಂಡಿದ್ದಾರೆ ಎಂದರು.
ಬೆಂಗಳೂರು: ವಿಧಾನಸೌಧದಲ್ಲಿ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸ್ವಾಗತ ಭಾಷಣ ವೇಳೆ ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಡಿಸಿಎಂ ಹೇಳುವ ಬದಲಿಗೆ ಸಿಎಂ ಡಿ.ಕೆ ಶಿವಕುಮಾರ್ಗೆ ಸ್ವಾಗತ ಎಂದಿದ್ದಾರೆ.
ಬಳ್ಳಾರಿ: ಸತೀಶ್ ಜಾರಕಿಹೊಳಿ ಸಿಎಂ ಆಗ್ತಾರೆಂದು ಶಾಸಕ ವಿಶ್ವಾಸ್ ವೈದ್ಯ ಹೇಳಿಕೆ ವಿಚಾರ ‘ ಯಾವ ಸಮಯಕ್ಕೆ ಯಾರು ಸಿಎಂ ಎಂದು ಪಕ್ಷ ನಿರ್ಧರಿಸುತ್ತದೆ ಎಂದು ಬಳ್ಳಾರಿಯಲ್ಲಿ ಕಂದಾಯ ಇಲಾಖೆ ಸಚಿವ ಕೃಷ್ಣಭೈರೇಗೌಡ ಹೇಳಿದರು. ಒಳ್ಳೆಯ ಆಡಳಿತ ನಡೆಸಲು ಜನರು ನಮಗೆ ಅಧಿಕಾರ ಕೊಟ್ಟಿದ್ದು, ಆ ಕಡೆ ನಾವು ಹೆಚ್ಚಿನ ಗಮನ ಕೊಡಬೇಕು. ಮುಂದೆ ಯಾರು ಸಿಎಂ ಎಂದು ಪಕ್ಷ ನಿರ್ಧಾರ ಮಾಡುತ್ತದೆ. ಅಭಿವೃದ್ಧಿ ಕಡೆಗೆ ನಮ್ಮ ಗಮನ ಇದ್ದರೆ ಎಲ್ಲರಿಗೂ ಒಳ್ಳೆಯದು. ಅಧಿಕಾರದ ಬಗ್ಗೆ ಚರ್ಚೆ ಮಾಡಿದ್ರೆ ಜನರಿಗೆ ಯಾವ ಲಾಭ ಇಲ್ಲ ಎಂದರು.
ಬೆಂಗಳೂರು: ರಾಜ್ಯದ ವಿದ್ಯುತ್ ಪರಿಸ್ಥಿತಿಯ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇವೆ. ವಿದ್ಯುತ್ಗೆ ಈ ಬಾರಿ ಬೇಡಿಕೆ ಇದೆ. ಈ ವರ್ಷ ಮಳೆಯ ಕೊರತೆ ಉಂಟಾಗಿದೆ. ಈ ವರ್ಷ ಒನ್ ಟು ಡಬಲ್ ಇಂಧನಕ್ಕೆ ಬೇಡಿಕೆ ಜಾಸ್ತಿಯಾಗಿದೆ. ನಮಗೆ ಮುಖ್ಯಮಂತ್ರಿಗಳು ಸಾಕಷ್ಟು ಬೆಂಬಲ ನೀಡಿದ್ದಾರೆ. ವಿದ್ಯುತ್ ಖರೀದಿ ಮಾಡಲು ಹಣಬಿಡುಗಡೆ ಮಾಡಿದ್ದಾರೆ. ಪಂಚಾಬ್ ಮತ್ತು ಯುಪಿಯಿಂದ ವಿದ್ಯುತ್ ಖರೀದಿಗೆ ಮುಂದಾಗುತ್ತಿದ್ದೇವೆ. ಜನವರಿ ತನಕ ವಿದ್ಯುತ್ಗೆ ಕೊರತೆ ಇಲ್ಲ. ಮುಂದಿನ ದಿನಗಳಲ್ಲಿ ಯಾರಿಗೂ ಸಮಸ್ಯೆಯಾಗದಂತೆ ಕ್ರಮ ತೆಗದುಕೊಳ್ಳುತ್ತೇವೆ ಎಂದು ಸಚಿವ ಕೆಜೆ ಜಾರ್ಜ್ ಹೇಳಿದರು.
