AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Neelakurinji Flowers: ಕೊಡಗಿನಲ್ಲಿ 12 ವರ್ಷದ ಬಳಿಕ ಅರಳಿತು ನೀಲಕುರಿಂಜಿ ಹೂವು; ನೀಲಿಮಯವಾಯ್ತು ಮಂದಲಪಟ್ಟಿ

Neelakurinji Flowers: ಮಡಿಕೇರಿ ಬಳಿ ಇರುವ ಮಂದಲಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವುಗಳು ಅರಳಿವೆ. ಇದರಿಂದ ಕೊಡಗಿನ ಮಂದಲಪಟ್ಟಿ ಬೆಟ್ಟ ಪೂರ್ತಿ ನೀಲಿಮಯವಾಗಿದೆ.

Neelakurinji Flowers: ಕೊಡಗಿನಲ್ಲಿ 12 ವರ್ಷದ ಬಳಿಕ ಅರಳಿತು ನೀಲಕುರಿಂಜಿ ಹೂವು; ನೀಲಿಮಯವಾಯ್ತು ಮಂದಲಪಟ್ಟಿ
ಮಂದಲಪಟ್ಟಿ ಬೆಟ್ಟದಲ್ಲಿ ನೀಲಕುರಿಂಜಿ ಹೂವುಗಳು
TV9 Web
| Updated By: ಸುಷ್ಮಾ ಚಕ್ರೆ|

Updated on: Aug 19, 2021 | 8:15 PM

Share

ಮಡಿಕೇರಿ: ಪ್ರಕೃತಿಯಲ್ಲಿ ಸಾಕಷ್ಟು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಮಲೆನಾಡು, ಕರಾವಳಿ ಭಾಗದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ (Western Ghats) ಇರುವ ಕಾಡಿನಲ್ಲಿ ವಿಸ್ಮಯಕಾರಿ ಹೂವು, ಹಣ್ಣುಗಳು ಬಿಡುತ್ತವೆ. ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರಮುಖವಾಗಿರುವ ಕೊಡಗಿನಲ್ಲಿ ಅತ್ಯುತ್ತಮ ಪ್ರದೇಶಗಳಿವೆ. ಅವುಗಳಲ್ಲಿ ಮಂದಲಪಟ್ಟಿ (Mandalpatti Hill)  ಕೂಡ ಒಂದು. ಮಡಿಕೇರಿ (Madikeri) ಬಳಿ ಇರುವ ಮಂದಲಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವುಗಳು (Neelakurinji flowers) ಅರಳಿವೆ. ಇದರಿಂದ ಕೊಡಗಿನ ಮಂದಲಪಟ್ಟಿ ಬೆಟ್ಟ ಪೂರ್ತಿ ನೀಲಿಮಯವಾಗಿದೆ.

ಕೊರೊನಾ ನಡುವೆಯೂ ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಈ ಅಪರೂಪದ ನೀಲಿ ಬಣ್ಣದ ಹೂಗಳು ಇಡೀ ಬೆಟ್ಟವನ್ನು ಆವರಿಸಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಒಂದು ವಾರದ ಹಿಂದೆ ಈ ನೀಲಿಕುರಿಂಜ ಹೂವುಗಳು ಅರಳಿದ್ದು, ಗುಂಪಾಗಿ ಗಿಡದ ತುಂಬ ಅರಳಿರುವ ಈ ಹೂಗಳನ್ನು ಇನ್ನೂ ಕೆಲವು ದಿನಗಳ ಕಾಲ ನೋಡಲು ಸಿಗಲಿವೆ. ಇದೇ ರೀತಿ ಚಿಕ್ಕಮಗಳೂರಿನಲ್ಲಿ ಕೂಡ ನೀಲಕುರಿಂಜಿ ಹೂಗಳು ಆಗುತ್ತವೆ.

ಕುರಿಂಜಿ ಹೂವುಗಳು ಎಂದು ಕರೆಯಲ್ಪಡುವ ಈ ನೀಲಿ ಹೂಗಳಿಗೆ ವೈಜ್ಞಾನಿಕವಾಗಿ ಸ್ಟ್ರೋಬಿಲಂಥೆಸ್ ಕುಂತಿಯಾನ ಎಂದು ಕರೆಯಲಾಗುತ್ತದೆ. 12 ವರ್ಷಗಳಿಗೊಮ್ಮೆ ಈ ಹೂವುಗಳು ಅರಳುತ್ತವೆ. ಈ ಅಪರೂಪದ ಹೂವುಗಳ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಹೂವುಗಳ ಸೌಂದರ್ಯವನ್ನು ನೋಡಲೆಂದೇ ಪ್ರವಾಸಿಗರು ಮಡಿಕೇರಿಯತ್ತ ಬರುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಈ ನೀಲಕುರಿಂಜಿ ಹೂವುಗಳ ಫೋಟೋಗಳು ಹರಿದಾಡುತ್ತಿವೆ.

neelakurinji flowers

ಮಂದಲಪಟ್ಟಿ ಬೆಟ್ಟದಲ್ಲಿ ನೀಲಕುರಿಂಜಿ ಹೂವುಗಳು

ಈ ನೀಲಕುರಿಂಜಿ ಹೂವುಗಳಲ್ಲಿ ಹಲವು ಪ್ರಭೇದಗಳಿವೆ. 5ರಿಂದ 16 ವರ್ಷಗಳಿಗೊಮ್ಮೆ ಬಿಡುವ ಹೂವುಗಳೂ ಇವೆ. ಈ ಗಿಡಗಳು 60 ಸೆ.ಮೀ. ಉದ್ದ ಬೆಳೆಯುತ್ತವೆ. ಈ ಹೂವುಗಳು ಸುಮಾರು 2 ತಿಂಗಳ ಕಾಲ ಗಿಡದಲ್ಲೇ ಇರಲಿವೆ. ಹೀಗಾಗಿ, ಇನ್ನೂ ಒಂದೂವರೆ ತಿಂಗಳು ಪ್ರವಾಸಿಗರು ಈ ಹೂಗಳ ಸೌಂದರ್ಯವನ್ನು ಸವಿಯಬಹುದು.

ಇದನ್ನೂ ಓದಿ: ಕೊಡಗಿನಲ್ಲಿ ಸಿಎಂ ಆದೇಶಕ್ಕೆ ಡೋಂಟ್ ಕೇರ್; ವೀಕೆಂಡ್ ಕರ್ಫ್ಯೂ ನಡುವೆ ಬೆಳಗಾವಿಯಲ್ಲಿ ನಾಟಿ ಕೋಳಿಗೆ ಮುಗಿಬಿದ್ದ ಜನ

ಮಾಸ್ಕ್ ಧರಿಸದವರಿಗೆ 250 ರೂ. ದಂಡ; ಹಬ್ಬಗಳ ಹಿನ್ನೆಲೆ ಬೆಂಗಳೂರಿಗರಿಗೆ ಹೊಸ ನಿಯಮ ಜಾರಿ

(Neelakurinji flowers blossom in Karnataka Kodagu Districts Mandalapatti Hill after 12 years near Madikeri)

ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?