ನಕ್ಸಲ್​ ವಿಕ್ರಂಗೌಡ ಎನ್​ಕೌಂಟರ್​ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಜಿಪಿ ಪ್ರಣಬ್ ಮೊಹಂತಿ

ನೇತ್ರಾವತಿ ದಳದ ನಕ್ಸಲ್ ನಾಯಕ ವಿಕ್ರಂಗೌಡನನ್ನು ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಪೀತೆಬೈಲ್ ಅರಣ್ಯದಲ್ಲಿ ಕೊಂದುಹಾಕಲಾಗಿದೆ. ನಕ್ಸಲ್ ನಿಗ್ರಹ ಪಡೆ ಹಾರಿಸಿದ ಎಕೆ 47ನ 3 ಗುಂಡುಗಳು ವಿಕ್ರಂಗೌಡನ ದೇಹ ಸೀಳಿವೆ. ಇನ್ನು ಈ ಬಗ್ಗೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಅವರು ಉಡುಪಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ನಕ್ಸಲ್ ವಿಕ್ರಂ ಗೌಡ ಎನ್ ಕೌಂಟರ್ ಪ್ರಕರಣದ ಬಗ್ಗೆ ಕೆಲವೊಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.

ನಕ್ಸಲ್​ ವಿಕ್ರಂಗೌಡ ಎನ್​ಕೌಂಟರ್​ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಿಜಿಪಿ ಪ್ರಣಬ್ ಮೊಹಂತಿ
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ರಮೇಶ್ ಬಿ. ಜವಳಗೇರಾ

Updated on:Nov 20, 2024 | 8:19 PM

ಬೆಂಗಳೂರು, (ನವೆಂಬರ್ 20): ನಕ್ಸಲ್ ನಾಯಕ ವಿಕ್ರಂಗೌಡ ಎನ್​ಕೌಂಟರ್​ ಸಂಬಂಧ ಸ್ಥಳಕ್ಕೆ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಜೆ 6 ಸುಮಾರಿಗೆ ಗುಂಡಿನ ಚಕಮಕಿ ನಡೆದಿದೆ. ಕಾಡು ಪ್ರದೇಶದಲ್ಲಿ ಎರಡು ಮೂರು ಮನೆ ಇತ್ತು. ನಕ್ಸಲ್ ಪೊಲೀಸ್ ಮುಖಾಮುಖಿಯಲ್ಲಿ ಎನ್ ಕೌಂಟರ್ ಆಗಿದೆ. ಈ ಎನ್​ಕೌಂಟರ್ ನಲ್ಲಿ ಯಾವುದೇ ಸಂಶಯ ಬೇಡ. ಪ್ಲ್ಯಾನ್ ಮಾಡಿ ಎನ್​ಕೌಂಟರ್ ಮಾಡಿಲ್ಲ. ಇದೊಂದು ಪರ್ಫೆಕ್ಟ್ ಎನ್​ಕೌಂಟರ್ ಎಂದು ಸ್ಪಷ್ಟಪಡಿಸಿದರು.

ಇದೊಂದು ಪರ್ಫೆಕ್ಟ್ ಎನ್​ಕೌಂಟರ್

ಮನೆಗಳನ್ನು ಖಾಲಿ ಮಾಡೋದು ಕಳುಹಿಸೋದು ನಮ್ಮ ಕೆಲಸ ಅಲ್ಲ. ಇನ್ನು ವಿಕ್ರಂ ಗೌಡ ಬಳಿ ಮಷೀನ್ ಗನ್, ಪಿಸ್ತೂಲ್​ ಹಾಗೂ ಚಾಕು ಸಿಕ್ಕಿದೆ. ಪ್ಲ್ಯಾನ್ ಮಾಡಿ ಎನ್​ಕೌಂಟರ್ ಮಾಡಿಲ್ಲ. ಇದೊಂದು ಪರ್ಫೆಕ್ಟ್ ಎನ್​ಕೌಂಟರ್. ವಿಕ್ರಂ ಗೌಡ ಶರಣಾಗತಿಗೆ ಯಾವುದೇ ಪತ್ರ ವ್ಯವಹಾರ ಮಾಡಿರಲಿಲ್ಲ. ವಿಕ್ರಂ ಗೌಡ ಅಲ್ಲ ಎಂಬುವುದು ಪ್ರಶ್ನೆಯೇ ಅಲ್ಲ. ಫೇಕ್ ಎನ್ ಕೌಂಟರ್ ಅಲ್ಲ. ಸಾಧಾರಣ ಕತ್ತಲಾಗಿರುವ ವಾತಾವರಣ ಆಗಿತ್ತು. ಹೀಗಾಗಿ ಎಷ್ಟು ಜನ ಇದ್ದರು ಎಂದು ಎಎನ್​ಫ್​ಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ನಕ್ಸಲ್ ವಿಕ್ರಂ ಗೌಡ ಪೊಲೀಸ್ ಬಲೆಗೆ ಬಿದ್ದಿದ್ಹೇಗೆ? ರೋಚಕ ಕಾರ್ಯಾಚರಣೆಯ ರಹಸ್ಯ ಇಲ್ಲಿದೆ

