SC-ST, OBC: ಕರ್ನಾಟಕ ಬಜೆಟ್: ದಲಿತರು, ಹಿಂದುಳಿದವರಿಗೆ ಸಿಕ್ಕಿದ್ದೇನು? ಇಲ್ಲಿದೆ ಹೈಲೈಟ್ಸ್

Karnataka Budget 2024: ಕ್ರೈಸ್ ಅಡಿಯಲ್ಲಿ ಎಸ್​ಸಿ ಮತ್ತು ಎಸ್​​ಟಿ ಸಮುದಾಯಗಳಿಗೆ 638 ಕೋಟಿ ರೂ ವೆಚ್ಚದಲ್ಲಿ 29 ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣ ಮಾಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಸತಿ ಶಾಲೆ, ಹಾಸ್ಟೆಲ್​ಗಳ ನಿರ್ಮಾಣಕ್ಕೆ 2,710 ಕೋಟಿ ರೂ ಅನುದಾನ. ಪರಿಶಿಷ್ಟ ಪಂಗಡದವರಿಗೆ ಡ್ರೋನ್ ಆಧಾರಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ನೀಡಲಾವುದು ಎಂದು ಕರ್ನಾಟಕ ಬಜೆಟ್​ನಲ್ಲಿ ತಿಳಿಸಲಾಗಿದೆ.

SC-ST, OBC: ಕರ್ನಾಟಕ ಬಜೆಟ್: ದಲಿತರು, ಹಿಂದುಳಿದವರಿಗೆ ಸಿಕ್ಕಿದ್ದೇನು? ಇಲ್ಲಿದೆ ಹೈಲೈಟ್ಸ್
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 16, 2024 | 12:41 PM

ಬೆಂಗಳೂರು, ಫೆಬ್ರುವರಿ 16: ಸಿದ್ದರಾಮಯ್ಯ ತಮ್ಮ 15ನೇ ಬಜೆಟ್​ನಲ್ಲಿ ಹಿಂದುಳಿದ ವರ್ಗಗಳು ಮತ್ತು ಪರಿಶಿಷ್ಟ ಜಾತಿ ಹಾಗು ಪಂಗಡಗಳಿಗೆ (Scheduled Caste and Scheduled Tribes) ಇತಿಮಿತಿಯಲ್ಲೇ ಒಂದಷ್ಟು ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ. ಕ್ರೈಸ್ ಯೋಜನೆ ಅಡಿಯಲ್ಲಿ 20 ಜಿಲ್ಲೆಗಳಲ್ಲಿ ಹೊಸ ವಸತಿ ಶಾಲೆಗಳನ್ನು (residential schools) ಸ್ಥಾಪಿಸಲಾಗುತ್ತಿದೆ. 29 ವಸತಿ ಸಂಕೀರ್ಣಗಳ ನಿರ್ಮಾಣವಾಗಲಿದೆ. ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳ (hostels) ಸ್ಥಾಪನೆಗೆ 2,710 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಹಿಂದುಳಿದವರು, ಎಸ್​ಸಿ ಮತ್ತು ಎಸ್​ಟಿ ಸಮುದಾಯಗಳಿಗೆ ಈ ಬಜೆಟ್​ನಲ್ಲಿ ಏನೇನು ಸಿಕ್ಕಿದೆ ಎಂಬ ವಿವರ ಇಲ್ಲಿದೆ…

