Karnataka Budget 2023: ಸುದೀರ್ಘ ಬಜೆಟ್ ಭಾಷಣ ಮಾಡಿದ ಸಿದ್ದರಾಮಯ್ಯ; ಸುಮಾರು 3 ಗಂಟೆ ಆಯವ್ಯಯ ಓದಿದ ಸಿಎಂ

ಫೆಬ್ರವರಿಯಲ್ಲಿ ಪೂರಕ ಬಜೆಟ್​ ಮಂಡನೆ ಮಾಡಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಮಾರು 2.40 ಗಂಟೆ ಬಜೆಟ್ ಭಾಷಣ ಓದಿದ್ದರು.

Karnataka Budget 2023: ಸುದೀರ್ಘ ಬಜೆಟ್ ಭಾಷಣ ಮಾಡಿದ ಸಿದ್ದರಾಮಯ್ಯ; ಸುಮಾರು 3 ಗಂಟೆ ಆಯವ್ಯಯ ಓದಿದ ಸಿಎಂ
ಸಿದ್ದರಾಮಯ್ಯ
Follow us
| Updated By: ಗಣಪತಿ ಶರ್ಮ

Updated on:Jul 07, 2023 | 3:41 PM

ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ದಾಖಲೆಯ 14ನೇ ಬಾರಿ ಬಜೆಟ್ (Karnataka Budget 2023) ಮಂಡನೆ ಮಾಡಿದರು. ಮುಖ್ಯಮಂತ್ರಿಯಾಗಿ ಏಳನೇ ಹಾಗೂ ಒಟ್ಟಾರೆಯಾಗಿ ಹದಿನಾಲ್ಕನೇ ಬಜೆಟ್ ಮಂಡನೆ ಮಾಡಿದ ಅವರು, ಸುದೀರ್ಘ ಬಜೆಟ್​ ಭಾಷಣ ಮಾಡಿದರು. ಮಧ್ಯಾಹ್ನ 12 ಗಂಟೆಗೆ ಬಜೆಟ್ ಓದಲು ಆರಂಭಿಸಿದ ಸಿದ್ದರಾಮಯ್ಯ, 2.50ಕ್ಕೆ ಸರಿಯಾಗಿ ಭಾಷಣ ಮುಕ್ತಾಯಗೊಳಿಸಿದರು. ಈ ಆಯವ್ಯಯವನ್ನು ಸದನದ ಪರಿಗಣನೆಗಾಗಿ ಮಂಡಿಸುತ್ತಿದ್ದೇನೆ. 2024ರ ಮಾರ್ಚ್ 31ರ ವರೆಗಿನ ಲೇಖಾನುದಾನವನ್ನು ಕೋರುತ್ತಿದ್ದೇನೆ. ಜೈ ಹಿಂದ್, ಜೈ ಕರ್ನಾಟಕ ಎಂದು ಸಿದ್ದರಾಮಯ್ಯ ಭಾಷಣ ಮುಗಿಸಿದರು.

ಫೆಬ್ರವರಿಯಲ್ಲಿ ಪೂರಕ ಬಜೆಟ್​ ಮಂಡನೆ ಮಾಡಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಮಾರು 2.40 ಗಂಟೆ ಬಜೆಟ್ ಭಾಷಣ ಓದಿದ್ದರು. ಇದೀಗ ಸಿದ್ದರಾಮಯ್ಯ ಅದನ್ನು ಮೀರಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020-21ನೇ ಸಾಲಿನ ಬಜೆಟ್​ ಭಾಷಣವನ್ನು 2.42 ಗಂಟೆ ಓದಿದ್ದರು. ಕೇಂದ್ರದಲ್ಲಿ ಇದುವೇ ಸುದೀರ್ಘ ಬಜೆಟ್ ಭಾಷಣ ಎಂದು ಹೇಳಲಾಗಿತ್ತು. 2019ರಲ್ಲಿ ಅವರು 2 ಗಂಟೆ 17 ನಿಮಿಷ ಬಜೆಟ್ ಭಾಷಣ ಓದಿದ್ದರು. ಸುದೀರ್ಘ ಅವಧಿ ಬಜೆಟ್ ಭಾಷಣ ಓದಿದ್ದರೂ ಪದಗಳ ಆಧಾರದಲ್ಲಿ ನಿರ್ಮಲಾ ಅವರ ಬಜೆಟ್ ದೊಡ್ಡ ಗಾತ್ರದ್ದಾಗಿರಲಿಲ್ಲ.

ಇದನ್ನೂ ಓದಿ: Karnataka Budget 2023: ಸಿದ್ದರಾಮಯ್ಯ ಬಜೆಟ್​​ನಲ್ಲಿ ಯಾವುದಕ್ಕೆಲ್ಲ ತೆರಿಗೆ ಹೆಚ್ಚಳ? ಇಲ್ಲಿದೆ ವಿವರ

ಪದಗಳ ಲೆಕ್ಕಾಚಾರದ ಪ್ರಕಾರ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಅತಿದೊಡ್ಡ ಬಜೆಟ್ ಮಂಡನೆ ಮಾಡಿದ್ದರು. 1991ರಲ್ಲಿ ಕೇಂದ್ರದಲ್ಲಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಮಂಡನೆ ಮಾಡಿದ್ದ ಬಜೆಟ್ 18,650 ಪದಗಳನ್ನು ಹೊಂದಿತ್ತು. 2018ರಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಬಜೆಟ್ ಭಾಷಣದಲ್ಲಿ 18,604 ಪದಗಳಿದ್ದವು

ಇನ್ನಷ್ಟು ಕರ್ನಾಟಕ ಬಜೆಟ್ 2023 ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:33 pm, Fri, 7 July 23