Karnataka Covid 19 Update: ಇಂದೂ ಸಹ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೊವಿಡ್ ಸೋಂಕು ಹೆಚ್ಚು

ಕರ್ನಾಟಕದ ಕೊವಿಡ್ ಪಾಸಿಟಿವಿಟಿ ದರ ಶೇ 0.80ರಷ್ಟಿದೆ. 1,538 ಜನರು ಗುರುವಾರ ಕೊವಿಡ್​ನಿಂದ ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ.

Karnataka Covid 19 Update: ಇಂದೂ ಸಹ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕೊವಿಡ್ ಸೋಂಕು ಹೆಚ್ಚು
ಮಾಸ್ಕ್ ಧರಿಸೋಣ
Follow us
TV9 Web
| Updated By: guruganesh bhat

Updated on: Aug 19, 2021 | 9:36 PM

ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ 1,432 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 27 ಜನರು ನಿಧನರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 21,133 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 318 ಜನರಿಗೆ ಸೋಂಕು ಖಚಿತಪಟ್ಟಿದೆ. ಇಬ್ಬರು ಬೆಂಗಳೂರು ನಗರ ಜಿಲ್ಲೆಯಲ್ಲಿ ಮೃತಪಟ್ಟಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 7,942 ಕೊವಿಡ್ ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕರ್ನಾಟಕದ ಕೊವಿಡ್ ಪಾಸಿಟಿವಿಟಿ ದರ ಶೇ 0.80ರಷ್ಟಿದೆ. 1,538 ಜನರು ಗುರುವಾರ ಕೊವಿಡ್​ನಿಂದ ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಈಮೂಲಕ ಕೊವಿಡ್​ನಿಂದ ಗುಣಮುಖರಾದ ರಾಜ್ಯದ ಜನರ ಒಟ್ಟು ಸಂಖ್ಯೆ 28,76,377ಕ್ಕೆ ಏರಿಕೆಯಾಗಿದೆ. ಕೊವಿಡ್​ನಿಂದ ಮೃತಪಟ್ಟವರ ಪಾಸಿಟಿವಿಟಿ ದರ ಶೇಕಡಾ 1.88ರಷ್ಟಿದೆ. ಈವರೆಗೆ ಕರ್ನಾಟಕದಲ್ಲಿ ಕೊವಿಡ್ನಿಂದ ರಾಜ್ಯದಲ್ಲಿ ಮೃತಪಟ್ಟವರ ಒಟ್ಟು ಸಂಖ್ಯೆ 37,088ಕ್ಕೆ ತಲುಪಿದೆ.

ಇಂದು ಜಿಲ್ಲಾವಾರು ಕೊವಿಡ್ ಸೋಂಕು ದೃಢಪಟ್ಟ ವಿವರ ಗಮನಿಸಿದರೆ, ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 326 ಜನರಿಗೆ ಕೊವಿಡ್ ಖಚಿತಪಟ್ಟಿದೆ. ಬೆಂಗಳೂರು ನಗರ 318, ಉಡುಪಿ, 162, ಮೈಸೂರು 103, ಹಾಸನ 94 ಕೊವಿಡ್ ಸೋಂಕು ದೃಢಪಟ್ಟಿದೆ. ಮರಣದ ಸಂಖ್ಯೆ ಗಮನಿಸಿದರೆ ದಕ್ಷಿಣ ಕನ್ನಡದಲ್ಲಿ 7, ಮೈಸೂರು 3, ಬೆಂಗಳೂರು ನಗರ, ಉಡುಪಿ, ಹಾವೇರಿ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: 

ಮಕ್ಕಳಿಗೆ ಶೀಘ್ರದಲ್ಲೇ ಕೊವಿಡ್ ಲಸಿಕೆ: ಯಾವ ವಯಸ್ಸಿನ ಮಕ್ಕಳಿಗೆ? ಯಾವಾಗ?

Covishield: ಎರಡು ಡೋಸ್ ಕೊವಿಡ್ ಲಸಿಕೆ ಪಡೆದರೂ ಮತ್ತೆ ವ್ಯಾಕ್ಸಿನ್ ಬೇಕೆಂದು ಕೋರ್ಟ್ ಮೊರೆ ಹೋದ ಕೇರಳಿಗ!

(Karnataka Covid 19 Update 1432 new cases and 27 deaths today top cases in Dakshina Kannada and Udupi districts)