ಮುಖ್ಯಮಂತ್ರಿ ಕಚೇರಿಗೆ ಹೆಚ್ಚು‘ವರಿ‘ಯಾಗಿ ಬರುತ್ತಿರುವ ವರ್ಗಾವಣೆ ಕಡತಗಳು: ಟ್ರಾನ್ಸ್​​ಫರ್​​ ನೀತಿಯಲ್ಲಿ 3 ಮಾರ್ಪಾಡಿಗೆ ಸಿಎಂ ಸೂಚನೆ

| Updated By: ಸಾಧು ಶ್ರೀನಾಥ್​

Updated on: Nov 16, 2021 | 12:40 PM

karnataka government employee transfer policy: ವರ್ಗಾವಣೆ ಕಡತ ಕಡಿಮೆ ಮಾಡದಿದ್ದರೆ ಬೇರೆ ಇಲಾಖೆಗಳ ಕೆಲಸ ಪ್ರಗತಿಯಲ್ಲಿ ಕುಂಠಿತ ಸಾಧ್ಯತೆಯಿರುತ್ತದೆ. ಹೀಗಾಗಿ ವರ್ಗಾವಣೆ ನೀತಿಯಲ್ಲಿ ಮಾರ್ಪಾಡಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಕಚೇರಿಗೆ ಹೆಚ್ಚು‘ವರಿ‘ಯಾಗಿ ಬರುತ್ತಿರುವ ವರ್ಗಾವಣೆ ಕಡತಗಳು: ಟ್ರಾನ್ಸ್​​ಫರ್​​ ನೀತಿಯಲ್ಲಿ 3 ಮಾರ್ಪಾಡಿಗೆ ಸಿಎಂ ಸೂಚನೆ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಚೇರಿಗೆ ವರ್ಗಾವಣೆ ಕೋರಿ ಕಡತಗಳು ಹೆಚ್ಚುವರಿ ಯಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ವರ್ಗಾವಣೆ ನೀತಿಯಲ್ಲಿ ಕೆಲ ಮಾರ್ಪಾಡಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ. ವರ್ಗಾವಣೆ ಅವಧಿ ಮುಗಿದಿರುವುದರಿಂದ ಕಡತಗಳ ಸಲ್ಲಿಕೆಯಾಗುತ್ತಿವೆ. ಮುಖ್ಯಮಂತ್ರಿ ಅನುಮೋದನೆಗಾಗಿ ಸಲ್ಲಿಸಲಾಗುತ್ತಿರುವ ಕಡತಗಳು ಇವಾಗಿವೆ. ವರ್ಗಾವಣೆ ಕಡತ ಕಡಿಮೆ ಮಾಡದಿದ್ದರೆ ಬೇರೆ ಇಲಾಖೆಗಳ ಕೆಲಸ ಪ್ರಗತಿಯಲ್ಲಿ ಕುಂಠಿತ ಸಾಧ್ಯತೆಯಿರುತ್ತದೆ. ಹೀಗಾಗಿ ವರ್ಗಾವಣೆ ನೀತಿಯಲ್ಲಿ ಮಾರ್ಪಾಡಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ವರ್ಗಾವಣೆ ನೀತಿಯಲ್ಲಿ ಮಾರ್ಪಾಡು ಹೀಗಿದೆ:
1. ಗ್ರೂಪ್ ಬಿ, ಸಿ, ಡಿ ಖಾಲಿ ಹುದ್ದೆಗಳಿಗೆ ಇಲಾಖಾ ಸಚಿವರ ಹಂತದಲ್ಲೇ ಅನುಮೋದಿಸಿ ಆದೇಶಿಸಬೇಕು. 2. ತೆರವಾಗುವ ಹುದ್ದೆಗಳಿಗೆ ಯಾವುದೇ ವರ್ಗಾವಣೆ ಮಾಡುವಂತಿಲ್ಲ. ಮತ್ತು 3. ಗ್ರೂಪ್-ಎ ಖಾಲಿ ಹುದ್ದೆಗಳ ಸ್ಥಳ ನಿಯುಕ್ತಿಗೆ ಸಂಬಂಧಪಟ್ಟ ಪ್ರಸ್ತಾವನೆ ಮಾತ್ರ ಸಿಎಂ ಕಚೇರಿಗೆ ಸಲ್ಲಿಸಬೇಕು.

Also Read:
ತೀವ್ರ ಹೃದಯಾಘಾತ: ಜನ್ಮದಿನ ಪ್ರವಚನ ಮಾಡುತ್ತಲೇ ಜೀವ ಬಿಟ್ಟ ಸ್ವಾಮೀಜಿ, ಮೊಬೈಲ್ ನಲ್ಲಿ ಸೆರೆ

(karnataka government employee transfer policy cm basavaraj bommai implements 3 policies)