ಮಂಗಳೂರು: ಕಾಂಗ್ರೆಸ್ನ ಒಳಗೆ ಆಂತರಿಕ ಜಗಳ ಜಾಸ್ತಿಯಾಗಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ತಂಡ ಇಬ್ಬಾಗವಾಗುತ್ತಿದೆ.ಅದರ ಮಧ್ಯೆ ಮರಿ ಖರ್ಗೆ ಮುಖ್ಯಮಂತ್ರಿ ಬೇಡಿಕೆ ಇಡುತ್ತಿದ್ದಾರೆ.
ಕಾಂಗ್ರೆಸ್ ಡಿವೈಡ್ ಆಗುತ್ತಿದೆ. ಹಸ್ತದ ಒಳಗೆ ಹಸ್ತದ ಆಪರೇಷನ್ ಆಗುತ್ತಿದೆ. ಕೆಲವೇ ದಿನಗಳಲ್ಲಿ 30-40 ಶಾಸಕರು ಹೊರಗೆ ಬರುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ದೇವನಹಳ್ಳಿ: ಹಲವು ವಿಚಾರಗಳ ಬಗ್ಗೆ ಚರ್ಚಿಸಲು ಬೆಂಗಳೂರಿಗೆ ಬಂದಿದ್ದೇನೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಮತ ಸೆಳೆಯಬೇಕಿದೆ. ಹೊಸ ಇತಿಹಾಸ ಸೃಷ್ಟಿಸಲು ಕರ್ನಾಟಕ ರಾಜ್ಯ ಪ್ರಮುಖ ಕೇಂದ್ರ. ರಾಜ್ಯದ ರೀತಿ ನಮಗೆ ಬೇರೆ ಕಡೆಯೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಲೋಕಸಭಾ ಸ್ಥಾನಗಳ ಬಗ್ಗೆಯೂ ಚರ್ಚೆ ಮಾಡುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದರು.
ರಾಮನಗರ: ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಅಂಟಿಸಿಕೊಳ್ಳಲಿ ಯಾರು ಬೇಡ ಅಂತಾರೆ, ಏನೂ ಮಾಡಲು ಆಗಲ್ಲ. ನನಗೆ ಯಾರು ಏನೂ ಮಾಡೋಕಾಗಲ್ಲ. ಸರ್ಕಾರದ ತಪ್ಪುಗಳನ್ನ ಏಕಾಂಗಿಯಾಗಿ ಪ್ರಶ್ನೆ ಮಾಡುವುದು ಕುಮಾರಸ್ವಾಮಿ ಒಬ್ಬನೆ. ಎಲ್ಲರೂ ಮೌನಕ್ಕೆ ಶರಣಾಗಿದ್ದಾಗ ಅಕ್ರಮ ಸಂಪತ್ತು, ವರ್ಗಾವಣೆ ದಂಧೆ ಬಗ್ಗೆ ಧ್ವನಿ ಎತ್ತಿದ್ದು ನಾನು. ನಾನು ಇಲ್ಲಿವರೆಗೂ ಏನು ಹೇಳಿದ್ದೇನೆ ಸರ್ಕಾರ ಒಂದಕ್ಕೂ ಉತ್ತರ ಕೊಟ್ಟಿಲ್ಲ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದರು.
ರಾಮನಗರ: ಬರದ ವಿಚಾರವಾಗಿ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ರೈತರಿಗೆ ಯಾವುದೇ ಪರಿಹಾರ ಹಣವನ್ನು ಇನ್ನೂ ಕೊಟ್ಟಿಲ್ಲ. ರಾಜ್ಯದಲ್ಲಿ ಈ ವರ್ಷದಲ್ಲಿ 33,700 ಕೋಟಿ ರೂ. ಬೆಳೆ ನಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಹೇಳಿದರು.
