AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಲಿಕುಳದ ಪ್ರಾಣಿ ಪಕ್ಷಿಗಳಿಗೂ ಕ್ವಾರಂಟೈನ್ ಮಾಡಲಾಗಿದೆ! ಆದ್ರೆ ನೋ ಟೆನ್ಷನ್

ಮಂಗಳೂರು: ಕೊರೊನಾ ಕಾರ್ಮೋಡದ ಈ ಸಂದರ್ಭದಲ್ಲಿ ಹೊರ ರಾಜ್ಯ, ಹೊರ ದೇಶದಿಂದ ಬಂದವರಿಗೆ, ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕ ಇರುವವರಿಗೆ ಕ್ವಾರಂಟೈನ್ ಮಾಡೋದು ಸಾಮಾನ್ಯವಾಗಿತ್ತು. ಆದ್ರೆ ಅನೇಕ ವರ್ಷಗಳಿಂದ ಹೊರಗೆಲ್ಲೂ ಹೋಗದ, ವಿದೇಶಿ ಪ್ರಯಾಣ ಇರಲಿ ಪಕ್ಕದ ಊರನ್ನೂ ನೋಡದ, ಸತತವಾಗಿ ಬಂಧಿಯಾಗಿರೋ ವನ್ಯ ಮೃಗಗಳ, ಅಲ್ಲಲ್ಲ ವನ್ಯಜೀವಿಗಳ ಮೃಗಾಲಯದಲ್ಲಿ ಈಗ ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ. ಇಂಥ ಕ್ವಾರಂಟೈನ್‌ ಕೇಂದ್ರವಿರೋದು ಕಡಲನಗರಿ ಮಂಗಳೂರಿನಲ್ಲಿ. ಮಂಗಳೂರಲ್ಲೊಂದು ಅಪರೂಪದ ಕ್ವಾರಂಟೈನ್‌ ಸೆಂಟರ್‌ ಕ್ವಾರಂಟೈನ್ ಮಾಡಿಲ್ಲ ಅಂತಾ ಗಲಾಟೆ. ಕ್ವಾರಂಟೈನ್ ಮಾಡಿದ್ರು […]

ಪಿಲಿಕುಳದ ಪ್ರಾಣಿ ಪಕ್ಷಿಗಳಿಗೂ ಕ್ವಾರಂಟೈನ್ ಮಾಡಲಾಗಿದೆ! ಆದ್ರೆ ನೋ ಟೆನ್ಷನ್
Guru
| Edited By: |

Updated on:Jun 22, 2020 | 2:57 PM

Share

ಮಂಗಳೂರು: ಕೊರೊನಾ ಕಾರ್ಮೋಡದ ಈ ಸಂದರ್ಭದಲ್ಲಿ ಹೊರ ರಾಜ್ಯ, ಹೊರ ದೇಶದಿಂದ ಬಂದವರಿಗೆ, ಕೊರೊನಾ ಸೋಂಕಿತ ವ್ಯಕ್ತಿಯ ಸಂಪರ್ಕ ಇರುವವರಿಗೆ ಕ್ವಾರಂಟೈನ್ ಮಾಡೋದು ಸಾಮಾನ್ಯವಾಗಿತ್ತು. ಆದ್ರೆ ಅನೇಕ ವರ್ಷಗಳಿಂದ ಹೊರಗೆಲ್ಲೂ ಹೋಗದ, ವಿದೇಶಿ ಪ್ರಯಾಣ ಇರಲಿ ಪಕ್ಕದ ಊರನ್ನೂ ನೋಡದ, ಸತತವಾಗಿ ಬಂಧಿಯಾಗಿರೋ ವನ್ಯ ಮೃಗಗಳ, ಅಲ್ಲಲ್ಲ ವನ್ಯಜೀವಿಗಳ ಮೃಗಾಲಯದಲ್ಲಿ ಈಗ ಕ್ವಾರಂಟೈನ್ ಕೇಂದ್ರ ತೆರೆಯಲಾಗಿದೆ. ಇಂಥ ಕ್ವಾರಂಟೈನ್‌ ಕೇಂದ್ರವಿರೋದು ಕಡಲನಗರಿ ಮಂಗಳೂರಿನಲ್ಲಿ.

ಮಂಗಳೂರಲ್ಲೊಂದು ಅಪರೂಪದ ಕ್ವಾರಂಟೈನ್‌ ಸೆಂಟರ್‌ ಕ್ವಾರಂಟೈನ್ ಮಾಡಿಲ್ಲ ಅಂತಾ ಗಲಾಟೆ. ಕ್ವಾರಂಟೈನ್ ಮಾಡಿದ್ರು ಅಂತಾ ಗಲಾಟೆ. ಕ್ವಾರಂಟೈನ್ ಸೆಂಟರ್ ಸರಿಯಿಲ್ಲ ಅಂತಾ ಗಲಾಟೆ, ಕ್ವಾರಂಟೈನ್ ನಮಗೆ ಬೇಕಿಲ್ಲಾ ಅಂತಾ ಗಲಾಟೆ. ಕ್ವಾರಂಟೈನ್ ಸೆಂಟರ್ ನಿಂದಲೇ ನನಗೆ ಕೊರೊನ ಬಂತು ಅಂತಾ ಆಕ್ರೋಶಗೊಂಡವರು ಇದ್ದಾರೆ. ಇವರೆಲ್ಲರ ನಡುವೆ ಮಂಗಳೂರಿನ ಈ ಕ್ವಾರಂಟೈನ್ ಸೆಂಟರ್‌ನಲ್ಲಿ ಯಾವುದೇ ಗಲಾಟೆಯಿಲ್ಲ. ಯಾರ ಸದ್ದು ಗದ್ದಲವಿಲ್ಲ. ಆದ್ರೂ ಕ್ವಾರಂಟೈನ್‌ನಲ್ಲಿ ಆರಾಮವಾಗಿದ್ದಾರೆ.

