AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

14 IAS ಅಧಿಕಾರಿಗಳ ವರ್ಗಾವಣೆ, ರಜೆಗಾಗಿ ಬಳ್ಳಾರಿ ಎಸ್​ಪಿ ವಿರುದ್ಧ ಸಿಡಿದೆದ್ದಿದ್ದ ಡಿವೈಎಸ್​ಪಿಗೆ ಬಡ್ತಿ ನೀಡಿದ ಸರ್ಕಾರ

ಒಟ್ಟು 14 ಐಎಎಸ್ ಅಧಿಕಾರಿಗಳನ್ನು ಬೇರೆ ಬೇರೆ ಹುದ್ದೆಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗೇ ರಜೆ ವಿಚಾರವಾಗಿ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಸಿಡಿದೆದ್ದ ಡಿವೈಎಸ್​ಪಿಗೆ ಬಡ್ತಿ ಭಾಗ್ಯ ದೊರೆತಿದೆ.

14 IAS ಅಧಿಕಾರಿಗಳ ವರ್ಗಾವಣೆ, ರಜೆಗಾಗಿ ಬಳ್ಳಾರಿ ಎಸ್​ಪಿ ವಿರುದ್ಧ ಸಿಡಿದೆದ್ದಿದ್ದ ಡಿವೈಎಸ್​ಪಿಗೆ ಬಡ್ತಿ ನೀಡಿದ ಸರ್ಕಾರ
ವಿಧಾನಸೌಧ
ರಮೇಶ್ ಬಿ. ಜವಳಗೇರಾ
|

Updated on: Jun 28, 2023 | 11:32 AM

Share

ಬೆಂಗಳೂರು/ಬಳ್ಳಾರಿ : ರಜೆ (Leave) ವಿಚಾರವಾಗಿ ಬಳ್ಳಾರಿ (Bellary) ಪೊಲೀಸ್ ವರಿಷ್ಠಾಧಿಕಾರಿ(ಎಸ್​ಪಿ) ವಿರುದ್ಧ ಸಿಡಿದೆದ್ದ ಬಳ್ಳಾರಿ ಜಿಲ್ಲೆಯ ಡಿವೈಎಸ್​ಪಿ ಎಸ್ಎಸ್ ಕಾಶಿ ಅವರಿಗೆ ಪೊಲೀಸ್ ವರಿಷ್ಠಾಧಿಕಾರಿ(ಎಸ್​ಪಿ) ನೀಡಿ ವರ್ಗಾವಣೆ ಮಾಡಲಾಗಿದೆ. ಬಳ್ಳಾರಿಯ ಸಬ್​ ಡಿವಿಜನ್​ ಆಗಿರುವ ತೋರಣಗಲ್ ಡಿವೈಎಸ್​ಪಿ ಎಸ್ಎಸ್ ಕಾಶಿ ಅವರನ್ನು ಎಸ್​ಪಿ ಹುದ್ದೆ ಬಡ್ತಿಯೊಂದಿಗೆ ಮಡಿಕೇರಿಯ ಅರಣ್ಯ ಪ್ರದೇಶ ಸೆಲ್​​ಗೆ ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರ ಜೊತೆಗೆ ರಾಜ್ಯ ಸರ್ಕಾರ ಇಂದು(ಜೂನ್ 28) ಒಟ್ಟು 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಅದರಲ್ಲಿ ಕೆಲವರನ್ನು ವಿವಿಧ ಇಲಾಖೆಗಳ ಆಯುಕ್ತರು ಹಾಗೂ ಉಪ ಆಯುಕ್ತರಾಗಿ ನೇಮಿಸಲಾಗಿದೆ.

ಇದನ್ನೂ ಓದಿ: Ballari News: ಧ್ಯಾನ, ಯೋಗಕ್ಕಾಗಿ ಒಂದು ತಿಂಗಳು ರಜೆ ಕೇಳಿದ ಸಂಡೂರು ಡಿವೈಎಸ್​ಪಿ; ಮಂಜೂರು ಮಾಡದ್ದಕ್ಕೆ ಎಸ್​ಪಿ ವಿರುದ್ಧ ಪತ್ರ

ರಜೆಗಾಗಿ ಸಿಡಿದೆದ್ದ ಡಿವೈಎಸ್​ಪಿ ಬಡ್ತಿ

ರಜೆ ವಿಚಾರವಾಗಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ರಂಜಿತ್ ಕುಮಾರ್ ವಿರುದ್ಧ ಸಿಡಿದೆದ್ದ ಸಂಡೂರು ಉಪವಿಭಾಗದ ಉಪ ಅಧೀಕ್ಷಕರಾಗಿರುವ ಡಿವೈಎಸ್​​ಪಿ ಆಗಿರುವ ಎಸ್ ಎಸ್ ಕಾಶಿ ಅವರಿಗೆ ಎಸ್​ಪಿ ಹುದ್ದೆಯ ಬಡ್ತಿ ನೀಡಲಾಗಿದೆ. ಇದೀಗ ರಾಜ್ಯ ಸರ್ಕಾರ ಇವರನ್ನು ಮಡಿಕೇರಿ ಅರಣ್ಯ ಪ್ರದೇಶದ ಸೆಲ್​ ಎಸ್​ಪಿಯಾಗಿ ವರ್ಗಾಯಿಸಿದೆ.