ಎಸ್​ಸಿ, ಎಸ್​ಟಿ, ಹಿಂದುಳಿದವರಿಗೆ ಸಿದ್ದರಾಮಯ್ಯ ಬಜೆಟ್​ನಲ್ಲಿ ಸಿಕ್ಕಿರುವುದು

  • ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಕ್ರೈಸ್ ಅಡಿಯಲ್ಲಿ 29 ವಸತಿ ಶಾಲಾ ಸಂಕೀರ್ಣಗಳ ನಿರ್ಮಾಣ; 638 ಕೋಟಿ ರೂ ಅಂದಾಜು ವೆಚ್ಚ
  • ಎಸ್​ಸಿ, ಎಸ್​ಟಿ, ಹಿಂದುಳಿದ ವರ್ಗ ಹಾಗು ಅಲ್ಪಸಂಖ್ಯಾತರ ವಸತಿ ಶಾಲೆ ಹಾಗೂ ಹಾಸ್ಟೆಲ್​ಗಳ ನಿರ್ಮಾಣಕ್ಕೆ 2,710 ಕೋಟಿ ರೂ ಅನುದಾನ
  • 18 ಹಾಸ್ಟೆಲ್​ಗಳಿಗೆ ಸ್ವಂತ ಕಟ್ಟಡ; ಮೆಟ್ರಿಕ್ ನಂತರದ 31 ಹೊಸ ವಸತಿನಿಲಯ ಮಂಜೂರಿಗೆ ಕ್ರಮ
  • ಎಸ್​ಸಿ ಮತ್ತು ಎಸ್​ಟಿ ಜನರಿಗೆ ದುಬಾರಿ ವೆಚ್ಚದ ಚಿಕಿತ್ಸೆಗೆ 35 ಕೋಟಿ ರೂ ಕಾರ್ಪಸ್ ಫಂಡ್

ಇದನ್ನೂ ಓದಿ: ಕರ್ನಾಟಕ ಬಜೆಟ್​ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಮೀಸಲಿಟ್ಟಿದ್ದೇನು, ಇಲ್ಲಿದೆ ಮಾಹಿತಿ

  • ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಡಿ ಇರುವ ಆಶ್ರಮ ಶಾಲೆಗಳಿಗೆ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆ ಎಂದು ಮರುನಾಮಕಾರಣ ಮಾಡಲಾಗುವುದು.
  • ಬುಡಕಟ್ಟು ವಸತಿ ಶಾಲೆಯಲ್ಲಿ ಸದ್ಯ 5 ಮತ್ತು 7ನೇ ತರಗತಿ ನಡೆಯುತ್ತಿದೆ. ಆರನೇ ಮತ್ತು ಎಂಟನೇ ತರಗತಿ ಪ್ರಾರಂಭಿಸುವ ಕ್ರಮ ಕೈಗೊಳ್ಳಲಾಗುವುದು. ಪ್ರತೀ ತರಗತಿಯ ಸಂಖ್ಯಾಬಲ 25ರಿಂದ 40ಕ್ಕೆ ಹೆಚ್ಚಳಕ್ಕೆ ಗುರಿ ಇಡಲಾಗಿದೆ.
  • ಐಐಎಸ್​ಸಿ, ಐಐಟಿ ಮತ್ತು ಎನ್​ಐಟಿ ಸಂಸ್ಥೆಗಳ ಮೂಲಕ ವೃತ್ತಿಪರ ತರಬೇತಿ ಕೋರ್ಸ್​ಗೆ ದಾಖಲಾಗುವ ಎಸ್​​ಟಿ ಪಂಗಡದ ಎಂಜಿನಿಯರಿಂಗ್ ಪದವೀಧರರಿಗೆ 15,000 ರೂ ಸ್ಕಾಲರ್​​ಶಿಪ್ ನೀಡಲಾಗುವುದು.
  • ಪರಿಶಿಷ್ಟ ಪಂಗಡಗಳಿಗೆ ಸೇರಿದ 5,000 ಮಂದಿಗೆ ಡ್ರೋನ್ ಆಧಾರಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ ಕೊಡಲಾಗುವುದು.
  • ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮಾಡುವ 100 ಎಸ್​ಟಿ ವಿದ್ಯಾರ್ಥಿಗಳಿಗೆ 25,000 ರೂ ಸ್ಕಾಲರ್​ಶಿಪ್.
  • 23 ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ ಮಕ್ಕಳಿಗೆ ಪ್ರತೀ ವಸತಿ ಶಾಲೆಯಲ್ಲಿ 20 ಸೀಟು ಮೀಸಲು.
  • ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಎ, ಸಿಎಲ್​ಎಟಿ, ಎಂಎಟಿ ಫೌಂಡೇಶನ್ ಪರೀಕ್ಷಾ ಪೂರ್ವ ತರಬೇತಿ
  • 500 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎರಡು ವರ್ಷಗಳ ಜೆಇಇ/ಎನ್​ಇಇಟಿಗೆ ಉಚಿತ ತರಬೇತಿ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