Kolar Crime: ನಡುರಾತ್ರಿ ಹೊತ್ತಿ ಉರಿದ ವೃದ್ಧೆಯ ಗುಡಿಸಲು; ಬೆಂಕಿ ಆರಿಸಿ ಸಾಹಸ ಮೆರೆದ ಯುವಕರು

Crime News Today: ಬಡಾವಣೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದ 80 ವರ್ಷದ ವೃದ್ದ ಪಟ್ಟಮ್ಮಾಳ್​ ಮಲಗಿದ್ದ ವೇಳೆ ಕಳೆದ ರಾತ್ರಿ ಅಚಾನಕ್ಕಾಗಿ ಗುಡಿಸಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Kolar Crime: ನಡುರಾತ್ರಿ ಹೊತ್ತಿ ಉರಿದ ವೃದ್ಧೆಯ ಗುಡಿಸಲು; ಬೆಂಕಿ ಆರಿಸಿ ಸಾಹಸ ಮೆರೆದ ಯುವಕರು
ಮನೆಗೆ ಬೆಂಕಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 19, 2021 | 8:50 PM

ಕೋಲಾರ: ನಡುರಾತ್ರಿ ಅಚಾನಕ್ಕಾಗಿ ಗುಡಿಸಲಿಗೆ ಬೆಂಕಿ ಬಿದ್ದಾಗ ಧೈರ್ಯದಿಂದ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಮುನ್ನುಗ್ಗಿ ಬೆಂಕಿಯ ದವಡೆಯಲ್ಲಿ ಸಿಲುಕಿದ್ದ ವೃದ್ಧೆಯೊಬ್ಬಳನ್ನು ರಕ್ಷಣೆ ಮಾಡುವ ಮೂಲಕ ಸಾಹಸ ಮೆರೆದಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್​ ನಗರದ ಚಾಂಪಿಯನ್​ ರೀಫ್​ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಬಡಾವಣೆಯಲ್ಲಿ ಒಂಟಿಯಾಗಿ ಬದುಕುತ್ತಿದ್ದ 80 ವರ್ಷದ ವೃದ್ದ ಪಟ್ಟಮ್ಮಾಳ್​ ಮಲಗಿದ್ದ ವೇಳೆ ಕಳೆದ ರಾತ್ರಿ  ಅಚಾನಕ್ಕಾಗಿ ಗುಡಿಸಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ವ್ಯಾಪಕವಾಗಿ ಆವರಿಸಲು ಶುರುವಾಗಿತ್ತು.

ಆಗ ಅಲ್ಲೇ ಪಕ್ಕದ ಮನೆಯಲ್ಲಿದ್ದ 16 ವರ್ಷದ ಮೆಲ್ವಿನ್, 20 ವರ್ಷದ ಅವಿನಾಶ್​ ಹಾಗೂ 19 ವರ್ಷದ ಸ್ನೇಹ ಮೂರೂ ಜನ ಒಟ್ಟಾಗಿ ಬೆಂಕಿ ನಂದಿಸುವ ಕೆಲಸಕ್ಕೆ ಶುರು ಮಾಡಿದರು. ಗುಡಿಸಲೊಳಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ವೃದ್ದೆ ಪಟ್ಟಮ್ಮಾಳ್​ರನ್ನು ಹೊರ ತರಲು ಹರಸಾಹಸ ಪಡುತ್ತಿದ್ದರು. ಈ ಮೂರು ಜನರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದ ಕೆಲಸವನ್ನು ಕಂಡು ಸ್ಥಳೀಯರು ಕೂಡ ಇವರೊಂದಿಗೆ ಬೆಂಕಿ ಆರಿಸುವ ಕೆಲಸಕ್ಕೆ ಕೈ ಜೋಡಿಸಿದರು. ಅಷ್ಟು ಹೊತ್ತಿಗಾಗಲೇ ಬೆಂಕಿಯ ಕೆನ್ನಾಲಿಗೆ ಮನೆಯನ್ನು ಸಂಪೂರ್ಣವಾಗಿ ಆವರಿಸಿತ್ತು.