ಮಂಡ್ಯ: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಈ ರಾಜ್ಯದ ಜವಾಬ್ದಾರಿ ಹಾಗೂ ಜನರ ಸಮಸ್ಯೆ ಮುಖ್ಯ ಅಲ್ಲ. ಕುಮಾರಸ್ವಾಮಿ ಯಾವತ್ತು ಜನರ ಸಮಸ್ಯೆ ಬಗ್ಗೆ ಮಾತಾಡಿಲ್ಲ. ಎರಡು ಮೂರು ತಿಂಗಳಿನಿಂದ ಹಿಡಿತ ಇಲ್ಲದೇ ಮಾತಾಡುತ್ತಿದ್ದಾರೆ. ಅವರ ರೀತಿ ಮಾತನಾಡುವುದು ಸರಿ ಅಂದರೇ ನಾನು ಅವರಪ್ಪನ ರೀತಿ ಮಾತಾಡುತ್ತೇನೆ. ಅವರಿಗೆ ಯಾವ ಸಚಿವರು ಕರೆ ಮಾಡಿದ್ದಾರೆ ಅಂತ ದಾಖಲೆ ಬಿಡುಗಡೆ ಮಾಡಲಿ. ಅವರ ಬಳಿ ಇರುವ ಪೆನ್ ಡ್ರೈವ್ ಬಿಡುಗಡೆ ಮಾಡಲು. ಆದರೆ ಈಗ ಮಂತ್ರಿಗಳು ಕರೆ ಮಾಡಿ ಬಿಡುಗಡೆ ಮಾಡಬೇಡಿ ಅಂತಾ ಹೇಳಿದ್ದಾರೆ ಅಂತಾರೆ. ಅದ್ಯಾವ ಮಂತ್ರಿ ಅಂತಾ ಹೇಳಲಿ. ಅವರ ಹತ್ತಿರ ಇರುವುದು ಪೆನ್ ಡ್ರೈವ್ ಅಲ್ಲ ಪೆನ್ಸಿಲ್ ಡ್ರೈವ್, ಇರೋದು ಅಳಿಸಿ ಹೋಗಿದೆ ಎಂದು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ಮಾಡಿದರು.
ಬೆಂಗಳೂರು: 2028ರಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಲೋಕಸಭೆ ಚುನಾವಣೆ ಸಂಬಂಧ ಈಗಾಗಲೇ ಸಭೆ ಮಾಡುತ್ತಿದ್ದೇವೆ. ಕೆಲ ಸಚಿವರಿಗೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂಬ ಆಸೆ ಇದೆ. ನನಗೂ ಕೂಡ ಪಾರ್ಲಿಮೆಂಟ್ಗೆ ಹೋಗಬೇಕು ಎಂಬ ಆಸೆ ಇದೆ. ಕಾಂಗ್ರೆಸ್ ಜನರ ಬದುಕಿನ ಬಗ್ಗೆ ಯೋಚಿಸುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಸಿಎಂ ಆಗುವುದು ನೂರಕ್ಕೆ ನೂರರಷ್ಟು ಸತ್ಯ. ಸತೀಶ್ ಜಾರಕಿಹೊಳಿ ಪ್ರಭಾವಿ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ. ಸತೀಶ್ ಜಾರಕಿಹೊಳಿಯನ್ನು ಸಿಎಂ ಆಗಿ ನೋಡಬೇಕೆಂದು ಹೇಳುತ್ತಿದ್ದಾರೆ. ಮುಂದಿನ ದಿನದಲ್ಲಿ ಬೆಳಗಾವಿ ಗಡಿ ಭಾಗದಿಂದ ಒಬ್ಬ ಸಿಎಂ ಆಗುತ್ತಾರೆ. ಪೂರ್ವ ದಿಕ್ಕಿನಲ್ಲಿ ಸೂರ್ಯ ಹುಟ್ಟುವುದು ಎಷ್ಟೋ ಸತ್ಯವೋ, ಸತೀಶ್ ಜಾರಕಿಹೊಳಿ ಅಣ್ಣ ಸಿಎಂ ಆಗುವುದು ಕೂಡ ಅಷ್ಟೇ ಸತ್ಯ ಎಂದು ಕಾಂಗ್ರೆಸ್ ಶಾಸಕ ವಿಶ್ವಾಸ್ ವೈದ್ಯ ಹೇಳಿದ್ದಾರೆ.
