5 ಗ್ಯಾರಂಟಿ ಜಾರಿಗೆಗೆ ಆದಾಯ ಮೂಲ ಹೆಚ್ಚಿಸಲು ಸರ್ಕಾರ ಪ್ಲಾನ್, ಏರುತ್ತಾ ಮದ್ಯದ ಬೆಲೆ?
ಗ್ಯಾಂರಂಟಿ ಯೋಜನೆಗಳಿಂದ ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ಬರೆ ಬೀಳದ ಹಾಗೆ ಆದಾಯದ ಮೂಲ ಹೆಚ್ಚಿಸಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಸರ್ಕಾರ ಮಾರ್ಗವನ್ನು ಕಂಡುಕೊಂಡಿದ್ದು, ಅದು ಅಬಕಾರಿ ಇಲಾಖೆಯಿಂದ ಆದಾಯ ಕ್ರೋಡಿಕರಣಕ್ಕೆ ಚಿಂತನೆ ನಡೆಸಿದೆ.
ಬೆಂಗಳೂರು: ಕಾಂಗ್ರೆಸ್ ಸರ್ಕಾರ ತನ್ನ ಮಹತ್ವಾಕಾಂಕ್ಷಿಯ 5 ಉಚಿತ ಗ್ಯಾರಂಟಿ (five guarantee) ಯೋಜನೆಗಳಿಗೆ ಚಾಲನೆ ನೀಡುತ್ತಿದೆ. ಈ ಯೋಜನೆಗಳಿಂದ ಸರ್ಕಾರಕ್ಕೆ (Congress Government) ಆರ್ಥಿಕ ಹೊರೆಯಾಗಲಿದೆ. ಇವುಗಳನ್ನು ಜಾರಿ ಮಾಡಲು ಸಾವಿರಾರು ಕೋಟಿ ಬೇಕು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಯೋಜನೆಗಳಿಂದ ಸರ್ಕಾರದ ಖಜಾನೆಗೆ ಒಂದಿಷ್ಟರ ಮಟ್ಟಿಗಾದರೂ ಹೊಡೆತ ಬೀಳುವುದು ಸುಳ್ಳಲ್ಲಾ. ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಆರ್ಥಿಕ ಬೊಕ್ಕಸಕ್ಕೆ ಬರೆ ಬೀಳದ ಹಾಗೆ ಆದಾಯದ ಮೂಲ ಹೆಚ್ಚಿಸಲು ಸರ್ಕಾರ ಪ್ಲಾನ್ ಮಾಡಿಕೊಂಡಿದೆ.
ಹೌದು ಸರ್ಕಾರ ಮಾರ್ಗವನ್ನು ಕಂಡುಕೊಂಡಿದ್ದು, ಅದು ಅಬಕಾರಿ ಇಲಾಖೆಯಿಂದ (Excise Department) ಆದಾಯ ಕ್ರೋಡಿಕರಣಕ್ಕೆ ಚಿಂತನೆ ನಡೆಸಿದೆ. ಲಿಕ್ಕರ್ ಲೈಸೆನ್ಸ್ ಫೀಸ್ನ್ನು ಶೇಕಡಾ 25 ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಇದರಿಂದ ವಾರ್ಷಿಕ 175 ಕೋಟಿ ರೂ. ಆದಾಯ ಬರುವ ನಿರೀಕ್ಷೆ ಇದೆ. 2016 ರಿಂದ ಲಿಕ್ಕರ್ ಲೈಸೆನ್ಸ್ ದರ ಹೆಚ್ಚಿಸಿಲ್ಲ. ಹೀಗಾಗಿ ಲಿಕ್ಕರ್ ಲೈಸೆನ್ಸ್ ಫೀಸ್ ಹೆಚ್ಚಳ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆಗೆ ಮೈಸೂರು ಜಿಲ್ಲೆಯಲ್ಲಿ ಚಾಲನೆ: ಸಿಎಂ ಸಿದ್ದರಾಮಯ್ಯ
ಲಿಕ್ಕರ್ ಹಾರ್ಡ್ ಡ್ರಿಂಕ್ಸ್ ದರವನ್ನು ಶೇಕಡಾ 10 ರಿಂದ 15 ಪರ್ಸೆಂಟ್ ಹೆಚ್ಚಳ ಮಾಡಿದರೇ ಲಿಕ್ಕರ್ ಡ್ರಿಂಕ್ಸ್ನಿಂದ ಶೇಕಡಾ ಸುಮಾರು 3 ಸಾವಿರ ಕೋಟಿ ಆದಾಯ ಬರುವ ನಿರೀಕ್ಷೆ ಇದೆ. ಬಿಯರ್ ದರವನ್ನ ಶೇಕಡಾ 20 ಪರ್ಸೆಂಟ್ ಹೆಚ್ಚಳ ಮಾಡಿದರೇ, ಇದರಿಂದ ವಾರ್ಷಿಕ 500 ಕೋಟಿ ಆದಾಯ ಬರಬಹುದೆಂದು ಅಂದಾಜಿಸಲಾಗಿದೆ.
2022-23 ರ ವಾರ್ಷಿಕದಲ್ಲಿ ಸರ್ಕಾರ ಈಗಾಗಲೇ 35 ಸಾವಿರ ಕೋಟಿ ಆದಾಯದ ಟಾರ್ಗೆಟ್ ನೀಡಿತ್ತು. ಇದೀಗ 2023-24ರ ಸಾಲಿನಲ್ಲಿ ಸುಮಾರು 39 ಸಾವಿರ ಕೋಟಿ ಆದಾಯ ಸಂಗ್ರಹಿಸುವ ಗುರಿ ನೀಡುವ ಸಾಧ್ಯತೆ ಇದೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳು ಟಿವಿ9ಗೆ ಮಾಹಿತಿ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