ಕ್ವಾರಂಟೈನ್‌ನಲ್ಲೂ ರಿಲಾಕ್ಸ್ ಮೂಡ್‌ನಲ್ಲಿ ವನ್ಯ ಜೀವಿಗಳು ತಮ್ಮ ಮರಿಗಳೊಂದಿಗೆ ಕ್ವಾರಂಟೈನಲ್ಲಿ ಹುಲಿರಾಣಿ ಕಾಲ ಕಳಿಯುತ್ತಿದೆ. ಗಡಪಡೆ ಗಾಂಭೀರ್ಯದಿಂದಲೇ ರಿಲಾಕ್ಸ್ ಮೂಡ್​ನಲ್ಲಿವೆ. ಇನ್ನು ತಮ್ಮಷ್ಟಕ್ಕೆ ತಾವಿರುವ ಈ ವನ್ಯಜೀವಿಗಳೂ ಈಗ ಕ್ವಾರಂಟೈನ್‌ನಲ್ಲಿವೆ. ಪಿಲಿಕುಳ ಜೈವಿಕ ಉದ್ಯಾನವನದಲ್ಲಿರುವ ಈ ಮೃಗಾಲಯದಲ್ಲಿ ಈಗ ಕ್ವಾರಂಟೈನ್ ಸೆಂಟರ್ ಓಪನ್ ಮಾಡಲಾಗಿದೆ. ಪ್ರಾಣಿ ಪಕ್ಷಿಗಳನ್ನು ಕೂಡ ಕ್ವಾರಂಟೈನ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.

ಹೊರ ರಾಜ್ಯ, ದೇಶದಿಂದ ಬಂದ ಪ್ರಾಣಿಗಳಿಗೆ ಕ್ವಾರಂಟೈನ್‌ ದೇಶದ ಬೇರೆ ಬೇರೆ ರಾಜ್ಯಗಳಿಂದ ಪಿಲಿಕುಳ ಮೃಗಾಲಯಕ್ಕೆ ಪ್ರಾಣಿ, ಪಕ್ಷಿ, ಹಾವುಗಳನ್ನು ತರಲಾಗುತ್ತದೆ. ಈ ರೀತಿ ತಂದ ಪ್ರಾಣಿಗಳನ್ನು ನೇರವಾಗಿ ಇತರ ಪ್ರಾಣಿಗಳ ಜೊತೆಗೆ ಬಿಡದೆ ಕ್ವಾರಂಟೈನ್ ಕೇಂದ್ರದಲ್ಲಿಡಲಾಗುತ್ತಿದೆ. ನಂತರ ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಈ ವನ್ಯ ಮೃಗಗಳ ಆರೋಗ್ಯ ತಪಾಸಣೆ ಮಾಡಿ ನಿಗಾ ಇಡಲಾಗುತ್ತೆ. ಒಂದರಿಂದ ಎರಡು ತಿಂಗಳ ಬಳಿಕ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡುಬರದಿದ್ದರೇ ಮಾತ್ರ ಆ ಪ್ರಾಣಿಗಳನ್ನ ಇತರ ಪ್ರಾಣಿಗಳ ಜೊತೆಗೆ ಬಿಡಲಾಗುತ್ತದೆ.

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 1,400ಕ್ಕೂ ಹೆಚ್ಚು ಪ್ರಾಣಿ-ಪಕ್ಷಿಗಳು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಸದ್ಯ1400 ಕ್ಕೂ ಅಧಿಕ ಪ್ರಾಣಿ, ಪಕ್ಷಿ, ಸರಿಸೃಪಗಳು ಇವೆ. ಇಲ್ಲಿ ಕ್ವಾರಂಟೈನ್ ವ್ಯವಸ್ಥೆ ಅನ್ನೋದು ಪ್ರಾಣಿಗಳ ಆರೋಗ್ಯದ ದೃಷ್ಟಿಯಿಂದ ಹಿಂದಿನಿಂದಲೂ ಇದೆ. ಆದ್ರೂ ಈ ಬಾರಿ ಮೃಗಾಲಯದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಅಲ್ಲದೇ ಈ ಬಾರಿ ಮೂವತ್ತಕ್ಕೂ ಹೆಚ್ಚು ಕ್ವಾರಂಟೈನ್ ರೂಮ್‌ಗಳನ್ನು ಸಿದ್ದ ಪಡಿಸಲಾಗುತ್ತಿದೆ. ಇದೆಲ್ಲಾ ಪ್ರಾಣಿಗಳ ಒಳಿತಿಗಾಗಿ ಮಾತ್ರ. -ಪೃಥ್ವಿರಾಜ್ ಬೊಮ್ಮನಕೆರೆ

Published On - 2:48 pm, Mon, 22 June 20

ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