Karnataka Dams Water Level: ತುಂಗಭದ್ರಾ ಡ್ಯಾಂ ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Reservoir Water Level | ತುಂಗಾಭದ್ರಾ ಜಲಾಶಯದ ನೀರಿನ ಮಟ್ಟ ಸಂಪೂರ್ಣ ಭರ್ತಿಯಾಗಿದೆ. ಇಂದು ಕೂಡ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ಕುರಿತು ಮಾಹಿತಿ ಇಲ್ಲಿದೆ.

Karnataka Dams Water Level: ತುಂಗಭದ್ರಾ ಡ್ಯಾಂ ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
Follow us
| Updated By: ಆಯೇಷಾ ಬಾನು

Updated on: Aug 15, 2021 | 6:34 AM

Karnataka Rain: ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ 3 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ. ಉಡುಪಿ ಜಿಲ್ಲೆಯಲ್ಲಿ ಇಂದಿನಿಂದ 3 ದಿನ ವ್ಯಾಪಕ ಮಳೆಯಾಗಲಿದ್ದು, ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಾಗಲಿದೆ. ತುಂಗಾ (Tunga River), ಭದ್ರಾ (Bhadra), ಲಿಂಗನಮಕ್ಕಿ (Linganamakki Dam), ಕೆಆರ್​ಎಸ್​ (KRS Dam) ಸೇರಿದಂತೆ ಬಹುತೇಕ ಡ್ಯಾಂಗಳ ನೀರಿನ ಮಟ್ಟ ಕೊಂಚ ಕಡಿಮೆಯಾಗಿದೆ. ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಸಂಪೂರ್ಣ ಭರ್ತಿಯಾಗಿದೆ. ಇಂದು ಕೂಡ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ (Karnataka Dam Water Level) ಕುರಿತು ಮಾಹಿತಿ ಇಲ್ಲಿದೆ.

ಕೆಆರ್​ಎಸ್​ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ-38.04 ಮೀಟರ್ ಇಂದಿನ ನೀರಿನ ಮಟ್ಟ- 44.02 ಟಿಎಂಸಿ ಗರಿಷ್ಠ ಸಾಮರ್ಥ್ಯ: 49.45 ಟಿಎಂಸಿ ಇಂದಿನ ಒಳಹರಿವು- 3896 ಕ್ಯೂಸೆಕ್ಸ್​ ಇಂದಿನ ಹೊರಹರಿವು- 5482 ಕ್ಯೂಸೆಕ್ಸ್​

ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್ ಒಟ್ಟು ಸಾಮರ್ಥ್ಯ – 31.10 ಟಿಎಂಸಿ ಇಂದಿನ ನೀರಿನ ಮಟ್ಟ- 15.77 ಟಿಎಂಸಿ ಇಂದಿನ ಒಳಹರಿವು-1215 ಕ್ಯೂಸೆಕ್ಸ್​ ಇಂದಿನ ಹೊರಹರಿವು-000 ಕ್ಯೂಸೆಕ್ಸ್​

ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್ ಒಟ್ಟು ಸಾಮರ್ಥ್ಯ – 8.50 ಟಿಎಂಸಿ ಇಂದಿನ ನೀರಿನ ಮಟ್ಟ-7.55 ಟಿಎಂಸಿ ಇಂದಿನ ಒಳಹರಿವು- 3725 ಕ್ಯೂಸೆಕ್ಸ್​ ಇಂದಿನ ಹೊರಹರಿವು- 1966 ಕ್ಯೂಸೆಕ್ಸ್​​

ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್ ಒಟ್ಟು ಸಾಮರ್ಥ್ಯ – 37.10 ಟಿಎಂಸಿ ಇಂದಿನ ನೀರಿನ ಮಟ್ಟ- 35.38 ಟಿಎಂಸಿ ಇಂದಿನ ಒಳಹರಿವು- 3195 ಕ್ಯೂಸೆಕ್ಸ್​​ ಇಂದಿನ ಹೊರಹರಿವು-4255 ಕ್ಯೂಸೆಕ್ಸ್​

ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್ ಒಟ್ಟು ಸಾಮರ್ಥ್ಯ – 19.52 ಟಿಎಂಸಿ ಇಂದಿನ ನೀರಿನ ಮಟ್ಟ- 18.62 ಟಿಎಂಸಿ ಇಂದಿನ ಒಳಹರಿವು- 3696 ಕ್ಯೂಸೆಕ್ಸ್​ ಇಂದಿನ ಹೊರಹರಿವು- 5482 ಕ್ಯೂಸೆಕ್ಸ್​

ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್ ಒಟ್ಟು ಸಾಮರ್ಥ್ಯ – 151.75 ಟಿಎಂಸಿ ಇಂದಿನ ನೀರಿನ ಮಟ್ಟ- 129.53 ಟಿಎಂಸಿ ಇಂದಿನ ಒಳಹರಿವು- 6319 ಕ್ಯೂಸೆಕ್ಸ್​ ಇಂದಿನ ಹೊರಹರಿವು- 6175 ಕ್ಯೂಸೆಕ್ಸ್​

ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್ ಒಟ್ಟು ಸಾಮರ್ಥ್ಯ: 145.33 ಟಿಎಂಸಿ ಇಂದಿನ ನೀರಿನ ಮಟ್ಟ- 107.50 ಟಿಎಂಸಿ ಇಂದಿನ ಒಳಹರಿವು- 5117 ಕ್ಯೂಸೆಕ್ಸ್​ ಇಂದಿನ ಹೊರಹರಿವು- 4688 ಕ್ಯೂಸೆಕ್ಸ್​

ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ-497.71 ಮೀಟರ್ ಒಟ್ಟು ಸಾಮರ್ಥ್ಯ- 100.86 ಟಿಎಂಸಿ ಇಂದಿನ ನೀರಿನ ಮಟ್ಟ- 100.86 ಟಿಎಂಸಿ ಇಂದಿನ ಒಳಹರಿವು- 29,174 ಕ್ಯೂಸೆಕ್ಸ್​ ಇಂದಿನ ಹೊರಹರಿವು- 18,487 ಕ್ಯೂಸೆಕ್ಸ್​

ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್ ಒಟ್ಟು ಸಾಮರ್ಥ್ಯ – 71.54 ಟಿಎಂಸಿ ಇಂದಿನ ನೀರಿನ ಮಟ್ಟ- 69.99 ಟಿಎಂಸಿ ಇಂದಿನ ಒಳಹರಿವು- 5239 ಕ್ಯೂಸೆಕ್ಸ್​ ಇಂದಿನ ಹೊರಹರಿವು- 4336 ಕ್ಯೂಸೆಕ್ಸ್​

ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್​ ಒಟ್ಟು ಸಾಮರ್ಥ್ಯ – 37.73 ಟಿಎಂಸಿ ಇಂದಿನ ನೀರಿನ ಮಟ್ಟ- 34.58 ಟಿಎಂಸಿ ಇಂದಿನ ಒಳಹರಿವು- 4582 ಕ್ಯೂಸೆಕ್ಸ್​ ಇಂದಿನ ಹೊರಹರಿವು- 869 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್​ ಒಟ್ಟು ಸಾಮರ್ಥ್ಯ – 51.00 ಟಿಎಂಸಿ ಇಂದಿನ ನೀರಿನ ಮಟ್ಟ- 50.84 ಟಿಎಂಸಿ ಇಂದಿನ ಒಳಹರಿವು- 7644 ಕ್ಯೂಸೆಕ್ಸ್​​ ಇಂದಿನ ಹೊರಹರಿವು- 3776 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯ (Alamatti Dam) ಗರಿಷ್ಠ ಮಟ್ಟ- 519.60 ಮೀಟರ್ ಒಟ್ಟು ಸಾಮರ್ಥ್ಯ – 123.08 ಟಿಎಂಸಿ ಇಂದಿನ ನೀರಿನ ಮಟ್ಟ- 121.96 ಟಿಎಂಸಿ ಇಂದಿನ ಒಳಹರಿವು- 20,330 ಕ್ಯೂಸೆಕ್ಸ್​ ಇಂದಿನ ಹೊರಹರಿವು- 2507 ಕ್ಯೂಸೆಕ್ಸ್​

ಇದನ್ನೂ ಓದಿ: Karnataka Weather Today: ಕರಾವಳಿಯಲ್ಲಿ ಆ. 16ರವರೆಗೆ ವರುಣನ ಆರ್ಭಟ; ಕೊಡಗಿನಲ್ಲಿ ದಾಖಲೆಯ ಮಳೆ

Karnataka Dams Water Level: ಲಿಂಗನಮಕ್ಕಿ, ಕೆಆರ್​ಎಸ್​ ಸೇರಿ ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

(Karnataka Dams Water Level Today Karnataka Reservoir Water Level on Sunday Tungabhadra Dam Filled)