ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳ ಉಪಚುನಾವಣೆ ಚುನಾವಣೋತ್ತರ ಸಮೀಕ್ಷೆ: NDA, ಕೈಗೆ ಎಷ್ಟು ಸ್ಥಾನ?

| Updated By: Digi Tech Desk

Updated on: Nov 20, 2024 | 8:25 PM

Karnataka By-Election Exit Poll: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭೆ ಮತದಾನಕ್ಕೆ ತೆರೆ ಬಿದ್ದಿದೆ. ಮತದಾನದ ಬೆನ್ನಲ್ಲೆ ಚುನಾವಣೋತ್ತರ ಸಮೀಕ್ಷೆಗಳ ಭವಿಷ್ಯವೂ ಹೊರ ಬಿದ್ದಿದೆ. ತೀವ್ರ ಜಿದ್ದಾಜಿದ್ದಿನಿಂದ ಕೂಡಿದ ಎರಡು ರಾಜ್ಯದಲ್ಲಿ ಎನ್​ಡಿಎ ಹೆಚ್ಚಿನ ಸ್ಥಾನ ಗೆಲ್ಲಬಹುದು ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದರ ಜೊತೆ ಕರ್ನಾಟಕ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಮೀಕ್ಷ ಸಹ ಹೊರಬಿದ್ದಿದೆ. ಹಾಗಾದ್ರೆ, ಯಾರು ಎಷ್ಟು ಗೆಲ್ಲಲಿದ್ದಾರೆ ಎನ್ನುವ ವಿವರ ಇಲ್ಲಿದೆ.

ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರಗಳ ಉಪಚುನಾವಣೆ ಚುನಾವಣೋತ್ತರ ಸಮೀಕ್ಷೆ: NDA, ಕೈಗೆ ಎಷ್ಟು ಸ್ಥಾನ?
Follow us on

ಬೆಂಗಳೂರು, (ನವೆಂಬರ್ 20): ಕರ್ನಾಟಕದ ಮೂರು ಕ್ಷೇತ್ರಗಳ ಬೈ ಎಲೆಕ್ಷನ್‌ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಬಿಜೆಪಿ – ಜೆಡಿಎಸ್‌ ಮೈತ್ರಿಗೆ ಪ್ರತಿಷ್ಠೆಯಾಗಿದೆ. ಮೂರು ಕ್ಷೇತ್ರಗಳಲ್ಲೂ ಮತದಾನ ಮುಗಿದಿದ್ದು, ಫಲಿತಾಂಶ ನವೆಂಬರ್‌ 23ಕ್ಕೆ ಪ್ರಕಟ ಆಗಲಿದೆ. ಈಗಾಗಲೇ ಬೈ ಎಲೆಕ್ಷನ್‌  ಫಲಿತಾಂಶದ ಬಗ್ಗೆ ಕುತೂಹಲ ಸೃಷ್ಟಿಯಾಗಿದ್ದು, ರಾಜಕೀಯ ಪಕ್ಷಗಳ ಪಡಸಾಲೆಯಲ್ಲಿ ನಾನಾ ಲೆಕ್ಕಾಚಾರ ಶುರುವಾಗಿದೆ.  ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ನವೆಂಬರ್ 23ರಂದು ಪ್ರಕಟವಾಗಲಿರುವ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದಕ್ಕೂ ಮೊದಲು ಚನ್ನಪಟ್ಟಣ ಹಾಗೂ ಶಿಗ್ಗಾಂವಿಯಲ್ಲಿ ಬಿಜೆಪಿ ಗೆದ್ದರೆ, ಸಂಡೂರಿನಲ್ಲಿ ಮತ್ತೆ ಕಾಂಗ್ರೆಸ್ ಗೆಲುವು ಸಾಧಿಸಬಹುದು ಎನ್ನುವ ಚರ್ಚೆಗಳು ನಡೆದಿವೆ. ಇದರ ಮಧ್ಯ ಇದೀಗ  ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಪಿಮಾರ್ಕ್​ ಸಮೀಕ್ಷೆ ಪ್ರಕಾರ ಮೂರು ಕ್ಷೇತ್ರಗಳ ಪೈಕಿ ಎನ್​ಡಿಎ 2 ಹಾಗೂ ಕಾಂಗ್ರೆಸ್ 1 ಸ್ಥಾನ ಗೆಲ್ಲಲಿದೆ. ಈ ಮೂಲಕ ಚನ್ನಪಟ್ಟಣ ಹಾಗೂ ಶಿಗ್ಗಾಂವಿಯನ್ನು ಜೆಡಿಎಸ್​ ಮತ್ತು ಬಿಜೆಪಿ ವಶಪಡಿಸಿಕೊಳ್ವುಳುವ ಸಾಧ್ಯತೆಗಳಿವೆ. ಇನ್ನು ಸಂಡೂರು ಕ್ಷೇತ್ರವನ್ನು ಕೈವಶವಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ: Maharashtra Exit Poll: ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುತ್ತಾ ಬಿಜೆಪಿ ಮೈತ್ರಿಕೂಟ?; ಎಕ್ಸಿಟ್​ ಪೋಲ್​ನಲ್ಲಿ ಮಹಾಯುತಿಗೆ ಮುನ್ನಡೆ

