Karnataka CET 2021 Exams: ಕೊರೊನಾ ಹೆಚ್ಚಳ: ಸಿಇಟಿ ಪರೀಕ್ಷೆ ಮುಂದೂಡಿ ದಿನ ಮರುನಿಗದಿ
CET Exam Postponed: ದ್ವಿತೀಯ ಪಿಯು ಪರೀಕ್ಷೆಯನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಜುಲೈ 7ರಿಂದ ಆರಂಭವಾಗಬೇಕಿದ್ದ ಸಿಇಟಿಯನ್ನೂ ಸಹ ಮುಂದೂಡಿಕೆ ಮಾಡಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿರುವ ಕಾರಣ ಜುಲೈ 7ರಿಂದ ಆರಂಭವಾಗಬೇಕಿದ್ದ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸುಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿಯನ್ನು ಮುಂದೂಡಲಾಗಿದೆ. ಅಗಸ್ಟ್ 28, 29, 30ರಂದು ದಿನಾಂಕವನ್ನು ಮರು ನಿಗದಿಪಡಿಸಲಾಗಿದೆ. ಅಗಸ್ಟ್ 28ರಂದು ಜೀವಶಾಸ್ತ್ರ ಮತ್ತು ಗಣಿತ, ಅಗಸ್ಟ್ 29ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ, ಅಗಸ್ಟ್ 30ರಂದು ಹೊರನಾಡು, ಗಡಿನಾಡು ಕನ್ನಡಿಗರಿಗೆ ಕನ್ನಡ ವಿಷಯಗಳ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ದ್ವಿತೀಯ ಪಿಯು ಪರೀಕ್ಷೆಯನ್ನು ಮುಂದೂಡಿರುವ ಹಿನ್ನೆಲೆಯಲ್ಲಿ ಜುಲೈ 7ರಿಂದ ಆರಂಭವಾಗಬೇಕಿದ್ದ ಸಿಇಟಿಯನ್ನೂ ಸಹ ಮುಂದೂಡಿಕೆ ಮಾಡಲಾಗಿದೆ.
ಕೋವಿಡ್ ಎರಡನೇ ಅಲೆ ಕಾರಣಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಮುಂದೂಡಿದ ಹಿನ್ನೆಲೆಯಲ್ಲಿ ವೃತ್ತಿ ಪರ ಕೋರ್ಸ್ ಗಳ ಪ್ರವೇಶ ಕ್ಕೆ ನಡೆಸುವ 2021ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನೂ ಮುಂದೂಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಹೊಸ ವೇಳಾಪಟ್ಟಿಯಂತೆ ಮುಂಬರುವ ಅಗಸ್ಟ್ 28 ಮತ್ತು 29ರಂದು ಸಿಇಟಿ ನಡೆಯಲಿದೆ. ಹಾಗೆಯೇ, 30ರಂದು ಕನ್ನಡ ಭಾಷಾ ಪರೀಕ್ಷೆ ಇರುತ್ತದೆ. ಶೀಘ್ರದಲ್ಲಿಯೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.
ಈ ಮೊದಲು ಪ್ರಕಟಿಸಲಾಗಿದ್ದ ವೇಳಾಪಟ್ಟಿಯಂತೆ ಜೂನ್ 7 & 8 ರಂದು ಸಿಇಟಿ ಹಾಗೂ 9ರಂದು ಕನ್ನಡ ಪರೀಕ್ಷೆ ನಡೆಯಬೇಕಾಗಿತ್ತು. ಹೆಚ್ಚಿನ ವಿವರಗಳಿಗೆ https://cetonline.karnataka.gov.in/kea/ ವೆಬ್ ತಾಣಕ್ಕೆ ಭೇಟಿ ನೀಡಬಹುದು. ವಿದ್ಯಾರ್ಥಿಗಳು ಕೋವಿಡ್‌ನಿಂದ ಸುರಕ್ಷಿತವಾಗಿರಿ ಮತ್ತೂ ಪಿಯುಸಿ ಮತ್ತು ಸಿಇಟಿ ಪರೀಕ್ಷೆಗೆ ಉತ್ತಮ ಸಿದ್ಧತೆ ಮಾಡಿಕೊಳ್ಳಿ ಎಂದು ಡಾ.ಅಶ್ವತ್ಥನಾರಾಯಣ ಹಾರೈಸಿದ್ದಾರೆ.
ಇದನ್ನೂ ಓದಿ: ಚುನಾವಣಾ ಕರ್ತವ್ಯದ ವೇಳೆ ಚುನಾವಣಾ ಅಧಿಕಾರಿ ಕೊವಿಡ್ನಿಂದ ಮೃತಪಟ್ಟರೆ ಕನಿಷ್ಠ ₹1 ಕೋಟಿ ಪರಿಹಾರ ನೀಡಬೇಕು: ಅಲಹಾಬಾದ್ ಹೈಕೋರ್ಟ್
Coronavirus India Update: ಒಂದೇ ದಿನ 4,205 ಕೊವಿಡ್ ರೋಗಿಗಳು ಸಾವು, ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ
(Karnataka CET exam Postponed to august 28)
Published On - 4:20 pm, Wed, 12 May 21