ಶುಕ್ರವಾರ ರಾತ್ರಿ 10ರಿಂದಲೇ ಹೋಟೆಲ್ ಬಂದ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಆದೇಶ; ಡಿಕೆ ಶಿವಕುಮಾರ್ ಗರಂ

| Updated By: sandhya thejappa

Updated on: Jan 06, 2022 | 2:22 PM

ಬಂದ್ ಮಾಡಿರುವ ಬಗ್ಗೆಯೂ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಕಾಂಗ್ರೆಸ್ ಪಾದಯಾತ್ರೆಗೆ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಈಗಾಗಲೇ ಪಾದಯಾತ್ರೆಗೆ ಸುಮಾರು 3,000 ಕೊಠಡಿಗಳನ್ನ ಬುಕ್ ಮಾಡಿದೆ.

ಶುಕ್ರವಾರ ರಾತ್ರಿ 10ರಿಂದಲೇ ಹೋಟೆಲ್ ಬಂದ್ ಮಾಡಲು ಜಿಲ್ಲಾಧಿಕಾರಿಗಳಿಗೆ ಸರ್ಕಾರದಿಂದ ಆದೇಶ; ಡಿಕೆ ಶಿವಕುಮಾರ್ ಗರಂ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಕೊರೊನಾ ಮೂರನೇ ಅಲೆ ನಿಯಂತ್ರಿಸಲು ಸರ್ಕಾರ ರಾಜ್ಯದಲ್ಲಿ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ನಾಳೆ (ಶುಕ್ರವಾರ) ರಾತ್ರಿ 10ರಿಂದ ಸೋಮವಾರ ಬೆಳಿಗ್ಗೆ 10 5ರ ವರೆಗೆ ವೀಕೆಂಡ್ ಕರ್ಫ್ಯೂ ಇರಲಿದೆ. ಹೀಗಾಗಿ ನಾಳೆ ರಾತ್ರಿ 10ರಿಂದಲೇ ಹೋಟೆಲ್ ಬಂದ್ ಮಾಡಲು ಸರ್ಕಾರ ಆದೇಶ ನೀಡಿದೆ. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಆದೇಶ ನೀಡಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಎಲ್ಲ ಹೋಟೆಲ್​ಗಳು, ಪಬ್, ರೆಸ್ಟೋರೆಂಟ್ ಬಂದ್ ಮಾಡಲು ಸೂಚಿಸಿದೆ.

ಬಂದ್ ಮಾಡಿರುವ ಬಗ್ಗೆಯೂ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಕಾಂಗ್ರೆಸ್ ಪಾದಯಾತ್ರೆಗೆ ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಈಗಾಗಲೇ ಪಾದಯಾತ್ರೆಗೆ ಸುಮಾರು 3,000 ಕೊಠಡಿಗಳನ್ನ ಬುಕ್ ಮಾಡಿದೆ. ಆದರೆ ಸರ್ಕಾರ ಹೋಟೆಲ್ ಬಂದ್ ಮಾಡಬೇಕು ಅಂತ ತಿಳಿಸಿದೆ. ಸರ್ಕಾರದ ಈ ಆದೇಶಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಲು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.

ಜ್ಞಾನೇಂದ್ರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ
ಸರ್ಕಾರ, ಗೃಹ ಸಚಿವ ಆರಗ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್,  ಗೃಹಸಚಿವ ಆರಗಗೆ ಸಮಯದ ಪ್ರಜ್ಞೆ, ಅನುಭವ ಇಲ್ಲ. ಅವನು ಮೊದಲು ಅನುಭವ ಪಡೆಯಲಿ ಅಂತ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ನೀನು ಅಜ್ಞಾನದ ಜ್ಞಾನೇಂದ್ರ ಆಗಬೇಡಪ್ಪ ಎಂದ ಡಿಕೆಶಿ, ಅಜ್ಞಾನದ ಜ್ಞಾನೇಂದ್ರ ಆಗಿ ರಾಜ್ಯ ಹಾಳು ಮಾಡಬೇಡಿ. ಪಾದಯಾತ್ರೆಗೆ ಹೋಟೆಲ್ ಬುಕಿಂಗ್‌ ಮಾಡಲಾಗಿತ್ತು. ಹೋಟೆಲ್ ಮಾಲೀಕರಿಗೆ ಸರ್ಕಾರ ನೋಟಿಸ್‌ ನೀಡಿದೆ. ನಾವು ಎಷ್ಟು ಅಂತಾ ತಡೆದುಕೊಳ್ಳಲು ಸಾಧ್ಯ. ಅವರಿಗೊಂದು ಕಾನೂನಾ? ನಮಗೊಂದು ಕಾನೂನಾ? ಅಂತ  ಟಿವಿ9ಗೆ ಹೇಳಿಕೆ ನೀಡಿದ್ದಾರೆ.

ಸರ್ಕಾರದ ಆದೇಶ

ಇದನ್ನೂ ಓದಿ

Health Tips: ರೋಗನಿರೋಧಕ ಶಕ್ತಿ ಹೆಚ್ಚಿಸುವ ಹುಣಸೆಹಣ್ಣು, ಬೆಳ್ಳುಳ್ಳಿಯ ರಸಂ ಮಾಡುವ ಸುಲಭ ವಿಧಾನ ಇಲ್ಲಿದೆ

ಯಾವೆಲ್ಲಾ ದೇಶಗಳಲ್ಲಿ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ? ಇಲ್ಲಿದೆ ಮಾಹಿತಿ

Published On - 2:13 pm, Thu, 6 January 22