ಬೆಂಗಳೂರು: ಅಧಿಕಾರ ಹಂಚಿಕೆ ನನಗೆ, ಸಿಎಂ, ವರಿಷ್ಠರಿಗೆ ಸಂಬಂಧಪಟ್ಟ ವಿಚಾರ. ಈ ಹಿಂದೆ ಬಿಜೆಪಿಯವರು ನಮ್ಮ ಗ್ಯಾರಂಟಿ ಬಗ್ಗೆ ಟೀಕೆ ಮಾಡುತ್ತಿದ್ದರು. ಆದರೆ ಈಗ ಅವರೇ ನಮ್ಮ ಗ್ಯಾರಂಟಿ ಯೋಜನೆ ಕಾಪಿ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರು: ಇವರೆಲ್ಲಾ ಬ್ಲೂಫಿಲಂ ತೋರಿಸಿ ಮೇಲೆ ಬಂದವರು ಎಂಬ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಾನು ಬ್ಲೂಫಿಲಂ ತೋರಿಸಿದ್ದನ್ನು ಸಾಬೀತು ಮಾಡಿದರೇ ರಾಜಕೀಯದಿಂದ ನಿವೃತ್ತಿಯಾಗುವೆ ಎಂದು ಟಿವಿ9 ಸಂದರ್ಶನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ಕಲಬುರಗಿ: ವಿಪಕ್ಷ ನಾಯಕ ಆರ್ ಅಶೋಕ ಅವರು ಇಂದು (ನ.21) ಕಲಬುರಗಿ ಜಿಲ್ಲೆಯಲ್ಲಿಂದು ಬರ ವೀಕ್ಷಣೆ ಮಾಡಲಿದ್ದಾರೆ. ವಿಪಕ್ಷ ನಾಯಕರಾದ ಬಳಿಕ ಮೊದಲ ಬಾರಿಗೆ ಕಲಬುರಗಿ ಪ್ರವಾಸ ಕೈಗೊಂಡಿದ್ದು, ಬೆಳಿಗ್ಗೆ 9:30ಕ್ಕೆ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಅಲ್ಲಿಂದ ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ಶ್ರೀನಿವಾಸ ಸರಡಗಿಯಲ್ಲಿ ಬರ ವೀಕ್ಷಣೆ ಮಾಡುತ್ತಾರೆ. ಬಳಿಕ ಆಳಂದ ತಾಲೂಕಿಗೆ ಭೇಟಿ ನೀಡಿ ಕಡಗಂಚಿ ಗ್ರಾಮದಲ್ಲಿ ಬರ ವೀಕ್ಷಣೆ ಮಾಡಲಿದ್ದಾರೆ. ನಂತರ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಸಂಜೆ 4:30 ಕಲಬುರಗಿ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ, ಕಾರ್ಯಕರ್ತರ ಜೊತೆ ಸಭೆ ಮಾಡಲಿದ್ದಾರೆ. ಬಳಿಕ ಬೀದರ್ಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಮತ್ತೆ ಪೋಸ್ಟರ್ ವಾರ್ ಶುರುವಾಗಿದೆ. ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಕೆರಳಿದ ದುಷ್ಕರ್ಮಿಗಳು, ಸಿನಿಮಾ ಮಾದರಿಯ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು. ನಗರದ ಶೇಷಾದ್ರಿಪುರ ರಸ್ತೆ, ರಾಜಾಜಿನಗರ ಸೇರಿದಂತೆ ವಿವಿಧೆಡೆ ಪೋಸ್ಟರ್ ಅಂಟಿಸಿದ್ದಾರೆ. ಕರೆಂಟ್ ಕಳ್ಳ ಖ್ಯಾತಿಯ ಹೆಚ್ಡಿಕೆ ನಿರ್ಮಾಣದ ಚಿತ್ರ “ಪೆನ್ ಡ್ರೈವ್ ಬ್ರದರ್” ಪ್ರಾಮಾಣಿಕ ಕರೆಂಟ್ ಕಳ್ಳ ಖ್ಯಾತಿಯ ನಿರ್ದೇಶನ, ಬರೀ ಟೀಸರ್ ಗೆ ಇಷ್ಟೊಂದು ಟೆನ್ಶನ್ ಆದರೆ ಹೇಗೆ ಸಿನಿಮಾ ಇನ್ನೂ ಬಾಕಿಯಿದೆ. ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆ. ಚಿತ್ರದ ನಿರ್ಮಾಣದ ವೆಚ್ಚ 68,000 ಎಂದು ಪೋಸ್ಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.
Published On - 8:07 am, Tue, 21 November 23