ರಾಜ್ಯದಲ್ಲಿ ಇಂದು 453 ಜನರಿಗೆ ಸೋಂಕು ದೃಢ, 9,000 ಗಡಿ ದಾಟಿದ ಸೋಂಕಿತರ ಸಂಖ್ಯೆ..!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಾಪುಗಾಲಿಡುತ್ತಾ ಮುನ್ನುಗ್ಗುತ್ತಲ್ಲೇ ಇದೆ. ಇದಕ್ಕೆ ಪೂರಕವಾಗಿ ಇಂದು ರಾಜ್ಯದಲ್ಲಿ 453 ಕೇಸ್​ಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,000ದ ಗಡಿ ದಾಟಿದ್ದು 9,150ಕ್ಕೆ ಏರಿದೆ. ಇಂದು ಬೆಂಗಳೂರಲ್ಲಿ ಅತ್ಯಂತ ಹೆಚ್ಚು ಅಂದರೆ 196 ಪ್ರಕರಣಗಳು ಪತ್ತೆಯಾಗಿದೆ. ಜೊತೆಗೆ ಇಂದು ಬಳ್ಳಾರಿಯಲ್ಲಿ 40, ಕಲಬುರಗಿ ಮತ್ತು ವಿಜಯಪುರದಲ್ಲಿ ತಲಾ 39 ಕೇಸ್​ಗಳು ವರದಿಯಾಗಿದೆ. ಮೈಸೂರು ಮತ್ತು ಗದಗದಲ್ಲಿ ತಲಾ 18 ಕೇಸ್​, ಧಾರವಾಡದಲ್ಲಿ 15, ಬಾಗಲಕೋಟೆಯಲ್ಲಿ 14, ಬೀದರ್​ನಲ್ಲಿ 13 ಪ್ರಕರಣಗಳು […]

ರಾಜ್ಯದಲ್ಲಿ ಇಂದು 453 ಜನರಿಗೆ ಸೋಂಕು ದೃಢ, 9,000 ಗಡಿ ದಾಟಿದ ಸೋಂಕಿತರ ಸಂಖ್ಯೆ..!
ಪ್ರಾತಿನಿಧಿಕ ಚಿತ್ರ

Updated on: Jun 21, 2020 | 7:22 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಾಪುಗಾಲಿಡುತ್ತಾ ಮುನ್ನುಗ್ಗುತ್ತಲ್ಲೇ ಇದೆ. ಇದಕ್ಕೆ ಪೂರಕವಾಗಿ ಇಂದು ರಾಜ್ಯದಲ್ಲಿ 453 ಕೇಸ್​ಗಳು ಪತ್ತೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,000ದ ಗಡಿ ದಾಟಿದ್ದು 9,150ಕ್ಕೆ ಏರಿದೆ. ಇಂದು ಬೆಂಗಳೂರಲ್ಲಿ ಅತ್ಯಂತ ಹೆಚ್ಚು ಅಂದರೆ 196 ಪ್ರಕರಣಗಳು ಪತ್ತೆಯಾಗಿದೆ.

ಜೊತೆಗೆ ಇಂದು ಬಳ್ಳಾರಿಯಲ್ಲಿ 40, ಕಲಬುರಗಿ ಮತ್ತು ವಿಜಯಪುರದಲ್ಲಿ ತಲಾ 39 ಕೇಸ್​ಗಳು ವರದಿಯಾಗಿದೆ. ಮೈಸೂರು ಮತ್ತು ಗದಗದಲ್ಲಿ ತಲಾ 18 ಕೇಸ್​, ಧಾರವಾಡದಲ್ಲಿ 15, ಬಾಗಲಕೋಟೆಯಲ್ಲಿ 14, ಬೀದರ್​ನಲ್ಲಿ 13 ಪ್ರಕರಣಗಳು ಪತ್ತೆಯಾಗಿದೆ. ದಾವಣಗೆರೆ, ಉತ್ತರ ಕನ್ನಡ ಮತ್ತು ಕೋಲಾರದಲ್ಲಿ ತಲಾ 8 ಪ್ರಕರಣಗಳು ವರದಿಯಾಗಿದೆ. ಇನ್ನು ದಕ್ಷಿಣ ಕನ್ನಡದಲ್ಲಿ 7, ಮಂಡ್ಯ ಮತ್ತು ಹಾಸನದಲ್ಲಿ ತಲಾ 5 ಕೇಸ್​ಗಳು, ತುಮಕೂರಿನಲ್ಲಿ 4, ಯಾದಗಿರಿ, ಚಿಕ್ಕಬಳ್ಳಾಪುರ ಹಾಗೂ ಹಾವೇರಿಯಲ್ಲಿ ತಲಾ ಮೂರು ಕೇಸ್​ಗಳು ವರದಿಯಾಗಿದೆ. ರಾಯಚೂರು, ಶಿವಮೊಗ್ಗ ಮತ್ತು ರಾಮನಗರದಲ್ಲಿ ತಲಾ 2 ಕೇಸ್​ ಪತ್ತೆಯಾಗಿದೆ.

ಕೊರೊನಾ ಸೋಂಕು ರಾಜ್ಯದಲ್ಲಿ ಇಂದು 5 ಜನರನ್ನು ಬಲಿಪಡೆದಿದೆ. ಬೆಂಗಳೂರಿನಲ್ಲಿ ಇಂದು ಮೂವರು ಮೃತಪಟ್ಟಿದ್ದಾರೆ.

Published On - 7:02 pm, Sun, 21 June 20