ಪ್ಯಾಕೇಜ್ ಬಳಸಿಕೊಳ್ಳುವಂತೆ ನಕ್ಸಲರಿಗೆ ಕಿವಿಮಾತು

ಕಾಡು, ಗ್ರಾಮ ಸುತ್ತಮುತ್ತಲಿನ ಜಿಲ್ಲೆಯಲ್ಲಿ ಕೂಂಬಿಂಗ್ ನಡೆಸುತ್ತಿದ್ದೇವೆ. ವಿಕ್ರಂ ಮೇಲೆ ಹಲವಾರು ಕೇಸುಗಳಿದ್ದವು. ಮೋಸ್ಟ್ ವಾಂಟೆಡ್, ನಕ್ಸಲ್ ಮೂಮೆಂಟ್ ನಾಯಕನಾಗಿದ್ದ. ಎನ್ ಕೌಂಟರ್ ಅಲ್ಲ, ಶರಣಾಗತಿ ನಮ್ಮ ಮೂಲ ಉದ್ದೇಶ. ಶರಣಾಗತಿಗೆ ನೂರಾರು ದಾರಿಗಳು ಇದೆ. ಸೆರೆಂಡರ್ ಪ್ಯಾಕೇಜ್, ಪುನರ್ವಸತಿ ಪ್ಯಾಕೇಜ್ ಇವೆ ಬಳಸಿಕೊಳ್ಳಬಹುದು ಎಂದು ನಕ್ಸಲರಿಗೆ ಕಿವಿ ಮಾತು ಹೇಳಿದರು.

ವಿಕ್ರಂ ಗೌಡನ ಹೊಸ ದಾಖಲೆಗಳು ಇದ್ದವು

ನಮ್ಮ ಜೊತೆ ವಿಕ್ರಂಗೌಡನ ರೀಸೆಂಟ್ ಫೋಟೋ ಇದೆ. ಎಎಎನ್ ಎಫ್ ಬಳಿ ಎಲ್ಲಾ ಹೊಸ ದಾಖಲೆಗಳು ಇವೆ. ಈ ಮೂಲಕ ವಿಕ್ರಮ್ ಗೌಡ ಎಂಬುವುದನ್ನು ತಕ್ಷಣ ಪತ್ತೆ ಮಾಡಲಾಗಿದೆ ಎಂದರು. ಈ ಮೂಲಕ ಎನ್​ಕೌಂಟರ್​ನಲ್ಲಿ ಹತನಾದವನ್ನು ವಿಕ್ರಂಗೌಡ ಎನ್ನುವುದನ್ನು ಅಷ್ಟು ಬೇಗ ಹೇಗೆ ಗುರುತಿಸಲಾಯ್ತು ಎನ್ನುವ ಬಗ್ಗೆ ಸ್ಪಷ್ಟನೆ ನೀಡಿದರು.

ಪೂರ್ವ ನಿಯೋಜಿತ ಅಲ್ಲ. ಎನ್ ಕೌಂಟರ್ ಮಾಡುವ ಅವಕಾಶ ಆಯ್ತು. ದಿನಸಿಗೆ ಬಂದಿದ್ದನೋ ಯಾಕೆ ಬಂದಿದ್ದ ನಮಗೆ ಗೊತ್ತಿಲ್ಲ. ಎಷ್ಟು ಗುಂಡು ಬಿದ್ದಿದೆ ಗೊತ್ತಿಲ್ಲ, ಪೋಸ್ಟ್ ಮಾರ್ಟಂ ವರದಿ ಬರಬೇಕಿದೆ. ವಿಕ್ರಂ ಬಳಿ ಮೂರು ಆಯುಧ ಇತ್ತು. ಗನ್ ಒಂದು ಬಾರಿ ಟ್ರಿಗರ್ ಮಾಡಿದ್ರೆ 50- 60 ಬುಲೆಟ್ ಸಿಡಿಯುವ ಗನ್ ಅದು ಚೂರಿ, 3 ಎಂಎಂ ಪಿಸ್ತೂಲ್ ಇತ್ತು ಎಂದು ತಿಳಿಸಿದರು.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 6:51 pm, Wed, 20 November 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