ಬಿ.ಎಸ್.​ ಯಡಿಯೂರಪ್ಪ ಮನೆಯಲ್ಲಿ ಮೊಮ್ಮಗಳ ಮದುವೆ ಸಂಭ್ರಮ, ಗಣ್ಯಾತಿಗಣ್ಯರು ಭಾಗಿ

| Updated By: ಸಾಧು ಶ್ರೀನಾಥ್​

Updated on: Feb 25, 2021 | 1:16 PM

ಮುಖ್ಯಮಂತ್ರಿ B.S.ಯಡಿಯೂರಪ್ಪ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಸಿಎಂ ಪುತ್ರಿ ಅರುಣಾದೇವಿಯವರ ಮಗಳು ಮಾಧುರ್ಯ ಅವರ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರುತ್ತಿದೆ. ನಿನ್ನೆ (ಫೆ.24) ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು ಇಂದು ನಿಖಿಲ್ ಜೊತೆ ಅರುಣಾದೇವಿ ಪುತ್ರಿ ಮಾಧುರ್ಯ ಸಪ್ತಪದಿ ತುಳಿದಿದ್ದಾರೆ.

ಬಿ.ಎಸ್.​ ಯಡಿಯೂರಪ್ಪ ಮನೆಯಲ್ಲಿ ಮೊಮ್ಮಗಳ ಮದುವೆ ಸಂಭ್ರಮ, ಗಣ್ಯಾತಿಗಣ್ಯರು ಭಾಗಿ
ಮೊಮ್ಮಗಳ ಮದುವೆ ಸಂಭ್ರಮದಲ್ಲಿರುವ B.S.ಯಡಿಯೂರಪ್ಪ
Follow us on

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ B.S.ಯಡಿಯೂರಪ್ಪ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಸಿಎಂ ಪುತ್ರಿ ಅರುಣಾದೇವಿಯವರ ಮಗಳು ಮಾಧುರ್ಯ ಅವರ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ನಿನ್ನೆ (ಫೆ.24) ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು ಇಂದು ನಿಖಿಲ್ ಜೊತೆ ಅರುಣಾದೇವಿ ಪುತ್ರಿ ಮಾಧುರ್ಯ ಸಪ್ತಪದಿ ತುಳಿದಿದ್ದಾರೆ. ಇನ್ನು ಅರಮನೆ ಮೈದಾನ ಮೇಖ್ರಿ ಸರ್ಕಲ್ ಬಳಿಯ ತ್ರಿಪುರಾವಾಸಿನಿ ಗೇಟ್ ನಂ.2ರಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದೆ.

ಸಿಎಂ ಪುತ್ರಿ ಅರುಣಾದೇವಿಯವರ ಮಗಳು ಮಾಧುರ್ಯ ಮದುವೆಯಲ್ಲಿ ಭಾಗಿಯಾದ ಗಣ್ಯರು

ಸಿಎಂ ಮೊಮ್ಮಗಳ ಮದುವೆ ಕಾರ್ಯಕ್ರಮಕ್ಕೆ ವಿವಿಧ ಪಕ್ಷಗಳ ಮುಖಂಡರು, ಗಣ್ಯರು, ಹಿರಿಯರು ಭಾಗಿಯಾಗಿ ವಧು-ವರನನ್ನು ಹಾರೈಸಿದ್ದಾರೆ. ಮದುವೆ ಸಮಾರಂಭದಲ್ಲಿ BJP ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಆರ್.ಶಂಕರ್, MP ಪ್ರತಾಪ್ ಸಿಂಹ ಸೇರಿದಂತೆ ಶಾಸಕರು, ಸಂಸದರು ಭಾಗಿಯಾಗಿದ್ದಾರೆ.

ಸಿಎಂ ಬಿಎಸ್ ಯಡಿಯೂರಪ್ಪನವರ ಎರಡನೇ ಪುತ್ರಿ ಅರುಣಾ ದೇವಿಯವರ ಮಗಳು ಮಾಧುರ್ಯ ಅವರು ನಿಖಿಲ್ ಎಂಬುವವರ ಜೊತೆ ಹಸೆ ಮಣೆ ಏರಿದ್ದಾರೆ. ಬುಧವಾರ ಸಂಜೆ ಆರತಕ್ಷತೆ ಕಾರ್ಯಕ್ರಮ ಅದ್ದೂರಿಯಾಗಿ ನೇರವೇರಿದೆ. ಇಡೀ ಕುಟುಂಬ ಮದುವೆ ಸಂಭ್ರಮದಲ್ಲಿದೆ.

ಮೊಮ್ಮಗಳ ಮದುವೆ ಕಾರ್ಯಕ್ರಮಕ್ಕೆ ಸಿಎಂ ಬಿಎಸ್​ವೈರಿಂದ ಸ್ವಾಗತ

ಮೊಮ್ಮಗಳ ಮದುವೆ ಕಾರ್ಯಕ್ರಮದಲ್ಲಿ ಸಿಎಂರೊಂದಿಗೆ ಪಕ್ಷದ ಸದಸ್ಯರು

ಮೊಮ್ಮಗಳ ಮದುವೆ ಕಾರ್ಯಕ್ರಮದಲ್ಲಿ ಸದಸ್ಯರೊಂದಿಗೆ ಭೋಜನ ಸೇವಿಸಿದ ಸಿಎಂ

ಇದನ್ನೂ ಓದಿ: ಬಿ.ಎಸ್.​ ಯಡಿಯೂರಪ್ಪ ಮನೆಯಲ್ಲಿ ಮದುವೆ ಸಂಭ್ರಮ, ಇಡೀ ದಿನ ಕುಟುಂಬಸ್ಥರೊಂದಿಗೆ ದಿನಕಳೆಯುವ ಸಾಧ್ಯತೆ