ಬೆಂಕಿಯ ಕೆನ್ನಾಲಿಗೆಯಿಂದ ಮನೆಯಲ್ಲಿದ್ದ ವಸ್ತುಗಳೆಲ್ಲ ಸುಟ್ಟು ಕರಕಲಾಗಿತ್ತು. ಜೊತೆಗೆ ಹೊಗೆ ಹಾಗೂ ಬೆಂಕಿಯ ರಭಸಕ್ಕೆ ಮನೆಯೊಳಗಿದ್ದ ವೃದ್ದೆ ಪಟ್ಟಮ್ಮಾಳ್​ ಪ್ರಜ್ಞೆ ತಪ್ಪಿ ಮನೆಯೊಳಗೆ ಬಿದ್ದಿದ್ದರು. ಆಗ ತಕ್ಷಣ ಸ್ಥಳೀಯರೊಂದಿಗೆ ನೀರು ಹಾಕಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದರು. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೃಹದಾಕಾರವಾಗಿ ಹೊತ್ತಿ ಉರಿಯುತ್ತಿದ್ದ ಬೆಂಕಿಯನ್ನು ಆರಿಸಿ ವೃದ್ಧೆಯನ್ನು ರಕ್ಷಿಸಿದರು. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೃದ್ಧೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿ, ವೃದ್ಧೆಯ ಪ್ರಾಣ ರಕ್ಷಣೆ ಮಾಡಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕೆಜಿಎಫ್​ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್​ ಹಾಗೂ ನಗರಸಭೆ ಅಧ್ಯಕ್ಷ ವೆಲ್ಲಾಳ್​ ಮುನಿಸ್ವಾಮಿ ಬೆಂಕಿ ನಂದಿಸುವಲ್ಲಿ ಸಾಹಸ ಮೆರೆದ ಮೂರು ಯುವಕರ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಅಲ್ಲದೆ, ನೀವು ಮಾಡಿದ ಕೆಲಸ ಪ್ರೇರೇಪಣೆ ಮೂಡುವಂತದ್ದು ಎಂದ ಶಾಸಕಿ ಮುಂದಿನ ದಿನಗಳಲ್ಲಿ ನಿಮ್ಮ ಸಾಹಸಕ್ಕೆ ಪ್ರಶಸ್ತಿ ನೀಡಿ ಗೌರವಿಸುವ ಭರವಸೆ ನೀಡಿದರು. ಗುಡಿಸಲಿಗೆ ಬೆಂಕಿ ಬಿದ್ದು ಆಶ್ರಯವಿಲ್ಲದಂತಾಗಿದ್ದ ವೃದ್ದೆ ಪಟ್ಟಮ್ಮಾಳ್​ ಅವರಿಗೆ ತಾತ್ಕಾಲಿಕ ಆಶ್ರಯಕ್ಕೆ ವ್ಯವಸ್ಥೆ ಮಾಡಿದರು. ಜೊತೆಗೆ ಒಂದು ವಾರದಲ್ಲಿ ಸುಟ್ಟು ಕರುಕಲಾಗಿದ್ದ ವೃದ್ದೆಯ ಗುಡಿಸಲನ್ನು ಮರು ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು. ಇನ್ನು ಈ ಘಟನೆ ಸಂಬಂಧ ಆಂಡರ್​ಸನ್​ ಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ : ರಾಜೇಂದ್ರ ಸಿಂಹ)

ಇದನ್ನೂ ಓದಿ: Crime News: ಹಣಕ್ಕಾಗಿ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿದ ತಂದೆ-ತಾಯಿ; ಹೆತ್ತವರೇ ವಿಲನ್ ಆದ ಕತೆಯಿದು

Crime News: ಸುಪ್ರೀಂ ಕೋರ್ಟ್ ಎದುರೇ ಬೆಂಕಿ ಹಚ್ಚಿಕೊಂಡ ದಂಪತಿ; ಪ್ರಾಣಾಪಾಯದಿಂದ ಪಾರು

(Kolar Crime News Old Woman Hut Set Ablaze near KGF 3 Youths saved House)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