ಆಡಳಿತರೂಢ ಕಾಂಗ್ರೆಸ್‌ ಮೂರು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಇತ್ತ ಬಿಜೆಪಿ – ಜೆಡಿಎಸ್‌ ಮೈತ್ರಿ ಕೂಡ ಮೂರು ಕ್ಷೇತ್ರಗಳಲ್ಲೂ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುತ್ತಿದೆ. ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ಗೆಲ್ಲುವುದು ಪಕ್ಕಾ. ಇನ್ನು ಸಂಡೂರಿನಲ್ಲಿ ಈ ಬಾರಿ ಹೊಸ ಬದಲಾವಣೆ ಬಯಸಿ ಜನ ಎನ್​ಡಿಎಗೆ ಆಶೀರ್ವಾದ ಮಾಡಿದ್ದಾರೆ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ನಾಯಕರು ಇದ್ದಾರೆ.

ಬೈ ಎಲೆಕ್ಷನ್‌ ನಡೆದಿರುವ ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಲ್ಲಿ ಈ ಮೊದಲು ಕ್ರಮವಾಗಿ ಜೆಡಿಎಸ್‌, ಬಿಜೆಪಿ, ಕಾಂಗ್ರೆಸ್‌ ಶಾಸಕರಿದ್ದರು. ಅದೇ ರೀತಿ ಈಗ ನಡೆದಿರುವ ಉಪ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ಒಂದೊಂದು ಸ್ಥಾನದ ಸಾಧ್ಯತೆ ಬಗ್ಗೆ ಗುಪ್ತಚರ ವಿಭಾಗ ಅಂದಾಜಿಸಿದೆ ಎಂದು ತಿಳಿದುಬಂದಿದೆ. ಶಿಗ್ಗಾಂವಿಯಲ್ಲಿ ಬಿಜೆಪಿ, ಸಂಡೂರಿನಲ್ಲಿ ಕಾಂಗ್ರೆಸ್‌, ಚನ್ನಪಟ್ಟಣದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಮುನ್ನಡೆಯಾಗಿದೆ ಎನ್ನುವುದು ಗುಪ್ತಚರ ವಿಭಾಗ ನೀಡಿರುವ ವರದಿ ಹೇಳುತ್ತಿವೆ ಎನ್ನಲಾಗಿದೆ.

ಒಟ್ಟಿನಲ್ಲಿ ಈ ಬಾರಿ ಮೂರು ಕ್ಷೇತ್ರಗಳ ಉಪಚುನಾವಣೆ ಭಾರೀ ಜಿದ್ದಾಜಿದ್ದಿಯಿಂದ ನಡೆದಿದ್ದು, ಯಾರು ಗೆಲ್ಲಲಿದ್ದಾರೆ? ಯಾರು ಸೋಲಲಿದ್ದಾರೆ ಎನ್ನುವುದನ್ನು ನವೆಂಬರ್ 23ರಂದು ಗೊತ್ತಾಗಲಿದೆ.

Published On - 7:57 pm, Wed, 20 November 24