, ವ್ಯಯಕ್ತಿಕ ಕಾರಣಕ್ಕಾಗಿ ಒಂದು ತಿಂಗಳು ಕಾಲ ರಜೆ ಕೋರಿ ಮೇ 25 ರಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದರು. ಕಾಶಿ ಅವರು ವೈಯಕ್ತಿಕ ಕಾರಣಕ್ಕೆ ಒಂದು ತಿಂಗಳು ರಜೆಗಾಗಿ ಮನವಿ ಮಾಡಿದ್ದರು. ಮಾನಸಿಕ ನೆಮ್ಮದಿಗಾಗಿ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುವುದಕ್ಕಾಗಿ ವೈಯಕ್ತಿಕ ರಜೆ ನೀಡಬೇಕೆಂದು ಅವರು ಕೋರಿದ್ದರು. ಆದರೆ, ಎಸ್​ಪಿ ಕೇವಲ 5 ದಿನಗಳ ಕಾಲ ರಜೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಕಾಶಿ, ಎಸ್​ಪಿ ನಡೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಡಿಜಿ, ಐಜಿಪಿ, ಎಡಿಜಿಪಿಗೆ ಪತ್ರ ಬರೆದು ಅಳಲು ಕಾಶೀ ಅವರು ತಮ್ಮ ತೋಡಿಕೊಂಡಿದ್ದರು.

1 ತಿಂಗಳು ರಜೆ ಕೇಳಿದರೆ ಕೇವಲ 5 ದಿನ ರಜೆ ನೀಡಲಾಗಿದೆ. ರಜೆ ನೀಡದೆ ತಾರತಮ್ಯ ಮಾಡಲಾಗಿದೆ. ತಮಗೆ ಕಿರುಕುಳ ನೀಡಲಾಗುತ್ತಿದೆ. ಈ ಮೂಲಕ ಮಾನಸಿಕ ನೆಮ್ಮದಿ ಕದಡಿದ್ದಾರೆ. ಮಾನಸಿಕ ನೆಮ್ಮದಿ ಇಲ್ಲದೆ ಕರ್ತವ್ಯದ ವೇಳೆ ಲೋಪವಾದರೆ ಇಲಾಖೆಯೇ ಹೊಣೆ ಎಂದು ಬಳ್ಳಾರಿ ಎಸ್​ಪಿ ರಂಜಿತ್ ಕುಮಾರ್ ವಿರುದ್ಧ ಪತ್ರ ಬರೆದಿದ್ದರು. ಡಿವೈಎಸ್​​ಪಿಯ ರಜೆ ವಿಚಾರದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಐಎಎಸ್​ ವರ್ಗಾವಣೆ, ಯಾರು ಎಲ್ಲಿಗೆ?

  • ನವೀನ್ ರಾಜ್ ಸಿಂಗ್, ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ
  • ಉಜ್ವಲ್ ಕುಮಾರ್ ಘೋಷ್, ಬಾಗಲಕೋಟೆಯ ಭೂ ಸ್ವಾದಿನ ಇಲಾಖೆ
  • ಸುಷ್ಮಾ ಗೋಡಬಳೆ, ಮುಖ್ಯ ಮೌಲ್ಯಂಕ ಪ್ರಾಧಿಕಾರದ ಅಧಿಕಾರಿ
  • ಯಶ್ವಂತ್ ವಿ ಗುರುಕಾರ್, ಎಕ್ಸಿಕ್ಯುಟಿವ್ ಡೈರೆಕ್ಟರ್ ಸ್ಮಾರ್ಟ್ ಗೌರ್ನೆನ್ಸ್
  • ರಮೇಶ್ ಡಿ ಎಸ್, ತೋಟಗಾರಿಕೆ ಇಲಾಖೆ ಡೈರೆಕ್ಟರ್
  • ಪೊಮ್ಮಲ ಸುನೀಲ್ ಕುಮಾರ್,  ಆಯುಕ್ತರು ಎನ್​ಡಿಆರ್​ಎಫ್​
  • ಸತೀಶ್ ಡಿ ಸಿ, ಆಡಳಿತ ತರಬೇತಿ ಸಂಸ್ಥೆ ಜಂಟಿ ನಿರ್ದೇಶಕ
  • ಗೋಪಾಲಕೃಷ್ಣ, ಕಾರ್ಮಿಕ ಇಲಾಖೆ ಆಯುಕ್ತ
  • ರವಿಕುಮಾರ್ ಎಂ ಆರ್, ಮೈಸೂರು ಶುಗರ್ ಎಂಡಿ
  • ಮೀನಾ ನಾಗರಾಜ್, ಚಿಕ್ಕಮಗಳೂರು ಉಪ ಆಯುಕ್ತರು
  • ಆನಂದ್ ಕೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ ಸಿಇಓ
  • ಜಯವಿಭಾವಸ್ವಾಮಿ, ಮಿನರಲ್ ಕಾರ್ಪೋರೇಷನ್ ಎಂಡಿ
  • ಪ್ರಭು ಜಿ, ತುಮಕೂರು ಜಿಲ್ಲಾ ಪಂಚಾಯತ ಸಿಇಓ
  • ಉಕೇಶ್ ಕುಮಾರ್, ಡೆಪ್ಯುಟಿ ಸೆಕ್ರೆಟರಿ, ಸಿಬ್ಬಂದಿ ಮತ್ತು ಆಡಳಿತ ಸೇವೆ ವಿಧಾನಸೌಧ

ಪ್ರಸ್ತುತ ಬಿಬಿಎಂಪಿ ವಿಶೇಷ ಆಯುಕ್ತರಾಗಿರುವ ಉಜ್ವಲ್ ಕುಮಾರ್ ಘೋಷ್​ಗೆ ಬಾಗಲಕೋಟೆ, ಕೃಷ್ಣಾ ಮೇಲ್ದಂಡೆ ಯೋಜನೆ ಭೂಸ್ವಾಧೀನ, ಪುನರ್ವಸತಿ ಆಯುಕ್ತರಾಗಿ ಹೆಚ್ಚುವರಿ ಹೊಣೆ ನೀಡಲಾಗಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